Tag: ಹಾವು

  • ಬೆಕ್ಕಿನ ಕಣ್ಣು ಹೋಲುವ ಕ್ಯಾಟ್ ಸ್ನೇಕ್ ಪತ್ತೆ-ಏನಿದರ ವಿಶೇಷತೆ?

    ಬೆಕ್ಕಿನ ಕಣ್ಣು ಹೋಲುವ ಕ್ಯಾಟ್ ಸ್ನೇಕ್ ಪತ್ತೆ-ಏನಿದರ ವಿಶೇಷತೆ?

    ಬೆಂಗಳೂರು: ಬೆಕ್ಕಿನ ಕಣ್ಣು ಹೋಲುವ ಕ್ಯಾಟ್ ಸ್ನೇಕ್‍ವೊಂದು ನಗರದ ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ಪತ್ತೆಯಾಗಿದೆ.

    ಕ್ಯಾಟ್ ಸ್ನೇಕ್ ಹೆಚ್ಚಾಗಿ ಗುಡ್ಡುಗಾಡು ಪ್ರದೇಶದಲ್ಲಿ ಕಾಣಸಿಗುತ್ತದೆ. ಈ ಹಾವಿನ ಕಣ್ಣುಗಳು ಬೆಕ್ಕಿನ ಹಾಗೆ ಇರೋದ್ರಿಂದ ಇದನ್ನ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತದೆ. ಯಂಟಗಾನಹಳ್ಳಿಯ ಕಾರ್ಖಾನೆಯ ಆವರಣದಲ್ಲಿ ಈ ಹಾವು ಪತ್ತೆಯಾಗಿದ್ದು, ಸ್ನೇಕ್ ಲೋಕೇಶ್ ಅವರು ಹಾವನ್ನ ರಕ್ಷಿಸಿದ್ದಾರೆ.

    ವಿಶೇಷತೆ: ಐದು ವರ್ಷಗಳ ಕಾಲ ಬದುಕಬಲ್ಲ ಈ ಹಾವು, ತನ್ನ ಸಂತತಿಗಾಗಿ ಏಕ ಕಾಲದಲ್ಲಿ 8 ರಿಂದ 10 ಮೊಟ್ಟೆಯನ್ನಿಡುವ ಸಾಮರ್ಥ್ಯ ಹೊಂದಿದ್ದು, ಈ ಸಂತತಿಯ ವಿಶೇಷ ಅಂದ್ರೆ ರಾತ್ರಿ ಹೊತ್ತಿನಿಲ್ಲಿ ಸಂಚರಿಸುತ್ತದೆ. ಬೂದು ಬಣ್ಣದಿಂದ ನಕ್ಷತ್ರಗಳ ರೂಪದ ಮೈನೋಟದಿಂದ ತನ್ನ ದೇಹ ವಿನ್ಯಾಸವನ್ನು ಹೊಂದಿದೆ. ಇದು ಭೂಮಿ ಮತ್ತು ಮರದ ಮೇಲೆ ವೇಗವಾಗಿ ಚಲಿಸುತ್ತದೆ.

     

  • ಕೋಳಿ ಗೂಡಿಗೆ ನುಗ್ಗಿ ಬಾಟಲಿಯನ್ನ ನುಂಗಿದ ನಾಗ! – ವಿಡಿಯೋ ನೋಡಿ

    ಕೋಳಿ ಗೂಡಿಗೆ ನುಗ್ಗಿ ಬಾಟಲಿಯನ್ನ ನುಂಗಿದ ನಾಗ! – ವಿಡಿಯೋ ನೋಡಿ

    ಕಾರವಾರ: ಶನಿವಾರ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪ್ಪಗಿ ಗ್ರಾಮದಲ್ಲಿ ನಾಗರ ಹಾವೊಂದು ಮೊಟ್ಟೆ ಎಂದು ಎರಡೂವರೆ ಅಡಿ ಉದ್ದದ ಅರ್ಧ ಇಂಚು ಪೈಪನ್ನ ನುಂಗಿತ್ತು. ಅಂತಹವುದು ಘಟನೆಯೊಂದು ಗೋವಾದ ಕಾಣ್ ಕೋಣ್ ನಲ್ಲಿ ನಡೆದಿದೆ.

    ಕಾಣ್ ಕೋಣ್ ಗ್ರಾಮದ ಬಳಿ ನಾಗರ ಹಾವೊಂದು ಆಹಾರಕ್ಕಾಗಿ ಕೋಳಿ ಗೂಡಿಗೆ ನುಗ್ಗಿದೆ. ಈ ವೇಳೆ ಸಾಕಷ್ಟು ಕೋಳಿ ಮರಿಗಳು ಗೂಡಿನಲ್ಲಿದ್ದವು. ಕೋಳಿ ಮರಿಯೆಂದು ತಿಳಿದ ನಾಗರ ಹಾವು ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಬಾಟಲ್ ನುಂಗಿದೆ.

    ಬಾಟಲ್ ನುಂಗಿದ ಮೇಲೆ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾದಾಗ ಬಾಟಲಿಯನ್ನು ಉಗುಳಿದೆ. ವಿಷಯ ತಿಳಿದು ಸ್ಥಳಾಕ್ಕಾಗಮಿಸಿದ ಉರಗ ತಜ್ಞ ಕಾರ್ವಿ ಫರ್ನಾಂಡಿಸ್ ಎಂಬವರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಇದನ್ನೂ ಒದಿ: ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    https://www.youtube.com/watch?v=G6-avs7TJcA

  • ಮಳೆಯ ಬೆನ್ನಲ್ಲೇ ಶುರುವಾಯಿತು ಬೆಂಗ್ಳೂರಿಗರಿಗೆ ಹಾವುಗಳ ಕಾಟ

    ಮಳೆಯ ಬೆನ್ನಲ್ಲೇ ಶುರುವಾಯಿತು ಬೆಂಗ್ಳೂರಿಗರಿಗೆ ಹಾವುಗಳ ಕಾಟ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ನಗರದಲ್ಲಿ ತರಹೇವಾರಿ ಹಾವುಗಳು ಮಳೆಯ ನೀರಿನೊಂದಿಗೆ ಮನೆ ಸೇರಿಕೊಳ್ಳುತ್ತಿವೆ.

    ಶನಿವಾರ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದ್ದು, ಮಾನ್ಯತಾ ಟೆಕ್ ಪಾರ್ಕ್ ಬಳಿ ಅಪರೂಪದ ಟ್ರೆಕೆಂಟ್ ಹಾವೊಂದು ಪತ್ತೆಯಾಗಿದೆ. ಈ ಟ್ರೆಕೆಂಟ್ ಹಾವು ಕೇವಲ ರಾತ್ರಿ ಹೊತ್ತು ಸಂಚರಿಸುತ್ತದೆ. ಈ ಜಾತಿಯ ಹಾವೊಂದು ಸಿಮೆಂಟ್ ಪೈಪ್‍ನೊಳಗೆ ಪತ್ತೆಯಾಗಿದ್ದು, ಜನರು ಕೂತುಹಲದಿಂದ ವೀಕ್ಷಿಸಿದ್ರು.

    ನಗರದ ದಾಸರಹಳ್ಳಿಯ ಗ್ಯಾರೇಜ್‍ವೊಂದರಲ್ಲಿ 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ. ಮಳೆಯಿಂದಾಗಿ ಎಲ್ಲೆಂದರಲ್ಲಿ ಹಾವುಗಳು ಕಾಣಿಸುತ್ತಿರುವದರಿಂದ ಉರಗ ತಜ್ಞರು ಹಾವುಗಳನ್ನು ಹಿಡಿಯುವಲ್ಲಿ ಬ್ಯೂಸಿಯಾಗಿದ್ದಾರೆ.

     

  • ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಿಡಿಯೋ: ಕಾಲಿನ ಮೇಲೆ ಹರಿದು ಬಂದ ವಿಷಕಾರಿ ಹಾವಿನಿಂದ ಈತ ಪಾರಾಗೋದನ್ನ ನೋಡಿದ್ರೆ ಆಶ್ಚರ್ಯಪಡ್ತೀರ!

    ವಾಷಿಂಗ್ಟನ್: ಮನೆಯಲ್ಲೋ, ಹಿತ್ತಲಲ್ಲೋ ಹಾವು ಕಾಣಿಸಿಕೊಂಡ್ರೆ ಅದರ ಹತ್ರ ಹೋಗೋಕೂ ಭಯ ಪಡ್ತೀವಿ. ಅಂಥದ್ರಲ್ಲಿ ಮೈ ಮೇಲೆಯೇ ಹಾವು ಹರಿದು ಬಂದ್ರೆ ಏನಾಗ್ಬೇಡ. ಯೂಟ್ಯೂಬರ್ ನಿಕ್ ಬಿಶಾಪ್ ಎಂಬವರು ಕಾಡು ಪ್ರಾಣಿಗಳ ಮತ್ತು ಹಾವುಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲು ಅಮೆರಿಕದಾದ್ಯಂತ ಸಂಚಾರ ಮಾಡ್ತಿರ್ತಾರೆ. ಹೀಗೆ ಒಮ್ಮೆ ಚಿತ್ರೀಕರಣ ಮಾಡಲೆಂದು ಹೋದಾಗ ಸುಸ್ತಾಯ್ತು ಅಂತ ಕುಳಿತಿದ್ದ ನಿಕ್ ಬಳಿ ವಿಷಕಾರಿ rattlesnake ಜಾತಿಯ ಹಾವು ಬಂದಿದೆ.

    ಹಾವು ಸಮೀಪ ಬರುತ್ತಿದ್ದಂತೆ ನಿಕ್ ನನಗೆ ಚಲಿಸಲು ಭಯವಾಗ್ತಿದೆ, ನಾನು ಮರಗಟ್ಟಿಹೋಗಿದ್ದೇನೆ ಅಂತ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು. ಹಾವನ್ನ ಓಡಿಸಲು ನಿಕ್ ಅದರ ಬಾಲ ಮುಟ್ಟಿದಾಗ ಅದು ಒಮ್ಮೆಲೆ ಆತನ ಕಾಲಿನ ಮೇಲೇರಿ ಬರುತ್ತದೆ. ಆದ್ರೂ ನಿಕ್ ಮತ್ತೊಮ್ಮೆ ಒಂದು ಕಡ್ಡಿಯಿಂದ ಅದರ ಬಾಲವನ್ನ ಮುಟ್ಟಿದ್ದು, ಅದು ಮೆಲ್ಲನೆ ನಿಕ್ ಪಕ್ಕದಲ್ಲೇ ಹರಿದು ಹಿಂದಕ್ಕೆ ಹೋಗುತ್ತದೆ.

    ವಿಡಿಯೋದ ವಿವರಣೆಯ ಪ್ರಕಾರ ಇದು ಈಸ್ಟರ್ನ್ ಡೈಮಂಡ್‍ಬ್ಯಾಕ್ rattlesnake ಆಗಿದ್ದು, ಇದು ಅತ್ಯಂತ ವಿಷಕಾರಿ ಹಾವಾಗಿದೆ. ಈ ಹಾವನ್ನ ಕೆಣಕಿದರಷ್ಟೆ ದಾಳಿ ಮಾಡುತ್ತದೆ. ಅಲ್ಲದೆ ಈ ಹಾವು ಕಚ್ಚಿದ್ರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ.

    ನಿಕ್ ತನ್ನ ಯೂಟ್ಯೂಬ್ ಖಾತೆ ನಿಕ್ ದಿ ವ್ರಾಂಗ್ಲರ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದು, ಇದು ಅತ್ಯಂತ ಅಪಾಯಕರವಾದ ವಿಷಕಾರಿ ಹಾವನ್ನ ಎದುರುಗೊಂಡಿದ್ದು. ಇದನ್ನ ಪ್ರಯತ್ನಿಸಬೇಡಿ ಅಂತ ವಿವರಣೆಯಲ್ಲಿ ಹೇಳಿದ್ದಾರೆ.

    ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 90 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ವಿಡಿಯೋ ನೋಡಿದವರಲ್ಲಿ ಕೆಲವರು ಇದು ನಿಜಕ್ಕೂ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು, ನಿನಗೆ ಬುದ್ಧಿ ಇಲ್ವಾ ಎಂದಿದ್ದಾರೆ. ಆದ್ರೆ ಹಾವು ಬಂದ್ರೂ ಕ್ಯಾಮೆರಾಮೆನ್ ಸಹಾಯಕ್ಕೆ ಧಾವಿಸದೇ ಇದ್ದಿದ್ದರಿಂದ ಕೆಲವರು ಈ ವಿಡಿಯೋ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

    https://www.facebook.com/Nickthewranglerfanpage/videos/1774746626188252/

  • ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ವಿಮಾನ ನಿಲ್ದಾಣದಲ್ಲಿ ಬುಸ್ ಬುಸ್: ಆತಂಕಗೊಂಡಿದ್ದ ಪ್ರಯಾಣಿಕರು

    ಹೈದ್ರಾಬಾದ್: ಬಿಸಿಲಿನ ತೀವ್ರತೆಗೆ ಹಾವುಗಳು ಎಲ್ಲಂದ್ರಲ್ಲಿ ಕಾಣಿಸಿಕೊಳ್ಳುತ್ತಿವೆ. ಇನ್ನೂ ಪ್ರಾಣಿಗಳ ವಾಸಸ್ಥಾನವನ್ನು ಮಾನವ ಸಂಕುಲ ದಿನೇ ದಿನೇ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಆಹಾರ ಅರಸಿ ಪ್ರಾಣಿಗಳು ನಾಡಿನತ್ತ ಬರಲು ಆರಂಭಿಸಿವೆ. ಅದೇ ರೀತಿ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

    ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

    ಹೈದ್ರಾಬಾದ್‍ನ ಜಿಎಂಆರ್ ಏರ್‍ಪೋರ್ಟ್‍ನ ವಿಮಾನಗಳ ನಿಲುಗಡೆ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದರಿಂದ ಸ್ಥಳದಲ್ಲಿದ್ದ ಪ್ರಯಾಣಿಕರನ್ನು ಭಯ ಬೀಳುವಂತೆ ಮಾಡಿತ್ತು.

    ಕೂಡಲೇ ಸ್ಥಳಕ್ಕಾಗಮಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಹಾವನ್ನು ಹಿಡಿದು ಪ್ರಯಾಣಿಕರ ಆತಂಕವನ್ನು ನಿವಾರಣೆ ಮಾಡಿದ್ದಾರೆ.

    ಇದನ್ನೂ ಓದಿ: ಕಾಳಿಂಗ ಸರ್ಪ ನೀರು ಕುಡಿಯುವುದನ್ನ ನೋಡಿ

    ಇದನ್ನೂ ಓದಿ: ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ 

     

  • ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ.

    ನಂಜುಂಡ ಮತ್ತು ಸಿತಾರ ದಂಪತಿಯ ಪುತ್ರ ಸೂರ್ಯ ಎಂಬ ಬಾಲಕನೇ ಮೃತ ದುರ್ದೈವಿ. ಮಂಗಳವಾರ ರಾತ್ರಿ ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಹಾವು ಕಚ್ಚಿದೆ. ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಬಾಲಕ ಸೂರ್ಯ ಮೃತಪಟ್ಟಿದ್ದಾನೆ.

    ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

  • ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

    ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

    ಕಲಬುರಗಿ: ಬಾಯಿಂದ ಆಹಾರವನ್ನು ಕಸಿದ ಹಿನ್ನೆಲೆಯಲ್ಲಿ ಹಾವೊಂದು ಅಲ್ಲಿರುವ ಸ್ಥಳೀಯರನ್ನು ಬೆನ್ನತ್ತಿದ ಅಪರೂಪದ ಘಟನೆಯೊಂದು ನಡೆದಿದೆ.

    ಜಿಲ್ಲೆಯ ಸೇಡಂ ತಾಲೂಕಿನ ಸಮಖೇಡ ತಾಂಡಾ ಬಳಿ ಹಾವು ಸಾರ್ವಜನಿಕರನ್ನು ಬೆನ್ನಟ್ಟಿದೆ. ಮೇಯಲು ಹೋದ ಕುರಿಯನ್ನು ಹಾವೊಂದು ನುಂಗಲು ಯತ್ನಿಸಿದೆ. ಇದನ್ನು ಕಂಡ ಸ್ಥಳೀಯರು ಹಾವಿನ ಬಾಯಿಂದ ಕುರಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿಯೇ ಕುರಿ ಮೃತಪಟ್ಟಿದೆ.

    ಇದನ್ನೂ ಓದಿ: ಹಸಿವು ನೀಗಿಸಿಕೊಳ್ಳಲು ನಾಯಿಮರಿಯನ್ನೇ ನುಂಗಲು ಯತ್ನಿಸಿದ ನಾಗರಹಾವು 

    ತನ್ನ ಬಾಯಿಗೆ ಬಂದ ಆಹಾರ ಕಸಿದ ಜನರನ್ನು ಕಂಡ ಹಾವು ರೋಷದಿಂದ ಬಾಯ್ತೆರೆದು ಬೆನ್ನು ಹತ್ತಿದೆ. ಕೂಡಲೇ ಹಾವಿನ ದ್ವೇಷ ಕಂಡ ಸ್ಥಳೀಯರು ಸ್ಥಳದಿಂದ ದಿಕ್ಕು ತಪ್ಪಿ ಓಡಿ ಹೋಗಿದ್ದಾರೆ.

    ಇದನ್ನೂ ಓದಿ: ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆಯಾಗ್ತಿರೋದನ್ನ ಕಂಡು ಮಾಲೀಕನೇ ದಂಗಾದ!

    ಇದೇ ವರ್ಷ ಫೆಬ್ರುವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ರಸ್ತೆಯ ಶನೀಶ್ವರ ದೇವಸ್ಥಾನದ ಬಳಿ ನಾಗರಹಾವೊಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ನಾಯಿಮರಿಯನ್ನು ನುಂಗಲು ವ್ಯರ್ಥ ಪ್ರಯತ್ನಪಟ್ಟಿತ್ತು. ಆದರೆ ನಾಯಿಮರಿಯು ಗಾತ್ರದಲ್ಲಿ ಹಾವಿನ ಬಾಯಿಗಿಂತ ದೊಡ್ಡದಾಗಿತ್ತು. ಹಾಗಾಗಿ ನಾಯಿಮರಿಯನ್ನು ನುಂಗಲು ಸಾಧ್ಯವಾಗಿರಲಿಲ್ಲ. ಈ ದೃಶ್ಯಾವಳಿಗಳು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಿದ್ರು.

    ಇದನ್ನೂ ಓದಿ: ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ

    https://www.youtube.com/watch?v=_AEInlLP15Q

    https://www.youtube.com/watch?v=5vi5ECBTGl4

     

  • ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಕ್ತು ಸತ್ತ ಹಾವು!

    ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಕ್ತು ಸತ್ತ ಹಾವು!

    ಚಂಡೀಗಢ: ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಸಿಕ್ಕ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಇಲ್ಲಿನ ರಾಜ್ಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಗುರುವಾರದಂದು ಮಕ್ಕಳಿಗೆ ನೀಡಲಾಗಿದ್ದ ಕಿಚಡಿಯಲ್ಲಿ ಸತ್ತ ಮರಿಹಾವು ಪತ್ತೆಯಾಗಿದೆ. ಆದ್ರೆ ಹಾವು ಪತ್ತೆಯಾಗುವುದಕ್ಕೂ ಮುನ್ನ ಹಲವು ವಿದ್ಯಾರ್ಥಿಗಳು ಈ ಊಟವನ್ನ ಸೇವಿಸಿದ್ದರು. ಓರ್ವ ವಿದ್ಯಾರ್ಥಿನಿಗೆ ವಾಂತಿಯಾಗಿದ್ದು. ಇನ್ನೂ ಕೆಲವು ವಿದ್ಯಾರ್ಥಿಗಳು ಆರೋಗ್ಯ ಹದಗೆಟ್ಟ ಬಗ್ಗೆ ದೂರಿದ್ದರು.

    ಶಾಲೆಯ ಪ್ರಾಂಶುಪಾಲರಾದ ಬ್ರಜ್ ಬಾಲಾ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಊಟವನ್ನ ಇಸ್ಕಾನ್ ಸಂಸ್ಥೆ ಪೂರೈಕೆ ಮಾಡಿತ್ತು. ಹಾವು ಪತ್ತೆಯಾದ ಕೂಡಲೇ ನಾವು ಮಕ್ಕಳಿಗೆ ಊಟ ಸೇವಿಸದಂತೆ ತಡೆದೆವು. ನಂತರ ಇಸ್ಕಾನ್‍ನವರಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

    ಇದೇ ಊಟವನ್ನ ಪೂರೈಸಲಾಗಿದ್ದ ಇತರೆ ಶಾಲೆಗಳಿಗೂ ಊಟವನ್ನ ಬಡಿಸದಂತೆ ಮಾಹಿತಿ ನೀಡಲಾಗಿದೆ. ಕೆಲವು ಬಾರಿ ಊಟ ಹಳಸಿದಂತಾಗಿರುತ್ತದೆ ಅಂತ ವಿದ್ಯಾರ್ಥಿಗಳು ದೂರಿದ್ದಾರೆ.

    ಈ ಬಗ್ಗೆ ಇಸ್ಕಾನ್ ಸಂಸ್ಥೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ನಾವು ಸ್ವಚ್ಛವಾದ ಅಡುಗೆ ಮನೆಯಲ್ಲೇ ಆಹಾರ ಸಿದ್ಧಪಡಿಸಿದ್ದೇವೆ. ಊಟವನ್ನ ಕಳಿಸೋ ಮುನ್ನ ಪರಿಶೀಲಿಸಲಾಗಿತ್ತು. ತೊಂದರೆ ಇರುವುದು ಶಾಲೆಗಳಲ್ಲಿ. ಊಟದ ಪಾತ್ರೆಗಳ ಮೇಲೆ ಏನೂ ಮುಚ್ಚದೆ ತೆರೆದಿಟ್ಟಿದ್ದರು ಎಂದು ತಿಳಿಸಿದ್ದಾರೆ.

     

  • ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ಹಾವು-ಮುಂಗುಸಿ ಜಗಳ ಮಾಡುತ್ತವೆ ಅನ್ನೋದನ್ನ ಕೇಳಿರ್ತೀರಿ ಅಥವಾ ನೋಡಿರ್ತೀರಿ. ಆದ್ರೆ ಹಾವು ಮತ್ತು ಹಸು ಜಗಳ ಮಾಡಿರೋ ವಿಚಿತ್ರ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು. ಆಗ ತಾನೇ ಹುಟ್ಟಿದ ತನ್ನ ಕರುಳ ಕುಡಿಯನ್ನೇ ಕಚ್ಚಿ ಸಾಯಿಸಿದ ಹಾವಿನೊಂದಿಗೆ ಹಸುವೊಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೋರಾಟ ಮಾಡಿದೆ.

    ತನ್ನ ಕರುವನ್ನು ಸಾಯಿಸಿದ ಹಾವನ್ನು ಕಾಲಿನಲ್ಲಿ ತುಳಿದು, ಕೊಂಬಿನಿಂದ ತಿವಿದು ಕೊಂದು ಹಾಕಿ ಸೇಡು ತೀರಿಸಿಕೊಳ್ಳೋ ದೃಶ್ಯ ನೋಡೋವಾಗ ಎಂಥವರ ಕರುಳು ಚುರುಕ್ ಅನ್ನತ್ತೆ. ಆದ್ರೆ ಈ ಘಟನೆ ಎಲ್ಲಿ ನಡೆದಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಘಟನೆಯ ದೃಶ್ಯವನ್ನು ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.

    `ತಮಿಳ್ ಸೈಥಿ’ ಎಂಬ ಯೂಟ್ಯೂಬ್ ಅಕೌಂಟ್‍ನಲ್ಲಿ ಮೇ 6ರಂದು ಈ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು ವೈರಲ್ ಆಗಿದೆ.

    https://www.youtube.com/watch?v=xEjI9HzRASI

  • ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಹಾವುಗಳು ಕಪ್ಪೆ, ಇಲಿ ಮೀನುಗಳನ್ನು ನುಂಗುವುದನ್ನು ಕೇಳಿರ್ತೀರ. ಆದ್ರೆ ಹಸಿರು ಹಾವೊಂದು ಗುಬ್ಬಚ್ಚಿಯನ್ನು ನುಂಗುವ ವಿಡಿಯೋವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೊಸಪೇಟೆ ತಾಲೂಕಿನ ಹಂಪಿ ಪವರ್ ಹೌಸ್ ಕ್ಯಾಂಪ್‍ನಲ್ಲಿ ಬೇವಿನ ಮರದಲ್ಲಿದ್ದ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಸಿಕ್ಕಿದೆ. ಬೇವಿನಮರದಲ್ಲಿದ್ದ ಹಾವು ಗುಬ್ಬಚ್ಚಿಯನ್ನು ನುಂಗುತ್ತಿದ್ದಂತೆ ಗುಬ್ಬಚ್ಚಿ ಅರಚುವುದನ್ನು ಸ್ಥಳೀಯರು ನೋಡಿದ್ದು, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಹಾವು ಸುಮಾರು ಒಂದು ಗಂಟೆ ಕಾಲ ಗುಬ್ಬಚ್ಚಿ ನುಂಗಲು ಪ್ರಯತ್ನಪಟ್ಟರೂ ಸಂಪೂರ್ಣವಾಗಿ ಗುಬ್ಬಚ್ಚಿಯನ್ನು ನುಂಗಲು ಸಾಧ್ಯವಾಗಿಲ್ಲ.

    https://www.youtube.com/watch?v=9lRnoN7wHl8