Tag: ಹಾವು

  • ದೇವರ ಮನೆಯಲ್ಲಿ ಪ್ರತ್ಯಕ್ಷವಾದ ಹಾವು- ಗ್ರಾಮಸ್ಥರಲ್ಲಿ ಅಚ್ಚರಿ

    ದೇವರ ಮನೆಯಲ್ಲಿ ಪ್ರತ್ಯಕ್ಷವಾದ ಹಾವು- ಗ್ರಾಮಸ್ಥರಲ್ಲಿ ಅಚ್ಚರಿ

    ಬೀದರ್: ದೇವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.

    ರಾಜೇಶ್ವರ ಗ್ರಾಮದ ನಿವಾಸಿ ಮಾರುತಿ ಹಲಶಟ್ಟೆ ಅವರ ಮನೆ ಜಗುಲಿ (ದೇವರ ಮನೆ) ಮೇಲೆ ಭಾನುವಾರ ಬೆಳಗ್ಗೆ ಹಾವು ಪ್ರತ್ಯಕ್ಷವಾಗಿದೆ. ಹಾವು ಬೆಳಗ್ಗೆ ಪ್ರತ್ಯಕ್ಷವಾಗಿ ರಾತ್ರಿ ಸುಮಾರು 10 ಗಂಟೆವರೆಗೂ ಸ್ಥಳದಿಂದ ಕದಲದೆ ಒಂದೇ ಸ್ಥಳದಲ್ಲಿ ಕುಳಿತಿದೆ.

    ಬೆಳಗ್ಗೆ ಮಹಿಳೆಯರು ಪೂಜೆ ಮಾಡಲು ಹೋದಾಗ ಈ ಹಾವು ಕಂಡು ಬಂದಿದೆ. ಹಾವು ಕಂಡಾಗ ಕೆಲ ಕ್ಷಣ ಗಾಬರಿಗೊಂಡಿದ್ದು, ನಂತರ ಮನೆಯವರಿಗೆ ತಿಳಿಸಿದ್ದಾರೆ. ಬಂದು ನೋಡಿದಾಗ ಈ ಹಾವು ಸುಮಾರು ಐದು ಅಡಿಗಿಂತ ಅಧಿಕ ಉದ್ದವಿದ್ದು, ಕಂದು ಗೋಧಿ ಬಣ್ಣ ಹೊಂದಿತ್ತು. ಮೈ ಮೇಲೆ ಸಣ್ಣ ಸಣ್ಣ ಗಾತ್ರದ ಬಿಳಿ ಚುಕ್ಕೆಗಳು ಇವೆ. ದೇವರ ಮನೆಯಲ್ಲಿಯ ದೇವರ ಮೂರ್ತಿಗಳ ಮೇಲೆ ಠಿಕಾಣಿ ಹೂಡಿದೆ. ಆಗಾಗ ಹೆಡೆ ಎತ್ತಿ ನೋಡುತ್ತಿದೆ.

    ಇನ್ನು ಹಾವು ಪ್ರತ್ಯಕ್ಷವಾಗಿರುವ ಸುದ್ದಿ ತಿಳಿದ ಗ್ರಾಮಸ್ಥರು ಸೇರಿದಂತೆ ಸುತ್ತಮತ್ತಲಿನ ಮಂದಿ ಆಶ್ಚರ್ಯಪಟ್ಟು ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ್ದಾರೆ. ಈ ಮಧ್ಯೆ ಕೆಲವರು ಹಾವಿಗೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸುತ್ತಿದ್ದು, ಮತ್ತೆ ಕೆಲವರು ಅದರ ಮೈ ಮುಟ್ಟಿ ನಮಿಸುತ್ತಿದ್ದಾರೆ. ಆದರೆ ಹಾವು ಯಾರಿಗೂ ಕಚ್ಚಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಈ ಹಾವು ಇದೇ ಮೊದಲ ಬಾರಿಗೆ ಮನೆಗೆ ಆಗಮಿಸಿದ್ದು, ಮನೆಯ ಜಗುಲಿ ಮೇಲೆ ಹಾವು ಬಂದಿರುವುದು ಪವಾಡವೇ ಇರಬಹುದು. ನಾಗದೇವತೆ ನಮ್ಮ ಮನೆಗೆ ಆಗಮಿಸಿದ್ದಾಳೆ ಎಂದು ಚರ್ಚೆಯಾಗುತ್ತಿದೆ. ಇನ್ನೂ ಕೆಲವರು ಕುಂಕುಮ ಮತ್ತು ಅರಿಶಿನ ಹಾಕಿ ಭಕ್ತಿ ಪರಾಕಾಷ್ಠೆ ಮೆರೆದ್ರೆ ಮತ್ತೆ ಕೆಲವರು ಹಣ ಹಾಕಿ ಆರಾಧಿಸುವಲ್ಲಿ ತಲ್ಲೀನರಾಗಿದ್ದರು.

  • ಚಾಮರಾಜನಗರದಲ್ಲಿ ಹಾವು-ಮುಂಗುಸಿ ಕಾಳಗ ಮಾಡ್ತಿರೋ ಅಪರೂಪದ ವಿಡಿಯೋ ನೋಡಿ

    ಚಾಮರಾಜನಗರದಲ್ಲಿ ಹಾವು-ಮುಂಗುಸಿ ಕಾಳಗ ಮಾಡ್ತಿರೋ ಅಪರೂಪದ ವಿಡಿಯೋ ನೋಡಿ

    ಚಾಮರಾಜನಗರ: ಜಗಳ ಬೀದಿಗೆ ಬಂದ್ರೆ ಯಾಕಪ್ಪ ಯಾವಾಗ್ಲೂ ಹಾವು-ಮುಂಗುಸಿ ತರ ಕಿತ್ತಾಡ್ತೀರಪ್ಪಾ ಅಂತ ದೊಡ್ಡವರು ಬುದ್ಧಿಮಾತು ಹೇಳೊದನ್ನು ಕೇಳಿದ್ದೀವಿ. ಆದ್ರೆ ಹಾವು-ಮುಂಗುಸಿ ಹೇಗೆ ಕಿತ್ತಾಡುತ್ತವೆ ಅನ್ನೋದನ್ನು ಸಾಮಾನ್ಯವಾಗಿ ಹೆಚ್ಚಿನವರು ನೋಡಿರಲ್ಲ. ಹೀಗಾಗಿ ಹಾವು, ಮುಂಗುಸಿ ಕಾಳಗ ಮಾಡಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ ಹೆಬ್ಬಾಗಿಲಲ್ಲಿ ಹಾವು ಮತ್ತು ಮುಂಗುಸಿ ಕಾಳಗಮಾಡಿದ್ದು, ಈ ದೃಶ್ಯವನ್ನ ಆ ಗ್ರಾಮದ ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

    ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಹಾವು ಮತ್ತು ಮುಂಗುಸಿ ಕಾಳಗ ಮಾಡಿದ್ದು, ಈ ಕಾಳಗದಲ್ಲಿ ಕೊನೆಗೂ ಮುಂಗುಸಿ ಹಾವನ್ನು ಕೊಂದು ಹಾಕಿದೆ. ಅಪರೂಪದಲ್ಲೇ ಅಪರೂಪವಾದ ಈ ಕಾಳಗವನ್ನು ಗ್ರಾಮಸ್ಥರು ಮೂಕ ವಿಸ್ಮಯರಾಗಿ ನೋಡಿದ್ದಾರೆ.

    https://www.youtube.com/watch?v=uv9v7xRnuvk

  • ಮನೆ ಹೊರಗಡೆ ಬಿಚ್ಚಿಟ್ಟ ಶೂನಲ್ಲಿ ಸೇರಿಕೊಂಡಿತು ನಾಗರಹಾವು!

    ಮನೆ ಹೊರಗಡೆ ಬಿಚ್ಚಿಟ್ಟ ಶೂನಲ್ಲಿ ಸೇರಿಕೊಂಡಿತು ನಾಗರಹಾವು!

    ಮೈಸೂರು: ನಗರದ ಬಡಾವಣೆಯೊಂದರಲ್ಲಿ ಬಿಚ್ಚಿಟ್ಟಿದ್ದ ಶೂನಲ್ಲಿ ನಾಗರಹಾವು ಒಂದು ಸೇರಿಕೊಂಡಿದ್ದು, ಶೂ ಧರಿಸಲು ಬಂದ ವ್ಯಕ್ತಿ ಸ್ಪಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪರಾರಿಗಿರುವ ಘಟನೆ ನಡೆದಿದೆ.

    ಮೈಸೂರಿನ ಆರ್ ಎಂಪಿ ಬಡಾವಣೆಯ ಮಹೇಶ್ ಎಂಬುವರು ಸಂಜೆ ತಮ್ಮ ಶೂವನ್ನು ಮನೆಯ ಹೊರಗಡೆ ಬಿಟ್ಟು ತೆರಳಿದ್ದು, ರಾತ್ರೋರಾತ್ರಿ ಶೂ ಒಳಗೆ ನಾಗರ ಹಾವು ಬಂದು ಸೇರಿಕೊಂಡಿತ್ತು.

    ಈ ವೇಳೆ ಎಂದಿನಂತೇ ಮಹೇಶ್ ಅವರು ಶೂ ಧರಿಸಲು ಕೈಗೆತ್ತಿ ಗೊಂಡಾಗ ನಾಗರ ಹಾವು ಕಂಡು ತಬ್ಬಿಬ್ಬಾಗಿದ್ದಾರೆ. ತಕ್ಷಣ ಉರಗತಜ್ಞ ಕೆಂಪರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ನಾಗರ ಹಾವನ್ನು ಹಿಡಿದು ರಕ್ಷಿಸಿ, ಆತಂಕವನ್ನು ದೂರ ಮಾಡಿದ್ದಾರೆ.

  • ವಿಡಿಯೋ: ಕುಡಿದ ಅಮಲಿನಲ್ಲಿ ಹಾವನ್ನು ಕೊರಳಿಗೆ ಹಾಕೊಂಡು ಕಚ್ಚಿ ಕಚ್ಚಿ ಕೊಂದ

    ವಿಡಿಯೋ: ಕುಡಿದ ಅಮಲಿನಲ್ಲಿ ಹಾವನ್ನು ಕೊರಳಿಗೆ ಹಾಕೊಂಡು ಕಚ್ಚಿ ಕಚ್ಚಿ ಕೊಂದ

    ಬೆಳಗಾವಿ: ಹಾವಿನ ದ್ವೇಷ 12 ವರುಷ ಅಂತಾರೆ, ಆದರೆ ಇಲ್ಲೊಬ್ಬ ಕುಡುಕ ಹಾವನ್ನು ಬಾಯಲ್ಲಿ ಹಾಕಿಕೊಂಡು ಕಚ್ಚಿ ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ವಿಚಿತ್ರ ಅನ್ನಿಸಿದರು ಸತ್ಯ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಚಿಕ್ಕಯ್ಯ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ಬಾಯಲ್ಲಿ ಹಾವನ್ನು ಹಾಕಿಕೊಂಡು ಹಾವಿನ ವಿರುದ್ಧ ಸೇಡು ತೀರಿಸಿಕೊಂಡಿರುವ ದೃಶ್ಯ ಈಗ ವೈರಲ್ ಆಗಿದೆ.

    ಇನ್ನೂ ಹೀಗೆ ಕುಡಿದು ಅಮಲಿನಲ್ಲಿ ಈತ ಹಾವನ್ನು ಬಾಯಲ್ಲಿ ಹಾಕಿಕೊಂಡಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮನೆ ಹತ್ತಿರ ಬಂದಿದ್ದ ಹಾವನ್ನು ಹಿಡಿದು ತಲೆಗೆ ಸುತ್ತಿಕೊಂಡು ಮನೆಯವರು ಬೇಡ ಬೇಡ ಎಂದರು ಬಾಯಲ್ಲಿ ಹಾಕಿಕೊಂಡು ಹಾವನ್ನು ಕೊಂದಿರುವ ದೃಶ್ಯಗಳು ಎಲ್ಲರ ಮೊಬೈಲ್ ದಲ್ಲಿ ಹರಿದಾಡುತ್ತಿವೆ.

    https://youtu.be/JBRJNpSKjS8

     

  • ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ ಹಾಗಾದರೆ ಟಾಯ್ಲೆಟ್‍ಗೆ ಹೋಗುವ ಮುನ್ನ ಎಚ್ಚರವಾಗಿರಿ.

    ವೆಸ್ಟರ್ನ್ ಶೈಲಿಯ ಟಾಯ್ಲೆಟ್ ಕಮೋಡಲ್ಲಿ ಹಾವು ಕಾಣಿಸಿಕೊಂಡಿರುವ ಘಟನೆ ನಗರದ ಜೀವನ್ ಭೀಮಾ ನಗರದ ಕೇಂದ್ರಿಯಾ ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ನಡೆದಿದೆ.

    ವಿಶ್ವವಿದ್ಯಾಲಯದ ಶಿಕ್ಷಕರು ಬಳಸುವ ಶೌಚಾಲಯ ಇದಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರೂ ಶಿಕ್ಷಕರ ಜೀವಕ್ಕೆ ಆಪಾಯ ಕಾದಿತ್ತು. ಟಾಯ್ಲೆಟ್‍ನಲ್ಲಿ ಹಾವು ಕಾಣಿಸಿಕೊಂಡ ಕೂಡಲೇ ಬಿಬಿಎಂಪಿ ಅರಣ್ಯ ಘಟಕಕ್ಕೆ ವಿವಿ ಅಧಿಕಾರಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಘಟಕದ ಸಂರಕ್ಷಕರಾದ ಸುಭಾಷ್ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಟ್ಟಿದ್ದಾರೆ.

  • ಹಾವು ಬಿಟ್ಟವರ ಮೇಲೆ ಈ ರೀತಿ ಸೇಡು ತಿರಿಸಿಕೊಂಡ್ರು ಸನ್ನಿ ಲಿಯೋನ್

    ಹಾವು ಬಿಟ್ಟವರ ಮೇಲೆ ಈ ರೀತಿ ಸೇಡು ತಿರಿಸಿಕೊಂಡ್ರು ಸನ್ನಿ ಲಿಯೋನ್

    ಮುಂಬೈ: ಮಾದಕ ತಾರೆ ಸನ್ನಿ ಲಿಯೋನ್ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಈ ಹಿಂದೆ ಶೂಟಿಂಗ್ ಸೆಟ್ ನಲ್ಲಿ ರಜನಿ ಎಂಬವರು ಸನ್ನಿ ಮೇಲೆ ಹಾವು ಬಿಟ್ಟು ಬೆಚ್ಚಿ ಬೀಳಿಸಿದ್ದರು. ಹಾವು ಕಂಡ ಸನ್ನಿ ಭಯ ಬಿದ್ದು ಓಡಿ ಹೋಗಿದ್ದರು. ಈಗ ಸನ್ನಿ ತನಗೆ ತರ್ಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ.

    ಸನ್ನಿ ಲಿಯೋನ್ ತಮ್ಮ ಸಿನಿಮಾ ಸೆಟ್ ನಲ್ಲಿ ಇಂಟ್ರಸ್ಟ್ ಆಗಿ ಸಿನಿಮಾದ ಸ್ಕ್ರಿಪ್ಟ್ ಓದುತ್ತಿದ್ದರು. ಆಗ ಅಲ್ಲಿ ರಜನಿ ಎಂಬ ವ್ಯಕ್ತಿ ಹಾವನ್ನು ಹಿಡಿದು ಸನ್ನಿಯ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ಸನ್ನಿ ತಿರುಗಿ ನೋಡುವಾಗ ರಜನಿ ಆ ಹಾವನ್ನು ಸನ್ನಿಯ ಮೇಲೆ ಹಾಕಿ ಓಡಿ ಹೋಗಿದ್ದಾನೆ.

    ಹಾವನ್ನು ಕಂಡ ಸನ್ನಿ ಎದ್ನೋ ಬಿದ್ನೋ ಅಂತ ಓಡಿದ್ದು, ನಂತರ ರಜನಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋವನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ತನ್ನ ಟೀಂನವರು ಹೇಗೆ ತಮಾಷೆ ಮಾಡಿದ್ದಾರೆ ಎಂದು ಬರೆದು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ.

     

    ಇಷ್ಟೆಲ್ಲಾ ಆದ ಮೇಲೆ ಸನ್ನಿ ಸುಮ್ಮನೆ ಕೂರುವವರಲ್ಲ. ತನ ಮೇಲೆ ಪ್ರ್ಯಾಂಕ್ ಮಾಡಿದ ವ್ಯಕ್ತಿಯ ವಿರುದ್ಧ ಸೇಡು ತಿರಿಸಿಕೊಂಡಿದ್ದಾರೆ. ಅದೇ ಶೂಟಿಂಗ್ ಸೆಟ್ ನಲ್ಲಿ ಸನ್ನಿ ಎರಡೂ ಕೈಯಲ್ಲಿ ಚಾಕ್ಲೇಟ್ ಕೇಕ್ ಹಿಡಿದು ರಜನಿ ಅವರ ಕಿವಿಗೆ ಅಪ್ಪಳಿಸಿ ಶಾಕ್ ಕೊಟ್ಟಿದ್ದಾರೆ.

    ಕೇಕ್ ರಜನಿ ಮುಖಕ್ಕೆ ಹಾಕಿದ ತಕ್ಷಣ ರಜನಿ ತನ್ನ ಕೈಯಲ್ಲಿದ್ದ ಸ್ಕ್ರಿಪ್ಟ್ ಪೇಪರ್ ಎಸೆದು ಸನ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಸದ್ಯ ಈ ವಿಡಿಯೋವನ್ನು ಸನ್ನಿ ಟ್ವಿಟ್ಟರ್ ನಲ್ಲಿ ಹಾಕಿ “ನನ್ನ ಸೇಡು. ಹ್ಹ ಹ್ಹ ಹ್ಹ. ನನ್ನ ಸಹವಾಸಕ್ಕೆ ಬಂದರೆ ಇದೇ ಗತಿ” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಸನ್ನಿ ಜಾಹಿರಾತು ಹಾಗೂ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಅರ್ಬಾಸ್ ಖಾನ್ ಜೊತೆ ನಟಿಸಿದ ‘ತೇರಾ ಇಂತೇಜಾರ್’ ಸಿನಿಮಾದ ಪ್ರೋಮೊಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ.

    https://www.instagram.com/p/Bb6y7NbjjZE/?hl=en&taken-by=sunnyleone

    https://www.instagram.com/p/Bb9V3xsjUTQ/?hl=en&taken-by=sunnyleone

     

    https://www.instagram.com/p/Bb184eaDtDy/?hl=en&taken-by=sunnyleone

    https://www.instagram.com/p/Bb1u2Aijjxe/?hl=en&taken-by=sunnyleone

    https://www.instagram.com/p/Bb1uDvWDXj9/?hl=en&taken-by=sunnyleone

  • ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ.

    ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದೆ. ಬಾವಲಿಯ ಅದೃಷ್ಟಕ್ಕೆ ಹೆಬ್ಬಾವು ಅರ್ಧ ಗಂಟೆ ನಂತರ ವಿಫಲವಾಗಿ ಬಾವಲಿಯನ್ನ ನೆಲಕ್ಕುಳುರುವಂತೆ ಕೆಳಗೆ ಬಿಟ್ಟಿದೆ.

    ಉರಗ ರಕ್ಷಕ ಟೋನಿ ಮಾರಿಸ್ಸನ್ ಎಂಬವರು ಇದರ ವಿಡಿಯೋ ಮಾಡಿದ್ದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಬಾವಲಿಯ ರೆಕ್ಕೆಯನ್ನ ನುಂಗಲಾಗದೆ ಹಾವು ವಿಫಲವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ .

    ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೆಟ್ ಪೈಥಾನ್‍ಗಳು ಕಾಣಸಿಗುತ್ತವೆ. ಇವು ಮಾನವನಿಗೆ ಯಾವುದೇ ಅಪಾಯ ಮಾಡಲ್ಲ ಎಂದು ಮಾರಿಸ್ಸನ್ ಹೇಳಿದ್ದಾರೆ.

    https://www.facebook.com/redlandssnakes/videos/2053112358250176/

    https://www.facebook.com/redlandssnakes/posts/2053116511583094

  • ಮೃಗಾಲಯದಲ್ಲಿ ಪಕ್ಷಿಗಳನ್ನು ತಿನ್ನುತ್ತಿದ್ದ ಹಾವಿನ ಸ್ಥಳಾಂತರ

    ಮೃಗಾಲಯದಲ್ಲಿ ಪಕ್ಷಿಗಳನ್ನು ತಿನ್ನುತ್ತಿದ್ದ ಹಾವಿನ ಸ್ಥಳಾಂತರ

    ಚಿತ್ರದುರ್ಗ: ಜಿಲ್ಲೆಯಲ್ಲಿರುವ ಕಿರು ಮೃಗಾಲಯದಲ್ಲಿ ಪಕ್ಷಿಗಳ ಮೊಟ್ಟೆ ಹಾಗು ಪಾರಿವಾಳ ನುಂಗುತಿದ್ದ ನಾಗರಹಾವನ್ನು ಉರಗತಜ್ಞರ ಸಹಾಯದಿಂದ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.

    ಉರಗತಜ್ಞ ಚೇತನ್ ಅವರ ಸಹಾಯದಿಂದ ನಾಗರವನ್ನು ಸೆರೆ ಹಿಡಿದಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಆವರಣದಿಂದ ಸ್ಥಳಾಂತರಿಸಿ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

    ಮೃಗಾಲಯದ ಆವರಣದಲ್ಲಿ ಈ ಹಾವು ಹಲವು ದಿನಗಳಿಂದ ನಿರ್ಭಯವಾಗಿ ಓಡಾಡುತ್ತಾ, ಪಕ್ಷಿ ಹಾಗೂ ಅವುಗಳ ಮೊಟ್ಟೆಯನ್ನು ನುಂಗಿತ್ತಿತ್ತು. ಇದರಿಂದ ಮೃಗಾಲಯದಲ್ಲಿರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಅಲ್ಲದೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸಿಬ್ಬಂದಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು.

    ಇದೀಗ ನಾಗರಹಾವುವನ್ನು ಸುರಕ್ಷಿತವಾಗಿ ಸೆರೆ ಹಿಡಿದಿರುವುದರಿಂದ ಮೃಗಾಲಯಕ್ಕೆ ನಾಗರಹಾವಿನಿಂದ ಮುಕ್ತಿ ಸಿಕ್ಕಂತಾಗಿದೆ. ಸೆರೆ ಹಿಡಿದ ಹಾವನ್ನು ಜೋಗಿಮಟ್ಟಿ ಅರಣ್ಯಕ್ಕೆ ಬಿಡಲಾಗಿತು. ಹೀಗಾಗಿ ನಾಗರಹಾವಿನ ಭಯದಿಂದ ಪ್ರವಾಸಿಗರಲ್ಲಿ ಏರ್ಪಟ್ಟಿದ್ದ ಆತಂಕ ಕೂಡ ಶಮನವಾಗಿದೆ.

  • ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಬಲೆಯಲ್ಲಿ ಸಿಲುಕಿದ್ದ ನಾಗರಹಾವೊಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಡುಹೊಳೆ ಗ್ರಾಮದಲ್ಲಿ ನಡೆದಿದೆ.

    ಕಾರ್ಕಳದ ಹೆಬ್ರಿ ಸಮೀಪದ ಕಾಡುಹೊಳೆಯ ನಿವಾಸಿ ಜಿನ್ನಪ್ಪ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಬಲೆಗೆ ಸಿಲುಕಿಕೊಂಡಿದ್ದು, ಆದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಗುರುರಾಜ್ ಸನಿಲ್ ಸ್ಥಳಕ್ಕೆ ಭೇಟಿ ನೀಡಿ ನಾಗರ ಹಾವನ್ನು ಬಹಳ ಶ್ರಮವಹಿಸಿ ಬಿಡಿಸಿದ್ದಾರೆ. ನಾಗರಹಾವು ದೈಹಿಕವಾಗಿ ಬಹಳ ಮೃದು ಆಗಿರುವುದರಿಂದ ಹಾವಿಗೆ ಘಾಸಿಯಾಗದಂತೆ ಒಂದೊಂದೇ ಬಲೆಯ ಕಣಗಳನ್ನು ಕತ್ತರಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರೂ ಕೂಡ ಹಾವನ್ನು ಬಿಡಿಸಲು ಸಹಾಯ ಮಾಡಿದ್ದಾರೆ.

    ನಾಗರಹಾವಿನ ಹೆಡೆಯ ಭಾಗವನ್ನು ಬಿಡಿಸುವ ಸಂದರ್ಭದಲ್ಲಿ ಬಹಳ ಪ್ರಾಯಾಸಪಡಬೇಕಾಗಿ ಬಂತು. ಸುಮಾರು ಒಂದು ಗಂಟೆಗಳ ಕಾಲ ಗುರುರಾಜ್ ಸನಿಲ್ ಶ್ರಮವಹಿಸಿ ಹಾವಿನ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ವಿದ್ಯುತ್ ಬೀದಿದೀಪದಲ್ಲಿ ಕಾಣಿಸಿಕೊಂಡ ಹಾವುಗಳು!

    ವಿದ್ಯುತ್ ಬೀದಿದೀಪದಲ್ಲಿ ಕಾಣಿಸಿಕೊಂಡ ಹಾವುಗಳು!

    ಬಳ್ಳಾರಿ: ಹಾವುಗಳು ಹುತ್ತದಲ್ಲಿ ಇಲ್ಲವೇ ತಗ್ಗು ಗುಂಡಿಗಳಲ್ಲಿ ಇರೋದು ಮಾಮೂಲು. ಆದ್ರೆ ಎರಡು ಹಾವುಗಳು ವಿದ್ಯುತ್ ಬಲ್ಬ್ ನಲ್ಲಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯ 5ನೇ ವಾರ್ಡ್‍ನ ಬೀದಿ ದೀಪದ ಬಲ್ಬ್ ನೊಳಗೆ ಹಾವುಗಳು ಆಶ್ರಯ ಪಡೆದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ವಿದ್ಯುತ್ ಕಂಬದಲ್ಲಿನ ಚಿಕ್ಕದಾದ ಬೀದಿ ದೀಪದ ಲೈಟಿನಲ್ಲಿ ಎರಡು ಹಾವುಗಳು ಪ್ರತ್ಯಕ್ಷವಾಗಿರುವುದನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಚಿಕ್ಕದಾದ ಜಾಗದಲ್ಲಿ ಎರಡು ಹಾವುಗಳಿದ್ದರೂ ಸ್ವಲ್ಪವೂ ಜಗಳವಾಡದೇ ಇರುವುದು ನಿಜಕ್ಕೂ ವಿಶೇಷವಾಗಿದೆ. ಮೇಲಿನ ಮರದಿಂದ ಕೆಳಗಿನ ವಿದ್ಯುತ್ ಕಂಬದ ಬಲ್ಬ್ ನೊಳಗೆ ಹಾವುಗಳು ಹೋಗಿರಬಹುದು ಎಂದು ಹೇಳಲಾಗಿದೆ.