Tag: ಹಾವು

  • ತನಗೆ ಕಚ್ಚಿದ ಹಾವನ್ನು ಎರಡು ತುಂಡು ಮಾಡಿ ಕೊನೆಗೆ ಪ್ರಾಣ ಬಿಟ್ಟ ರೈತ

    ತನಗೆ ಕಚ್ಚಿದ ಹಾವನ್ನು ಎರಡು ತುಂಡು ಮಾಡಿ ಕೊನೆಗೆ ಪ್ರಾಣ ಬಿಟ್ಟ ರೈತ

    ಮಂಡ್ಯ: ಹೊಲದಲ್ಲಿ ಹಾವು ಕಚ್ಚಿದ್ದರಿಂದ ರೊಚ್ಚಿಗೆದ್ದ ರೈತರೊಬ್ಬರು ಹಾವನ್ನು ಎರಡು ತುಂಡು ಮಾಡಿ ಮೃತಪಟ್ಟಿರುವ ಘಟನೆ ಮಂಡ್ಯದ ಯತ್ತಾಂಬಾಡಿಯಲ್ಲಿ ನಡೆದಿದೆ.

    ದೊಡ್ಡ ಚನ್ನೀಪುರ ಗ್ರಾಮದ ಮಾದೇಗೌಡರ ಮಗ ಪುಟ್ಟಮಾದು ಮೃತ ದುರ್ದೈವಿ. ಪುಟ್ಟಮಾದು ತನ್ನ ಅಕ್ಕನವರ ತೋಟದಿಂದ ರೇಷ್ಮೆ ಹುಳುವಿಗೆ ಹಿಪ್ಪುನೇರಳೆ ಸೊಪ್ಪು ಕೊಯ್ಯುತ್ತಿದ್ದಾಗ ವಿಷಪೂರಿತ ಕೊಳಕ ಮಂಡಲ ಹಾವು ಕಚ್ಚಿದೆ.

    ಕಚ್ಚಿದ್ದಕ್ಕೆ ಸಿಟ್ಟಾದ ಪುಟ್ಟಮಾದು ಸೊಪ್ಪ ಕೊಯ್ಯಲು ತಂದಿದ್ದ ಕತ್ತಿಯಲ್ಲಿ ಆ ಹಾವನ್ನು ಎರಡು ತುಂಡಾಗಿ ಕತ್ತರಿಸಿದ್ದಾರೆ. ಹಾವು ಕಚ್ಚಿದ ವಿಚಾರ ತಿಳಿದು ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

    ಮೃತ ಪುಟ್ಟಮಾದು ಅವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಗರ ಹಾವನ್ನೇ ನುಂಗಿದ ಕಪ್ಪೆರಾಯ

    ನಾಗರ ಹಾವನ್ನೇ ನುಂಗಿದ ಕಪ್ಪೆರಾಯ

    ಬೀದರ್: ಹಾವುಗಳು ಕಪ್ಪೆಗಳನ್ನು ನುಂಗೋದನ್ನು ಕೇಳಿರುತ್ತವೆ ಮತ್ತು ನೋಡಿರುತ್ತವೆ. ಆದ್ರೆ ಕಪ್ಪೆಯೊಂದು ಹಾವನ್ನೇ ನುಂಗಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಯನಗುಂದಾ ಗ್ರಾಮದ ಚರಂಡಿ ಬಳಿ ನಾಗರ ಹಾವು ಕಾಣಿಸಿಕೊಂಡಿತ್ತು. ಹಾವನ್ನು ಕಂಡ ಗ್ರಾಮಸ್ಥರು ಹಾವನ್ನು ನೋಡಲು ಹೋಗುತ್ತಿದ್ದಂತೆ ನಾಗರಾಜ ಚರಂಡಿಯೊಳಗೆ ನುಗ್ಗಿದ್ದಾನೆ. ಚರಂಡಿಯಲ್ಲಿ ಹೋಗುತ್ತಿದ್ದಂತೆ ಕಪ್ಪೆಯೊಂದು ಹಾವನ್ನು ನುಂಗಲು ಆರಂಭಿಸಿದೆ. ಹಾವನ್ನು ಕಪ್ಪೆ ನುಂಗುವದನ್ನು ನೋಡಿದ ಗ್ರಾಮಸ್ಥರು ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ.

    ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೇವೆ. ಆದ್ರೆ ಇದೇ ಮೊದಲ ಬಾರಿಗೆ ಕಪ್ಪೆಯೇ ಹಾವನ್ನು ನುಂಗಿದನ್ನು ನೋಡಿದ್ದೇವೆ ಎಂದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮೇ ತಿಂಗಳಿನಲ್ಲಿ ಚಿಕ್ಕಮಗಳೂರಿನ ಪ್ರದೀಪ್ ಎಂಬವರ ಮನೆಯೊಳಗಡೆ ಆರು ಅಡಿ ಉದ್ದದ ಹಾವು ಸೇರಿಕೊಂಡಿತ್ತು. ಹಾವು ದೊಡ್ಡ ಕಪ್ಪೆ ನುಂಗಿ ತೆವಳಲು ಆಗದೆ ವಾಷಿಂಗ್ ಮಷೀನ್ ಸೇರಿತ್ತು. ವಾಷಿಂಗ್ ಮಷೀನ್ ಬಳಿ ರಕ್ತ ನೋಡಿ ಮನೆಯವರು ಗಾಬರಿಗೊಂಡಿದ್ದರು. ಮೊದಲು ಹಾವನ್ನು ನೋಡಿ ನಾಗರಹಾವೆಂದು ಮನೆಯವರು ಹೆದರಿಕೊಂಡಿದ್ದರು. ವಾಷಿಂಗ್ ಮಷೀನ್ ಬಿಚ್ಚಿದ ಮೇಲೆ ಅದು ಕೆರೆ ಹಾವು ಎಂದು ತಿಳಿದಿತ್ತು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ನರೇಶ್ ಹಾವನ್ನು ರಕ್ಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/Amw3EVqleM0

  • ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಚಿಕ್ಕಮಗಳೂರು: ಮುಂಗುಸಿ ಹಾಗೂ ನಾಗರಹಾವಿನ ನಡುವೆ ಭಯಂಕರ ಕಾದಾಟ ನಡೆದ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.

    ಮುಂಗುಸಿ ಗದ್ದೆ ಬದಿಯಲ್ಲಿ ನಾಗರಹಾವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮುಂಗುಸಿಯಿಂದ ತಪ್ಪಿಸಿಕೊಳ್ಳಲು ನಾಗರಹಾವು ಕಾದಾಟ ನಡೆಸಿದೆ. ನಾಗರಹಾವು ಹಾಗೂ ಮುಂಗುಸಿ ನಡುವಿನ ಕಾಳಗ ಕಂಡು ರೈತರು ಗಾಬರಿಗೊಂಡಿದ್ದರು.

    ಗದ್ದೆಯಲ್ಲಿದ್ದ ಯುವಕರು ಮುಂಗುಸಿ ಹಾಗೂ ನಾಗರಹಾವಿನ ಕಾದಾಟದ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಇತ್ತೀಚೆಗೆ ಮೈಸೂರಿನ ನಾಗರಹೊಳೆ ಅರಣ್ಯದಲ್ಲಿ ಹೆಬ್ಬಾವನ್ನು ನೋಡಿ ಹುಲಿ ಹೆದರಿಕೊಂಡ ಅಪರೂಪದ ದೃಶ್ಯವೊಂದು ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯದಲ್ಲಿ ಹುಲಿಗೆ ಹೆಬ್ಬಾವು ಎದುರಾಗಿದೆ. ಈ ವೇಳೆ ಹೆಬ್ಬಾವನ್ನು ಕಂಡು ಹುಲಿ ಹೆದರಿಕೊಂಡಿತ್ತು. ಪ್ರವಾಸಿಗರು ಹೆಬ್ಬಾವು ಮತ್ತು ಹುಲಿಯನ್ನು ಒಟ್ಟಿಗೆ ನೋಡಿದ್ದು, ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ಕಂಡರೆ ಅದನ್ನು ತಿನ್ನುತ್ತದೆ. ಆದರೆ ಇಲ್ಲಿ ಹುಲಿ ಹೆಬ್ಬಾವನ್ನು ಕಂಡು ಹೆದರುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವು ಕಚ್ಚಿ ಸಾವನ್ನಪ್ಪಿದ ಬಾಲಕ-ಇತ್ತ ಉಡುಪಿಯಲ್ಲಿ ನೀರುಪಾಲದ ಮೀನುಗಾರ

    ಹಾವು ಕಚ್ಚಿ ಸಾವನ್ನಪ್ಪಿದ ಬಾಲಕ-ಇತ್ತ ಉಡುಪಿಯಲ್ಲಿ ನೀರುಪಾಲದ ಮೀನುಗಾರ

    ಯಾದಗಿರಿ/ಉಡುಪಿ: ಹಾವು ಕಚ್ಚಿ ಬಾಲಕ ಸಾವನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಪ್ರಭು ಮೃತ ದುರ್ದೈವಿ. ರಾತ್ರಿ ಮನೆ ಹೊರಗಡೆ ಮಲಗಿದ್ದ ಬಾಲಕ ಪ್ರಭುಗೆ ಹಾವು ಕಚ್ಚಿದೆ.

    ಹಾವು ಕಚ್ಚಿದ ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಭು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೀನು ಹಿಡಿಯುವ ವೇಳೆ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯ ಕನ್ನಡಕುದ್ರು ಬ್ರಿಡ್ಜ್ ಬಳಿ ನಡೆದಿದೆ. 23 ವರ್ಷದ ಮಹಮದ್ ನಬಿ ಮೃತ ವ್ಯಕ್ತಿ ಅಂತ ಗುರುತಿಸಲಾಗಿದೆ. ಕನ್ನಡ ಕುದ್ರು ಸೇತುವೆಯ ಬಳಿ ಗಾಳ ಹಾಕಿ ಮೀನು ಹಿಡಿಯುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಕುಂದಾಪುರ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಶವ ಮೇಲಕ್ಕೆತ್ತಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಮಳೆ ಬಳಿಕ ಹಾವು ಕಾಟ- ಮನೆಯಲ್ಲೇ ಮೊಸಳೆ ಪತ್ತೆ!

    ಮಹಾಮಳೆ ಬಳಿಕ ಹಾವು ಕಾಟ- ಮನೆಯಲ್ಲೇ ಮೊಸಳೆ ಪತ್ತೆ!

    ತಿರುವನಂತಪುರಂ: ಮಹಾಮಳೆಗೆ ದೇವರನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಜೀವ ಉಳಿದರೆ ಸಾಕು ಎಂದು ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಬಂದಿದ್ದರು. ಈಗ ಪ್ರವಾಹ ನಿಂತಿದ್ದು, ಮತ್ತೆ ಮನೆ ಸೇರಲು ಜನರು ಮುಂದಾಗುತ್ತಿದ್ದಾರೆ. ಆದರೆ ಅವರಿಗೆ ಈಗ ಹಾವು ಹಾಗೂ ಮೊಸಳೆ ಕಾಣಿಸಿ ಭಯದ ವಾತಾವರಣ ಸೃಷ್ಟಿಸಿವೆ.

    ತ್ರಿಶೂರ್ ಜಿಲ್ಲೆಯ ಚಾಲಕುಡಿಯ ವ್ಯಕ್ತಿಯೊಬ್ಬರು ಸೋಮವಾರ ರಾತ್ರಿ ತಮ್ಮ ಮನೆಗೆ ಹೋಗಿದ್ದರು. ಒಳಗೆ ಹೋಗುತ್ತಿದ್ದಂತೆ ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲಿಂದ ತಕ್ಷಣವೇ ಹೊರಗೆ ಬಂದು ನೆರೆಹೊರೆಯವರ ಸಹಾಯ ಪಡೆದು ಹಗ್ಗ ಹಾಕಿ ಮೊಸಳೆಯನ್ನು ಕಟ್ಟಿಹಾಕಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಲ್ಲಪ್ಪುರಂನ ಮುಸ್ತಾಫ್ ಎಂಬವರು ಹಾವು ಹಿಡಿಯುವುದಲ್ಲಿ ನಿರತರಾಗಿದ್ದು, ಈಗಾಗಲೇ ಎರಡು ದಿನದಲ್ಲಿ 100 ಹಾವುಗಳನ್ನು ಹಿಡಿದಿದ್ದಾರೆ. ಇತ್ತ ಎರ್ನಾಕುಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಹಾವು ಕಚ್ಚಿದ್ದ 52 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯನ್ನು ಸ್ವಚ್ಛಗೊಳಿಸಲು ಬಂದಿದ್ದ ಅನೇಕರು ಹಾವು ಕಾಣುತ್ತಿದ್ದಂತೆ ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ.

    ತ್ರಿಶೂರ್ ಜಿಲ್ಲೆಯು ಹೆಚ್ಚು ಹಾನಿಗೆ ಒಳಗಾದ ಜಿಲ್ಲೆಯಾಗಿದ್ದು, ರಾಜ್ಯದಲ್ಲಿ 370 ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅಗತ್ಯ ಔಷಧಿ ಹಾಗೂ ಕ್ರಿಮಿನಾಶಕ ಕಳುಹಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಕಾರವಾರ: ಅಂಗಡಿಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದೊಳಗೆ ಹಾವೊಂದು ಗಂಟೆಗಟ್ಟಲೆ ಅವಿತು ಕುಳಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

    ಶಿರಸಿಯ ಸಿ.ಪಿ. ಬಜಾರ್ ರಸ್ತೆಯ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಆಭರಣ ಹಾವು ಅವಿತು ಕುಳಿತ್ತಿತ್ತು. ಇದನ್ನು ನೋಡಿದ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದ ಜನರು ಅದನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾರೊಬ್ಬರ ಹೆದರಿಕೆಗೂ ಬಗ್ಗದ ಹಾವು ಸ್ಕೂಟಿಯೊಳಗೆ ಸೇರಿ ಬೆಚ್ಚಗೆ ಕುಳಿತಿತ್ತು.

    ತಕ್ಷಣವೇ ವ್ಯಕ್ತಿಯೊಬ್ಬರು ಉರಗತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಪ್ರಶಾಂತ್ ಸ್ಥಳಕ್ಕೆ ಆಗಮಿಸಿ, ಆಭರಣ ಹಾವನ್ನು ದ್ವಿಚಕ್ರ ವಾಹನದಿಂದ ಹೊರಗೆ ತೆಗೆದು, ರಕ್ಷಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.

  • ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

    ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

    ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಕಾರಿನಲ್ಲೇ ಪ್ರಯಾಣಿಸಿದ್ದ ಹಾವನ್ನು ಉರಗ ತಜ್ಞರಾದ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಶಿಕಾರಿಪುರ ತಾಲೂಕಿನ ಬಿದರಕೊಪ್ಪದ ಶಿವಕುಮಾರ್ ನಾಯ್ಕ ಎಂಬವರು ತಮ್ಮ ತೋಟದಿಂದ ಬಾಳೆಗೊನೆ ಹಾಕಿಕೊಂಡು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಶಿವಮೊಗ್ಗಕ್ಕೆ ತಲುಪುತ್ತಿದ್ದಂತೆ ಕಾರಿನಲ್ಲಿ ಹಾವು ಅವಿತುಗೊಂಡಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಉರಗ ತಜ್ಞರಿಗೆ ವಿಷಯ ಮುಟ್ಟಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕಿರಣ್ ಎಂಬವರು, ಮೆಕ್ಯಾನಿಕ್ ಸಹಾಯದಿಂದ ಕಾರಿನ ಡ್ಯಾಶ್ ಬೋರ್ಡ್ ಹಾಗೂ ಸೀಟನ್ನು ತೆಗೆದು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವನ್ನು ಹತ್ತಿರದ ಕಾಡಿನಲ್ಲಿ ಬಿಟ್ಟಿದ್ದು, ಕಾಡಿನಲ್ಲಿ ಕಂಡು ಬರುವ ಕ್ಯಾಟ್ ಸ್ನೇಕ್ ಇದಾಗಿದೆ ಎಂದು ಕಿರಣ್ ತಿಳಿಸಿದ್ದಾರೆ.

  • ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ 5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷ!

    ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ 5 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷ!

    ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್ ನ ಮನೆಯೊಂದರ ಬೋರ್ ವೆಲ್ ಮೋಟಾರ್ ಬಾಕ್ಸ್ ನಲ್ಲಿ ಐದು ಅಡಿ ಉದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ.

    ನಂದೀಶ್ ಮನೆಯಲ್ಲಿ ಹಾವು ಪತ್ತೆಯಾಗಿದೆ. ಮೋಟಾರ್ ಬಾಕ್ಸ್ ನಲ್ಲಿ ಹಾವು ಬುಸುಗುಟ್ಟಿದ ಶಬ್ಧ ಮನೆಯವರಿಗೆ ಕೇಳಿಸಿದೆ. ಬೋರ್ ವೆಲ್ ಮೋಟಾರ್ ಗೆ ಮುಚ್ಚಿದ ಕಲ್ಲು ಎತ್ತಿದಾಗ ಹಾವು ಪ್ರತ್ಯಕ್ಷವಾಗಿದೆ. ನಾಗರಹಾವು ನೋಡಿ ಮನೆಯವರು ಭಯಗೊಂಡು ಹೊರಬಂದಿದ್ದಾರೆ.

    ಕೂಡಲೇ ಮನೆ ಮಾಲೀಕ ಸ್ನೇಕ್ ನರೇಶ್ ಅವರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ನೇಕ್ ನರೇಶ್ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

  • ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ನಾಗರಹಾವು

    ಚಿಕ್ಕಮಗಳೂರು: ಮನೆಯ ಕಾಂಪೌಂಡ್ ಒಳಗೆ ತೊಳೆಯಲು ಇಟ್ಟಿದ್ದ ಪಾತ್ರೆಯೊಳಗೆ ಅವಿತು ಕೂತಿದ್ದ ಗೋಧಿ ಬಣ್ಣದ ನಾಗರಹಾವನ್ನು ಉರಗತಜ್ಞ ಸೆರೆ ಹಿಡಿದು ರಕ್ಷಿಸಿದ್ದಾರೆ.

    ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೆಎಸ್‍ಆರ್ ಟಿಸಿ ಬಸ್ ಸ್ಟ್ಯಾಂಡ್ ಹಿಂಭಾಗದ ಕುವೆಂಪು ನಗರದ ದೇವಣ್ಣ ಮಾಸ್ಟರ್ ಎಂಬವರ ಮನೆಯಲ್ಲಿ ಈ ಗೋಧಿ ನಾಗರ ಸೆರೆಯಾಗಿದ್ದಾನೆ. ಮನೆಯವರು ಹೊರಗಿದ್ದ ಪಾತ್ರೆಯನ್ನ ತೊಳೆಯಲು ಬಂದಾಗ ಹಾವನ್ನ ನೋಡಿ ಗಾಬರಿಯಾಗಿದ್ದಾರೆ. ಕೂಡಲೇ ಉರಗ ತಜ್ಞ ಆರೀಫ್‍ಗೆ ಕರೆ ಮಾಡಿದ್ದಾರೆ.

    ಸ್ಥಳಕ್ಕೆ ಬಂದ ಆರೀಫ್, ಹಾವು ಚಿಕ್ಕದ್ದಾಗಿರೋದ್ರಿಂದ ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಹೋಗ್ತಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಹರಸಾಹಸಪಟ್ಟು ಹಾವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಹಾವನ್ನ ಮನೆಯ ಮುಂಭಾಗವೇ ಸ್ವಲ್ಪ ಹೊತ್ತು ಆಡಿಸಿ ನಂತರ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

  • ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ಬೀಜಿಂಗ್: ವೈನ್ ತಯಾರಿಸಲು ಆನ್‍ಲೈನ್‍ನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ.

    21 ವರ್ಷದ ಮಹಿಳೆ ಆ ಹಾವನ್ನು ಇ-ಕಾಮರ್ಸ್ ಕಂಪನಿಯ ಜುಹಾನ್ ಜುಹಾನ್‍ನಿಂದ ಖರೀದಿಸಿದ್ದಳು. ಹಾವಿನ ವಿಷದಿಂದ ಮಹಿಳೆ ವೈನ್ ಮಾಡಲು ನಿರ್ಧರಿಸಿದ್ದಳು. ಹಾಗಾಗಿ ಆನ್‍ಲೈನ್‍ನಲ್ಲಿ ಹಾವನ್ನು ಆರ್ಡರ್ ಮಾಡಿದ್ದಳು. ಬಳಿಕ ಕೊರಿಯರ್ ಮೂಲಕ ಮಹಿಳೆಯ ಮನೆ ಬಾಗಿಲಿಗೆ ಹಾವು ಬಂದಿದೆ. ಈ ಬಾಕ್ಸ್ ನಲ್ಲಿ ವಿಷಪೂರಿತ ಹಾವು ಇರುವ ಬಗ್ಗೆ ಕೊರಿಯರ್ ನವರಿಗೂ ಗೊತ್ತಿರಲಿಲ್ಲ.

    ಹಾವಿನ ವಿಷದಿಂದ ವೈನ್ ಮಾಡುವ ಆಸೆ ಹೊಂದಿದ್ದ ಮಹಿಳೆಗೆ ವಿಷಕಾರಿ ಹಾವು ಕಚ್ಚಿದೆ. ಬಳಿಕ ಆ ಹಾವು ಮಹಿಳೆಯ ಮನೆಯ ಹತ್ತಿರ ಪತ್ತೆಯಾಗಿದೆ. ಕಚ್ಚಿದ ಬಳಿಕ ಹಾವು ಅದು ಕಾಡಿನತ್ತ ಹೋಗಿದೆ ಎಂದು ವರದಿಯಾಗಿದೆ.

    ನನ್ನ ಮಗಳು ಪಾರಂಪರಿಕವಾಗಿ ಔಷಧಿಯ ವೈನ್ ತಯಾರಿಸಲು ನಿರ್ಧರಿಸಿದ್ದಳು. ಈ ಔಷಧಿಯನ್ನು ಸ್ನೇಕ್ ವೈನ್ ಎಂದು ಕರೆಯುತ್ತಾರೆ. ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯ ಇರುವ ಕಾರಣ ಸ್ನೇಕ್ ವೈನ್ ತಯಾರಿಸಲು ಮುಂದಾಗಿದ್ದಳು ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ.