Tag: ಹಾವು

  • ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಯಡಿಯೂರು ಗ್ರಾಮದ ಮನೆಯಲ್ಲಿ ಎರಡು ವಿಷಕಾರಿ ಹಾವುಗಳು ಪತ್ತೆಯಾಗಿವೆ.

    ಯಡಿಯೂರು ಗ್ರಾಮದ ಇಂದ್ರಕುಮಾರ್ ಎಂಬವರ ಮನೆಯಲ್ಲಿ ತಡರಾತ್ರಿ ಎರಡು ಜಾತಿಯ ವಿಷಪೂರಿತ ಹಾವುಗಳು ಕಾಣಿಸಿಕೊಂಡಿವೆ. ಒಂದು ನಾಗರಹಾವಿಗಿದ್ದರೆ, ಇನ್ನೊಂದು ಕೊಳಕುಮಂಡಲದ ಹಾವು. ತಡರಾತ್ರಿ ಹಾವುಗಳು ಪರಸ್ಪರ ಬುಸುಗುಡುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಅದೃಷ್ಟವಶಾತ್ ಹಾವುಗಳಿಂದ ಯಾರಿಗೂ ಯಾವುದೇ ಅಪಾಯ ಆಗಿಲ್ಲ.

    ಕೂಡಲೇ ಉರಗತಜ್ಞ ಬಾಬು ಎಂಬವರಿಗೆ ಮನೆಯಲ್ಲಿ ಬೇರೆ ಬೇರೆ ಜಾತಿಯ ಹಾವುಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಬು ಎರಡು ಹಾವುಗಳನ್ನು ಜಾಗರೂಕತೆಯಿಂದ ರಕ್ಷಿಸಿದ್ದಾರೆ. ಬಳಿಕ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

    ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಕಬ್ಬು ಅನ್‍ಲೋಡ್ ಮಾಡುತ್ತಿದ್ದಾಗ ಹಾವು ಕಚ್ಚಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

    ಬೊಮ್ಮಯ್ಯ (48) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಬೊಮ್ಮಯ್ಯ ಕೂಲಿಗೆಂದು ಎತ್ತಿನ ಗಾಡಿಯಲ್ಲಿ ಬೇರೆ ರೈತರ ಕಬ್ಬನ್ನು ಮೈಷುಗರ್ ಕಾರ್ಖಾನೆಗೆ ತಂದಿದ್ದರು. ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಕ್ರೇನ್ ಸಹಾಯದಿಂದ ಕಬ್ಬನ್ನು ಕಾರ್ಖಾನೆಗೆ ಅನ್‍ಲೋಡ್ ಮಾಡುತ್ತಿದ್ದ ವೇಳೆ ಮಂಡಲದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

    ಒಂದು ಕಡೆ ಕಾರ್ಖಾನೆಗೆ ಕಬ್ಬು ಪೂರೈಸಿದರೂ ಸಕಾಲಕ್ಕೆ ಹಣ ಸಿಗದೇ ರೈತರು ಪರಡಾಡುತ್ತಿದ್ದಾರೆ. ಮತ್ತೊಂದು ಕಡೆ ಸಕ್ಕರೆ ಕಾರ್ಖಾನೆಯಲ್ಲಿ ರಾತ್ರಿಯೆಲ್ಲಾ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾವಿನಂತ ವಿಷ ಜಂತುವಿಗೆ ಬಲಿಯಾಗುತ್ತಿದ್ದಾರೆ. ಮೃತ ಕಾರ್ಮಿಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸಕ್ಕರೆ ಕಾರ್ಖಾನೆಯಿಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾವಿನ ಬಲೆಯಲ್ಲಿ ಸಿಲುಕಿದ್ದ ನಾಗಪ್ಪನ ರಕ್ಷಣೆ-ಇತ್ತ ಸಂಪ್ ನಲ್ಲಿ ಬಿದ್ದ ನಾಗ ಹೊರ ಬಂದ

    ಸಾವಿನ ಬಲೆಯಲ್ಲಿ ಸಿಲುಕಿದ್ದ ನಾಗಪ್ಪನ ರಕ್ಷಣೆ-ಇತ್ತ ಸಂಪ್ ನಲ್ಲಿ ಬಿದ್ದ ನಾಗ ಹೊರ ಬಂದ

    -ಇಬ್ಬರದ್ದೂ ಬರೋಬ್ಬರಿ ಒಂದು ವಾರಗಳ ಹೋರಾಟ

    ಬೆಂಗಳೂರು: ಸಾವಿನ ಬಲೆಯಲ್ಲಿ ಸಿಲುಕಿದ್ದ ನಾಗಪ್ಪ ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದ್ದು ಬರೋಬ್ಬರಿ ಒಂದುವಾರ. ಇನ್ನೇನು ಸಾವಿನ ಸೆಣಸಾಟದ ಅಂತಿಮ ಘಟ್ಟ ತಲುಪಿತ್ತು. ಒಂದು ಕಣ್ಣು ಕಳೆದುಕೊಂಡಿತ್ತು. ಇನ್ನೊಂದಡೆ ತೆರೆದ ದೊಡ್ಡ ಸಂಪ್‍ನಲ್ಲಿ ಬಿದ್ದು ಹೊರಬರಲಾರದೇ ನಾಗರಹಾವಿನ ಒದ್ದಾಟ ಎಂತವರ ಕಣ್ಣಲ್ಲೂ ನೀರು ತರಿಸುತ್ತಿತ್ತು. ಈ ಎರಡು ಹಾವನ್ನು ಸಾವಿನಿಂದ ತಪ್ಪಿಸಲು ‘ಅಪರೇಷನ್ ನಾಗಪ್ಪ’ ನಡೆದ ರೋಚಕ ಸ್ಟೋರಿ ಇಲ್ಲಿದೆ.

    ಹೆಬ್ಬಾಳದಲ್ಲಿ ಬಲೆಯೊಳಗೆ ಸಿಲುಕಿದ ಹಾವು ಸಾವಿನಿಂದ ತಪ್ಪಿಸಿಕೊಳ್ಳಲು ಸೆಣಸಾಡಿದ್ದು ಬರೋಬ್ಬರಿ ಒಂದು ವಾರ. ಜೀವ ಉಳಿಸಲು ಒದ್ದಾಡುತ್ತ ಒಂದು ಕಣ್ಣನ್ನು ಕಳೆದುಕೊಂಡಿತ್ತು. ಇನ್ನೇನು ಜೀವದಲ್ಲಿ ಚೈತನ್ಯವೇ ಇಲ್ಲ ಸಾವೇ ಅಂತಿಮ ಅಂತಾ ಸಾವಿನ ವಿರುದ್ಧದ ಹೋರಾಟವನ್ನು ನಿಲ್ಲಿಸಿ, ಬಲೆಯೊಳಗೆ ಜೀವಂತ ಶವವಾಗಿ ಮಲಗಿತ್ತು. ಅಷ್ಟರಲ್ಲಿ ಈ ಹಾವಿನ ಒದ್ದಾಟ ಯಾರೋ ಪುಣ್ಯಾತ್ಮರ ಕಣ್ಣಿಗೆ ಬಿದ್ದಿದೆ.

    ಬಾಣಸವಾಡಿಯಲ್ಲಿ ತೆರೆದ ದೊಡ್ಡ ಸಂಪ್‍ನಲ್ಲಿ ಬಿದ್ದ ಹಾವು ಹೊರಗೆ ಬರಲಾಗದೇ ಒದ್ದಾಡ್ತಿತ್ತು. ಬಿದ್ದ ರಭಸಕ್ಕೆ ಅತ್ತಿತ್ತ ಚಲಿಸಲು ಸಾಧ್ಯವಾಗದೇ ಪ್ರಾಣ ಉಳಿಸಿಕೊಳ್ಳಲು ಆಗದೇ ನಿಸ್ಸಾಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಈ ಹಾವು ಸಹ ಬರೋಬ್ಬರಿ ಒಂದು ವಾರ ಕಾಲ ಬದುಕಿಗಾಗಿ ಹೋರಾಟ ಮಾಡಿದೆ.

    ಈ ಎರಡು ಹಾವುಗಳನ್ನು ಸಾವಿನ ದವಡೆಯಿಂದ ರಕ್ಷಿಸಿದ್ದು ಉರಗ ತಜ್ಞ ರಾಜೇಶ್. ಅದರಲ್ಲೂ ಬಲೆಯೊಳಗೆ ಬಿದ್ದ ನಾಗಪ್ಪನ ರಕ್ಷಿಸಿದ್ದೇ ಒಂದು ರೋಚಕ ಕಥೆ. ಯಾಕೆಂದ್ರೆ ಸ್ವಲ್ಪ ಯಾಮಾರಿದ್ರೂ ಹಾವು ಕಚ್ಚುವ, ಬಲೆಯನ್ನು ಬಿಡಿಸುವಾಗ ಹಾವಿಗೆ ಏಟಾಗುವ ಸಾಧ್ಯತೆ ಇತ್ತು. ಕೊನೆಗೆ ಹಾವಿನ ಮುಖವನ್ನು ಬಲೆಯಿಂದ ಬಿಡಿಸಿ, ಅದನ್ನು ಕೊಳವೆಯಿಂದ ಮುಚ್ಚಿ ನಿಧಾನವಾಗಿ ಮೈಮೇಲೆ ಅಂಟಿದ್ದ ಬಲೆಯನ್ನು ಬ್ಲೇಡ್‍ನಿಂದ ಕಟ್ ಮಾಡಿದರು. ಬಲೆ ಬಿಡಿಸಿದ ತಕ್ಷಣ ನಾಗಪ್ಪ ಎದ್ನೋ ಬಿದ್ನೋ ಅಂತಾ ಓಡಿಹೋಯ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಗ್ಳೂರಿನಲ್ಲಿ ಬುಲೆಟ್ ಏರಿದ ನಾಗರಾಜ..!

    ಮಂಗ್ಳೂರಿನಲ್ಲಿ ಬುಲೆಟ್ ಏರಿದ ನಾಗರಾಜ..!

    ಮಂಗಳೂರು: ವ್ಯಕ್ತಿಯೊಬ್ಬ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ದಿಢೀರ್ ಆಗಿ ನಾಗರಹಾವು ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳೂರಿನ ಮರಕಡ ಎಂಬಲ್ಲಿ ಈ ಘಟನೆ ನಡೆದಿದೆ. ಮರಕಡ ನಿವಾಸಿ ಬದ್ರುದ್ದೀನ್ ಎಂಬವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹೆಡೆ ಎತ್ತುತ್ತಾ ಹಾವು ದಿಢೀರ್ ಆಗಿ ಬುಲೆಟ್ ನ ಮೀಟರ್ ಗೇಜ್ ಪಕ್ಕದಿಂದಲೇ ಹೊರಬಂದಿದೆ.

    ತಕ್ಷಣ ವಿಚಲಿತರಾದ ಬದ್ರುದ್ದೀನ್ ರಸ್ತೆ ಬದಿಯ ಪೆಟ್ರೋಲ್ ಪಂಪ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಹಾವು ನಾಗರಾಜನ ಮರಿಯಾಗಿದ್ದು, ಆಶ್ಚರ್ಯದಿಂದಲೇ ಜನ ನೋಡಲು ಮುಗಿಬಿದ್ದಿದ್ದಾರೆ. ನಂತರ ಉರಗ ಪ್ರೇಮಿ ಗಂಗೇಶ್ ಬೋಳಾರ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಉರಗ ಪ್ರೇಮಿ ಗಂಗೇಶ್ ಬೋಳಾರ್ ಬುಲೆಟ್ ಎಡೆಯಲ್ಲಿದ್ದ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಮನೆಯಲ್ಲಿ ಬೈಕ್ ಸ್ಟ್ಯಾಂಡ್ ಮಾಡಿದ್ದ ವೇಳೆ ನಾಗರಹಾವು ಬುಲೆಟ್ ಹತ್ತಿರಬಹುದು ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೊಟ್ಟೆಯಿಂದ ಹೊರಬಂದ ಅಪರೂಪದ ಆಭರಣ ಹಾವಿನ ಮರಿಗಳು

    ಮೊಟ್ಟೆಯಿಂದ ಹೊರಬಂದ ಅಪರೂಪದ ಆಭರಣ ಹಾವಿನ ಮರಿಗಳು

    ನೆಲಮಂಗಲ: ಅಪರೂಪದ ಆಭರಣ ಜಾತಿಗೆ ಸೇರಿದ ಒಂಬತ್ತು ನವಜಾತ ಹಾವಿನ ಮರಿಗಳು ಜನಿಸಿದ ಅಪರೂಪದ ದೃಶ್ಯ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕಂಡು ಬಂದಿದೆ.

    ತಾಲೂಕಿನ ಕೆಂಪಲಿಂಗನಹಳ್ಳಿ ಬಳಿ ಈ ರಕ್ಷಣಾ ಕಾರ್ಯಚರಣೆ ನಡೆದಿದೆ. ಕೆಂಪಲಿಂಗನಹಳ್ಳಿ ಗ್ರಾಮದ ರಾಜಣ್ಣ ಎಂಬವರ ಮನೆಯಲ್ಲಿ ಹಾವು ಕಂಡು ಬಂದಿದೆ. ಬಳಿಕ ಅವರು ನೆಲಮಂಗಲದ ಉರಗ ತಜ್ಞ ಸ್ನೇಕ್ ಲೊಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಜ್ಞ ಸ್ನೇಕ್ ಲೊಕೇಶ್ ಅವರು ಅಪರೂಪದ ಪ್ರಭೇಧದ ಹಾವನ್ನು ರಕ್ಷಿಸಿದ್ದಾರೆ. ಈ ಆಭರಣದ ಹಾವು ಸಂಜೆ ವೇಳೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಾವು ಒಂಭತ್ತರಿಂದ ಹದಿಮೂರು ಹಾವಿನ ಮರಿಗಳನ್ನು ಮಾತ್ರ ಮರಿಹಾಕುತ್ತದೆ. ಈ ಹಾವನ್ನು ರಕ್ಷಿಸುವ ಕಾರ್ಯ ನಮ್ಮ ಮೇಲಿದೆ ಎಂದು ಸ್ನೇಕ್ ಲೋಕೇಶ್ ಜನತೆಗೆ ಕಿವಿಮಾತು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕುಡಿದ ಮತ್ತಿನಲ್ಲಿ ಹಾವಿನೊಂದಿಗೆ ಮಹಿಳೆ ಹುಚ್ಚಾಟ..!

    ಕುಡಿದ ಮತ್ತಿನಲ್ಲಿ ಹಾವಿನೊಂದಿಗೆ ಮಹಿಳೆ ಹುಚ್ಚಾಟ..!

    ತುಮಕೂರು: ಚಿಂದಿ ಆಯುವ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ಹಾವಿನೊಂದಿಗೆ ಹುಚ್ಚಾಟವಾಡಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದಲ್ಲಿ ನಡೆದಿದೆ.

    ಪಾಡುರಂಗಪ್ಪ ಎಂಬವರ ಮನೆಗೆ ಕೆರೆಹಾವು ನುಗ್ಗಿತ್ತು. ಈ ವೇಳೆ ಅಲ್ಲಿಗೆ ಮದ್ಯದ ಮತ್ತಿನಲ್ಲಿ ಬಂದ ಸುಶೀಲಮ್ಮ ಹಾವು ಹಿಡಿದಿದ್ದಾರೆ. ಅಲ್ಲದೇ ಅದನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಮಹಿಳೆಯ ಹುಚ್ಚಾಟದಿಂದ ಭಯಗೊಂಡ ಸ್ಥಳೀಯರು ಹಾವನನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ ನೆರೆದವರ ಮಾತನ್ನು ಲೆಕ್ಕಿಸದೇ ಸುಶೀಲಮ್ಮ ಹಾವನ್ನು ಹಿಡಿದುಕೊಂಡು ಆಟವಾಡುತ್ತಿದ್ದರು.

    ಹುಚ್ಚಾಟ ಮುಂದುವರಿಸಿದ ಮಹಿಳೆಯಿಂದ ಸಿಟ್ಟುಗೊಂಡ ಸ್ಥಳೀಯರೊಬ್ಬರು ಹಾವನ್ನು ಹಿಡಿದುಕೊಂಡು ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ನಾನು ಹಾವನ್ನು ತಿನ್ನಲ್ಲ. ಎಲ್ಲಾದರೂ ಬಿಟ್ಟುಬಿಡಿ ಅಂದ್ರೆ ಬಿಟ್ಟುಬಿಡುತ್ತೇನೆ. ಸುಟ್ಟುಹಾಕು ಅಂದ್ರೆ ಸುಟ್ಟು ಹಾಕುತ್ತೇನೆ. ಕೊಂದು ಬಿಡು ಅಂದ್ರೆ ಕೊಲ್ಲುತ್ತೇನೆ. ಮನೆಯಲ್ಲಿ ಹಾವು ಇದೆ ಅಂತಾ ಕರೆದರೆ ಮಾತ್ರ ಬಂದು ಹಿಡಿಯುತ್ತೇವೆ. ಬಯಲಲ್ಲಿ ಇರುವ ಹಾವುಗಳನ್ನು ಹಿಡಿಯಲ್ಲ ಎಂದು ಕುಡಿದ ಮತ್ತಿನಲ್ಲಿ ಹೇಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಳ್ತಂಗಡಿಯಲ್ಲಿ ಅಪರೂಪದ ಹಾವು ಪತ್ತೆ

    ಬೆಳ್ತಂಗಡಿಯಲ್ಲಿ ಅಪರೂಪದ ಹಾವು ಪತ್ತೆ

    ಮಂಗಳೂರು: ಝೀಬ್ರಾದ ರೀತಿಯ ಬಣ್ಣವನ್ನು ಹೋಲುವ ಅಪರೂಪದ ಹಾವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ.

    ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿನ ಓಡಿಯಪ್ಪ ಎಂಬವರ ಮನೆ ಹಿತ್ತಿಲಿಗೆ ಆಗಮಿಸಿದ ಈ ಹಾವನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಮೈ ಪೂರ್ತಿ ಝೀಬ್ರಾದಂತೆ ಕಪ್ಪು ಮತ್ತು ಬಿಳಿಯ ಗೆರೆಗಳನ್ನು ಹೊಂದಿರುವ ಈ ಹಾವು, ಎರಡು ಅಡಿ ಉದ್ದ ಇತ್ತು. ಅಪರೂಪದ ಹಾವನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ.

    ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ಹಾವಿನ ಕಾಳಗದ ವೇಳೆ ಅಪರೂಪದ ಫೋಟೋ ಪತ್ತೆಯಾಗಿದೆ. ಸೂರ್ಯನ ಕಿರಣಕ್ಕೆ ಹಾವಿನ ತಲೆ ಹೊಳೆಯುತ್ತಿರುವ ಫೋಟೋ ದೇಶಾದ್ಯಂತ ವೈರಲ್ ಆಗಿತ್ತು.

    ಅವಿನಾಶ್ ಎಂಬವರ ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳ ನಡೆದಿತ್ತು. ಶ್ವಾನದ ಮೇಲೆ ನಾಗರಾಜ ರೋಷಾವೇಷವಾಗಿ ಹೋರಾಡಿದೆ. ಇತ್ತ ನಾಗರ ಹಾವು ನಾಯಿಯ ಜಗಳ ಕಂಡು ಮಾಲೀಕರು ದಂಗಾಗಿದ್ದರು. ಸ್ವಲ್ಪ ಹೊತ್ತಾದ ಬಳಿಕ ನಾಯಿ ಸಹವಾಸವೇ ಬೇಡ ಎಂದು ನಾಗರ ಹಾವು ವಾಪಸ್ ಹೋಗಿದೆ. ಈ ಘಟನೆಯನ್ನು ತೋಟದ ಮಾಲೀಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಭುವನೇಶ್ವರ: ಯುವಕನೊಬ್ಬ 11 ವರ್ಷದ ಅಪ್ರಾಪ್ತ ಹುಡುಗಿಯನ್ನ ಅತ್ಯಾಚಾರ ಮಾಡಿರುವ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಟ್ಟಮಂಡೈ ಬ್ಲಾಕ್ ನ ರಾಜ್ ನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 26 ವರ್ಷದ ಸೋಮನಾಥ ನಾಯಕ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಸಂತ್ರಸ್ತ ಹುಡುಗಿ ಫಿರಿಕಿದಾಂಡಿ ಗ್ರಾಮದಿಂದ ಸಮೀಪದ ಯೂತ್ಸ್ ಕ್ಲಬ್ ನಲ್ಲಿ ಟ್ಯೂಷನ್ ತರಗತಿಗೆಂದು ಹೋಗಿದ್ದಳು. ಆದರೆ ಅಂದು ತರಗತಿ ಕ್ಯಾನ್ಸಲ್ ಆಗಿದೆ. ಇದರಿಂದ ಇತರ ವಿದ್ಯಾರ್ಥಿಗಳು ಈ ಸ್ಥಳಕ್ಕೆ ಬಂದಿರಲಿಲ್ಲ. ಈ ವೇಳೆ ಸಂತ್ರಸ್ತೆ ಒಬ್ಬಳೆ ಇದ್ದುದ್ದನ್ನು ಗಮನಿಸಿದ ಆರೋಪಿ ನಾಯಕ್ ಸಂತ್ರಸ್ತೆಯನ್ನು ಕ್ಲಬ್ ನ ಹಿಂಬದಿಯಲ್ಲಿ ಹಾವು ತೋರಿಸುತ್ತೇನೆ ಎಂದು ನೆಪ ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ಮನೆಗೆ ಬಂದು ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ರಾಜ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯ ಪೋಷಕರು ದೂರು ನೀಡಿದ ಬಳಿಕ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಧಾರವಾಡ: ಜಿಲ್ಲೆಯಲ್ಲಿ ಸ್ನೇಕ್ ಎಲ್ಲಪ್ಪ ಎಂಬವರು ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಹಾವಿನ ಮರಿಗಳನ್ನ ತೆಗೆದಿದ್ದಾರೆ.

    ಧಾರವಾಡ ನಗರದ ನೇಕಾರ ಓಣಿಯಲ್ಲಿ ವಾಸವಿರುವ ಸ್ನೇಕ್ ಎಲ್ಲಪ್ಪ, ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನ ಹೊರ ತೆಗೆದಿದ್ದಾರೆ. ಕಳೆದ ತಿಂಗಳು ಎಲ್ಲಪ್ಪ ಜಿಲ್ಲೆಯ ಮರೇವಾಡ ಎಂಬ ಗ್ರಾಮದ ಮನೆಯೊಂದಕ್ಕೆ ಬಂದಿದ್ದ ಕೇರೆ ಹಾವನ್ನ ಹಿಡಿದು ತಂದಿದ್ದರು. ಆ ಹಾವಿನ ಹೊಟ್ಟೆಯಲ್ಲಿ 12 ಮೊಟ್ಟೆ ಇರುವುದನ್ನು ಅರಿತ ಅವರು, ಹಾವು ಮೊಟ್ಟೆ ಹಾಕಿದ ಮೇಲೆ ಆ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದರು.

    ಇದೇ ರೀತಿ ಇನ್ನೊಂದು ಮನೆಯಲ್ಲಿ ಟ್ರಿನ್ ಕ್ಯಾಟ್ ಹಾವು ಸಿಕ್ಕಿದೆ. ಆ ಹಾವಿನ ಹೊಟ್ಟೆಯಲ್ಲಿ ಕೂಡಾ 9 ಮೊಟ್ಟೆಗಳು ಇದ್ದವು. ಆ ಎರಡು ಹಾವಿನ ಮೊಟ್ಟೆಯನ್ನ 30 ಡಿಗ್ರಿ ಉಷ್ಣಾಂಶ ಮೀರದಂತೆ ಟೆಂಪರೇಚರ್ ಮೈಂಟೇನ್ ಮಾಡಿದ ಎಲ್ಲಪ್ಪ, 21 ಹಾವಿನ ಮರಿಗಳನ್ನ ಮೊಟ್ಟೆಯಿಂದ ಹೊರ ತೆಗೆದಿದ್ದಾರೆ.

    ಈ ಮರಿಗಳನ್ನ ಮತ್ತೆ ಕೆರೆಗೆ ಬಿಟ್ಟಿರುವ ಇವರು, ಇದೇ ರೀತಿ ಹಲವು ಬಾರಿ ಹಾವುಗಳನ್ನ ಹೊಡೆಯದಂತೆ ಜಾಗೃತಿ ಮೂಡಿಸುತ್ತಾರೆ. ಇನ್ನು ಯಾರಾದರೂ ಹಾವು ಇದೆ ಎಂದು ಕರೆದರೆ, ತಕ್ಷಣ ಅವರ ಮನೆಗೆ ಹೋಗಿ ಆ ಹಾವನ್ನ ರಕ್ಷಣೆ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಖ ಕೊಟ್ಟು ವಿಶೇಷ ಹಾವಿನ ಮೊಟ್ಟೆಯಿಂದ ಮರಿ ಮಾಡಿಸಿದ್ರು- ಬೆಂಗ್ಳೂರಿನಲ್ಲೊಂದು ಅಪರೂಪದ ಘಟನೆ

    ಶಾಖ ಕೊಟ್ಟು ವಿಶೇಷ ಹಾವಿನ ಮೊಟ್ಟೆಯಿಂದ ಮರಿ ಮಾಡಿಸಿದ್ರು- ಬೆಂಗ್ಳೂರಿನಲ್ಲೊಂದು ಅಪರೂಪದ ಘಟನೆ

    ಬೆಂಗಳೂರು: ವಿಶೇಷ ಹಾವಿನ ಮೊಟ್ಟೆಯನ್ನು ರಕ್ಷಣೆ ಮಾಡಿ, ಅವುಗಳಿಗೆ ಕೃತಕ ಶಾಖ ನೀಡುವ ಮೂಲಕ ಮರಿ ಮಾಡಿಸಿ ಜೀವ ನೀಡಿರುವ ಅಪರೂಪದ ಘಟನೆ ಸಿಲಿಕಾನ್ ಸಿಟಿಯ ಹೆಗ್ಡೆ ನಗರದಲ್ಲಿ ನಡೆದಿದೆ.

    ಬಿಬಿಎಂಪಿ ವನ್ಯಜೀವಿ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಾವಿನ ಮೊಟ್ಟೆ ರಕ್ಷಣೆ ಮಾಡಿದ್ದಾರೆ. ಹೆಗ್ಡೆ ಅವರು ನಗರದಲ್ಲಿ ಮನೆಯೊಂದರ ಸಂಪಿನ ಕಬ್ಬಿಣದ ಸಲಾಕೆ ಮೇಲೆ ಮೊಟ್ಟೆ ಇಟ್ಟು ಹಾವು ನೀರಿನಲ್ಲಿ ಬಿದ್ದಿತ್ತು. ಈ ವೇಳೆ ಮನೆಯವರು ವನ್ಯಜೀವಿ ಸಂರಕ್ಷಕ ರಾಜೇಶ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ರಾಜೇಶ್ ಅವರು ತಾಯಿ ಹಾವು ಹಾಗೂ ಅದರ 8 ರಲ್ಲಿ 7 ಮೊಟ್ಟೆಗಳನ್ನು ರಕ್ಷಿಸಿದ್ದಾರೆ.

    ರಕ್ಷಣೆ ಮಾಡಿರುವ ಹಾವಿನ ಮೊಟ್ಟೆಗಳು ಕಾಮನ್ ಕುಕ್ರಿ ಎಂಬ ಜಾತಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಮೊದಲು ತಾಯಿ ಹಾವನ್ನು ಕಾಡುಪ್ರದೇಶದಲ್ಲಿ ಬಿಟ್ಟಿದ್ದೇವೆ. ಬಳಿಕ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಳಿನಲ್ಲಿಟ್ಟು ಅದರ ಆರೈಕೆ ಮಾಡಿದ್ದು, ಹಾವುಗಳು ಮೊಟ್ಟೆಗಳಿಗೆ ಕಾವು ಕೊಡುವ ರೀತಿಯಲ್ಲೇ ಕೃತಕವಾಗಿ ಶಾಖ ನೀಡಿ ಎಲ್ಲ ಮೊಟ್ಟೆಗಳು ಮರಿಯಾಗಿಸಿದ್ದೇವೆ ಎಂದು ರಾಜೇಶ್ ಹೇಳಿದ್ದಾರೆ.

    ರಾಜೇಶ್ ಅವರು ಹಾವಿನ ಮರಿಗಳಿಗೆ 60-80 ದಿನಗಳು ಅದರ ಆರೈಕೆಗಾಗಿ ಸಮಯ ಮೀಸಲಿಟ್ಟು ಬಹಳ ಸೂಕ್ಷ್ಮವಾಗಿ ಗಮನಕೊಟ್ಟು ಕೆಲಸ ಮಾಡಿದ್ದಾರೆ. ಇಂತಹ ಅಪರೂಪದ ಹಾವಿನ ಜೀವಗಳನ್ನು ರಕ್ಷಣೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iKVFQHkX1w8