Tag: ಹಾವು

  • ತುಮಕೂರಿನಲ್ಲಿ ಕುಡಿದ ಮತ್ತಲ್ಲಿ ಹಾವಿನೊಂದಿಗೆ ಯುವಕನ ಹುಚ್ಚಾಟ

    ತುಮಕೂರಿನಲ್ಲಿ ಕುಡಿದ ಮತ್ತಲ್ಲಿ ಹಾವಿನೊಂದಿಗೆ ಯುವಕನ ಹುಚ್ಚಾಟ

    ತುಮಕೂರು: ಹಾವು (Snake) ಎನ್ನುವುದನ್ನು ಕೇಳಿದೆನ್ರೇ ಮಾರುದ್ದ ಓಡುವ ಜನರಿದ್ದಾರೆ. ಇನ್ನೂ ಅದು ನಾಗರಹಾವು ಅಂದ್ರೆ ಜೀವ ಹೋಗಿ ಬರುತ್ತೆ. ರಸ್ತೆಯಲ್ಲಿ ಹೋಗ್ತಾ ಇದ್ದ ನಾಗರಹಾವು ಹಿಡಿದ ಯುವಕನೊಬ್ಬ ಹುಚ್ಚಾಟ ಆಡಿದ್ದಾನೆ. ಹಾವು ಎರಡು ಬಾರಿ ಕಚ್ಚಿದರೂ ಅದನ್ನೇ ಕೈಗೆ ಸುತ್ತಿಕೊಂಡು ರೋಡ್ ಶೋ ಮಾಡಿದ್ದಾನೆ.

    ಹೌದು. ತುಮಕೂರಿನ ಶಿರಾಗೇಟ್ ನಿವಾಸಿ ಸಲೀಂ ವೃತ್ತಿಯಲ್ಲಿ ಮೆಕ್ಯಾನಿಕ್. ಐದು ಅಡಿ ಉದ್ದ ನಾಗರಹಾವು ಅದರ ಪಾಡಿಗೆ ಅದು ಸರಸರನೇ ಹರಿದು ಹೋಗ್ತಾ ಇತ್ತು. ಎಣ್ಣೆ ಏಟಿನಲ್ಲಿ ಇಷ್ಟೆಲ್ಲಾ ರಂಪಾಟ ನಡೆಸಿದ್ದಾನೆ. ಹಾವು ಹಿಡಿದು ಬೇಜಾರಾಗಿ ಪಕ್ಕದ ಕಲ್ಲಿನ ಪೊದೆಗೆ ಬಿಟ್ಟಿದ್ದಾನೆ. ಇದನ್ನೂ ಓದಿ: ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    ಯುವಕನ ಹುಚ್ಚಾಟ ತಡೆಯಲಾರದೇ ಸ್ಥಳೀಯರು ಉರಗ ಸಂರಕ್ಷಕ ದಿಲೀಪ್ ಕುಮಾರ್ ತಂಡಕ್ಕೆ ಕರೆ ಮಾಡಿದ್ದಾರೆ. ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನಾಗರಹಾವನ್ನು ಸುರಕ್ಷಿವಾಗಿ ಹಿಡಿದು ದೇವರಾಯನದುರ್ಗದ ಅರಣ್ಯ (Forest) ಕ್ಕೆ ಬಿಟ್ಟಿದ್ದಾರೆ. ಇದಕ್ಕೂ ಮೊದಲು ಹಾವಿನ ಕಡಿತಕ್ಕೆ ಒಳಗಾಗಿದ್ದ ಸಲೀಂನ್ನ ಜನರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾಖಲು ಮಾಡಿದ ಅರ್ಧಗಂಟೆಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಸಲೀಂ ಆಸ್ಪತ್ರೆಗೆ ಬಂದಾಗ ಬಿಪಿ, ಹಾರ್ಟ್ ಬೀಟ್ ಎಲ್ಲವೂ ನಾರ್ಮಲ್ ಆಗಿದೆ. ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸುತಿದ್ದಂತೆ, ಸಲೀಂ ಆಸ್ಪತ್ರೆ ಬೆಡ್‍ನಿಂದ ಜಿಗಿದು ಎಸ್ಕೇಪ್ ಆಗಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿಗೆ ತಲೆ ನೋವು ತಂದಿದೆ. ನಾಪತ್ತೆಯಾಗಿರುವ ವ್ಯಕ್ತಿ ಪತ್ತೆಯಾದರೆ ಆತನ ಆರೋಗ್ಯದ ಸ್ಥಿತಿಗತಿ ತಿಳಿಯಲಿದೆ. ಹಾವು ಅಂದ್ರೆನೇ ಮೂರ್ಛೆ ಹೋಗುವ ಜನರ ಮಧ್ಯೆ ಎರಡು ಬಾರಿ ವಿಷಕಾರಿ ನಾಗರಹಾವು ಕಚ್ಚಿದರೂ ಆರೋಗ್ಯ ಚೆನ್ನಾಗಿದೆ ಅನ್ನೋದೇ ವೈದ್ಯರಿಗೆ ಸೋಜಿಗ.

    Live Tv
    [brid partner=56869869 player=32851 video=960834 autoplay=true]

  • ಪಾಳು ಬಾವಿಗೆ ಎಸೆದಿದ್ದ ಹಸುಗೂಸಿಗೆ ಹಾಲುಣಿಸಿ ವಾತ್ಸಲ್ಯ ಮೆರೆದ ಗ್ರಾಮದ ಮಹಿಳೆ

    ಪಾಳು ಬಾವಿಗೆ ಎಸೆದಿದ್ದ ಹಸುಗೂಸಿಗೆ ಹಾಲುಣಿಸಿ ವಾತ್ಸಲ್ಯ ಮೆರೆದ ಗ್ರಾಮದ ಮಹಿಳೆ

    ಮಂಡ್ಯ: ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಅಡಿ ಆಳ ಇರುವ ಪಾಳು ಬಾವಿಗೆ ಗಂಡು ಮಗವನ್ನು ಹೆತ್ತ ತಾಯಿಯೇ ಎಸೆದಿದ್ದಾಳೆ. ಈ ಮಧ್ಯೆ ತೋಟಕ್ಕೆ ಹೋಗುತ್ತಿದ್ದ ರೈತ ಮಹಿಳೆಯೊಬ್ಬರು ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಇಣುಕಿ ನೋಡಿದಾಗ ಮಗು ಇರುವುದನ್ನು ನೋಡಿದ್ದಾರೆ. ನಂತರ ಕೂಡಲೇ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    ಬಳಿಕ ಬಾವಿಯ ಹತ್ತಿರ ಬಂದ ಊರಿನ ಜನರು ಮಗು ಹಾವಿನ ಪಕ್ಕ ಮಲಗಿದ್ದರೂ ಮೃತ್ಯುವನ್ನು ಗೆದ್ದಿರುವುದನ್ನು ಕಂಡು ಬೆಚ್ಚಿಬೆರಗಾಗಿದ್ದಾರೆ. ನಂತರ ಬಾವಿಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಗ್ರಾಮದ ಮಹಿಳೆಯೊಬ್ಬರು ಎದೆ ಹಾಲುಣಿಸಿ ಮಾನವೀಯತೆ ಮೆರೆದರೆ, ಇತರ ಮಹಿಳೆಯರು ಮಗುವಿಗೆ ಆರೈಕೆ ಮಾಡಿದ್ದಾರೆ. ಕೊನೆಗೆ ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದು ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ – ಗಾಯಗೊಂಡ ಗರ್ಭಿಣಿ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ಮಹಿಳೆಯ ಕಿವಿಯೊಳಗೆ ಹೊಕ್ಕಿತು ವಿಷಕಾರಿ ಹಾವು!

    ನವದೆಹಲಿ: ದೇಶದಲ್ಲಿ ಇತ್ತೀಚಿನ ಕೆಲ ಘಟನೆಗಳು ಸಾರ್ವಜನಿಕರನ್ನ ದಿಗ್ಭ್ರಮೆಗೊಳಿಸುತ್ತಿವೆ. ಹೀಗೂ ಉಂಟೇ ಎನ್ನುವಷ್ಟು ಅಚ್ಚರಿಯನ್ನೂ ಮೂಡಿಸುತ್ತಿದೆ. ಅಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ವೀಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಹೌದು… ಮಹಿಳೆಯೊಬ್ಬರು ಮಲಗಿದ್ದ ವೇಳೆ ಅತ್ಯಂತ ವಿಷಕಾರಿ ಹಾವಿನ ಮರಿಯೊಂದು (Snake) ಆಕೆಯ ಕಿವಿಯಿಂದ (Ear) ಒಳಹೊಕ್ಕಿದೆ. ಬಳಿಕ ಹೊರಬಾರದೇ ಕಿವಿಯಲ್ಲೇ ಸಿಕ್ಕಿಕೊಂಡಿದೆ. ಈ ಕುರಿತ ವೀಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, 87 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 

    ವೀಡಿಯೋ ನಲ್ಲಿ ಹಳದಿ ಬಣ್ಣದ ಹಾವೊಂದು ಮಹಿಳೆಯ (Women) ಕಿವಿಯೊಳಗೆ ಗಟ್ಟಿಯಾಗಿ ಸಿಕ್ಕಿಕೊಂಡಿದೆ. ಆದರೆ ಹೊರಬರುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ವೈದ್ಯರು (Doctors) ಸತತವಾಗಿ ಮಹಿಳೆ ಕಿವಿಯಿಂದ ಹಾವನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಘಟನೆ ನಡೆದ ಸ್ಥಳ ಸಮಯವನ್ನು ಬಹಿರಂಗಪಡಿಸಿಲ್ಲ. ಕೊನೆಗೆ ಮಹಿಳೆಯ (Women) ಕಿವಿಯಿಂದ ಹಾವು ಹೊರ ಬಂದಿತೇ ಇಲ್ಲವೇ ಎನ್ನುವ ಕುತೂಹಲದೊಂದಿಗೆಯೇ ವೀಡಿಯೋ ಕೊನೆಗೊಂಡಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ

    SNAKE
    ಸಾಂದರ್ಭಿಕ ಚಿತ್ರ

    ಕೆಲವರು ವೀಡಿಯೋ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ, ಇನ್ನೂ ಕೆಲವರು ಇದು 100 ಪರ್ಸೆಂಟ್ ಸುಳ್ಳು, ಕೇವಲ ವೀವ್ಸ್ಗಾಗಿ ವೀಡಿಯೋ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯ ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ 81 ಸಾವಿರದಿಂದ 1.38 ಲಕ್ಷ ಮಂದಿಯಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದರ ಮೂರು ಪಟ್ಟು ಅಧಿಕ ಮಂದಿ ಶಾಶ್ವತ ಅಂಕವೈಕಲ್ಯ ಉಂಟುಮಾಡುತ್ತಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಕುತ್ತಿಗೆಗೆ ಸುತ್ತಿಕೊಂಡು ಓಡಾಡ್ತಿದ್ದ ವೇಳೆ ಉರಗ ರಕ್ಷಕನನ್ನೇ ಕಚ್ಚಿ ಕೊಂದ ಹಾವು

    ಕುತ್ತಿಗೆಗೆ ಸುತ್ತಿಕೊಂಡು ಓಡಾಡ್ತಿದ್ದ ವೇಳೆ ಉರಗ ರಕ್ಷಕನನ್ನೇ ಕಚ್ಚಿ ಕೊಂದ ಹಾವು

    ಲಕ್ನೋ: ಹಾವನ್ನು ರಕ್ಷಿಸಿದ ನಂತರ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಓಡಾಡುತ್ತಿದ್ದ ಉರಗ ರಕ್ಷಕನನ್ನು ಕಚ್ಚಿ ಕೊಂದಿರುವ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

    SNAKE
    ಸಾಂದರ್ಭಿಕ ಚಿತ್ರ

    ಮೃತ ವ್ಯಕ್ತಿಯನ್ನು ಉರಗ ರಕ್ಷಕ ದೇವೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ನೆರೆಹೊರೆಯಲ್ಲಿ ಹಾವನ್ನು ಹಿಡಿಯುತ್ತಾ ಫೇಮಸ್ ಆಗಿದ್ದ. ಹಾಗೆಯೇ ಅತ್ಯಂತ ವಿಷಕಾರಿ ಹಾವನ್ನು ಇಂದು ರಕ್ಷಿಸಿದ್ದಾನೆ. ಬಳಿಕ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿದ್ದಾನೆ. ಇದೇ ವೇಳೆ ಹಾವು ಕಚ್ಚಿದೆ. ಇದನ್ನೂ ಓದಿ: ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ PSI ಆಂಜಪ್ಪ ಅಮಾನತು

    ಹಿಡಿದು ಸುಮಾರು 2 ಗಂಟೆಗಳಾದ ನಂತರ ಹಾವು ಕಚ್ಚಿದೆ. ಆದರೆ ಉರಗ ರಕ್ಷಕ ಆಸ್ಪತ್ರೆಗೆ ಹೋಗುವ ಬದಲಾಗಿ ಗಿಡಮೂಲಿಕೆಗಳಿಂದ ಚಿಕಿತ್ಸೆ ಪಡೆದಿದ್ದಾನೆ. ನಂತರ ಏನೂ ಆಗಿಲ್ಲವೆಂದು ಭಾವಿಸಿ ಸುಮ್ಮನಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೋಗಿಯೊಂದರಲ್ಲಿ ಕಾಣಿಸಿಕೊಂಡ ಹಾವು- 1 ಗಂಟೆಗೂ ಹೆಚ್ಚು ಕಾಲ ನಿಂತ ರೈಲು

    ಬೋಗಿಯೊಂದರಲ್ಲಿ ಕಾಣಿಸಿಕೊಂಡ ಹಾವು- 1 ಗಂಟೆಗೂ ಹೆಚ್ಚು ಕಾಲ ನಿಂತ ರೈಲು

    ತಿರುವನಂತಪುರಂ: ರೈಲೊಂದರಲ್ಲಿ ಹಾವು ಕಾಣಿಸಿಕೊಂಡಿದ್ದು, ಅದನ್ನು ಹುಡುಕಲು ಒಂದು ಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡಿದ ಘಟನೆ ಕೇರಳದ ಕೋಝಿಕ್ಕೋಡ್‍ನಲ್ಲಿ ನಡೆದಿದೆ.

    ತಿರುವನಂತಪುರಂ- ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ 5ನೇ ಬೋಗಿಯಲ್ಲಿ ಲಗೇಜ್‍ನ ಪಕ್ಕದಲ್ಲಿ ಹಾವು ಇರುವ ಬಗ್ಗೆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

    ಹೀಗೆ ಹಾವಿನ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಅಷ್ಟೇ ಅಲ್ಲದೇ ಕೋಝಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಲುಪಿದ ತಕ್ಷಣ ಅವರು ಹಾವನ್ನು ಪತ್ತೆ ಹಚ್ಚಲು ಉರಗ ತಜ್ಞರ ವ್ಯವಸ್ಥೆಯನ್ನು  ಅರಣ್ಯ ಇಲಾಖೆಯವರು ಮಾಡಿದ್ದಾರೆ.

    ರೈಲಿನಲ್ಲಿ ಹಾವನ್ನು ಕಂಡ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ನಿಲ್ದಾಣದಲ್ಲಿ ಕಂಪಾರ್ಟ್‍ಮೆಂಟ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗಿಳಿದರು. ಇಬ್ಬರು ಹಾವು ಹಿಡಿಯುವವರು ರೈಲಿನಲ್ಲಿ ಸಂಪೂರ್ಣ ಹುಡುಕಾಟ ನಡೆಸಿದ್ದಾರೆ. ಆದರೂ ಹಾವನ್ನು ಹಿಡಿಯಲು ಸಾಧ್ಯವಾಗಲಿಲ್ಲ.

    train

    ಪ್ರಯಾಣಿಕರೊಬ್ಬರು ತೆಗೆದ ಫೋಟೋದಲ್ಲಿ ಹಾವು ಕಂಡು ಬಂದಿದೆ. ಕಂಪಾರ್ಟ್‍ಮೆಂಟ್‍ನ ಪಕ್ಕದಲ್ಲಿರುವ ರಂಧ್ರದಲ್ಲಿ ತಪ್ಪಿಸಿಕೊಂಡು ಅಥವಾ ಅಡಗಿಕೊಂಡಿರಬಹುದು ಎಂದು ರೈಲ್ವೇ ಮೂಲಗಳು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • 10 ಸಾವಿರ ಮನೆಗಳ ಕರೆಂಟ್‌ ಕಿತ್ತ ಹಾವು!

    10 ಸಾವಿರ ಮನೆಗಳ ಕರೆಂಟ್‌ ಕಿತ್ತ ಹಾವು!

    ಟೋಕಿಯೋ: ವಿದ್ಯುತ್‌ ಸ್ಟೇಷನ್‌ಗೆ ಹಾವು ನುಗ್ಗಿದ ಪರಿಣಾಮ ಸುಮಾರು 10,000 ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡ ಘಟನೆ ಜಪಾನ್‌ನಲ್ಲಿ ನಡೆದಿದೆ. ವಿದ್ಯುತ್‌ ಸ್ಪರ್ಶದಿಂದ ಹಾವು ಮೃತಪಟ್ಟಿದೆ.

    ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ನಗರದ ನಿವಾಸಿಗಳು ವಿದ್ಯುತ್ ಸಮಸ್ಯೆ ಎದುರಿಸಿದರು. ತೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯ ತನಿಖಾಧಿಕಾರಿಗಳು ವಿದ್ಯುತ್‌ ಸ್ಥಗಿತಕ್ಕೆ ಕಾರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ವಿದ್ಯುತ್‌ ಸ್ಟೇಷನ್‌ಗೆ ಭೇಟಿ ಕೊಟ್ಟಾಗ ಕೆಲವು ಯಂತ್ರೋಪಕರಣಗಳಲ್ಲಿ ಹಾವಿನ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಇದನ್ನೂ ಓದಿ: ದೋಣಿ ದುರಂತ- ಮಕ್ಕಳು ಸೇರಿ 22 ಮಂದಿ ದುರ್ಮರಣ

    ವಿದ್ಯುತ್‌ ತಂತಿ ತಗುಲಿ ಹಾವು ಸುಟ್ಟುಹೋಗಿದೆ. ಪರಿಣಾಮವಾಗಿ ಸ್ಟೇಷನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದರಿಂದಾಗಿ ಸುಮಾರು 10 ಸಾವಿರ ಮನೆಗಳ ನಿವಾಸಿಗಳು ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸಬೇಕಾಯಿತು.

    ಹಾವಿನ ಕುರಿತಾದ ಸುದ್ದಿಯು ನಿವಾಸಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ನಗರದ ವಿದ್ಯುತ್ ಸೌಲಭ್ಯಗಳನ್ನು ಹಾವು ಎಷ್ಟು ಸುಲಭವಾಗಿ ನಿಷ್ಕ್ರಿಯಗೊಳಿಸಿದೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೀಸಸ್‌ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

  • ನೀನಾ, ನಾನಾ ಅಂತ ಕಾಳಗಕ್ಕಿಳಿದ ಹಾವು, ನಾಯಿ – ಸಾವಿನಲ್ಲಿ ಅಂತ್ಯ

    ನೀನಾ, ನಾನಾ ಅಂತ ಕಾಳಗಕ್ಕಿಳಿದ ಹಾವು, ನಾಯಿ – ಸಾವಿನಲ್ಲಿ ಅಂತ್ಯ

    ಗದಗ: ಸಾಮಾನ್ಯವಾಗಿ ಹಾವು, ಮುಂಗುಸಿ ಕಾದಾಟ ನಡೆಸುವುದನ್ನು ನೋಡಿರುತ್ತೀರಾ. ಅಷ್ಟೇ ಯಾಕೆ ಹದ್ದು ಮತ್ತು ಹಾವು ಜಗಳ ಆಡಿರುವುದನ್ನು ನೋಡಿರುತ್ತೀರಾ. ಆದರೆ ಹಾವು ಹಾಗೂ ನಾಯಿ ನೀನಾ, ನಾನಾ ಎಂದು ಪರಸ್ಪರ ಜಗಳ ಆಡಿರುವುದನ್ನು ಎಲ್ಲಾದರೂ ನೋಡಿದ್ದೀರಾ? ಹಾಗದರೆ ಈ ಸ್ಟೋರಿ ಓದಿ..

    ಹೌದು, ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹಾವು ಮತ್ತು ನಾಯಿ ಪರಸ್ಪರ ಕಿತ್ತಾಟ ನಡೆಸಿದೆ. ಗ್ರಾಮದ ಜಮೀನಿ ಹಾವು ನೋಡಿದ ನಾಯಿ ಕಾಳಗಕ್ಕಿಳಿದಿದೆ. ಈ ವೇಳೆ ನಾಯಿಯನ್ನು ನೋಡಿ ಹಾವು ಬುಸುಗುಡುತ್ತಿದ್ದರೆ, ಕೊಂಚವು ಹಿಂದೆ ಸರಿಯದೇ ನಾಯಿ ನಾನು ನೀನಗೇನು ಕಡಿಮೆ ಎಂಬಂತೆ ಗುರ್ ಗುರ್ ಎಂದು ರೊಚ್ಚಿಗೆದಿದೆ. ಇನ್ನೂ ಈ ದೃಶ್ಯ ನೋಡಿ ಗ್ರಾಮಸ್ಥರು ಕೂಡ ಭಯಭೀತರಾಗಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ

    ರೈತ ಶೇಖಪ್ಪ ಚಲವಾದಿ ತನ್ನ ನಾಯಿಯೊಂದಿಗೆ ಜಮೀನಿಗೆ ಬಂದ ಸಂದರ್ಭ ನಾಗರಹಾವು ಕಾಣಿಸಿಕೊಂಡಿದ್ದು, ನಾಯಿ ಹಾವಿನ ಜೊತೆ ಸೆಣಸಾಡಿದೆ. ನಾಯಿ ಹಾವಿನ ಬಾಲ ಕಚ್ಚಿ ಗಾಯಗೊಳಿಸಿದರೆ, ಹಾವು ಕೂಡ ನಾಯಿಯ ಮೇಲೆ ನಿರಂತರವಾಗಿ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಈ ಎರಡು ಉಭಯ ಪ್ರಾಣಿಗಳನ್ನು ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಅಂಜದೇ ಎರಡು ಪ್ರಾಣಿ ಜಿದ್ದಾ-ಜಿದ್ದಿ ನಡೆಸಿದೆ. ಕೊನೆಗೆ ಸೋಲು ಅನುಭವಿಸಲು ಇಷ್ಟಪಡದ ಎರಡು ಪ್ರಾಣಿಗಳ ಕಾದಾಟ ಸಾವಿನಲ್ಲಿ ಅಂತ್ಯ ಕಂಡಿದೆ.

    ಕೂಡಲೇ ರೈತ ಶೇಖಪ್ಪ ಚಲವಾದಿ ಜಮೀನಿಗೆ ಪಶು ವೈದ್ಯರನ್ನು ಕರೆಯಿಸಿ ತನ್ನ ಸಾಕು ನಾಯಿಯ ಜೀವ ಉಳಿಸಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ನಾಯಿ ಸಾವನ್ನಪ್ಪಿದೆ. ಕಣ್ಣ ಮುಂದೆಯೇ ತಮ್ಮ ಪ್ರೀತಿಯ ನಾಯಿ ಮೃತಪಟ್ಟಿದ್ದು, ಶೇಖಪ್ಪರಿಗೆ ಭಾರೀ ಆಘಾತವಾಗಿದೆ. ಇದನ್ನೂ ಓದಿ: WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

    Live Tv

  • ಪತಿ ಎಂದು ತಿಳಿದು 4 ದಿನ ಚಾಪೆ ಮೇಲೆ ಹಾವಿನ ಜೊತೆಗಿದ್ದ ವೃದ್ಧೆ

    ಪತಿ ಎಂದು ತಿಳಿದು 4 ದಿನ ಚಾಪೆ ಮೇಲೆ ಹಾವಿನ ಜೊತೆಗಿದ್ದ ವೃದ್ಧೆ

    ಬಾಗಲಕೋಟೆ: ಹಾವು ಅಂದ್ರೆ ಎಲ್ಲರಿಗೂ ಭಯ ಸಹಜ. ಹಾವು ಅಂದರೆ ಸಾಕು ಮಾರುದ್ದ ಜಿಗಿಯುತ್ತಾರೆ‌. ಆದ್ರೆ, ಇಲ್ಲೊಬ್ಬ ವೃದ್ಧೆಗೆ ಮಾತ್ರ ಮನೆಗೆ ಹಾವು ಬಂದಾಗ ಭಯವೇ ಆಗಿಲ್ಲ. ಅಷ್ಟೆ ಅಲ್ಲ, ಮನೆಗೆ ಬಂದ ಹಾವು ಸಾಮಾನ್ಯ ಅಲ್ಲ, ಅದು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ತನ್ನ ಪತಿಯ ರೂಪ ಅಂತಿದ್ದಾಳೆ. ವಿಚಿತ್ರ ನಂಬಿಕೆಗೆ ಒಳಗಾಗಿದ್ದಲ್ಲದೇ ನಾಲ್ಕು ದಿನಗಳ ಕಾಲ ಅದನ್ನು ಮನೆಯಲ್ಲೆ ಇಟ್ಟುಕೊಂಡು ವೃದ್ಧೆ ಅಚ್ಚರಿ ಮೂಡಿಸಿದ್ದಾಳೆ.

    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ನಿವಾಸಿ ಶಾರವ್ವಾ ಮೌನೇಶ್ ಕಂಬಾರ. ಇವರ ಮಾತಿಗೆ ಸ್ಥಳೀಯ ಜನರು ವಿಸ್ಮಯದಂತೆ ಹಾವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು 

    ಚಾಪೆ ಮೇಲೆ ಹಾವು
    ಬಡ ಕುಟುಂಬದ ಶಾರವ್ವಾ ಪತಿ ಮೌನೇಶ್ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಶಾರವ್ವ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ರು. ಹೀಗಾಗಿ ಪತಿಯೇ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ ಅದಕ್ಕೆ ಯಾರು ಧಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡಿದ್ದಾರೆ. ಇದ್ರಿಂದ ವೃದ್ಧೆ ಮಾತನ್ನ ಕೇಳಿ ವಿಷಪೂರಿತ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದಾರೆ. ಇದನ್ನೂ ಓದಿ: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ

    ಕಚ್ಚಿ ಸಾಯಿಸು ಎಂದ್ರೂ ಕಚ್ಚಲಿಲ್ಲ
    ನಾಲ್ಕು ದಿನಗಳಿಂದ ಆ ಹಾವಿಗೆ ಊಟ ಹಾಲು ಏನು ಇಲ್ಲದೆ ಆ ಅಜ್ಜಿ ಮನೆಯಲ್ಲಿಯೇ ಅಸ್ವಸ್ಥತೆ ಗೊಂಡು ಸುಸ್ತಾಗಿ, ಬಿದ್ದಿದೆ. ಮೊದಲ ದಿನ ಹಾವನ್ನು ಕಂಡಾಗ ಶಾರವ್ವ, ನನ್ನನ್ನು ಕಚ್ಚಿ ಸಾಯುವಂತೆ ಮಾಡು ಎಂದು ಕೇಳಿದೆ. ಆದರೆ ಅದು ನನಗೆ ಏನನ್ನು ಮಾಡಿಲ್ಲ ಎನ್ನುತ್ತಾರೆ. ಆದರೆ ಹಾವು ಇದುವರೆಗೂ ಏನೂ ಮಾಡಿಲ್ಲ ಎಂದು ಅಜ್ಜಿ ಹೇಳ್ತಿದ್ದಾರೆ. ಒಟ್ಟಿನಲ್ಲಿ ವೃದ್ಧೆಯ ಈ ವಿಚಿತ್ರ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

    ಹಿನ್ನೆಲೆ
    ಶಾರವ್ವ ಅವರ ಪತಿ ಮೌನೇಶ್ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರಂತೆ. ಈಕೆಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದು,ಹೆಣ್ಣು ಮಗಳ ಮದುವೆಯಾಗಿದೆ. ಇಬ್ಬರು ಮಕ್ಕಳು ಬೇರೆ ಊರಲ್ಲಿದ್ದು, ಒಬ್ಬ ಮಗ ಆಗಾಗ ಬಂದು ಹೋಗುತ್ತಾನೆ. ಮನೆಯಲ್ಲಿ ಏಕಾಂಗಿತನದಿಂದ ಖಿನ್ನತೆ, ಗಂಡ ಅಗಲಿದ ದುಃಖದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

    ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

    ಚಿಕ್ಕೋಡಿ(ಬೆಳಗಾವಿ): ವಿಷಕಾರಿ ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ.

    SNAKE

    ಇಶಾಂತ್ ರಾಘವೇಂದ್ರ ಕಾಂಬಳೆ (04) ಮೃತ ಮಗು. ಯರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಗು ಮನೆಯಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ. ಹಾವು ಕಚ್ಚಿದ ಪರಿಣಾಮ ಮಗು ಅಳಲು ಆರಂಭಿಸಿದಾಗ ಮಗುವನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇದನ್ನೂ ಓದಿ: ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟೀ ಅಂಗಡಿಯಲ್ಲಿ ಅಗ್ನಿ ಅವಘಡ- ಬಾಲಕಿ ಗಂಭೀರ

  • ಜೀವಂತ ಹಾವು ಕೊರಳಿಗೆ ಧರಿಸಿ ಶಿವನ ಪಾತ್ರ ನಿರ್ವಹಿಸಿದ ಕಲಾವಿದ – ಬೆಚ್ಚಿಬಿದ್ದ ಪ್ರೇಕ್ಷಕರು

    ಜೀವಂತ ಹಾವು ಕೊರಳಿಗೆ ಧರಿಸಿ ಶಿವನ ಪಾತ್ರ ನಿರ್ವಹಿಸಿದ ಕಲಾವಿದ – ಬೆಚ್ಚಿಬಿದ್ದ ಪ್ರೇಕ್ಷಕರು

    ಚಿಕ್ಕೋಡಿ: ಹಲ್ಲು ತಗೆದ ಜೀವಂತ ನಾಗರಹಾವನ್ನು ಶಿವನ ಪಾತ್ರಧಾರಿ ಕೊರಳಲ್ಲಿ ಧರಿಸಿ ಸ್ಟೇಜ್ ಮೇಲೆ ಬಂದು ನಟನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.

    ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಗುರುವಾರ ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಾಗರಹಾವನ್ನು ಕೊರಳಲ್ಲಿ ಹಾಕಿಕೊಂಡು ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ ನಟನೆ ಮಾಡಿದ್ದಾರೆ. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ

    ಚರಂತಯ್ಯ ಕಳೆದ 30 ವರ್ಷಗಳಿಂದ ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರವನ್ನು ಮಾಡುತ್ತಿದ್ದಾರೆ. ಪಾತ್ರ ನಿರ್ವಹಣೆ ವೇಳೆ ಮೈಮೇಲೆಲ್ಲಾ ಹಾವು ಓಡಾಡಿದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ.

    ವೇದಿಕೆ ಮೇಲೆ ಹಾವು ಕಂಡು ಇತರ ಪಾತ್ರಧಾರಿಗಳು ಹಾಗೂ ಪ್ರೇಕ್ಷಕರು ಕೆಲ ಸಮಯ ದಂಗಾಗಿ ಹೋಗಿದ್ದರು. ಇದನ್ನೂ ಓದಿ: ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್