Tag: ಹಾವು

  • ಬಿರು ಬೇಸಿಗೆಗೆ ತತ್ತರಿಸಿದ ಹಾವುಗಳು – ಹುತ್ತ ಬಿಟ್ಟು ಮನೆಗೆ ಬಂದ ಉರಗಗಳು

    ಬಿರು ಬೇಸಿಗೆಗೆ ತತ್ತರಿಸಿದ ಹಾವುಗಳು – ಹುತ್ತ ಬಿಟ್ಟು ಮನೆಗೆ ಬಂದ ಉರಗಗಳು

    ಬೆಂಗಳೂರು: ಬೇಸಿಗೆಕಾಲ ಬರುತ್ತಿದ್ದಂತೆ ಮನೆಗೆ ಹಾವುಗಳು ಬರುತ್ತಿದ್ದು, ಇದರಿಂದ ಸಿಲಿಕಾನ್ ಸಿಟಿಯ ಜನರು ಜನರು ಗಾಬರಿ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೇಸಿಗೆ ಉರಗ, ಪಕ್ಷಿಗಳು ತತ್ತರಿಸಿ ಹೋಗಿವೆ. ನೀರಿನ ಆಸರೆ ಹುಡುಕಿ ಇದೀಗ ಹಾವುಗಳು ಹುತ್ತ ಬಿಟ್ಟು ನೀರಿರುವ ಜಾಗಗಳಿಗೆ ಬರಲು ಶುರು ಮಾಡಿವೆ. ಮನೆಯೊಳಗಿನ ಚಿಕ್ಕ ಗಾರ್ಡ್ ನಗಳು ಹೂವಿನ ಕುಂಡಗಳು, ಬಾತ್ ರೂಮ್‍ಗಳು, ಮನೆಯೊಳಗಿನ ಎಸಿ, ಫಿಶ್ ಅಕ್ವೇರಿಯಂ ಸೇರಿದಂತೆ ಕಾರಿನೊಳಗೆ ಬಂದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶುರು ಮಾಡಿವೆ. ಇದರಿಂದ ಕೇವಲ ಒಂದು ವಾರದಲ್ಲಿ 50ಕ್ಕೂ ಹೆಚ್ಚು ಮನೆಯೊಳಗೆ ಬಂದಿದ್ದ ಹಾವುಗಳನ್ನು ಉರಗ ತಜ್ಞ ಮೋಹನ್ ರಕ್ಷಣೆ ಮಾಡಿದ್ದಾರೆ.

    ಹಾವುಗಳು ಹೆಚ್ಚು ಬಿಸಿಲನ್ನು ತಡೆದುಕೊಳ್ಳುವುದಿಲ್ಲ ಮತ್ತು ಕಡಿಮೆ ಉಷ್ಣಾಂಶಕ್ಕು ತಡೆದುಕೊಳ್ಳುವ ಶಕ್ತಿ ಅವುಗಳಿಗೆ ಇಲ್ಲ. ಇದರಿಂದ ಈ ಬಿರು ಬಿಸಿಲಿನ ಬೇಗೆಗೆ ಹಾವುಗಳು ಮನೆಯೊಳಗಿನ ತಣ್ಣನೆ ವಾತಾವರಣಕ್ಕೆ ಬರಲು ಶುರು ಮಾಡಿವೆ. ಇತ್ತೀಚೆಗೆ ರಾಜ ಭವನ ಫಿಶ್ ಅಕ್ವೇರಿಯಂಗು ಸಹ ಹಾವು ಬಂದಿತ್ತು. ಅದನ್ನು ರಕ್ಷಣೆ ಮಾಡಿ ಕಾಡಿನೊಳಗೆ ಬಿಟ್ಟಿದ್ದೇವೆ. ಹಾಗಾಗಿ ಮನೆಯೊಳಗೆ ತಣ್ಣನೆ ಪ್ರದೇಶ ಮತ್ತು ಗಾರ್ಡನ್ ಗಳಿಗೆ ನೀರು ಹಾಕಲು ಹೋಗುವ ಮುನ್ನ ಎಚ್ಚರಿದಿಂದರಬೇಕು ಎಂದು ಉರಗ ತಜ್ಞ ಮೋಹನ್ ಹೇಳಿದ್ದಾರೆ.

    ಬೇಸಿಗೆ ಕಂಡರೆ ಮನುಷ್ಯರು ಮಾತ್ರ ಅಲ್ಲ ಪ್ರಾಣಿ ಪಕ್ಷಗಳು, ಹಾವುಗಳು ಸಹ ಭಯ ಪಡುತ್ತವೆ. ಹಾಗಾಗಿ ನಿಮ್ಮ ಮನೆಯೊಳಗೆ ಹಾವುಗಳೇನಾದರು ಬಂದರೆ ಅವುಗಳನ್ನು ಹೊಡೆದು ಸಾಯಿಸದೆ ಕೂಡಲೇ ಬಿಬಿಎಂಪಿ ಅರಣ್ಯ ಘಟಕ ಫೋನ್ ಮಾಡಿ ಅವುಗಳನ್ನು ರಕ್ಷಣೆ ಮಾಡಿ ಎಂದು ಮೋಹನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಿವರಾತ್ರಿಯಂದೇ ಮನೆಗೆ ಬಂತು 6 ಅಡಿ ಉದ್ದದ ನಾಗರಹಾವು

    ಶಿವರಾತ್ರಿಯಂದೇ ಮನೆಗೆ ಬಂತು 6 ಅಡಿ ಉದ್ದದ ನಾಗರಹಾವು

    ಬೆಂಗಳೂರು: ಮಹಾ ಶಿವಾರಾತ್ರಿ ಹಬ್ಬದ ದಿನದಂದೇ ಆರು ಅಡಿ ಉದ್ದದ ನಾಗರಹಾವು ಮನೆಯೊಂದರಲ್ಲಿ ಪ್ರತ್ಯಕ್ಷವಾಗಿ ಅಲ್ಲಿನ ನಿವಾಸಿಗಳು ಗಾಬರಿಗೊಂಡಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಐದು ಗಂಟೆಯ ಸುಮಾರಿಗೆ ಬನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಆರು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದ್ದು ಮನೆಯವರು ಹಾವನ್ನು ಕಂಡು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಕೆಲ ಸಮಯ ಮನೆಯಲ್ಲಿದ್ದ ನಾಗರಹಾವು ಮನೆಯ ಹೊರಗೆ ಬಂದು ಬಿಲ ಸೇರಿಕೊಂಡು ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಮಾಡಿತ್ತು.

    ನಂತರ ಸ್ನೇಕ್ ಕಾರ್ತಿಕ್ ಗೆ ಕರೆ ಮಾಡಿದ ಗ್ರಾಮಸ್ಥರು ಸ್ಥಳಕ್ಕೆ ಬಂದ ಉರಗ ತಜ್ಞ ಕಾರ್ತಿಕ್ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು ಅಲ್ಲಿನ ಜನ ಹಬ್ಬದ ದಿನವೇ ಹಾವನ್ನು ಕಂಡು ಗಾಬರಿಯಾಗಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವುದರಿಂದ ನಿಟ್ಟುಸಿರು ಬಿಟ್ಟಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಾರಿ ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋದ ಚಾಲಕ..!

    ಲಾರಿ ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋದ ಚಾಲಕ..!

    ಚಿಕ್ಕಮಗಳೂರು: ಲಾರಿಯ ಸ್ಟೇರಿಂಗ್‍ಗೆ ಕೈ ಹಾಕುತ್ತಿರುವಾಗ ಇಂಜಿನ್‍ನಲ್ಲಿ ಹಾವು ಕಂಡಿದ್ದು, ಇದನ್ನು ನೋಡಿದ ಚಾಲಕ ಲಾರಿಯನ್ನು ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.

    ಬಣಕಲ್‍ನ ರೈಸ್‍ಮಿಲ್‍ನಲ್ಲಿ ಲಾರಿಗೆ ಅಕ್ಕಿಯ ಮೂಟೆಗಳನ್ನು ಲೋಡ್ ಮಾಡಲಾಗಿತ್ತು. ಲಾರಿಯನ್ನು ಹೊರ ತೆಗೆಯಲು ಚಾಲಕ ಲಾರಿಗೆ ಹತ್ತಿದ ಕೂಡಲೇ ಹಾವನ್ನು ನೋಡಿ ಕೆಳಗಿಳಿದು ಓಡಿ ಹೋಗಿದ್ದಾನೆ. ಕೂಡಲೇ ರೈಸ್‍ಮಿಲ್ ಮಾಲೀಕ ಸ್ನೇಕ್ ಆರೀಫ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಲಾರಿಯ ಇಂಜಿನ್‍ನಲ್ಲಿದ್ದ ನಾಗರಹಾವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.

    https://www.youtube.com/watch?v=Wwl-2ZFkHXQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಯುವ ಮುನ್ನ ಹಾವನ್ನು ಕೊಂದು ಪ್ರಾಣ ಬಿಟ್ಟಿತು: ಜಗ್ಗೇಶ್

    ಸಾಯುವ ಮುನ್ನ ಹಾವನ್ನು ಕೊಂದು ಪ್ರಾಣ ಬಿಟ್ಟಿತು: ಜಗ್ಗೇಶ್

    ಬೆಂಗಳೂರು: ನಟ ಜಗ್ಗೇಶ್ ಅವರ ಮಾವರ ಮನೆಯಲ್ಲಿದ್ದ ನಾಯಿ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಅದು ಸಾಯುವ ಮುನ್ನ ಹಾವನ್ನು ಕೊಂದು ಕೊನೆಯುಸಿರೆಳೆಯಿತು ಎಂದು ಜಗ್ಗೇಶ್ ಹೇಳಿದ್ದಾರೆ.

    ಜಗ್ಗೇಶ್ ಪತ್ನಿ ಪರಿಮಳ ಅವರ ತಂದೆ ಪ್ರೀತಿಯಿಂದ `ರೂಟ್‍ವೆಲ್’ ಎಂಬ ನಾಯಿಯನ್ನು ಸಾಕಿದ್ದರು. ಆದರೆ ಅವರ ತೋಟದ ಮನೆಯಲ್ಲಿ ರುಸ್ಸುಲ್ ಎಂಬ ವಿಷಕಾರಿ ಹಾವು ನಾಯಿಯನ್ನು ಕಚ್ಚಿ ಸಾವನ್ನಪ್ಪಿದೆ. ಈ ಬಗ್ಗೆ ನಟ ಜಗ್ಗೇಶ್ ಫೋಟೋ ಹಾಕಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    “ಪರಿಮಳನ ತಂದೆಯ ಪ್ರೀತಿಯಿಂದ ರೂಟ್‍ವೆಲ್ ಎಂಬ ನಾಯಿಯನ್ನು ಚೆನ್ನೈ ತೋಟದ ಮನೆಯಲ್ಲಿ ಸಾಕಿದ್ದರು. ಆ ನಾಯಿಗೆ ರುಸ್ಸುಲ್ ವಿಷಕಾರಿ ಹಾವು ಕಚ್ಚಿದೆ. ಆದರೆ ನಾಯಿ ಸಾಯುವ ಮುನ್ನ ಹಾವನ್ನು ಕೊಂದು ತಾನೂ ಕೊನೆಯುಸಿರೆಳೆದಿದೆ. ಪರಿಮಳ ಅವರ 82 ವರ್ಷದ ಅಪ್ಪ ನೆಚ್ಚಿನ ನಾಯಿ ಕಳೆದುಕೊಂಡು ಮಗುವಂತೆ ಅಳುತ್ತಿದ್ದರು. ಅವರನ್ನು ಸಂತೈಸಲು ಪರಿಮಳ ಚೆನ್ನೈಗೆ ತೆರಳಿದ್ದಾರೆ. ಎಷ್ಟೇ ಆದರೂ ಹೆಣ್ಣು ಮಕ್ಕಳು ಅಪ್ಪನ ಮೆಚ್ಚು ಅಲ್ಲವೇ” ಎಂದು ಬರೆದುಕೊಂಡಿದ್ದಾರೆ.

    ಪರಿಮಳ ಅವರ ತಂದೆ ನಾಯಿಯನ್ನು ಕ್ರಿಶ್ಚಿಯನ್ ರೀತಿ ಶವದ ಪೆಟ್ಟಿಗೆಯಲ್ಲಿ ಮಲಗಿಸಿ, ಹೂ ಹಾಕಿ ವ್ಯಕ್ತಿಗಳ ರೀತಿ ಶವದ ಪೆಟ್ಟಿಗೆಯನ್ನು ಹೂತಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ತಲೆ ಹಾವೆಂದು ಜನರನ್ನು ಯಾಮಾರಿಸ್ತಿದ್ದ ಯುವಕರ ಬಂಧನ

    ಎರಡು ತಲೆ ಹಾವೆಂದು ಜನರನ್ನು ಯಾಮಾರಿಸ್ತಿದ್ದ ಯುವಕರ ಬಂಧನ

    ಮೈಸೂರು: ಒಂದು ತಲೆಯ ಹಾವನ್ನು ಎರಡು ತಲೆ ಹಾವು ಎಂದು ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

    ಅರವಿಂದ್, ಕಾವೇರಪ್ಪ, ಸಿ.ಕೆ ಸೋಮಯ್ಯ ಹಾಗು ಅಭಿಷೇಕ್ ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರಹೊಸನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಆರು ಜನರ ತಂಡ ಎರಡೂವರೆ ಅಡಿ ಉದ್ದದ ದಪ್ಪ ತಲೆಯ ಹಾವನ್ನು ಹಿಡಿದಿದ್ದಾರೆ.

    ಹಾವು ನೋಡುವುದಕ್ಕೆ ಎರಡು ತಲೆ ಇದ್ದಂತೆ ಕಾಣುತ್ತದೆ. ಹೀಗಾಗಿ ಜನರನ್ನು ಯಾಮಾರಿಸಿ ಮಾರಾಟ ಮಾಡಲು ಮುಂದಾಗಿದ್ದರು. ಹಾವನ್ನು ಮಾರಾಟ ಮಾಡಲು ರಸ್ತೆಯಲ್ಲಿ ನಿಂತಿದ್ದಾಗ ಹುಣಸೂರಿನ ಟೌನ್ ಠಾಣೆ ಪೊಲೀಸರು ಅನುಮಾನಗೊಂಡು ಯುವಕರನ್ನು ವಿಚಾರಿಸಿದ್ದಾರೆ. ಈ ವೇಳೆ ಪ್ರಕರಣ ಬಯಲಾಗಿದೆ.

    ತಕ್ಷಣ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಜಕಾರ್ತಾ: ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ.

    ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ ಸತ್ಯ ಹೇಳಿಸಲು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಮೊಬೈಲ್ ಕಳ್ಳತನದ ಆರೋಪದಲ್ಲಿ ಒಬ್ಬಾತ ಬಂಧನಕ್ಕೆ ಒಳಗಾಗಿದ್ದ. ಬಂಧನಕ್ಕೆ ಒಳಗಾಗಿದ್ದ ಆತ ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಬಾಯಿ ಬಿಡಿಸಲು ಪೊಲೀಸರು ಆತನ ಎರಡು ಕೈಗಳನ್ನು ಕಟ್ಟಿ ಹಾಕಿ ಅವನ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ. ಇದರಿಂದ ಕಳ್ಳ ಭಯದಿಂದ ಕುಳಿತಿದ್ದ. ಬಳಿಕ ಅಧಿಕಾರಿಯೊಬ್ಬರು ಬಂದು ಹಾವಿನ ಬಾಲ ಹಿಡಿದು ಕಳ್ಳನ ಬಾಯಿ ಹತ್ತಿರ ತೆಗೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಚೀರಾಡಿದ್ದಾನೆ.

    ಅಷ್ಟಕ್ಕೂ ಸುಮ್ಮನಾಗದ ಪೊಲೀಸರ ಹಾವಿನ ಎಡೆಯನ್ನು ಹಿಡಿದುಕೊಂಡು ಕಳ್ಳನ ಮುಖದ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳ ತುಂಬಾ ಭಯಪಟ್ಟು ಕೂಗಾಡಿ, ಒದ್ದಾಡಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ನಗುತ್ತಾ ಮನರಂಜನೆ ರೀತಿಯಲ್ಲಿ ಕಳ್ಳನಿಗೆ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ಕೇಳಿಬಂದಿದೆ. ಬಳಿಕ ಇಂಡೋನೇಷ್ಯಾದ ಪೊಲೀಸರು ನೆಟ್ಟಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಪಪುವಾ ಪೊಲೀಸ್ ವಕ್ತಾರರು, ಅಧಿಕಾರಿಗಳಿಗೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಸಹ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಬುಡದಲ್ಲಿ 30ಕ್ಕೂ ಅಧಿಕ ಹಾವುಗಳು ಪತ್ತೆ-ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ

    ಮನೆಯ ಬುಡದಲ್ಲಿ 30ಕ್ಕೂ ಅಧಿಕ ಹಾವುಗಳು ಪತ್ತೆ-ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ

    ಗೊರ್ಮಾನ್(ಟೆಕ್ಸಾಸ್): ತಾತ್ಕಲಿಕ ಮನೆಯ (ಕಟ್ಟಿಗೆ ಮನೆ) ಬುಡದಲ್ಲಿ 30 ಅಧಿಕ ಹಾವುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬೇಟೆಗೆ ತೆರಳುವರಿಗಾಗಿ ನಿರ್ಮಿಸಲಾಗಿದ್ದ ಮನೆಯ ಬುಡದಲ್ಲಿ ಹಾವುಗಳು ಪತ್ತೆಯಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕಿಂಗ್ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ನೀಡಿದ್ದಾರೆ. ಬಾಬಿ ಕೋವನ್ ಎಂಬವರ ಮನೆಯ ಅಡಿಯಲ್ಲಿ ಹಾವುಗಳು ಪತ್ತೆಯಾಗಿದ್ದು, ಬಾಬಿ ತಮ್ಮ ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟೆಕ್ಸಾಸ್ ನ ಗೋರ್ಮಾನ್ ಎಂಬಲ್ಲಿ ಮಂಗಳವಾರ ಹಾವುಗಳು ಕಂಡುಬಂದಿವೆ.

    ಸಾಂದರ್ಭಿಕ ಚಿತ್ರ

    ಮಂಗಳವಾರ ಬಾಬಿ ತನ್ನ ಗೆಳೆಯರೊಂದಿಗೆ ಮನೆಯಲ್ಲಿ ಕೆಲಸದಲ್ಲಿ ನಿರರತಾಗಿದ್ದರು. ಈ ವೇಳೆ ಮನೆಯ ತಳದ ಕಟ್ಟಿಗೆ ಚಿಕ್ಕ ರಂಧ್ರದಿಂದ ಹಾವು ಬಂದಿದೆ. ಹೀಗೆ ಒಂದರ ನಂತರ ಎರಡ್ಮೂರು ಹಾವುಗಳು ಕಾಣಿಸಿಕೊಂಡಿವೆ. ಭಯಬೀತರಾದ ಬಾಬಿ ಗೆಳೆಯರೊಂದಿಗೆ ಚರ್ಚಿಸಿ ಮನೆಯ ತಳಭಾಗವನ್ನು ಎತ್ತಿದ್ದಾರೆ. ಮನೆಯ ತಳಭಾಗ ಮೇಲೆ ಎತ್ತಿದ್ದ ಕೂಡಲೇ ಸುಮಾರು 30ಕ್ಕೂ ಅಧಿಕ ಹಾವುಗಳು ಕಾಣಿಸಿಕೊಂಡಿವೆ.

    ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡ ಕೆಲವೇ ಗಂಟೆಯಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಅಲ್ಲೇ ಅವುಗಳಿಗೆ ಬೆಂಕಿ ಹಚ್ಚಿ. ಅಪಾಯಕಾರಿ ಹಾವುಗಳು ಎಂದು ಬರೆದ್ರೆ. ಪ್ರಾಣಿಗಳಿಗೂ ಜೀವವಿದೆ ರಕ್ಷಿಸಿ ಎಂದು ಕಮೆಂಟ್ ಮಾಡಿದ್ದಾರೆ.

    ಬಾಬಿ ಸ್ಥಳಕ್ಕೆ ಉರಗ ತಜ್ಞರನ್ನು ಕರೆಸಿ ಎಲ್ಲ ಹಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://www.facebook.com/bobbyjessica.cowan/videos/10217172379971129/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿಗಾಗಿ ಮೋಟಾರ್ ಸ್ಟಾರ್ಟ್ ಮಾಡಿದಾಗ ಬಂದ್ವು 20ಕ್ಕೂ ಅಧಿಕ ಸತ್ತ ಹಾವು

    ನೀರಿಗಾಗಿ ಮೋಟಾರ್ ಸ್ಟಾರ್ಟ್ ಮಾಡಿದಾಗ ಬಂದ್ವು 20ಕ್ಕೂ ಅಧಿಕ ಸತ್ತ ಹಾವು

    ಚಿಕ್ಕೋಡಿ/ಬೆಳಗಾವಿ: ಸಾಮಾನ್ಯವಾಗಿ ರೈತರು ಗದ್ದೆಗೆ ನೀರು ಹಾಯಿಸಬೇಕು ಅಂದರೆ ನೀರಿನ ಮೋಟಾರ್ ಸ್ಟಾರ್ಟ್ ಮಾಡಿದಾಗ ಪೈಪ್‍ನಲ್ಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬರು ರೈತ ಮೋಟಾರ್ ಆನ್ ಮಾಡಿದ ತಕ್ಷಣ ಪೈಪ್ ನಲ್ಲಿ 20 ಕ್ಕೂ ಹೆಚ್ಚು ಸತ್ತ ಹಾವುಗಳು ಬಂದು ಬಿಟ್ಟಿವೆ.

    ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಹೊರವಲಯದ ಮಹದೇವ ಜುಗುದಾರ ಎಂಬ ರೈತರ ಗದ್ದೆಯಲ್ಲಿ ನಡೆದಿದೆ. ಕೃಷ್ಣಾ ನದಿಯಿಂದ ಪಂಪ್ ಮೂಲಕ ನೀರು ಎತ್ತುತ್ತಿದ್ದ ರೈತ ಮಹದೇವ ಕಳೆದ ಒಂದು ತಿಂಗಳಿನಿಂದ ಕಬ್ಬು ಕಟಾವಿಗೆ ಬಂದಿದ್ದ ಕಾರಣ ಗದ್ದೆಗೆ ನೀರು ಹಾಯಿಸಿರಲಿಲ್ಲ.

    ಶುಕ್ರವಾರ ಗದ್ದೆಗೆ ನೀರು ಹಾಯಿಸಬೇಕು ಅಂತ ಹೋಗಿ ಮೋಟಾರ್ ಆನ್ ಮಾಡಿದ್ದಾರೆ. ಆಗ ರೈತ ಮಹದೇವ್ ಗೆ ಶಾಕ್ ಆಗಿದ್ದು, ಬೇರೆ ಬೇರೆ ಜಾತಿಯ 20ಕ್ಕೂ ಹೆಚ್ಚು ಸತ್ತ ಹಾವುಗಳು ನೀರಿನ ಪೈಪ್ ಮೂಲಕ ಹೊರಬಿದ್ದಿದೆ. ಇದನ್ನು ನೋಡಿ ರೈತ ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಯಬಾಗ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಂಕಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವುಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4 ಮೊಟ್ಟೆ ನುಂಗಿ ಓಡಾಡಲು ಸಾಧ್ಯವಾಗದೇ ಬಿದ್ದ ನಾಗರಹಾವು – ವಿಡಿಯೋ ನೋಡಿ

    4 ಮೊಟ್ಟೆ ನುಂಗಿ ಓಡಾಡಲು ಸಾಧ್ಯವಾಗದೇ ಬಿದ್ದ ನಾಗರಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ಮರಿ ನಾಗರಹಾವೊಂದು ನಾಲ್ಕು ಮೊಟ್ಟೆಗಳನ್ನು ನುಂಗಿ ಅಸ್ವಸ್ಥಗೊಂಡಿದೆ.

    ನಾಗರಹಾವಿನ ಮರಿಯೊಂದು ನಾಲ್ಕು ಮೊಟ್ಟೆ ನುಂಗಿ ಅಸ್ವಸ್ಥಗೊಂಡು ಓಡಾಡಲು ಸಾಧ್ಯವಾಗದೇ ಮನೆಯ ಪಕ್ಕದಲ್ಲಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಉರಗ ತಜ್ಞ ಆರೀಫ್ ಬಂದು ಹಾವಿನ ಮರಿಗೆ ಚಿಕಿತ್ಸೆ ನೀಡಿದ್ದು, ನಾಗರಹಾವನ್ನ ರಕ್ಷಣೆ ಮಾಡಿದ್ದಾರೆ. ಚಿಕಿತ್ಸೆ ನೀಡುತ್ತಿದ್ದಂತೆ ನಾಗರ ಹಾವು ನುಂಗಿದ್ದ ನಾಲ್ಕು ಮೊಟ್ಟೆಗಳನ್ನು ಒಂದೊಂದಾಗಿ ಹೊರ ಹಾಕಿದೆ. ಹಾವಿನ ಮರಿ ಮೊಟ್ಟೆಗಳನ್ನು ಹೊರಹಾಕುತ್ತಿದ್ದುದ್ದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.

    https://www.youtube.com/watch?v=pzbiBqotuWY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ: ಮರ ಹತ್ತಿ, ಇಳಿದು ಹಾವಿನಿಂದ ಮನರಂಜನೆ – ನೋಡಲು ಮುಗಿಬಿದ್ದ ಜನ

    ವಿಡಿಯೋ: ಮರ ಹತ್ತಿ, ಇಳಿದು ಹಾವಿನಿಂದ ಮನರಂಜನೆ – ನೋಡಲು ಮುಗಿಬಿದ್ದ ಜನ

    ಗದಗ: ಆಹಾರ ಅರಸಿ ಬಂದು ಮರವನ್ನೇರಿದ ಹಾವನ್ನ ನೋಡಲು ಜನರು ಮುಗಿಬಿದ್ದ ಘಟನೆ ಗದಗ್ ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿನ ಬೇವಿನ ಮರದಲ್ಲಿ ಹಾವು ಕಾಣಿಸಿಕೊಂಡಿದೆ. ಆಗ ಅಲ್ಲಿದ್ದ ಕೆಲವರು ಏಕ ಚಿತ್ತವಾಗಿ ಹಾವು ಮರ ಏರುವುದನ್ನ ಹಾಗೂ ಇಳಿಯುವುದನ್ನ ನೋಡುತ್ತಾ ನಿಂತಿದ್ದಾರೆ.

    ಇದು ರಸ್ತೆಯಲ್ಲಿ ಓಡಾಡುವವರಿಗೆ ಕುತೂಹಲ ಹುಟ್ಟಿಸಿದೆ. ಆಗ ನೂರಾರು ಸಾರ್ವಜನಿಕರು ತಾ ಮುಂದು… ನಾ ಮುಂದು.. ಎಂದು ಹಾವನ್ನ ನೋಡಲು ಮುಗಿ ಬಿದ್ದ ಘಟನೆ ನಡೆದಿದೆ. ನಂತರ ಗ್ರಂಥಾಲಯದ ಆವರಣದಲ್ಲಿನ ನಾಲ್ಕೈದು ಮರಗಳಲ್ಲಿ ಸಂಚರಿಸಿ ಜನರಿಗೆ ಮನೋರಂಜನೆ ನೀಡಿದೆ.

    ಹಾವು ಕೆಲ ಸಮಯದ ನಂತರ ನೆಲಕ್ಕೆ ಬಾರದೆ ಮರದ ಮೂಲಕವೇ ಗ್ರಂಥಾಲಯದ ಗೋಡೆ ಮೇಲೆ ಇಳಿದು ಮಾಯವಾಗಿದೆ.

    https://www.youtube.com/watch?v=tNK-8th46gU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv