Tag: ಹಾವು

  • ಹಾವು ಕಚ್ಚಿಸಿ ಉದ್ಯಮಿಯ ಕೊಲೆ – ಸಹಜ ಸಾವೆಂದು ಬಿಂಬಿಸಿದ ಹಾವಾಡಿಗ ಅರೆಸ್ಟ್

    ಹಾವು ಕಚ್ಚಿಸಿ ಉದ್ಯಮಿಯ ಕೊಲೆ – ಸಹಜ ಸಾವೆಂದು ಬಿಂಬಿಸಿದ ಹಾವಾಡಿಗ ಅರೆಸ್ಟ್

    ಡೆಹ್ರಾಡೂನ್: ಉದ್ಯಮಿಯೊಬ್ಬರನ್ನು (Businessman) ನಾಗರ ಹಾವಿನಿಂದ ಕಚ್ಚಿಸಿ ಕೊಲೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉತ್ತರಾಖಂಡ (Uttarakhand) ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಉತ್ತರ ಪ್ರದೇಶದ (Uttar Pradesh) ಹಾವಾಡಿಗ ರಮೇಶ್‍ನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಎಂಬುವವರು ಆರೋಪಿಗಳಾಗಿದ್ದು ಇವರಿಗೆ ಕುಟುಂಬಸ್ಥರು ಸಹಕರಿಸಿದ್ದಾರೆ. ಈಗ ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!

    ಜು.15 ರಂದು ತೀನ್‍ಪಾನಿ ಪ್ರದೇಶದ ಬಳಿ ಅಂಕಿತ್ ಚೌಹಾಣ್ (30) ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಾವಿನ ವಿಷ ಸೇರಿ ಮೃತಪಟ್ಟಿದ್ದು ತಿಳಿದು ಬಂದಿತ್ತು. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.

    ಬಳಿಕ ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್‍ನ್ನು ಟ್ರ್ಯಾಕ್ ಮಾಡಲಾಗಿದೆ. ಈ ವೇಳೆ ಮಹಿಳೆ ಹಾವಾಡಿಗನೊಂದಿಗೆ ಸಂಪರ್ಕಿಸಿರುವುದು ತಿಳಿದು ಬಂದಿದೆ. ಅಲ್ಲದೇ ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿ ಬದಲಾಯಿತು ಎಂದು ಹಿರಿಯ ಪೆÇಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದಾರೆ.

    ಡಾಲಿಗೆ ಅಂಕಿತ್ ಮದ್ಯಪಾನದ ಅಮಲಿನಲ್ಲಿ ನಿಂದಿಸುತ್ತಿದ್ದ ಇದಕ್ಕಾಗಿ ಕೊಲೆಗೈಯಲಾಗಿದೆ. ಅಲ್ಲದೇ ಆತ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಉಳಿದ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.

    ಈ ಸಂಬಂಧ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ ಆರೋಪ) ಅಡಿಯಲ್ಲಿ ಐವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬೇಟೆಗಾಗಿ ಸಂಗ್ರಹಿಸಿದ್ದ 81 ನಾಡಬಾಂಬ್ ವಶ – ಇಬ್ಬರು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂ ಒಳಗೆ ಅವಿತು ಕುಳಿತಿತ್ತು ಬುಸ್‌ ಬುಸ್‌ ನಾಗ!

    ಶೂ ಒಳಗೆ ಅವಿತು ಕುಳಿತಿತ್ತು ಬುಸ್‌ ಬುಸ್‌ ನಾಗ!

    – ಶೂ ಧರಿಸುವ ಮುನ್ನ ಎಚ್ಚರ ವಹಿಸುವಂತೆ ಉರಗ ತಜ್ಞ ಮನವಿ

    ಧಾರವಾಡ: ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಮನೆಯೊಳಗೆ ಬರುವ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಮಿತಿಮೀರಿದ ಶೀತ ವಾತಾವರಣ ಇರೋದ್ರಿಂದ ಹಾವುಗಳು ಮನೆಯೊಳಗೇ ಬಂದುಬಿಡುತ್ತವೆ ಎಂದು ಉರಗ ತಜ್ಞರು ಹೇಳುತ್ತಾರೆ.

    ಅದೇ ರೀತಿ ಶೂ (Shoes) ಒಳಗಡೆ ಬೆಚ್ಚಗೆ ಅವಿತು ಕುಳಿತ್ತಿದ್ದ ನಾಗರ ಹಾವಿನ (Cobra) ಮರಿಯನ್ನು ರಕ್ಷಣೆ ಮಾಡಿದ ಘಟನೆ ಧಾರಾವಾಡ (Dharwad) ನಗರದ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ. ಇದನ್ನೂ ಓದಿ: ಬಿಜೆಪಿ ಅವಧಿಯ ಅಕ್ರಮಗಳನ್ನು ವಿವಿಧ ತನಿಖಾ ಸಂಸ್ಥೆಗಳ ಮೂಲಕ ತನಿಖೆ: ಪ್ರಿಯಾಂಕ್ ಖರ್ಗೆ

    ನಂದಿತಾ ಶಿವನಗೌಡರ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಕಸ ಗುಡಿಸುವ ವೇಳೆ ಹಾವು ನೋಡಿದ ನಂದಿತಾ ಬೆಚ್ಚಿಬಿದ್ದಿದ್ದಾರೆ. ನಂತರ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಲಪ್ಪ ಜೋಡಳ್ಳಿ ನಾಗರಹಾವಿನ ಮರಿಯನ್ನ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ರಸ್ತೆಗಳಿಗೆ ಸಾವರ್ಕರ್‌, ವಾಜಪೇಯಿ ಹೆಸರು ಮರು ನಾಮಕರಣ

    ಶೂ ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಉರಗ ತಜ್ಞ ಎಲ್ಲಪ್ಪ ಮನವಿ ಮಾಡಿಕೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಹೀಗಾಗಿ ಶೂ ಧರಿಸುವಾಗ ಸ್ವಲ್ಪ ಜಾಗ್ರತೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾವು ಕಚ್ಚಿ ಬಾಲಕಿ ಸಾವು

    ಹಾವು ಕಚ್ಚಿ ಬಾಲಕಿ ಸಾವು

    ಕಲಬುರಗಿ: ಕಟ್ಟಿಗೆ ತರಲು ಹೊಲಕ್ಕೆ ಹೋದಾಗ ಹಾವು ಕಚ್ಚಿ (Snakebite) ಬಾಲಕಿ (Girl) ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೂಜಾ (16) ವಿಷ ಜಂತು ಕಡಿತಕ್ಕೆ ಪ್ರಾಣ ಕಳೆದುಕೊಂಡ ಬಾಲಕಿ.

    ಪೂಜಾ ಗ್ರಾಮದಲ್ಲಿ ಕಟ್ಟಿಗೆ ತರಲೆಂದು ಹೊಲಕ್ಕೆ ತೆರಳಿದ್ದಾಗ ಹಾವು ಕಚ್ಚಿದೆ. ದುರ್ಘಟನೆಯಿಂದ ಪೂಜಾ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

  • ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಕ್ಯಾನ್ಬೆರಾ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವುಗಳು ಹುತ್ತದಿಂದ ಹೊರಬರುತ್ತವೆ. ವಾಸಕ್ಕೆ ತಂಪಾದ ಜಾಗಗಳನ್ನೇ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮನೆಗಳಿಗೂ ಹೊಕ್ಕಿಬಿಡುತ್ತವೆ.

    ಅದೇ ರೀತಿ ಆಸ್ಟ್ರೇಲಿಯಾ (Australia) ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಮನೆಯೊಂದಕ್ಕೆ ಹೊಕ್ಕಿದ ಅತ್ಯಂತ ವಿಷಕಾರಿ ಹಾವು (Venomous Snake) ನುಗ್ಗಿದ್ದು, ಮಹಿಳೆಯ ಬೆಡ್‌ರೂಮ್ ಹಾಸಿಗೆಯಲ್ಲೇ ಮಲಗಿದ್ದ ದೃಶ್ಯ ಕಂಡುಬಂದಿದೆ. ಹಾವು ಸುಮಾರು 6 ಅಡಿ ಉದ್ಧ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ತನ್ನ ಹಾಸಿಗೆ ಮೇಲೆ ಮಲಗಿದ್ದ ಹಾವನ್ನು ಕಂಡೊಡನೆ ಮಹಿಳೆ ಎದ್ನೋ ಬಿದ್ನೋ ಅಂತಾ ಓಡಿಬಂದಿದ್ದಾಳೆ. ತಕ್ಷಣ ಬಾಗಿಲು ಹಾಕಿಕೊಂಡು ಹಾವು ಹೊರಕ್ಕೆ ಹೋಗದಂತೆ ತಡೆದಿದ್ದಾಳೆ. ಬಾಗಿಲು ಸಂದಿಯನ್ನು ಟವೆಲ್‌ನಿಂದ ಮುಚ್ಚಿದ್ದಾಳೆ. ನಂತರ ಸ್ಥಳೀಯ ಉರಗ ರಕ್ಷಕರೊಬ್ಬರಿಗೆ ಕರೆ ಮಾಡಿ ಬರಲು ಹೇಳಿದ್ದು, ಹಾವನ್ನು ರಕ್ಷಣೆ ಮಾಡಿದ ನಂತರ ಮಹಿಳೆ ತನ್ನ ರೂಮಿಗೆ ಪ್ರವೇಶ ಮಾಡಿದ್ದಾಳೆ.

    ಈ ಫೋಟೋವನ್ನು ಉರಗ ರಕ್ಷಕ ಜಾಲತಾಣದಲ್ಲೂ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು 

  • ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

    ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

    ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಅಡ್ಡ ಬಂದ ಹಾವನ್ನು(Snake) ತಪ್ಪಿಸಲು ಹೋಗಿ ಟ್ರಕ್‌ ಚಾಲಕನೊರ್ವ ಸಡನ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ(Serial Accident) ಸಂಭವಿಸಿರುವ ಘಟನೆ ಬೆಂಗಳೂರು‌ – ಹೈದರಾಬಾದ್(Bengaluru – Hyderabad) ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ನಡೆದಿದೆ.

    ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್(Continer) ಟ್ರಕ್ ಬರುತ್ತಿತ್ತು. ಅಗಲಗುರ್ಕಿ ಗ್ರಾಮದ ಬಳಿ ಹೆದ್ದಾರಿಯ ನಡುರಸ್ತೆಯಲ್ಲಿ ಹಾವೊಂದು ರಸ್ತೆ ದಾಟುತ್ತಿತ್ತು. ಇದನ್ನು ಗಮನಿಸಿದ ಚಾಲಕ ಸಡನ್ ಆಗಿ ಟ್ರಕ್‌ ಬ್ರೇಕ್ ಹಾಕಿದ್ದಾನೆ. ಇದನ್ನೂ ಓದಿ: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ!

    ಪರಿಣಾಮ ಹಿಂದೆ ಇದ್ದ ಕಂಟೈನರ್ ಟ್ರಕ್, ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ.

    ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆ ತಗುಲಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ಪಕ್ಕದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿದ್ದಾರೆ.

    ಗ್ಯಾಸ್ ವೆಲ್ಡರ್‌ನನ್ನು ಸ್ಥಳಕ್ಕೆ ಕರೆಸಿ ಟಿಪ್ಪರ್ ಡೋರ್ ಹಾಗೂ ಮುಂಭಾಗವನ್ನು ಕತ್ತರಿಸಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮತ್ತೊಂದೆಡೆ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿರುವ ಕಾರಣ ಪದೇ ಪದೇ ಅಪಘಾತಗಳು ಆಗುತ್ತಿವೆ. ಘಟನೆಗೆ ಸಂಚಾರಿ ಠಾಣೆ ಪೊಲೀಸರೇ ಕಾರಣ ಎಂದು ಸ್ಥಳಿಯರು ಪೊಲೀಸರ ವಿರುದ್ದ ತಿರುಗಿ ಬಿದ್ದ ಘಟನೆ ನಡೆಯಿತು.

    Live Tv
    [brid partner=56869869 player=32851 video=960834 autoplay=true]

  • ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    ಚೆನ್ನೈ: ರೈತನೊಬ್ಬ (Farmer) ಜ್ಯೋತಿಷಿಯೊಬ್ಬರ (Astrologer) ಸಲಹೆಯ ಮೇರೆಗೆ ಕೊಳಕು ಮಂಡಲ ಹಾವಿನಿಂದ (Snake) ನಾಲಿಗೆಯನ್ನು (Tongue) ಕಚ್ಚಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಈರೋಡ್‍ನಲ್ಲಿ ನಡೆದಿದೆ.

    ಕಾಪಿಚೆಟ್ಟಿ ಪಾಳ್ಯಂನ ನಿವಾಸಿ ರಾಜಾ (54) ಎಂಬಾತನಿಗೆ ಆಗಾಗ ಹಾವು ಕಚ್ಚುವ ಕನಸು ಬೀಳುತ್ತಿತ್ತು. ಇದರಿಂದಾಗಿ ರಾಜ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಜ್ಯೋತಿಷಿ ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಲು ತಿಳಿಸಿದ್ದಾರೆ. ಆ ಆಚರಣೆಗಳಲ್ಲಿ ಹಾವಿನ ಬಳಿ ನಾಲಿಗೆ ಚಾಚುವುದು ಒಂದಾಗಿತ್ತು. ಜ್ಯೋತಿಷಿಗಳ ಸಲಹೆಯ ಮೇರೆಗೆ ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಅದಾದ ಬಳಿಕ ರಾಜ ಕೊಳಕುಮಂಡಲದ ಮುಂದೆ ಮೂರು ಬಾರಿ ನಾಲಿಗೆಯನ್ನು ಚಾಚಿದ್ದಾನೆ. ಈ ವೇಳೆ ಆ ಹಾವು ರಾಜನ ನಾಲಿಗೆಯನ್ನು ಕಚ್ಚಿದೆ.

    ರಾಜನಿಗೆ ಹಾವು ಕಚ್ಚಿದ್ದನ್ನು ಕಂಡ ದೇವಸ್ಥಾನದ ಅರ್ಚಕರು ಕೂಡಲೇ ಆತನನ್ನು ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ರಾಜನ ನಾಲಿಗೆಯನ್ನು ತುಂಡರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ

    crime

    ಈ ಬಗ್ಗೆ ಮಣಿಯನ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ಮಾತನಾಡಿ, ವೈದ್ಯರು ರಾಜಾನ ನಾಲಿಗೆ ಕತ್ತರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ ಹಾವಿನ ವಿಷಕ್ಕೆ ಪ್ರತಿವಿಷವನ್ನೂ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ – ಮಹಾರಾಷ್ಟ್ರದ 42 ಗ್ರಾಮಗಳ ಒಕ್ಕೊರಲಿನ ಮನವಿ

    Live Tv
    [brid partner=56869869 player=32851 video=960834 autoplay=true]

  • ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಲಕ್ನೋ: ಮಾಲೀಕನನ್ನು ರಕ್ಷಿಸಲು ವಿಷಪೂರಿತ ಹಾವಿನೊಂದಿಗೆ ಸೆಣಸಾಡಿ ನಾಯಿಯೊಂದು ತನ್ನ ಪ್ರಾಣವನ್ನೇ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.

    ತನ್ನ ಯಜಮಾನನೊಂದಿಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಹಾವನ್ನು ಕಂಡ ನಾಯಿ ಆತನನ್ನು ರಕ್ಷಿಸುವ ಸಲುವಾಗಿ ಹಾವನ್ನು ಕೊಂದು ಹಾಕಿದೆ. ಆದರೆ ದುರದೃಷ್ಟವಶಾತ್, ಹಾವು ಕಚ್ಚಿದ ವಿಷದಿಂದ ನಾಯಿ ಸಾವನ್ನಪ್ಪಿದೆ. ಇದನ್ನೂ ಓದಿ: ಮದುವೆ ಮನೆಗೆ ಬಂದವರಂತೆ ಬಂದ ಅಧಿಕಾರಿಗಳು- ಕೈ ಮುಖಂಡೆ, ಅಳಿಯನ ಮನೆ ಮೇಲೆ ಐಟಿ ರೇಡ್

    ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅಮಿತ್ ರೈ ಅವರು ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಪ್ರತಾಪಪುರದಲ್ಲಿ ವಾಸವಾಗಿದ್ದರು. ಮೊದಲಿನಿಂದಲೂ ಶ್ವಾನ ಪ್ರಿಯರಾಗಿದ್ದ ಅಮಿತ್ ಸುಮಾರು ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ಎಂಬ ನಾಯಿಯನ್ನು ತಂದು ಅದಕ್ಕೆ ಗಬ್ಬರ್ ಎಂದು ಹೆಸರಿಟ್ಟಿದ್ದರು. ತಾವು ಸಾಕಿದ್ದ ಎಲ್ಲಾ ನಾಯಿಗಳಿಗಿಂತಲೂ ಕೊಂಚ ಹೆಚ್ಚು ಪ್ರೀತಿಯನ್ನು ಗಬ್ಬರ್ ಮೇಲೆ ಅಮಿತ್ ಹೊಂದಿದ್ದರು. ಅದೇ ರೀತಿ ಗಬ್ಬರ್ ಕೂಡ ಅಮಿತ್ ವಿಚಾರದಲ್ಲಿ ಬಹಳ ಪೊಸೆಸಿವ್ ಆಗಿತ್ತು. ಅಮಿತ್ ಗದರದೇ ಇದ್ದರೆ ಯಾರನ್ನೂ ಅವರ ಆತನ ಹತ್ತಿರಕ್ಕೆ ಬರಲು ಬಿಡದೇ ರಕ್ಷಣೆ ನೀಡುತ್ತಿತ್ತು.

    ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್‍ಹೌಸ್‍ಗೆ ಅಮಿತ್ ತನ್ನ ನಾಯಿಯೊಂದಿಗೆ ವಾಕಿಂಗ್‍ಗೆ ತೆರಳಿದ್ದರು. ಈ ವೇಳೆ ದೈತ್ಯ ವಿಷಕಾರಿ ಹಾವು (ರಸ್ಸೆಲ್ಸ್ ವೈಪರ್) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ ಆದರೆ ಹಾವನ್ನು ಅಮಿತ್ ನೋಡಿಲ್ಲ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ತನ್ನ ಯಜಮಾನನಿಗೆ ನಿಯತ್ತಾಗಿದ್ದ ಗಬ್ಬರ್ ಅಮಿತ್‍ನನ್ನು ರಕ್ಷಿಸಲು ತಕ್ಷಣವೇ ಹಾವಿನ ಮೇಲೆ ಎಗರಿಸಿದೆ. ಸುದೀರ್ಘ ಕಾಲ ನಡೆದ ಹಾವು ಮತ್ತು ನಾಯಿ ಕಾಳಗದಲ್ಲಿ ಕೊನೆಗೆ ಗಬ್ಬರ್ ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾವಿನ ವಿಷ ದೇಹದೊಳಗೆ ಹರಡಿದ್ದರಿಂದ ನಾಯಿ ಕೂಡ ಕೆಲ ನಿಮಿಷಗಳಲ್ಲೇ ಕೆಳಗೆ ಬಿದ್ದು ಸಾವನ್ನಪ್ಪಿದೆ.

    ಒಟ್ಟಾರೆ ಯಜಮಾನನಿಗಾಗಿ ನಾಯಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದು, ಗಬ್ಬರ್ ಅನನು ಕಳೆದುಕೊಂಡು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್‌ ಅಂದ ನೆಟ್ಟಿಗರು

    ಕಾಳಿಂಗ ಸರ್ಪಗೆ ಕಿಸ್ ಕೊಟ್ಟ ಭೂಪ – ವ್ಯಕ್ತಿ ಧೈರ್ಯಕ್ಕೆ ಶಹಬ್ಬಾಸ್‌ ಅಂದ ನೆಟ್ಟಿಗರು

    ಹಾವನ್ನು ಪ್ರೀತಿಸುವವರು ಮತ್ತು ಅವುಗಳನ್ನು ಸಾಕುವವರು ಕೆಲವರು ಮಾತ್ರ, ಉಳಿದಂತೆ ಎಲ್ಲರೂ ಭಯಭೀತರಾಗುತ್ತಾರೆ. ಎಷ್ಟೋ ಮಂದಿಗೆ ಹಾವನ್ನು ಟಿವಿ ಅಥವಾ ವೀಡಿಯೋಗಳಲ್ಲಿ ನೋಡುವುದಕ್ಕೆ ಭಯಪಡುತ್ತಾರೆ. ಒಂದು ಬಾರಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ ಇಲ್ಲೊಬ್ಬ ವ್ಯಕ್ತಿ ಕಾಳಿಂಗ ಸರ್ಪ ಹಣೆಗೆ ಚುಂಬಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Saurabh Jadhav Jadhav (@10_viper_21)

    ಈ ವೀಡಿಯೋವನ್ನು ಸೌರಭ್ ಜಾಧವ್ ಎಂಬವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಭಾರತೀಯ ವನ್ಯಜೀವಿ ಸಂರಕ್ಷಣಾವಾದಿ ಮತ್ತು ಉರಗ ತಜ್ಞ ವಾವಾ ಸುರೇಶ್ (Vava Suresh) ಕಾಳಿಂಗ ಸರ್ಪ (Cobra) ಹತ್ತಿರ ಹೋಗುತ್ತಾರೆ. ನಂತರ ಹಾವು ಗಾಬರಿಯಾಗದಂತೆ ನಿಧಾನವಾಗಿ ಅದರ ಹಣೆಗೆ ಚುಂಬಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮನೆಬಿಟ್ಟು ಬಂದಿದ್ದ ಯುವತಿಗೆ ಆಶ್ರಯ ನೀಡೋದಾಗಿ ಕರೆದೊಯ್ದು ಅತ್ಯಾಚಾರ!

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 16 ಸಾವಿರ ಮಂದಿ ವೀಕ್ಷಿಸಿದ್ದು, ವಾವಾ ಸುರೇಶ್ ಧೈರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ. ಇದನ್ನೂ ಓದಿ: ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ

    Live Tv
    [brid partner=56869869 player=32851 video=960834 autoplay=true]

  • ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿತ್ತು. ಇದನ್ನು ಪಬ್ಲಿಕ್ ಟಿವಿ ಡಿಜಿಟಲ್‌ನಲ್ಲಿ ವರದಿ ಮಾಡಲಾಗಿದ್ದು, ಈ ಬಗ್ಗೆ ಇಶಾ ಫೌಂಡೇಶನ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

    ತಾಲೂಕಿನ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿರುವ ಇಶಾ ಕೇಂದ್ರದಲ್ಲಿ ನಾಗಮಂಟಪ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸಾವಿರಾರು ಜನರ ಮುಂದೆಯೇ ಜಗ್ಗಿ ವಾಸುದೇವ್ ಅವರು ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ದರು. ಈ ಬಗ್ಗೆ ಜಗ್ಗಿ ವಾಸುದೇವ್ ವಿರುದ್ಧ ಎಸ್‌ಪಿಸಿಎ ಸದಸ್ಯ ಹಾಗೂ ಉರಗರಕ್ಷಕ ಪ್ರಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು.

    ಪಬ್ಲಿಕ್ ಟಿವಿ ವರದಿ ಹಿನ್ನೆಲೆ ಇಶಾ ಫೌಂಡೇಶನ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಟ್ವಿಟರ್ ಮೂಲಕ ಪಬ್ಲಿಕ್ ಟಿವಿ ಟ್ವಿಟರ್ ಖಾತೆಗೆ ಮಾಧ್ಯಮ ಪ್ರಕಟಣೆಯನ್ನು ಇಶಾ ಫೌಂಡೇಶನ್ ಟ್ಯಾಗ್ ಮಾಡಿದೆ. ಮಾಧ್ಯಮ ಪ್ರಕಟಣೆಯಲ್ಲಿ ಹಾವನ್ನು ಹಿಡಿದು ಪ್ರದರ್ಶನ ಮಾಡಿರುವ ಬಗೆಗಿನ ಅಸಲಿ ವಿಚಾರವನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಇದನ್ನೂ ಓದಿ: ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಟ್ವೀಟ್‌ನಲ್ಲೇನಿದೆ?
    ಹಾವಿಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ತಪ್ಪು ಮಾಹಿತಿಯಿಂದ ಕೂಡಿರುವ ದೂರಾಗಿದೆ. ನಾಗಮಂಟಪ ಪ್ರತಿಷ್ಠಾಪನೆ ವೇಳೆ ಸ್ವತಃ ಹಾವೇ ಇಶಾ ಯೋಗ ಕೇಂದ್ರದ ಸಮೀಪ ಆಗಮಿಸಿತ್ತು. ಹಾವಿನ ಹಾಗೂ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಸ್ವಯಂ ಸೇವಕರೊಬ್ಬರು ಹಾವು ಆಗಮಿಸಿರುವ ಬಗ್ಗೆ ಸದ್ಗುರುಗಳ ಗಮನಕ್ಕೆ ತಂದಿದ್ದರು. ದೂರಿನಲ್ಲಿ ಉಲ್ಲೇಖಿಸಿರುವಂತೆ ಹಾವಿಗೆ ಯಾವುದೇ ರೀತಿಯ ಹಾನಿ ಮಾಡಲಾಗಿಲ್ಲ. ಮೃದುವಾಗಿ ಹಾವು ಹಿಡಿದು ಕಾಡಿನೊಳಗೆ ಬಿಡಲಾಗಿದೆ ಎಂದು ಇಶಾ ಫೌಂಡೇಶನ್ ಸ್ಪಷ್ಟನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

    ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಸ್‌ಪಿಸಿಎ ಸಂಸ್ಥೆ ಸದಸ್ಯ ಹಾಗೂ ಉರಗರಕ್ಷಕ ಪೃಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (Forest Officer) ರಮೇಶ್ ಅವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಣರೋಚಕ T20 ವಿಶ್ವಕಪ್ ಆರಂಭ – ಟೀಂ ಇಂಡಿಯಾದತ್ತ ಎಲ್ಲರ ಚಿತ್ತ

    ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು `ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ’ (Wildlife Act) ಸ್ಪಷ್ಟ ಉಲ್ಲಂಘನೆ ಆಗುತ್ತದೆ.

    Live Tv
    [brid partner=56869869 player=32851 video=960834 autoplay=true]