Tag: ಹಾವು

  • ಈ ಊರಲ್ಲಿ ನಾಗರ ಪಂಚಮಿ ಹಬ್ಬಕ್ಕೆ ರಕ್ತಾಭಿಷೇಕ!

    ಈ ಊರಲ್ಲಿ ನಾಗರ ಪಂಚಮಿ ಹಬ್ಬಕ್ಕೆ ರಕ್ತಾಭಿಷೇಕ!

    ಗದಗ: ಪಂಚಮಿ ಹಬ್ಬದಲ್ಲಿ ನಾಗದೇವರಿಗೆ ಹಾಲೆರೆಯೋದು ಸಂಪ್ರದಾಯ. ಆದರೆ ಈ ಊರಲ್ಲಿ ಹಾಲಿನ ಬದಲು ರಕ್ತದ ಅಭಿಷೇಕ ಮಾಡ್ತಾರೆ.

    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅನೇಕ ಕುಂಚಿಕೊರಮ ಬುಡಕಟ್ಟು ಜನಾಂಗದವರಿದ್ದಾರೆ. ಇವರು ಕಾಡನ್ನೇ ನಂಬಿದ ಜನ. ಬಿದಿರು ಕಡಿಯುವುದು ಹಾಗೂ ದನಕರುಗಳ ಸಾಕಣೆ ಮಾಡುತ್ತಾ ಜೀವನ ಸಾಗಿಸುತ್ತಾರೆ. ಇವರ ಆರಾಧ್ಯ ದೈವ ಕಾಡಿನ ರಾಜ ನಾಗದೇವ. ಹೀಗಾಗಿ ಕೊರಮ ಜನಾಂಗದವರು ನಾಗದೇವರನ್ನ ವಿಶಿಷ್ಟವಾದ ರೀತಿಯಲ್ಲಿ ಪೂಜೆ ಮಾಡ್ತಾರೆ. ನಾಗರ ಪಂಚಮಿ ಹಬ್ಬದಂದು ನಾಗನಿಗೆ ಹಾಲೆರೆಯುವ ಬದಲು ಕೋಳಿ ಬಲಿಕೊಡುವ ಮೂಲಕ ರಕ್ತದ ನೈವೇದ್ಯ ಮಾಡ್ತಾರೆ. ಇಲ್ಲಿ ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.

    ತಮ್ಮ ಕಾಲೋನಿಯಲ್ಲಿಯೇ ನಾಗದೇವರ ಗುಡಿ ನಿರ್ಮಿಸಿದ್ದಾರೆ. ಈ ಗುಡಿ ಪೂಜಾರಿಗೆ ದೇವರು ಮೈಮೇಲೆ ಬಂದಾಗ ಇಲ್ಲಿ ಹುಂಜ ಬಲಿಕೊಡುತ್ತಾರೆ. ಕಾಡು ಅಲೆದು ಹುತ್ತಕ್ಕೆ ಪೂಜೆ ಮಾಡುತ್ತಾರೆ. ಈ ಜನಾಂಗದವರಿಗೆ ಹಾವು ಕಚ್ಚಲ್ಲ ಎಂಬ ನಂಬಿಕೆ ಕೂಡಾ ಇದೆ.

    ದಿಟನಾಗರ ಕಂಡರೆ ಹೊಡೆಯುವರು, ಕಲ್ಲುನಾಗರ ಕಂಡರೆ ಹಾಲೆರೆಯುವರು ಎಂಬ ಮಾತಿದೆ. ಆದರೆ ಈ ಊರಿನ ಜನ ರಕ್ತಾಭೀಷೇಕ ಮಾಡೋದು ಸೋಜಿಗವೇ ಸರಿ.

  • ಹಾವಿನ ವಿಷ ಮಾರಾಟ: ಶಿರಸಿಯ ವ್ಯಕ್ತಿ ಅರೆಸ್ಟ್

    ಹಾವಿನ ವಿಷ ಮಾರಾಟ: ಶಿರಸಿಯ ವ್ಯಕ್ತಿ ಅರೆಸ್ಟ್

    ಕಾರವಾರ: ಅಕ್ರಮವಾಗಿ ಮನೆಯಲ್ಲಿ ಹಾವುಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಯನ್ನ ಶಿರಸಿ ಅರಣ್ಯ ಸಂಚಾರಿದಳ ದಾಳಿ ನಡೆಸಿ ಬಂಧಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಿವಾಸಿಯಾದ ಮನೋಹರ್ ನಾಯರ್ ಬಂಧಿತ ಆರೋಪಿ. ಈತ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಐದು ಹಾವುಗಳ ವಶಪಡಿಸಿಕೊಂಡಿದ್ದಾರೆ.

    ಹಾವಿನ ವಿಷ ತೆಗೆದು ಬೇರೆಡೆ ಮಾರಾಟ ಮಾಡುತ್ತಿದ್ದ ಎಂಬ ಸಂಶಯದ ಮೇಲೆ ಬಂಧಿಸಿದ್ದು, ಈಗ ಮನೋಹರ್ ನಾಯರ್ ನನ್ನು ಶಿರಸಿ ಅರಣ್ಯ ಸಂಚಾರಿದಳ ವಿಚಾರಣೆ ನಡೆಸುತ್ತಿದೆ.

  • ಟಾಯ್ಲೆಟ್ ಸೀಟ್‍ನಲ್ಲಿ ಮಹಿಳೆಯ ಹಿಂಭಾಗ ಕಚ್ಚಿದ ಹೆಬ್ಬಾವು!

    ಟಾಯ್ಲೆಟ್ ಸೀಟ್‍ನಲ್ಲಿ ಮಹಿಳೆಯ ಹಿಂಭಾಗ ಕಚ್ಚಿದ ಹೆಬ್ಬಾವು!

    ಬ್ಯಾಂಕಾಕ್: ಹೆಬ್ಬಾವೊಂದು ಟಾಯ್ಲೆಟ್ ಸೀಟ್‍ನಿಂದ ಹೊರಬಂದು ಮಹಿಳೆಯ ಹಿಂಭಾಗ ಕಚ್ಚಿದ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.

    ಬ್ಯಾಂಕಾಕ್‍ನ ತಾಲಿಂಗ್ ಚನ್ ಪ್ರದೇಶದ ನಿವಾಸಿಯಾಗಿರೋ 42 ವರ್ಷದ ಮಮ್ ಫನಾರತ್ ಚೈಬೂನ್‍ಗೆ ಹಾವು ಕಚ್ಚಿದೆ. ಗಾಬರಿಯಿಂದ ಮಹಿಳೆ ತಿರುಗಿ ನೋಡಿದ್ರೆ ಟಾಯ್ಲೆಟ್ ಕಮೋಡ್‍ನಲ್ಲಿ ಹಾವಿನ ತಲೆ ಕಾಣಿಸಿದೆ. ತಕ್ಷಣ ಆಕೆ ಕಮೋಡ್‍ನ ಲಿಡ್ ಮುಚ್ಚಿ ತಾನೇ ಡ್ರೈವ್ ಮಾಡಿಕೊಂಡು ಹೋಗಿ ಇಲ್ಲಿನ ಪಯಾಥೈ 3 ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆದ್ರೆ ಯಾವ ಜಾತಿಯ ಹಾವು ಕಚ್ಚಿದೆ ಎಂದು ವೈದ್ಯರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲವಾದ್ದರಿಂದ ವಿಷ ನಿರೋಧಕ ಚಿಕಿತ್ಸೆ ನೀಡಲು ಹಿಂಜರಿದಿದ್ದರು. ನಂತರ ಮಹಿಳೆಯ ಮನೆಯಿದ್ದ ಹೌಸಿಂಗ್ ಕಾಂಪ್ಲೆಕ್ಸ್ ನ ಸೆಕ್ಯೂರಿಟಿಗೆ ಕರೆ ಮಾಡಿದ್ದು, ಅದು ಹೆಬ್ಬಾವು ಅನ್ನೋದು ಖಚಿತವಾಗಿತ್ತು.

    ಹೆಬ್ಬಾವುಗಳು ವಿಷಕಾರಿಯಲ್ಲ ಆದ್ರೂ ಅವು ಕಚ್ಚಿದ್ರೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗುವ ಸಂಭವವಿದ್ದಿದ್ದರಿಂದ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ಮಹಿಳೆಯ ಆಸ್ಪತ್ರೆಯ ಬಿಲ್ ಸುಮಾರು 34 ಸಾವಿರ ರೂ.(18 ಸಾವಿರ ಟಿಹೆಚ್‍ಬಿ) ಆಗಿದ್ದು, ಅದರ ಸ್ಪಲ್ಪ ಭಾಗ ಮಾತ್ರ ಇನ್ಶುರೆನ್ಸ್‍ನಡಿ ಕವರ್ ಆಗಿದೆ ಎಂದು ವರದಿಯಾಗಿದೆ.

    ಮಹಿಳೆ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಕೆಲವು ದಿನಗಳ ಬಳಿಕ ಅವರ 15 ವರ್ಷದ ಮಗಳು ಕೆಳಮಹಡಿಯ ಟಾಯ್ಲೆಟ್‍ನಲ್ಲಿ ಇನ್ನೂ ಉದ್ದದ ಹಾವನ್ನ ನೋಡಿದ್ದಾಳೆ. ಭಯಗೊಂಡ ಆಕೆ ತನ್ನ ಸಂಬಂಧಿಕರ ಮನೆಗೆ ಹೋಗಿ ನೆಲೆಸಿದ್ದಾಳೆ.

    ಮನೆಯ ಕೆಳಗೆ ಯಾವುದೋ ರಂಧ್ರವಿರಬೇಕು. ಅದರ ಮೂಲಕವೇ ಹಾವುಗಳು ಒಳಗೆ ಬರುತ್ತಿರಬಹುದು ಎಂದು ಮಹಿಳೆ ಹೇಳಿದ್ದಾರೆ. ಈ ಹಿಂದೆ ಮನೆಯ ತೋಟದಲ್ಲಿ ದೈತ್ಯ ಹಲ್ಲಿ ಕಾಣಿಸಿಕೊಂಡಿತ್ತು ಎಂದಿದ್ದಾರೆ.

    ಮಹಿಳೆಗೆ ಕಚ್ಚಿದ ಹೆಬ್ಬಾವನ್ನ ಸೆರೆಹಿಡಿಯಲಾಯ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

  • ಮೈಸೂರು: ಆಸ್ಪತ್ರೆಯ ಔಷಧಿ ಇಡುವ ಕಬೋರ್ಡ್ ನಲ್ಲಿ ನಾಗರಹಾವು ಪ್ರತ್ಯಕ್ಷ

    ಮೈಸೂರು: ಆಸ್ಪತ್ರೆಯ ಔಷಧಿ ಇಡುವ ಕಬೋರ್ಡ್ ನಲ್ಲಿ ನಾಗರಹಾವು ಪ್ರತ್ಯಕ್ಷ

    ಮೈಸೂರು: ನರರದ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದ ಹಾಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ.

    ಕೆ.ಆರ್.ಎಸ್ ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆಸ್ಪತ್ರೆಯ 60 ಮಂದಿ ರೋಗಿಗಳು ದಾಖಲಾಗಿದ್ದ ಕೋಣೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ರೋಗಿಯೋಬ್ಬರ ಔಷಧಿ ಇಡುವ ಕಬೋರ್ಡ್ ಒಳಗೆ ಹಾವು ಸೇರಿಕೊಂಡಿತ್ತು. ಸುಮಾರು 5 ಅಡಿ ಉದ್ದದ್ದ ಈ ಹಾವು ಎಲ್ಲರಲ್ಲೂ ಆತಂಕ ಉಂಟು ಮಾಡಿತ್ತು.

    ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಉರಗತಜ್ಞ ಸ್ನೇಕ್ ರಮೇಶ್ ಅವರು ಹಾವು ಹಿಡಿದು ರೋಗಿಗಳ ಆತಂಕ ದೂರ ಮಾಡಿದರು. ಹಾವು ಬರುವಂತಾಗಿರುವ ಆಸ್ಪತ್ರೆಯ ಅವ್ಯವಸ್ಥೆ ಕಂಡು ರೋಗಿಯ ಸಂಬಂಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಮಾರ್ಗಮಧ್ಯೆ ಆಂಬುಲೆನ್ಸ್ ಕೆಟ್ಟಿದ್ದೇ ಬಾಲಕನ ಸಾವಿಗೆ ಕಾರಣ- ಪೋಷಕರ ಆರೋಪ

    ಮಾರ್ಗಮಧ್ಯೆ ಆಂಬುಲೆನ್ಸ್ ಕೆಟ್ಟಿದ್ದೇ ಬಾಲಕನ ಸಾವಿಗೆ ಕಾರಣ- ಪೋಷಕರ ಆರೋಪ

    ವಿಜಯಪುರ: ಹಾವು ಕಚ್ಚಿದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಸಿಂದಗಿ ತಾಲ್ಲೂಕಿನ ಕೊಕಟನೂರ ಗ್ರಾಮದ ಗಣೇಶ ನಾಯ್ಕ ಎಂಬ ಬಾಲಕನಿಗೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣ ಗಣೇಶನನ್ನು ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಇಲ್ಲದೇ ಪರದಾಡಬೇಕಾಯ್ತು. ಬಳಿಕ ಆಸ್ಪತ್ರೆಯ 108 ಆಂಬುಲೆನ್ಸ್ ವಾಹನದಲ್ಲಿ ಅಲಮೇಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಿದೆ. ಈ ವೇಳೆ ಬಾಲಕ ಗಣೇಶ್ ಕೊನೆಯುಸಿರೆಳೆದಿದ್ದಾನೆ.

    ಆಸ್ಪತ್ರೆ ಅವ್ಯವಸ್ಥೆಯಿಂದ ನಮ್ಮ ಮಗನ ಪ್ರಾಣ ಹೋಯ್ತು ಅಂತ ಇದೀಗ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಆಸ್ಪತ್ರೆಯಲ್ಲಿ ಕೆಲ ವೈದ್ಯರ ಕೊರತೆ ಇದೆ.

    ಹಾವು ಕಚ್ಚಿದ ಬಳಿಕ ತುಂಬಾ ತಡವಾಗಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರು. ಬಾಲಕನ ದೇಹಕ್ಕೆ ಆಗಲೇ ವಿಷ ಅಧಿಕ ಪ್ರಮಾಣ ಏರಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೆವು. ಮಾರ್ಗಮಧ್ಯೆ ಆಂಬ್ಯುಲೆನ್ಸ್ ಕೆಟ್ಟಿದ್ದರ ಬಗ್ಗೆ ಮಾಹಿತಿ ಇಲ್ಲ ಅಂತ ಡಾ.ಇಂಗಳೆ ಹೇಳಿದ್ದಾರೆ.

  • ಶೂ ಹಾಕ್ಕೊಂಡಾಗ ಕಾಲಲ್ಲಿ ಮುಲಮುಲ ಅಂತು-ಏನಪ್ಪ ಅಂತ ತೆಗೆದು ನೋಡಿದ್ರೆ ಮರಿ ನಾಗರಹಾವು

    ಶೂ ಹಾಕ್ಕೊಂಡಾಗ ಕಾಲಲ್ಲಿ ಮುಲಮುಲ ಅಂತು-ಏನಪ್ಪ ಅಂತ ತೆಗೆದು ನೋಡಿದ್ರೆ ಮರಿ ನಾಗರಹಾವು

    ಬೆಂಗಳೂರು: ಗಡಿಬಿಡಿಯಲ್ಲಿ ಶೂ ಧರಿಸುವ ಮುನ್ನ ಎಚ್ಚರ. ಈಗ ಮಳೆಗಾಲ ಬೇರೆ. ಹುಳ ಹುಪ್ಪಟೆಗಳಲ್ಲದೆ ಹಾವು ಕೂಡ ಚಪ್ಪಲಿ ಅಥವಾ ಶೂ ಒಳಗಡೆ ಸೇರಿಕೊಳ್ಳಬಹುದು. ನೋಡಿಕೊಳ್ದೇ ಶೂ ಧರಿಸಿದ್ರೆ ಅಪಾಯ ಗ್ಯಾರಂಟಿ.

    ಇದನ್ನೂ ಓದಿ: ಬೈಕ್ ಏರಿದ ಹಾವು.. ಮುಂದೆ ಏನಾಯ್ತು ವಿಡಿಯೋ ನೋಡಿ

    ಹೌದು. ಓಲ್ಡ್ ಮದ್ರಾಸ್ ರೋಡ್‍ನಲ್ಲಿ ವ್ಯಕ್ತಿಯೊಬ್ರು ಶೂ ಹಾಕಿಕೊಂಡಾಗ ಕಾಲಲ್ಲಿ ಮುಲಮುಲ ಅಂತು. ಏನಪ್ಪ ಅಂತ ನೋಡ್ದಾಗ ಶೂನಲ್ಲಿ ನಾಗರಹಾವು ಬೆಚ್ಚಗೆ ಮಲಗಿತ್ತು. ಶೂ ಒಳಗೆ ಹಾವು ಸೇರಿಕೊಂಡು ಆತಂಕದ ವಾತಾವರಣ ಸೃಷ್ಠಿ ಮಾಡಿತ್ತು. ಕೊನೆಗೆ ಶೂ ಒಳಗಿನ ನಾಗರಹಾವನ್ನ ಕಡ್ಡಿಯ ಸಹಾಯದಿಂದ ಹೊರತೆಗೆದಿದ್ದು ಅದು ತನ್ನ ಪಾಡಿಗೆ ಹೋಗಿದೆ.

    ಇದನ್ನೂ ಓದಿ:  ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    https://www.youtube.com/watch?v=abYoZEv4HJM&feature=youtu.be

    ಇದನ್ನೂ ಓದಿ: ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಇಂತಹದ್ದೇ ಘಟನೆ ಈ ಹಿಂದೆಯೂ ನಡೆದಿತ್ತು. ವ್ಯಕ್ತಿಯೊಬ್ಬರ ಶೂನಲ್ಲಿ ಹಾವು ಸೇರಿಕೊಂಡಿದ್ದ ವಿಡಿಯೋ ಇಲ್ಲಿದೆ ನೋಡಿ.

    https://www.youtube.com/watch?v=Rlcs1_5P4Js

    https://www.youtube.com/watch?v=lgah6v0kuQg

  • ಬೈಕ್ ಪಂಚರ್ ಅಂತಾ ಬಗ್ಗಿ ನೋಡಿದ್ರೆ ಸೀಟ್ ಕೆಳಗಿನಿಂದ ಬುಸ್ ಎಂದ ನಾಗ!

    ಬೈಕ್ ಪಂಚರ್ ಅಂತಾ ಬಗ್ಗಿ ನೋಡಿದ್ರೆ ಸೀಟ್ ಕೆಳಗಿನಿಂದ ಬುಸ್ ಎಂದ ನಾಗ!

    ಯಾದಗಿರಿ: ಬೈಕ್ ಚಲಾಯಿಸುವಾಗ ಚಕ್ರದಿಂದ ಪಂಚರ್ ಸದ್ದು ಕೇಳಿ ಗಾಡಿ ನಿಲ್ಲಿಸಿ ನೋಡಿದ್ರೆ, ಸೀಟ್ ಕೆಳಗಡೆ ನಾಗರಹಾವೊಂದು ಕಾಣಿಸಿದೆ.

    ನಗರದ ನಿವಾಸಿ ಅಜ್ಮತ್ ಎಂಬವರ ಬೈಕ್‍ನಲ್ಲಿ ನಾಗರಹಾವು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಅಜ್ಮತ್ ಮನೆ ವಸ್ತುಗಳನ್ನು ಖರೀದಿಸಲು ಶಶಿಬಜಾರ ಅಂಗಡಿಯ ಮುಂದೆ ತಮ್ಮ ಪಲ್ಸರ್ ಬೈಕ್ ನಿಲ್ಲಿಸಿ ಹೋಗಿದ್ದರು.

    ಇದನ್ನೂ ಓದಿ: ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    ಅಂಗಡಿಯಿಂದ ಸಾಮಾನುಗಳನ್ನು ಖರೀದಿಸಿ ಮನೆಗೆ ಹಿಂದಿರುಗುವಾಗ ಬೈಕ್‍ನಿಂದ ಶಬ್ದ ಬರುವುದನ್ನು ಗಮನಿಸಿ ನೋಡಿದಾಗ ಹಾವು ಕಂಡು ಬಂದಿದೆ. ನಂತರ ಸ್ಥಳೀಯ ಹಾವಾಡಿಗರ ಸಹಾಯದಿಂದ ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ.

    ಇದನ್ನೂ ಓದಿ: ಬೈಕ್ ಏರಿದ ಹಾವು.. ಮುಂದೆ ಏನಾಯ್ತು ವಿಡಿಯೋ ನೋಡಿ

    ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

    https://www.youtube.com/watch?v=9lRnoN7wHl8

    https://www.youtube.com/watch?v=G6-avs7TJcA

    https://www.youtube.com/watch?v=pu6LDRVvpVY

  • ಮನೆಯಲ್ಲಿ ಪ್ರತ್ಯಕ್ಷವಾದ ಜಗತ್ತಿನ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವನ್ನ ಹೇಗೆ ಹಿಡಿದರು ನೋಡಿ

    ಮನೆಯಲ್ಲಿ ಪ್ರತ್ಯಕ್ಷವಾದ ಜಗತ್ತಿನ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವನ್ನ ಹೇಗೆ ಹಿಡಿದರು ನೋಡಿ

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯೊಬ್ಬರ ಮನೆಯಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಲಾಕ್ ಮಾಂಬಾ ಕಾಣಿಸಿಕೊಂಡಿದ್ದು ಅದನ್ನ ಉರಗ ತಜ್ಞರೊಬ್ಬರು ರಕ್ಷಣೆ ಮಾಡಿದ್ದಾರೆ.

    ಕ್ವಾಝುಲು ನಾಟಲ್ ಆಂಫಿಬಿಯನ್ ಅಂಡ್ ರೆಪ್ಟೈಲ್ ಕನ್ಸರ್ವೇಷನ್‍ನ ಉರಗ ತಜ್ಞ ನಿಕ್ ಇವಾನ್ಸ್ ಈ ಹಾವನ್ನ ರಕ್ಷಣೆ ಮಾಡಿದ್ದಾರೆ. ಈ ಮನೆಯಲ್ಲಿ ಮೊಲ ಹಾಗೂ ಪಕ್ಷಿಗಳನ್ನ ಸಾಕಿದ್ದ ಕಾರಣ ಹಾವು ಮನೆಯೊಳಗೆ ಬಂದಿರಬಹುದು ಎಂದು ಹೇಳಲಾಗಿದೆ.

    ಮನೆಯ ಟಿವಿ ಸ್ಟ್ಯಾಂಡ್ ಕೆಳಗಿದ್ದ ಹಾವನ್ನ ಉದ್ದವಾದ ಕೋಲಿನಂತಹ ಸಾಧನದಿಂದ ಹಿಡಿದು ಹೊರಗೆ ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ಹಾವು ಬುಸುಗುಟ್ಟಿದ್ದು, ಅದರ ಕಪ್ಪು ಬಣ್ಣದ ಬಾಯಿಯ ಒಳಭಾಗ ಎಂಥವರಿಗೂ ಭಯ ಹುಟ್ಟಿಸುತ್ತದೆ. ಇದರ ವಿಡಿಯೋವನ್ನ ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯನವರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ

    ಬಯಲಿನಲ್ಲಾದ್ರೆ ಅಥವಾ ಅವಕಾಶ ಸಿಕ್ಕರೆ ಮಾಂಬಾ ಹಾವುಗಳು ಯಾವಾಗ್ಲೂ ಕಾದಾಡೋ ಬದಲು ಆ ಸ್ಥಳದಿಂದ ಪರಾರಿಯಾಗುತ್ತವೆ ಅಂತ ಇವಾನ್ಸ್ ನ್ಯಾಷನಲ್ ಜಿಯಾಗ್ರಫಿಕ್‍ಗೆ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವು ಎದುರಾಳಿಯ ಕಡೆಗೆ ಬಾಯಿ ತೆರೆದು ದಿಟ್ಟಿಸಿ ನೋಡುತ್ತವೆ ಎಂದಿದ್ದಾರೆ.

    ಇವಾನ್ಸ್ ಈ ಅತ್ಯಂತ ವಿಷಕಾರಿ ಹಾವನ್ನು ಹಿಡಿಯಲು ಹೋದಾಗ ಅದು ಅಲ್ಲಿಂದ ನುಸುಳಿಕೊಂಡು ಹೋಗಲು ಯತ್ನಿಸಿದೆ. ಆದ್ರೆ ಇವಾನ್ಸ್ ಅದನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಬರಿಗೈಯ್ಯಲ್ಲೇ ಹಾವನ್ನ ಹಿಡಿದು ಕ್ಯಾಮೆರಾ ಕಡೆಗೆ ತೋರಿಸಿದ್ದಾರೆ.

    ಈ ಹಾವು ಸುಮಾರು 8 ಅಡಿಯಷ್ಟು ಉದ್ದವಿದ್ದು, ಇದಕ್ಕೆ ಮೈಕ್ರೋ ಚಿಪ್ ಹಾಕಿದ ನಂತರ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.

     

  • ನುಂಗಲೆತ್ನಿಸಿದ ಹಾವಿನಿಂದ ಪಾರಾಗಲು ಮೀನಿನ ಹೋರಾಟ- ವಿಡಿಯೋ ನೋಡಿ

    ನುಂಗಲೆತ್ನಿಸಿದ ಹಾವಿನಿಂದ ಪಾರಾಗಲು ಮೀನಿನ ಹೋರಾಟ- ವಿಡಿಯೋ ನೋಡಿ

    ನವದೆಹಲಿ: ಹಾವು ಮೀನನ್ನು ನುಂಗಲು ಯತ್ನಿಸಿದ್ದು, ಆ ಮೀನು ಭೂಪ್ರದೇಶದ ಮೇಲೂ ಹಾವಿನಿಂದ ಬಚಾವಾಗಲು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಮೀನು ತನ್ನ ಬಾಯಲ್ಲಿ ಹಾವಿನ ತಲೆಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅದರಿಂದ ಬಿಡಿಸಿಕೊಳ್ಳಲು ಹಾವು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಜೊತೆಗೆ ನೀಡಿರುವ ವಿವರಣೆಯ ಪ್ರಕಾರ ಈಶಾನ್ಯ ಭಾರತದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಈ ದೃಶ್ಯವನ್ನ ಸೆರೆಹಿಡಿದಿದ್ದಿದ್ದಾರೆ. ಕೆಲವರು ಮೀನು ಜೀವಂತವಾಗಿರಲಿ ಎಂದು ಅದರ ಮೇಲೆ ನೀರು ಸುರಿಯೋದನ್ನ ನೋಡಬಹುದು.

    ಆದ್ರೆ ಈ ಕಾದಾಟದಲ್ಲಿ ಹಾವು ಮೀನು ಎರಡೂ ಸೋತಿವೆ. ಕೊನೆಯಲ್ಲಿ ಎರಡೂ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಹಾವು ಮತ್ತು ಮೀನು ಕೊಳವೊಂದರ ನೀರಿನಲ್ಲಿ ಕಾದಾಟ ಶುರು ಮಾಡಿದ್ದು ನಂತರ ಭೂಮಿ ಮೇಲೆ ಬಂದಿವೆ ಎಂದು ಸ್ಥಳೀಯರು ತಿಳಿಸಿರುವುದಾಗಿ ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದೆ.

    4 ದಿನಗಳ ಹಿಂದೆ ಈ ವಿಡಿಯೋ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿದ್ದು, ಈವರೆಗೆ 37 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    https://www.youtube.com/watch?v=TjYQy0Ph3Zk

  • ಬೈಕ್ ಏರಿದ ಹಾವು.. ಮುಂದೆ ಏನಾಯ್ತು ವಿಡಿಯೋ ನೋಡಿ

    ಬೈಕ್ ಏರಿದ ಹಾವು.. ಮುಂದೆ ಏನಾಯ್ತು ವಿಡಿಯೋ ನೋಡಿ

    ಕೊಪ್ಪಳ: ಮಾನವರಂತೆ ಅದು ಕೂಡ ವನ್ಯ ಪ್ರಾಣಿ. ಅದಕ್ಕೂ ವಿಭಿನ್ನ ಆಸಕ್ತಿ ಕುತೂಹಲ ಇದ್ದೆ ಇರುತ್ತೆ. ಇದಕ್ಕೊಂದು ನಿದರ್ಶನ ಅನ್ನುವಂತೆ ಹಾವೊಂದು ಬೈಕೇರಿ ಕುಳಿತುಕೊಳ್ಳೋ ಮೂಲಕ ಅಚ್ಚರಿ ಮೂಡಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಹೌದು, ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಮಾರು ನಾಲ್ಕುವರೆ ಅಡಿ ಉದ್ದದ ನಾಗರ ಹಾವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಿಕೊಂಡು ಬಂದು ಮತ್ತೊಂದು ಬದಿಯಲ್ಲಿ ನಿಲ್ಲಿಸಿದ್ದ ಗ್ರಾಮದ ಮೆಕ್ಯಾನಿಕ್ ಹುಸೇನ್ ಅವರ ಬೈಕ್ ಏರಿ ಕುಳಿತಿದೆ.

    ರಾತ್ರಿ 11ರ ಸುಮಾರಿಗೆ ನಡೆದ ಈ ಘಟನೆಯನ್ನು ಹುಸೇನ್ ಖುದ್ದು ವೀಕ್ಷಿಸಿದ್ದಾರೆ. ಆ ನಾಗರ ಹಾವನ್ನು ಬೈಕಿನಿಂದ ಇಳಿಸಲು ಯತ್ನಿಸಿದ್ದಾರೆ. ಆದ್ರೆ ನಾಗ ಸುಮ್ಮನಿರದೇ ಬುಸುಗುಟ್ಟಿದ್ದಾನೆ.

    ವಿಷಯ ತಿಳಿದು ಹತ್ತಾರು ಯುವಕರು ಸ್ಥಳದಲ್ಲಿ ನೆರೆದಿದ್ದಾರೆ. ಇದರಿಂದ ಗಲಿಬಿಲಿಗೊಂಡ ಹಾವು ಬೈಕ್ ಸೀಟಿನಿಂದ ಕೆಳಗಿಳಿದು ನೇರ ಎಂಜಿನ್ ಒಳಗೆ ನುಸುಳಿದ್ದಾನೆ. ಸುರಕ್ಷಿತವಾಗಿ ತೆಗೆಯುವ ಉದ್ದೇಶಕ್ಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಬೈಕ್ ಸವಾರಿಗೆಂದು ಬಂದ ನಾಗ ಕೊನೆಗೆ ಇಹಲೋಕ ತ್ಯಜಿಸುವ ಮೂಲಕ ಯುವಕರಲ್ಲಿ ನಿರಾಸೆ ಮೂಡಿಸಿದೆ.

     

    https://youtu.be/JjTWlu0juhc