Tag: ಹಾವು

  • ಹಾವುಗಳ ಮಧ್ಯೆ ಸಿಲುಕಿಕೊಂಡ ವ್ಯಕ್ತಿ – ವೀಡಿಯೋ ವೈರಲ್

    ಹಾವುಗಳ ಮಧ್ಯೆ ಸಿಲುಕಿಕೊಂಡ ವ್ಯಕ್ತಿ – ವೀಡಿಯೋ ವೈರಲ್

    ಸಾಕ್ರಮೆಂಟೊ: ಭಾರೀ ಗಾತ್ರದ ಹಾವುಗಳ ರಾಶಿ ಮಧ್ಯೆ ವ್ಯಕ್ತಿಯೊಬ್ಬ ಧೈರ್ಯದಿಂದ ಕುಳಿತುಕೊಂಡು ಮಾತನಾಡುತ್ತಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಅಷ್ಟಕ್ಕೂ ಈ ಭಯಾನಕ ದೃಶ್ಯವನ್ನು ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದಲ್ಲಿ ಸೆರೆ ಹಿಡಿಯಲಾಗಿದ್ದು, ಮೃಗಾಲಯದ ಸಂಸ್ಥಾಪಕ ಜೇ ಬ್ರೂಯರ್ ಹಾವುಗಳ ಮಧ್ಯೆ ಕುಳಿತುಕೊಂಡಿರುತ್ತಾನೆ. ಆತನ ಸುತ್ತ ಎಲ್ಲಾ ಗಾತ್ರದ ವಿವಿಧ ಬಣ್ಣದ ಹಾವುಗಳು ಹರಿದಾಡುತ್ತಿರುತ್ತವೆ. ಈ ವೇಳೆ ಮೇಲೆ ಹರಿದಾಡುತ್ತಿದ್ದ ಹಾವುಗಳು ಆತನ ಮೈಮೇಲೆ ಬಿದ್ದಾಗ ನಾನು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ.

    2019ರಲ್ಲಿ ಈ ವೀಡಿಯೋವನ್ನು ಮೃಗಾಲಯ ಶೇರ್ ಮಾಡಿಕೊಂಡಿದ್ದು, ಇದೀಗ ಟ್ವಿಟ್ಟರ್ ಬಳಕೆದಾರರೊಬ್ಬರು ಮರು ಪೋಸ್ಟ್ ಮಾಡುವ ಮೂಲಕ ವೀಡಿಯೋಗೆ ಪುನರ್ ಜೀವ ನೀಡಿದ್ದಾರೆ. ಅಲ್ಲದೆ 50 ಮಿಲಿಯನ್ ಡಾಲರ್‍ಗಳು ಬೇಕಾದರೆ ನಿಮ್ಮಲ್ಲಿ ಯಾರಾದರೂ ಒಂದು ಗಂಟೆಗಳ ಸಮಯವನ್ನು ಇಲ್ಲಿ ಕಳೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

    https://twitter.com/Aqualady6666/status/1356859859782815745

    12 ಸೆಕೆಂಡ್ ಇರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 3,5000 ಲೈಕ್ಸ್ ಬಂದಿದೆ.

  • ಕಾರಿನ ಡ್ಯಾಶ್ ಬೋರ್ಡ್‍ನಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ – ತೂಕ ಎಷ್ಟು ಗೊತ್ತಾ?

    ಕಾರಿನ ಡ್ಯಾಶ್ ಬೋರ್ಡ್‍ನಲ್ಲಿ ಸಿಲುಕಿದ್ದ ಹಾವಿನ ರಕ್ಷಣೆ – ತೂಕ ಎಷ್ಟು ಗೊತ್ತಾ?

    ವಾಷಿಂಗ್ಟನ್: ಯುಎಸ್‍ನ ಉತ್ತರ ಕರೊಲಿನಾದಲ್ಲಿ ಮಂಗಳವಾರ ಪಿಟ್ ಬೋವಾ ಕನ್ಸ್‍ಟ್ರಿಕ್ಟರ್ ಎಂಬ ಹಾವೊಂದು ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿ ಸಿಲುಕಿಕೊಂಡಿದೆ.

    ಕಾರಿನ ಡ್ಯಾಶ್‍ಬೋರ್ಡ್‍ನಲ್ಲಿ ಸಿಲುಕಿದ್ದ ಹಾವನ್ನು ರಕ್ಷಣೆ ಮಾಡಲು ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಕಾರಿನ ಡ್ಯಾಶ್‍ಬೋರ್ಡ್‍ನನ್ನು ಕಿತ್ತು ಹಾಕಿ ಹಾವನ್ನು ರಕ್ಷಣೆ ಮಾಡಿದ್ದಾರೆ.

    ಇನ್ನೂ ಹಾವಿನ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್, ಕಾರಿನ ಡ್ಯಾಶ್ ಬೋರ್ಡ್‍ನಲ್ಲಿ ತಾನಾಗಿ ತಾನೇ ಸಿಲುಕಿಕೊಂಡಿದ್ದ ಬೋವಾ ಕನ್ಸ್‍ಟ್ರಕ್ಟರ್ ಹಾವನ್ನು ನಮ್ಮ ಅಧಿಕಾರಿಗಳು ಯಾವುದೇ ಹಾನಿಯಾಗದಂತೆ ಹೊರಗೆ ತೆಗೆದಿದ್ದಾರೆ. ಇದೀಗ ಹಾವು ಹಿಂದುರುಗಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

    It is never a dull moment at APS, and yesterday was not any different! Our officers were dispatched out to a situation…

    Posted by Stanly County Animal Protective Services on Tuesday, February 2, 2021

    ಇನ್ನೂ ಹಾವಿನ ಬಗ್ಗೆ ನೆಟ್ಟಿಗರು ಕೇಳಿದ ಪ್ರಶ್ನೆಗೆ 8.5 ಅಡಿ ಉದ್ದವಿದ್ದು, 18 ಕೆಜಿ ತೂಕವಿದೆ ಎಂದು ಸ್ಟಾನ್ಲಿ ಕೌಂಟಿ ಅನಿಮಲ್ ಪ್ರೊಟೆಕ್ಟಿವ್ ಸರ್ವೀಸಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಕೊಳಕು ಕಾಂಡೋಮ್ ಒಳಗಡೆ ಸಿಲುಕಿ ಒದ್ದಾಡುತ್ತಿದ್ದ ಹಾವಿನ ರಕ್ಷಣೆ

    ಕೊಳಕು ಕಾಂಡೋಮ್ ಒಳಗಡೆ ಸಿಲುಕಿ ಒದ್ದಾಡುತ್ತಿದ್ದ ಹಾವಿನ ರಕ್ಷಣೆ

    – ಕೀಲ್ಬ್ಯಾಕ್ ನೋಡಿ ಬೆದರಿದ ಮಹಿಳೆ

    ಮುಂಬೈ: ಕೀಲ್ಬ್ಯಾಕ್ ಹಾವು ಒಂದು ಕಾಂಡೋಮ್ ಒಳಗೆ ಸಿಕ್ಕಿಹಾಕಿಕೊಂಡು ಉಸಿರಾಡಲು ಒದ್ದಾಡಿದ ಘಟನೆ ಶನಿವಾರ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

    ಶನಿವಾರ ಬೆಳಗ್ಗೆ ಸುಮಾರು 8.30ರ ವೇಳೆ ಗ್ರೀನ್ ಮೆಡೋಸ್ ಹೌಸಿಂಗ್ ಸೊಸೈಟಿ ಬಳಿ ಹಾವು ಕಾಂಡೋಮ್ ಒಳಗಡೆ ಸಿಲುಕಿಕೊಂಡು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿತ್ತು. ಇದನ್ನು ನೋಡಿದ ಸ್ಥಳೀಯ ನಿವಾಸಿ ವೈಶಾಲಿ ತನ್ಹಾ ಅವರು ಉರಗ ತಜ್ಞ ಮಿತಾ ಮಾಲ್ವಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ.

    ಹಾವು ಅಸಾಮಾನ್ಯ ರೀತಿಯಲ್ಲಿ ಚಲಿಸುತ್ತಿರುವುದನ್ನು ಮತ್ತು ಅದರ ತಲೆಯ ಮೇಲೆ ಪ್ಲಾಸ್ಟಿಕ್ ಚೀಲವೊಂದು ಮುಚ್ಚಿಕೊಂಡಿರುವುದನ್ನು ಕಂಡ ತನ್ಹಾ ಹಾವಿನ ತಲೆಯ ಮೇಲೆ ಕೊಳಕು ಕಾಂಡೋಮ್ ಸುತ್ತಿಕೊಂಡಿದೆ ಎಂದು ಗುರುತಿಸಿದ್ದಾರೆ. ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಮಾಲ್ವಂಕರ್ 2.5 ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ.

    ಕಾಂಡೋಮ್‍ನಿಂದ ಹಾವಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಕೀಲ್ಬ್ಯಾಕ್ ಹಾವನ್ನು ಹಿಡಿಯುವುದು ಸುಲಭದ ಕೆಲಸವಲ್ಲ. ಈ ಹಾವು ತೀಕ್ಷ್ಣವಾದ ಮತ್ತು ಸೂಜಿಯಂತಹ ಹಲ್ಲುಗಳನ್ನು ಹೊಂದಿದೆ. ಅದನ್ನು ಹಿಡಿಯಲು ಹೋದವರು ಜಾಗೃತಿಯಿಂದ ಇರಬೇಕು ಇಲ್ಲವಾದಲ್ಲಿ ಬಲಿಪಶುವಾಗುತ್ತಾರೆ ಎಂದು ತಿಳಿಸಿದರು.

    ತಕ್ಷಣವೇ ಹಾವನ್ನು ಹೋಗಲು ಬಿಡದೇ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪಶುವೈದ್ಯ ಅಧಿಕಾರಿ ಡಾ. ಶೈಲೇಶ್ ಪೆಥೆ ಅವರಿಂದ ಹಾವಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಒತ್ತಡದ ಕೆಲವು ಗುಣಲಕ್ಷಣಗಳಿರುವುದು ಬಿಟ್ಟರೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದರು. ಇನ್ನೂ ಕಾಂಡೋಮ್ ಬಿಸಾಕಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಪತ್ನಿಯ ಕುಚೇಷ್ಟೆಯಿಂದ ಪತಿ ಕಂಗಾಲು – ಫನ್ನಿ ವೀಡಿಯೋ ವೈರಲ್

    ಪತ್ನಿಯ ಕುಚೇಷ್ಟೆಯಿಂದ ಪತಿ ಕಂಗಾಲು – ಫನ್ನಿ ವೀಡಿಯೋ ವೈರಲ್

    ದೆಹಲಿ: ಮಹಿಳೆಯೊಬ್ಬಳ ಕುಚೇಷ್ಟೆಯಿಂದ ಆಕೆಯ ಪತಿ ಕಂಗಾಲಾಗಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು. ಪ್ಯಾಂಟ್ ಬೆಲ್ಟ್ ಅನ್ನು ನೆಲದ ಮೇಲೆ ಹಾಕಿ ಪತಿಯನ್ನು ಕೆಲಕಾಲ ಆತಂಕಕ್ಕೀಡು ಮಾಡಿದ್ದಾಳೆ. ಇದರ ವೀಡಿಯೋ ಕೂಡ ಮಾಡಿರುವ ಪತ್ನಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ ಗಳು ಬರುತ್ತಿವೆ.

    ವೀಡಿಯೋದಲ್ಲೇನಿದೆ..?
    ಪತಿಯನ್ನು ಗೋಳೊಯ್ದುಕೊಳ್ಳುವ ಸಲುವಾಗಿ ಬೆಲ್ಟ್ ಅನ್ನು ಕೋಣೆಯ ಬಾಗಿಲ ಬಳಿ ನೆಲದ ಮೇಲೆ ಇಟ್ಟಿದ್ದಾಳೆ. ನಂತರ ಬೇಬಿ ರೂಮಿನಲ್ಲಿ ಏನೋ ಇದೆ ಬನ್ನಿ ಎಂದು ಭಯಬಿದ್ದವಳಂತೆ ನಾಟಕ ಮಾಡುತ್ತಾ ಪತಿಯನ್ನು ಕರೆದಿದ್ದಾಳೆ.

     

    View this post on Instagram

     

    A post shared by lowsena (@lowsena)

    ಪತ್ನಿಯ ಗಾಬರಿಯ ಧ್ವನಿ ಕೇಳಿದ ಪತಿ ಕೂತೂಹಲದಿಂದಲೇ ರೂಮ್ ಬಾಗಿಲು ತೆರೆದಿದ್ದಾನೆ. ಹೀಗೆ ಒಳಗೆ ಬಂದ ಪತಿ ನೆಲದ ಮೇಲೆ ಬಿದ್ದಿದ್ದ ಬೆಲ್ಟ್ ನೋಡಿ ಹಾವು ಎಂದು ಭಾವಿಸಿ ಭಯಗೊಂಡು ಜೋರಾಗಿ ಕಿರುಚಿದ್ದಾನೆ. ಪತಿಯ ರಿಯಾಕ್ಷನ್ ಕಂಡ ಪತ್ನಿ ಜೋರಾಗಿ ನಕ್ಕಿದ್ದಾಳೆ. ಈ ವೇಳೆ ಪತಿ ಏನಿದು ಎಂದು ಪ್ರಶ್ನಿಸಿದಾಗ ಅದು ಬೆಲ್ಟ್ ಎಂದು ಉತ್ತರಿಸಿ ಮತ್ತೆ ನಕ್ಕಿದ್ದಾಳೆ.

    ಪತಿಯನ್ನು ಫೂಲ್ ಮಾಡಿ ಪತ್ನಿಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋಗೆ ಕಾಮೆಂಟ್‍ಗಳ ಸುರಿ ಮಳೆಯೇ ಹರಿದು ಬರುತ್ತಿದೆ.

  • ಹಾವು ಕಚ್ಚಿ ಯುವಕ ಸಾವು

    ಹಾವು ಕಚ್ಚಿ ಯುವಕ ಸಾವು

    ಮೈಸೂರು: ಹಾವು ಕಚ್ಚಿ 21 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಂತೋಷ್ ಹಾವು ಕಚ್ಚಿ ಮೃತಪಟ್ಟ ಯುವಕ. ಜಮೀನಿನಲ್ಲಿ ರಾಗಿ ಬೆಳೆ ಕಟಾವು ಮಾಡುವಾಗ ಸಂತೋಷನಿಗೆ ಹಾವು ಕಚ್ಚಿತ್ತು. ಹನಗೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯದಾಗೇ ಸಂತೋಷ್ ಮೃತಪಟ್ಟಿದ್ದು, ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃತ ಸಂತೋಷ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದನು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ತನ್ನನ್ನು ಕಚ್ಚಿದರೂ ಸಂಕಷ್ಟದಲ್ಲಿದ್ದ ಹಾವನ್ನು ರಕ್ಷಿಸಿದ ಸ್ನೇಕ್ ಶೇಷಪ್ಪ

    ತನ್ನನ್ನು ಕಚ್ಚಿದರೂ ಸಂಕಷ್ಟದಲ್ಲಿದ್ದ ಹಾವನ್ನು ರಕ್ಷಿಸಿದ ಸ್ನೇಕ್ ಶೇಷಪ್ಪ

    ಹಾಸನ: ತನ್ನನ್ನು ರಕ್ಷಣೆ ಮಾಡಲು ಬಂದವರನ್ನೆ ನಾಗರಹಾವು ಕಚ್ಚಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಕೈಗಾರಿಕ ಪ್ರದೇಶದ ಕಾರ್ಖಾನೆಯೊಂದರಲ್ಲಿ ಹಾವು ಸೇರಿಕೊಂಡಿದ್ದು, ಯಂತ್ರವೊಂದರ ಬಿಡಿಭಾಗಕ್ಕೆ ಸಿಲುಕಿ ಪರದಾಡುತ್ತಿತ್ತು.

    ಕಾರ್ಖಾನೆಯ ಸಿಬ್ಬಂದಿಯ ಮನವಿ ಮೇರೆಗೆ ಆಗಮಿಸಿದ ಸ್ನೇಕ್ ಶೇಷಪ್ಪ, ಹಾವನ್ನು ಹಿಡಿದು ಅದನ್ನು ಯಂತ್ರದ ಬಿಡಿಭಾಗದಿಂದ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಹೆದರಿದ ಹಾವು ಸ್ನೇಕ್ ಶೇಷಪ್ಪ ಅವರ ಬೆರಳಿಗೆ ಕಚ್ಚಿದ ಪರಿಣಾಮ ರಕ್ತ ಬಂದಿದೆ. ಹಾವು ಕಚ್ಚಿದರೂ ವಿಚಲಿತರಾಗದ ಸ್ನೇಕ್ ಶೇಷಪ್ಪ ಮೊದಲು ಯಂತ್ರದ ಬಿಡಿಭಾಗದಿಂದ ಹಾವನ್ನು ಬಿಡಿಸಿ ನಂತರ ಸುರಕ್ಷಿತ ಸ್ಥಳಕ್ಕೆ ಹಾವನ್ನು ಬಿಟ್ಟಿದ್ದಾರೆ.

    ಹಾವನ್ನು ರಕ್ಷಿಸಿದ ನಂತರ ಸ್ನೇಕ್ ಶೇಷಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ನೇಕ್ ಶೇಷಪ್ಪ ಅವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವುದೇ ಸಮಸ್ಯೆಯಾಗದೆ ಆದಷ್ಟು ಬೇಗ ಗುಣಮುಖರಾಗುವಂತೆ ಅಭಿನಂದನೆ ಸಲ್ಲಿಸಿದ್ದಾರೆ.

  • ತನಗೆ ಕಚ್ಚಿದ್ದ ಹಾವಿನ ಸಮೇತ ಆಸ್ಪತ್ರೆಗೆ ಬಂದ ವೃದ್ಧ – ವೈದ್ಯರು ಶಾಕ್

    ತನಗೆ ಕಚ್ಚಿದ್ದ ಹಾವಿನ ಸಮೇತ ಆಸ್ಪತ್ರೆಗೆ ಬಂದ ವೃದ್ಧ – ವೈದ್ಯರು ಶಾಕ್

    ಕಾರವಾರ: ವೃದ್ಧನೋರ್ವ ತನಗೆ ಕಡಿದ ಹಾವನ್ನೇ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

    ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಗೋವಿಗೆ ಮೇವು ಹಾಗೂ ಸೊಪ್ಪು ತರಲು ತೆರಳಿದ ವೇಳೆ ಹಾವಿನ ಮರಿಯೊಂದು ಕಚ್ಚಿದೆ. ಇದರಿಂದ ಆತಂಕಗೊಂಡ ಅವರು ತನಗೆ ಕಚ್ಚಿದ ಹಾವು ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೆ ಗೊಂದಲಗೊಂಡಿದ್ದಾರೆ.

    ಅಷ್ಟೇ ಅಲ್ಲದೇ ತನಗೆ ಕಚ್ಚಿದ ಹಾವು ಯಾವುದು ಎಂದು ತಿಳಿಯದೆ ವೈದ್ಯರಿಗೆ ಚಿಕಿತ್ಸೆ ಕೊಡಲು ಕಷ್ಟವಾಗುವುದೆಂದು ಅರಿತ ಅವರು ಹಾವನ್ನು ಕೊಟ್ಟೆಯಲ್ಲಿ ಹಿಡಿದುಕೊಂಡು ಬಂದು ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ದೊರೆತ ಬಳಿಕ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ.

    ಅಲ್ಲಿ ವೈದ್ಯರ ಮುಂದೆ ತನಗೆ ಕಚ್ಚಿದ ಹಾವನ್ನು ತೋರಿಸಿ ವೈದ್ಯರನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಬಳಿಕ ವೈದ್ಯರು ತಕ್ಷಣ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದ್ದು, ವಿಷಕಾರಿ ಹಾವಾಗಿರುವ ಕಾರಣ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದಾರೆ. ವೃದ್ಧನ ಆರೋಗ್ಯ ಸ್ಥಿರವಾಗಿದೆ.

  • ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    -ಮೂಲೆಯಲ್ಲಿ ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗರಾಜ

    ನವದೆಹಲಿ: ಸೀರೆ ತೊಟ್ಟ ಮಹಿಳೆ ಹಾವು ಹಿಡಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಮೂಲದ ನಿರ್ಜರಾ ಚಿಟ್ಟಿ ಹಾವು ಹಿಡಿದ ಮಹಿಳೆ. ನಿರ್ಜರಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದರು. ಈ ವೇಳೆ ಮನೆಯಲ್ಲಿ ಹಾವು ಬಂದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಬಟ್ಟೆ ಬದಲಿಸಿಕೊಳ್ಳದೇ ಸೀರೆಯಲ್ಲಿಯೇ ಬಂದು ಯಾವುದೇ ಮುಂಜಾಗ್ರತ ಉಪಕರಣಗಳಿಲ್ಲದೇ ಬರಿಗೈಯಲ್ಲಿ ಹಾವನ್ನ ಹಿಡಿದು ಮನೆಯ ಸದಸ್ಯರ ಆತಂಕವನ್ನ ದೂರ ಮಾಡಿದ್ದಾರೆ.

    https://twitter.com/DoctorAjayita/status/1304779562945933313

    12 ಸೆಕೆಂಡ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮೂಲೆಯಲ್ಲಿ ಹಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ನಿರ್ಜರಾ ರಕ್ಷಿಸಿದ್ದಾರೆ. ಸೀರೆ ಧರಿಸಿದ ಪರಿಣಾಮ ಹಾವು ಹಿಡಿಯಲು ಕಷ್ಟವಾಗುತ್ತಿದೆ. ಬಟ್ಟೆ ಬದಲಿಸಿ ಬರೋಷ್ಟರಲ್ಲಿ ಹಾವು ಅಪಾಯ ಮಾಡಿದ್ರೆ ಹೇಗೆ ಎಂದು ಬಂದೆ ಎಂದು ನಿರ್ಜರಾ ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು.

  • ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    – ಬಾಯಿಯಿಂದ ಜೀವಂತವಾಗಿ ಬಂದ ನಾಗಪ್ಪ
    – ಹೇಗೆ ಹೊಟ್ಟೆ ಸೇರಿತ್ತು ಗೊತ್ತಾ?

    ಮಾಸ್ಕೋ: ಮಹಿಳೆಯ ಹೊಟ್ಟೆಯಿಂದ ಸುಮಾರು 4 ಅಡಿ ಉದ್ದದ ಹಾವನ್ನು ತೆಗೆಯುವುದನ್ನು ನೋಡಿದರೇನೆ ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ಘಟನೆ ರಷ್ಯಾದ ಡಾಗೆಸ್ಥಾನ್‍ನ ಲೆವಾಶಿಯಲ್ಲಿ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ. ಹೊಟ್ಟೆ ನೋವಿನಿಂದ ಮಹಿಳೆ ಒದ್ದಾಡುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ವೈದ್ಯರಿಗೂ ಈ ಕುರಿತು ಏನೂ ತಿಳಿದಿಲ್ಲ. ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ. ನಂತರ ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿದ್ದಾರೆ.

    ಬಾಯಿಯಿಂದ ಟ್ಯೂಬ್ ಹಾಕಿ ಏನಿದೆ, ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ ಚಿತ್ರಣವನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ?
    ತೋಟದ ಮನೆಯಲ್ಲಿ ಮಹಿಳೆ ಮಲಗಿದಾಗ ಬಾಯಿ ತೆರೆದಿದ್ದು, ಈ ವೇಳೆ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ. ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ. ಆದರೆ ಹಾವಿನ ಹಾಗೂ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  • ಒಂದೇ ತಿಂಗಳಲ್ಲಿ 8 ಬಾರಿ ಕಚ್ಚಿದ ಹಾವು- ಭಯದಲ್ಲೇ ಬದುಕುತ್ತಿರುವ ಯುವಕ

    ಒಂದೇ ತಿಂಗಳಲ್ಲಿ 8 ಬಾರಿ ಕಚ್ಚಿದ ಹಾವು- ಭಯದಲ್ಲೇ ಬದುಕುತ್ತಿರುವ ಯುವಕ

    – ಬೇರೆ ಊರಿಗೆ ಹೋದರೂ ಬಿಡದ ನಾಗ
    – ಪೂಜೆ, ಪುನಸ್ಕಾರ ಮಾಡಿದರೂ ಪ್ರಯೋಜನವಾಗಿಲ್ಲ

    ಲಕ್ನೋ: ಹಾವು ಪದೇ ಪದೇ ಯುವಕನನ್ನು ಗುರಿಯಾಗಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಒಂದು ತಿಂಗಳಲ್ಲಿ ಅದೇ ಹಾವು ಯುವಕನಿಗೆ ಬರೋಬ್ಬರಿ 8 ಬಾರಿ ಕಚ್ಚಿದೆ. ಇದರಿಂದಾಗಿ ಯುವಕ ಮನೆಯಿಂದ ಹೊರ ಬರಲು ಸಹ ಭಯಪಡುತ್ತಿದ್ದಾನೆ.

    ಉತ್ತರ ಪ್ರದೇಶದ ಪಾಂಪುರದಲ್ಲಿ ಘಟನೆ ನಡೆದಿದ್ದು, ಕೇವಲ ಒಂದೇ ತಿಂಗಳಲ್ಲಿ ಅದೇ ಹಾವು 8 ಬಾರಿ ಯುವಕನಿಗೆ ಕಚ್ಚಿದೆ. 8 ಬಾರಿ ಸಹ ಯುವಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. 17 ವರ್ಷದ ಯಶ್‍ರಾಜ್ ಮಿಶ್ರಾ ಹಾವು ಕಡಿತದಿಂದಾಗಿ ಈ ವರೆಗೆ ಹಲವು ಬಾರಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ವಾರದ ಹಿಂದಷ್ಟೇ ಆತನಿಗೆ ಕೊನೇಯದಾಗಿ ಹಾವು ಕಚ್ಚಿದೆ. ಅಲ್ಲದೆ ಇದರಿಂದಾಗಿ ಬಾಲಕನ ಕುಟುಂಬಸ್ಥರು ಉರಗ ತಜ್ಞರ ಸಹಾಯವನ್ನು ಸಹ ಕೋರಿದ್ದಾರೆ.

    ಮಗನಿಗೆ ಮೂರನೇ ಬಾರಿ ಹಾವು ಕಚ್ಚಿದ ಬಳಿಕ ಆತನನ್ನು ಬಹದ್ದೂರ್‍ನಲ್ಲಿರುವ ನಮ್ಮ ಸಂಬಂಧಿಕ ರಾಮ್‍ಜೀ ಶುಕ್ಲಾ ಅವರ ಮನೆಗೆ ಕಳುಹಿಸಿದೆವು. ಅಲ್ಲಿಗೆ ಕಳುಹಿಸಿದ ಕೆಲವೇ ದಿನಗಳ ಬಳಿಕ ಮತ್ತೆ ಅದೇ ಹಾವು ಮನೆಯ ಬಳಿ ಕಾಣಿಸಿಕೊಂಡಿದ್ದು, ಮತ್ತೆ ಕಚ್ಚಿದೆ. ನಂತರ ಯಶ್‍ರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಯಶ್‍ರಾಜ್ ತಂದೆ ಚಂದ್ರಮೌಳಿ ಮಿಶ್ರಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಆಗಸ್ಟ್ 25ರಂದು ಕೊನೇಯ ಬಾರಿ ಹಾವು ಕಚ್ಚಿದ್ದು, ನಂತರ ಊರಲ್ಲಿದ್ದ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೆವು. ಮಾತ್ರವಲ್ಲದೆ ಉರಗ ತಜ್ಞರು ನೀಡಿದ ಸಲಹೆ ಮೇರೆಗೆ ವಿವಿಧ ಥೇರಪಿಗಳನ್ನೂ ಮಾಡಿಸಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.

    ಆ ಹಾವು ಯಶ್‍ರಾಜ್‍ನನ್ನು ಯಾಕೆ ಅಷ್ಟೊಂದು ಟಾರ್ಗೆಟ್ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಯುವಕ ಇದೀಗ ಭಯದಲ್ಲೇ ಬದುಕುತ್ತಿದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ. ಹಾವಿಗೆ ಹೆದರಿಕೊಂಡು ಹೊರಗೆ ಬರುತ್ತಿಲ್ಲ. ಈ ಬಗ್ಗೆ ಹಲವು ಪೂಜೆಗಳನ್ನೂ ನಾವು ಮಾಡಿಸಿದ್ದೇವೆ. ಅಲ್ಲದೆ ಹಾವನ್ನು ಹಿಡಿಯಲು ಉರಗ ತಜ್ಞರ ಮೂಲಕ ಹಲವು ಪ್ರಯತ್ನಗಳನ್ನು ಮಾಡಿದ್ದೇವೆ. ಎಲ್ಲವೂ ನಿರರ್ಥಕವಾಗಿವೆ ಎಂದು ಯಶ್‍ರಾಜ್ ತಂದೆ ಅಳಲು ತೋಡಿಕೊಂಡಿದ್ದಾರೆ.