Tag: ಹಾವು

  • ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    ಮೆಹಬೂಬ್‍ನಗರ್: ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನೂ ಸೇರಿಸಿ ರುಬ್ಬಿದ ಘಟನೆ ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ.

    ಹೌದು. ನಂಬಲು ವಿಚಿತ್ರವಾದ್ರೂ ಇದು ಸತ್ಯ. ಇಲ್ಲಿನ ಖಿಲ್ಲಾ ಘಾನ್‍ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ ಚಟ್ನಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು. ಟೊಮೆಟೋವನ್ನ ಬೇಯಿಸಿ ಇತರೆ ಸಾಮಗ್ರಿಗಳನ್ನ ತೆಗೆದುಕೊಂಡು ಒರಳುಕಲ್ಲಿನ ಬಳಿ ರುಬ್ಬಲು ಅಣಿ ಮಾಡಿಕೊಂಡ್ರು. ಆದ್ರೆ ಒಳರುಕಲ್ಲಿನ ಒಳಗೆ ಹಾವು ಇದ್ದಿದ್ದನ್ನು ಗಮನಿಸದೆ ಚಟ್ನಿಗೆ ತಯಾರಿಸಿಕೊಂಡಿದ್ದ ಸಾಮಗ್ರಿಗಳನ್ನ ಹಾಕಿ ಹಾವನ್ನೂ ಸೇರಿಸಿ ರುಬ್ಬಿದ್ದಾರೆ.

    ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ಮೊದಲಿಗೆ ರಾಜಮ್ಮ, ಅವರ ಚಿಕ್ಕ ಮಗ ಮತ್ತು ಅವರ ಮಗಳು ಕೃಷ್ಣವೇಣಿ ಬೆಳಗ್ಗಿನ ತಿಂಡಿಗೆ ಚಟ್ನಿಯನ್ನ ಸೇವಿಸಿದ್ದಾರೆ. ನಂತರ ಜಮೀನಿನಲ್ಲಿದ್ದ ದೊಡ್ಡ ಮಗ ಸಾಯಿಗೆ ಊಟ ತೆಗೆದುಕೊಂಡು ಹೋಗಿದ್ದಾರೆ. ಊಟ ಮಾಡುವಾಗ ಸಾಯಿ ಹಾವಿನ ಬಾಲವನ್ನು ನೋಡಿ ಹೌಹಾರಿದ್ದಾರೆ. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಇದ್ದಿದ್ದನ್ನು ನೋಡಿದ್ದಾರೆ.

    ಇದನ್ನೂ ಓದಿ:  ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

    ನಂತರ ಅಯ್ಯೋ ನಾವು ಚಟ್ನಿ ಜೊತೆ ಹಾವು ತಿಂದಿದ್ದೇವೆ ಎಂದು ತಿಳಿದು ಎದ್ನೋ ಬಿದ್ನೋ ಅಂತ ಆಸ್ಪತ್ರೆಗೆ ಓಡಿದ್ದಾರೆ. ವೈದ್ಯರು ಇವರನ್ನ ತಪಾಸಣೆ ಮಾಡಿದ್ದು, ಯಾವುದೇ ತೊಂದರೆಯಿಲ್ಲ ಅಂತ ತಿಳಿಸಿದ್ದಾರೆ. ಇನ್ಮುಂದೆ ಚಟ್ನಿ ಮಾಡುವಾಗ ಒಂದಲ್ಲ ಹತ್ತು ಬಾರಿ ಒರಳುಕಲ್ಲನ್ನ ನೋಡಿ, ಸ್ವಚ್ಛ ಮಾಡಿ, ರುಬ್ಬಬೇಕು ಅನ್ನೋದು ಆ ಮಹಿಳೆಗೆ ಈಗ ಅರ್ಥವಾಗಿರಬಹುದು.

    https://www.youtube.com/watch?v=23e5Ur5e-qs

    https://www.youtube.com/watch?v=lgah6v0kuQg

    https://www.youtube.com/watch?v=k0FYf5MPdOU

    ಇದನ್ನೂ ಓದಿ:ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

  • ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಕೋಲಾರ: ನಾಗರಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹಾವು ಮತ್ತು ಅದರ ಜೊತೆಗಿದ್ದ 17 ಮರಿ ಹಾವುಗಳನ್ನ ಕೊಂದಿರುವ ಮನಕಲಕುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಿನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು ಕೊಂದ ಸ್ಥಳದಲ್ಲಿ 17 ಮರಿ ಹಾವುಗಳು ಪತ್ತೆಯಾಗಿದ್ದು, ಆ ಮರಿಗಳನ್ನು ಸಹ ಗ್ರಾಮಸ್ಥರು ಕೊಚ್ಚಿ ಕೊಂದಿದ್ದಾರೆ.

    ಆಗಿದ್ದೇನು? ಬುಧವಾರ ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಗೊವಿಂದಪ್ಪನನ್ನ ನಾಗರಾಹಾವು ಕಚ್ಚಿ ಮೃತಪಟ್ಟಿದ್ದರು. ಗೋವಿಂದಪ್ಪ ಸಾವಿನಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾವನ್ನ ಹುಡುಕಿ ಕೊಂದಿದ್ದಾರೆ. ಅದೇ ಸ್ಥಳದಲ್ಲಿ 17 ಮರಿ ಹಾವುಗಳು ಕಂಡುಬಂದ ಹಿನ್ನಲೆಯಲ್ಲಿ 17 ಮರಿ ಹಾವುಗಳನ್ನು ಸಹ ಕೊಂದಿದ್ದಾರೆ.

    ಇನ್ನೂ ಹಾವು ಹಾಗೂ ಮರಿಗಳನ್ನ ಕೊಂದಿರುವ ಗ್ರಾಮಸ್ಥರು ಮೊಬೈಲ್‍ಗಳಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಗ್ರಾಮದಲ್ಲಿ ಹಾವು ಕೊಂದ ವಿಚಾರದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹಾವುಗಳನ್ನು ಕೊಂದಿದ್ದಕ್ಕೆ ನಾಗಹತ್ಯಾ ಶಾಪ ಬರಬಹುದು ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

     

  • ನೂಡಲ್ಸ್ ನಲ್ಲಿ ಬಂತು ಹಾವಿನ ಮರಿ!

    ನೂಡಲ್ಸ್ ನಲ್ಲಿ ಬಂತು ಹಾವಿನ ಮರಿ!

    ಬೀಜಿಂಗ್: ಇತ್ತೀಚಿಗೆ ನಾವುಗಳು ಹೋಟೆಲ್ ಮತ್ತು ಆನ್‍ಲೈನ್ ಗಳ ಮೂಲಕ ತರಿಸುವ ಆಹಾರಗಳಲ್ಲಿ ಹುಳು, ಪ್ಲಾಸ್ಟಿಕ್ ಕವರ್‍ಗಳು ಪತ್ತೆಯಾಗಿರುವುದು ನೋಡಿರುತ್ತವೆ. ಆದರೆ ಇಲ್ಲೊಬ್ಬ ಯುವತಿ ಹೋಟೆಲ್‍ನಿಂದ ತಾನು ತಂದ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಪತ್ತೆಯಾಗಿದೆ.

    ಚೀನಾದ ಗುವಾಂಗ್ಕ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಕಾಲೇಜಿಗೆ ಹೋಗುವ ವೇಳೆ ಹೋಟೆಲ್‍ವೊಂದರಿಂದ ನೂಡಲ್ಸ್ ನ್ನು ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾಳೆ. ಕ್ಯಾಂಪಸ್‍ಗೆ ಹೋದ್ಮೇಲೆ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಕಂಡಿದೆ. ನಾನು ಮೊದಲು ಪಾರ್ಸಲ್ ಓಪನ್ ಮಾಡಿ ಒಂದೆರೆಡು ತುತ್ತುಗಳನ್ನು ತಿಂದ ನಂತರ ನೂಡಲ್ಸ್ ನ ಹಸಿರು ತರಕಾರಿಯ ಮಧ್ಯ ಸತ್ತ ಹಾವಿನ ಮರಿ ಪತ್ತೆಯಾಯ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ಚೀನಾದ ಪತ್ರಿಕೆ ಹೇಳಿದೆ.

    ನೂಡಲ್ಸ್ ನಲ್ಲಿರುವ ಹಾವಿನ ಫೋಟೋವನ್ನು ತೆಗೆದ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೋಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಧಿಕಾರಿಗಳು ಹೋಟೆಲನ್ನು ಮುಚ್ಚಿಸಿ, ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹೋಟೆಲ್‍ನಲ್ಲಿ ಅನಾರೋಗ್ಯಕರ ಆಹಾರವನ್ನು ಪೂರೈಕೆ ಮಾಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     

  • ಮಲಗಿದ್ದಲ್ಲೇ ಕಡಿದ ಹಾವು- ಬೆಳಗಾವಿಯಲ್ಲಿ ಇಬ್ಬರ ಸಾವು

    ಮಲಗಿದ್ದಲ್ಲೇ ಕಡಿದ ಹಾವು- ಬೆಳಗಾವಿಯಲ್ಲಿ ಇಬ್ಬರ ಸಾವು

    ಬೆಳಗಾವಿ: ಜಿಲ್ಲೆಯ ಪ್ರತ್ಯೇಕ ಗ್ರಾಮದಲ್ಲಿ ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಸವದತ್ತಿ ತಾಲೂಕಿನ ಓಬಲದಿನ್ನಿ ಗ್ರಾಮದಲ್ಲಿ 50 ವರ್ಷದ ಲಕ್ಷ್ಮಣ ಲಿಂಬನ್ನವರ ಅವರಿಗೆ ವಿಷಕಾರಿ ಹಾವು ಕಡಿದಿತ್ತು. ಚಿಕಿತ್ಸೆಗೆ ಸಹಾಯವಾಗಲೆಂದು ಕಡಿದ ಹಾವನ್ನು ಒಂದು ಚೀಲದಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಲಕ್ಷ್ಮಣ್ ಸಾವನ್ನಪ್ಪಿದ್ದಾರೆ. ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ ಹಾವು ಕೂಡ ಸತ್ತು ಹೋಗಿದೆ.

    ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ 29 ವರ್ಷದ ರಾಮಪ್ಪ ಕೆಳಗಿನಮನಿ ಅವರಿಗೆ ಹಾವು ಕಡಿದಿತ್ತು. ಅವರೂ ಕೂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

  • ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ಹೈದಾರಾಬಾದ್: ಹಾವುಗಳಿಗೆ ಕಾಲುಗಳು ಇದ್ದವೋ, ಇಲ್ಲ ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ತೆಲಂಗಾಣ ರಾಜ್ಯದ ಕೊತ್ತಗುಡೆಮ್ ಜಿಲ್ಲೆಯ ರಾಮಾಪುರಂ ಎಂಬ ಗ್ರಾಮದಲ್ಲಿ ಕಾಲು ಹಾಗು ಉಗುರು ಇರುವ ವಿಚಿತ್ರ ನಾಗರಹಾವೊಂದು ಕಾಣಿಸಿಕೊಂಡಿದೆ.

    ರಾಮಾಪುರಂ ಗ್ರಾಮದ ರೈತ ರಾಮಯ್ಯ ಎಂಬವರು ಮನೆಯಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಉರಗ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿದು ಪರಿಶೀಲಿಸಿದಾಗ ಹಾವಿಗೆ ಉಗುರು ಹಾಗು ಕಾಲುಗಳಿರುವುದು ಪತ್ತೆಯಾಗಿದೆ.

    ಈ ಹಾವು ಬರೋಬ್ಬರಿ 6 ಅಡಿ ಉದ್ದವನ್ನು ಹೊಂದಿದೆ. ಹಾವಿನ ದೇಹದ ಹಿಂಭಾಗದಲ್ಲಿ ಕಾಲುಗಳು ಹಾಗು ಉಗುರುಗಳ ರೀತಿಯ ರಚನೆಯನ್ನು ಹೊಂದಿದೆ. ವಿಚಿತ್ರ ಹಾವನ್ನು ರಾಮಯ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಈ ರೀತಿಯ ಹಾವುಗಳು 900 ವರ್ಷಗಳ ಹಿಂದೆ ಇದ್ದವು ಎಂದು ಹೇಳಲಾಗುತ್ತಿದೆ.

     

    https://www.youtube.com/watch?v=OwUZ_YPxfw0

    https://www.youtube.com/watch?v=OGdh_Bp-75c

  • ತನ್ನನ್ನು ರಕ್ಷಿಸಿದ ಉರಗ ತಜ್ಞನನ್ನೇ ಕಚ್ಚಿದ ನಾಗರಹಾವು- ವಿಡಿಯೋ ನೋಡಿ

    ತನ್ನನ್ನು ರಕ್ಷಿಸಿದ ಉರಗ ತಜ್ಞನನ್ನೇ ಕಚ್ಚಿದ ನಾಗರಹಾವು- ವಿಡಿಯೋ ನೋಡಿ

    ಚಿಕ್ಕಬಳ್ಳಾಪುರ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಉರಗ ತಜ್ಞನನ್ನು ಅದೇ ಹಾವು ಕಚ್ಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮದ ಬಳಿ ನಡೆದಿದೆ.

    ಪೃಥ್ವಿರಾಜ್ ಹಾವಿನಿಂದ ಕಚ್ಚಿಸಿಕೊಂಡ ಉರಗತಜ್ಞ. ಹಾರೋಬಂಡೆ ಗ್ರಾಮದ ರೈತ ನರೇಂದ್ರಬಾಬು ಎಂಬವರ ದ್ರಾಕ್ಷಿ ತೋಟದಲ್ಲಿನ ಬಲೆಗೆ ನಾಗರಾಹಾವು ಸಿಕ್ಕಿ ಹಾಕಿಕೊಂಡಿತ್ತು. ಬಲೆಯಲ್ಲಿ ಹಾವು ಸಾವು ಬದುಕಿನ ನಡುವೆ ವಿಲ ವಿಲ ಒದ್ದಾಡುತ್ತಿತ್ತು. ಈ ವೇಳೆ ಪೃಥ್ವಿರಾಜ್ ಹಾವಿನ ರಕ್ಷಣೆಗೆ ಮುಂದಾಗಿದ್ದರು.

    ಪೃಥ್ವಿರಾಜ್ ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ದ್ರಾಕ್ಷಿ ಬಲೆಯಿಂದ ನಾಗರಹಾವನ್ನ ಬೇರ್ಪಡಿಸಿ ಹಾವನ್ನ ರಕ್ಷಿಸಿದ್ರು. ಕೊನೆಗೆ ಹಾವನ್ನು ಬಿಡುವ ವೇಳೆ ಪೃಥ್ವಿರಾಜ್ ಅವರಿಗೆ ಹಾವು ಕಚ್ಚಿದೆ. ಇದೂವರೆಗೂ ಮೂರು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಹಾವಿನಿಂದ ಕಚ್ಚಿಸಿಕೊಂಡ ಪೃಥ್ವಿರಾಜ್‍ರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    https://youtu.be/L85E8z1iMno

  • ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

    ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

    ನೆಯಲ್ಲಿ ಇಲಿ ಕಾಣಿಸಿಕೊಂಡರೆ ಅದನ್ನ ಹಿಡಿಯಲು ಪ್ರಯತ್ನಿಸಬಹುದು ಅಥವಾ ಅದಾಗಿಯೇ ಹೋಗುತ್ತೆ ಅಂತ ಸುಮ್ಮನಾಗಬಹುದು. ಒಂದು ವೇಳೆ ಹಾವು ಕಾಣಿಸಿಕೊಂಡರೆ ಅದನ್ನ ಹಿಡಿಸೋವರೆಗೂ ಸಮಾಧಾನವಿರಲ್ಲ. ಇನ್ನು ಇಲಿ, ಹಾವು ಎರಡೂ ಒಟ್ಟಿಗೆ ಕಾಣಿಸಿಕೊಂಡ್ರೆ? ಗಾಬರಿಯಾಗಿ ಅಲ್ಲಿಂದ ದೂರ ಹೋಗ್ತೀವಿ. ಆದ್ರೆ ಇಲ್ಲೊಬ್ಬ ತನ್ನ ಮೊಬೈಲ್ ತೆಗೆದು ಅದನ್ನ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ.

    ಬಾಯಲ್ಲಿ ಇಲಿಯನ್ನ ಕಚ್ಚಿಕೊಂಡಿದ್ದ ಹಾವು ಎಸಿ ಯಿಂದ ಕೆಳಗೆ ನೇತಾಡುತ್ತಿರೋದನ್ನ ವಿಡಿಯೋದಲ್ಲಿ ನೋಡಬಹುದು. ಇಲಿಯನ್ನ ಹಿಡಿದು ಹಾವು ಎಸಿಯೊಳಗೆ ಮತ್ತೆ ನುಸುಳಿಕೊಳ್ಳೋಕೆ ಪ್ರಯತ್ನಿಸುತ್ತಿದೆ. ಹಾವಿನ ಬಾಯಲ್ಲಿರುವ ಇಲಿ ಕೂಡ ದೊಡ್ಡದಾಗಿದ್ದು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ.

    ಕೇವಲ 10 ಸೆಕೆಂಡ್‍ಗಳ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, 6.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 65 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದ್ದು, 44 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.

    ನಿರೀಕ್ಷೆಯಂತೆ ಫೇಸ್‍ಬುಕ್‍ನಲ್ಲಿ ನೋಡುಗರು ಈ ವಿಡಿಯೋ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. “ಇದನ್ನ ನೋಡಿ ನನಗೆ ನಿಜ್ಕಕೂ ಗಾಬರಿಯಾಯ್ತು” ಎಂಬ ಒಬ್ಬರು ಕಮೆಂಟ್ ಮಾಡಿದ್ದಾರೆ. “ನಾನು ಕಳೆದ ರಾತ್ರಿ ಈ ವಿಡಿಯೋ ನೋಡಿದೆ. ನಿಜವಾಗ್ಲೂ ಹಾಸಿಗೆಯಿಂದ ಎಗರಿ ಎಸಿ ಕೆಳಗೆ ಇಲ್ಲದಂತೆ ಮತ್ತೊಂದು ಬದಿಗೆ ಹೋಗಿ ಮಲಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

    https://www.facebook.com/SimpleGirlOrg/videos/311834352571355/

  • ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒಟ್ಟಿಗೆ ಸಾಯೋಣವೆಂದು ಹೆಂಡತಿಯನ್ನ ಕಚ್ಚಿದ!

    ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒಟ್ಟಿಗೆ ಸಾಯೋಣವೆಂದು ಹೆಂಡತಿಯನ್ನ ಕಚ್ಚಿದ!

    ಪಾಟ್ನಾ: ವಿಷಕಾರಿ ಹಾವಿನಿಂದ ಕಡಿಸಿಕೊಂಡ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಕೈಯನ್ನು ಕಚ್ಚಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಬಿರ್ಸಿಂಗ್‍ಪುರ ಗ್ರಾಮದ ನಿವಾಸಿಯಾದ ಶಂಕರ್ ರೈ ಮಲಗಿದ್ದ ವೇಳೆ ವಿಷಕಾರಿ ಹಾವೊಂದು ಕಚ್ಚಿತ್ತು. ಶಂಕರ್ ಎಚ್ಚರಗೊಂಡಾದ ಅವರ ಪರಿಸ್ಥಿತಿ ತುಂಬಾ ಗಂಭಿರವಾಗಿದ್ದು, ತುಂಬಾ ಭಾವುಕರಾಗಿದ್ರು. ಇನ್ನು ನಾನು ಉಳಿಯಲ್ಲ ಅಂತ ಗೊತ್ತಾಗಿ ಶಂಕರ್ ತನ್ನ ಹೆಂಡತಿ ಅಮಿರಿ ದೇವಿ ಬಳಿ ಹೋಗಿ, ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ. ನಾವಿಬ್ಬರೂ ಒಟ್ಟಿಗೆ ಸಾಯಬೇಕು ಎಂದು ಹೇಳಿ ಅವರ ಕೈಯನ್ನು ಕಚ್ಚಿದ್ದಾರೆ.

    ಶಂಕರ್ ಅಮಿರಿ ಅವರನ್ನ ಕಚ್ಚಿದ ನಂತರ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಂಕರ್ ಸಾವನ್ನಪ್ಪಿದ್ದಾರೆ. ವೈದ್ಯರು ಅಮಿರಿ ಅವರ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.

    ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

    ಸರಿಯಾದ ಸಮಯಕ್ಕೆ ಚಿಕಿತ್ಸೆ ಆರಂಭಿಸಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ. ಅವರೀಗ ಸುರಕ್ಷಿತವಾಗಿದ್ದಾರೆ ಅಂತ ಸ್ಥಳೀಯ ವೈದ್ಯರಾದ ಡಾ. ಜಯಕಾಂತ್ ಇಲ್ಲಿನ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಅಮಿರಿ ದೇವಿ ಹೇಳುವ ಪ್ರಕಾರ, ಪತಿ ಶಂಕರ್ ಜೋರಾಗಿ ಕೈಯನ್ನು ಕಚ್ಚಿದ್ದು, ಒಟ್ಟಿಗೆ ಸಾಯಬೇಕೆಂದಿದ್ದರು. ಸಾವಿನ ಬಳಿಕವೂ ಇಬ್ಬರೂ ಜೊತೆಯಾಗಿರಬೇಕೆಂದು ಬಯಸಿದ್ದರು. ಆದ್ರೆ ಅವರ ಆಸೆ ಈಡೇರಲಿಲ್ಲ.

    ನನ್ನ ಪತಿ ನನ್ನನ್ನು ತುಂಬಾ ಪ್ರೀತಿಸುತ್ತೇನೆ ಅಂತ ಹೇಳಿದ್ರು. ಒಟ್ಟಿಗೆ ಸಾಯಬೇಕೆಂದು ನನ್ನ ಕೈಗೆ ಜೋರಾಗಿ ಕಚ್ಚಿದ್ರು. ಅವರು ಕಚ್ಚಲು ನಾನು ಸಮ್ಮತಿಸಿದೆ ಎಂದು ಅಮಿರಿ ದೇವಿ ಹೇಳಿದ್ದಾರೆ.

    ಇದನ್ನೂ ಓದಿ: ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ

    https://www.youtube.com/watch?v=23e5Ur5e-qs

  • ಚಲಿಸುತ್ತಿದ್ದ ಕಾರಿನಲ್ಲಿ ಹಾವಿನ ಸರ್ಕಸ್: ವೈರಲ್ ವಿಡಿಯೋ ನೋಡಿ

    ಚಲಿಸುತ್ತಿದ್ದ ಕಾರಿನಲ್ಲಿ ಹಾವಿನ ಸರ್ಕಸ್: ವೈರಲ್ ವಿಡಿಯೋ ನೋಡಿ

    ಜಾರ್ಜಿಯ: ಚಲಿಸುತ್ತಿದ್ದ ಕಾರಿನಲ್ಲಿ ಹಾವೊಂದು ಸರ್ಕಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಾರ್ಜಿಯಾದ ರಿಯಾನ್ ಎಂಬವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಲ್ಲಿ ಹಾವು ಪ್ರತ್ಯಕ್ಷವಾಗಿದೆ.

    ಮುಂಭಾಗದಲ್ಲಿ ಪ್ರತ್ಯಕ್ಷವಾದ ಹಾವು ಬಾನೆಟ್ ಮೇಲೆ ತೆವಳಿಕೊಂಡು ಮುಂಭಾಗಕ್ಕೆ ಎಡಭಾಗದಿಂದ ಬಲಭಾಗಕ್ಕೆ, ಬಲಭಾಗದಿಂದ ಎಡಭಾಗಕ್ಕೆ ಬಂದಿದೆ. ಅಷ್ಟೇ ಅಲ್ಲದೇ ಕಾರಿನ ಎಡಗಡೆಯ ಮಿರರ್ ಮೇಲೆ ಹತ್ತಿ ಬುಸ್ ಬುಸ್ ಎಂದಿದೆ. ಗ್ಲಾಸ್ ಹಾಕಿದ ಕಾರಣ ಕಾರಿನ ಒಳಗಡೆ ಹಾವು ಎಂಟ್ರಿ ಕೊಡಲಿಲ್ಲ.

    ಹಾವು ಮಿರರ್ ಮೇಲೆ ಕುಳಿಕೊಂಡಿರುವ ದೃಶ್ಯಕ್ಕೆ ವಿಡಿಯೋ ಮುಕ್ತಾಯವಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/pPxZ21t3j9E

  • ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

    ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

     

    ವಾಷಿಂಗ್ಟನ್: ಮನೆಯಲ್ಲಿ ಜಿರಲೆ ಕಂಡ್ರೆ ಅದನ್ನ ಕಡ್ಡಿಯಲ್ಲೋ ಪೊರಕೆಯಲ್ಲೋ ಹಿಡಿದು ಹೊರಗೆಸೆಯುತ್ತಾರೆ. ಆದ್ರೆ ಹಾವು ಬಂದ್ರೆ ಹಾಗೆ ಮಾಡೋಕಾಗುತ್ತಾ? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ, ಅಮೆರಿಕದಲ್ಲಿ ಮಹಿಳೆಯೊಬ್ಬರು ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾಗೂ ಭಯಾನಕವಾದ ಹಾವನ್ನ ಹಿಡಿದು ಹೊರಗೆಸೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಇದನ್ನೂ ಓದಿ: ಮೃಗಾಲಯದ ಹುಲಿಗಳಿಗೆ ಜೀವಂತ ಕತ್ತೆಯನ್ನೇ ಮೇಲಿನಿಂದ ತಳ್ಳಿದ್ರು: ಶಾಕಿಂಗ್ ವಿಡಿಯೋ ನೋಡಿ

    ನಾನು ಮನೆಗೆ ಬಂದಾಗ 5-6 ಅಡಿ ಉದ್ದದ ಈ ಹಾವು ಕಾಣಿಸಿತು ಅಂತ ಟ್ಯಾಟೂ ಕಲಾವಿದೆಯಾಗಿರೋ ಸನ್‍ಶೈನ್ ಮ್ಯಾಕ್‍ಕರ್ರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಾಕಿದ್ದಾರೆ. ಮನೆಯ ಹಾಲ್‍ನಲ್ಲಿ ಇದ್ದ ಕಪ್ಪು ಬಣ್ಣದ ದೈತ್ಯ ಹಾವನ್ನು ಕಂಡು ಒಂದು ತಲೆದಿಂಬಿನ ಕವರ್ ತಂದು ಹಾವಿನ ಹಿಂದೆ ಹೋಗಿ ಅದನ್ನ ನಾಯಿಮರಿ ಹಿಡಿದಷ್ಟು ಸಲೀಸಾಗಿ ಹಿಡಿದಿದ್ದಾರೆ. ನಂತರ ಅದನ್ನ ತೆಗೆದುಕೊಂಡು ಹೋಗುವಾಗಲೂ ಅದರ ಮುಖ ಕವರ್‍ನಿಂದ ಹೊರಗೆ ಬಂದ್ರೆ ಕೈಯ್ಯಲ್ಲೇ ಅದನ್ನ ಒಳಗೆ ನೂಕಿದ್ದಾರೆ. ನಂತರ ಹಾವನ್ನ ಮನೆಯಿಂದ ಹೊರಗೆ ಹೋಗಿ ಬಿಟ್ಟಿದ್ದಾರೆ.

    ಆ ಹಾವು ಅತ್ತಿತ್ತ ಹೋಗದಂತೆ ಬ್ರಿಡ್ಜ್ ಕೆಳಗೆ ಹರಿದು ಹೋಗುವವರೆಗೂ ಅದರ ಹಿಂದೆಯೇ ಹೋಗಿದ್ದಾರೆ. ಕೋಳಿ ಮರಿಯನ್ನ ಗೂಡು ಸೇರಿಸುವಂತೆ ಈ ಮಹಿಳೆ ಹಾವನ್ನ ಅಟ್ಟಿಕೊಂಡು ಹೋಗಿ ಬ್ರಿಡ್ಜ್‍ವರೆಗೆ ಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯವನ್ನ ಮಹಿಳೆಯ ಜೊತೆಗಿದ್ದ ಮತ್ತೊಬ್ಬರು ವಿಡಿಯೋ ಮಾಡಿದ್ದಾರೆ.

    ಜೂನ್ 1 ರಂದು ಅಪ್‍ಲೋಡ್ ಮಾಡಲಾಗಿರುವ ಈ ವಿಡಿಯೋ ಈಗಾಗಲೇ 36 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 37 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದ್ದು, 8 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.

    ಇದನ್ನೂ ಓದಿ: ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಇನ್ನು ಈ ವಿಡಿಯೋಗೆ ಕಮೆಂಟ್ ಮಾಡಿದ ಕೆಲವರು, “ಆ ಮಹಿಳೆ ಮನೆಯಿಂದ ಹಾವನ್ನ ಹೊರಗೆ ತೆಗೆದುಕೊಂಡು ಹೋಗುವಾಗ ನಮ್ಮನೆಗೆ ಮತ್ತೊಂದು ಹಾವು ಬಂದಿದೆ ಅನ್ನೋದನ್ನ ಕೇಳಿದ್ಕೊಂಡ್ರಾ? ಏನೋ ಯಾವಾಗ್ಲೂ ಬರ್ತಾನೆ ಇರ್ತವೆ ಅನ್ನೋ ರೀತಿ….” ಎಂದು ಕಮೆಂಟ್ ಮಾಡಿದ್ದಾರೆ. “ಅಯ್ಯಯ್ಯೋ ಇಲ್ಲಿ ಏನಾಗ್ತಿದೆ. ನಾನಂತೂ ಇಲ್ಲಿಂದ ಹೋಗ್ತೀನಿ. ಬೇಕಾದ್ರೆ ಮನೆಯನ್ನ ಆ ಹಾವೇ ಇಟ್ಟುಕೊಳ್ಳಲಿ” ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

    https://www.facebook.com/sunshine.mccurry/videos/1537616829590134/

    ಈ ಮಹಿಳೆ ಈ ಹಿಂದೆಯೂ ಅನೇಕ ಬಾರಿ ಹಾವು ಹಿಡಿದಿರುವಂತಿದ್ದು, ತಾನು ಹಿಡಿದ ಮೊದಲ ಹಾವಿನ ವಿಡಿಯೋವನ್ನ ಕೂಡ ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ.

    https://www.facebook.com/sunshine.mccurry/videos/1543371365681347/

    ಇದನ್ನೂ ಓದಿ: ಕಾಳಿಂಗ ಸರ್ಪದಿಂದ ಕಚ್ಚಿಸಿಕೊಂಡು ಪ್ರಾಣಬಿಟ್ಟ ಹೆಬ್ಬಾವು: ಈ ವೈರಲ್ ವಿಡಿಯೋ ನೋಡಿದ್ರೆ ನೀವೂ ಬೆಚ್ಚಿಬೀಳ್ತಿರ