ಬೆಂಗಳೂರು: ಮನೆಯಿಂದ ಹೊರಗಡೆ ಬಂದಾಗ ಶೂ, ಚಪ್ಪಲಿ ಧರಿಸುವ ಮುನ್ನ ಎಚ್ಚರವಿರಲಿ. ಬೆಂಗಳೂರಿನಲ್ಲಿ (Bengaluru) ಉರಗಗಳ ಹಾವಳಿ ಹೆಚ್ಚಾಗುತ್ತಿದ್ದು, ಮೂರೇ ದಿನದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಂಗಳವಾರ (ಸೆ.2) ಬೆಳಿಗ್ಗೆ ಮಾರತ್‌ಹಳ್ಳಿ ಬಳಿ ಮನೆಯಿಂದ ಹೊರ ಬಂದು ಶೂ ಹಾಕಲು ಹೋದ ಓರ್ವ ವ್ಯಕ್ತಿ ಒಂದು ಕ್ಷಣ ಗಾಬರಿಯಾದರು. ಆ ಶೂ ಒಳಗೆ ನಾಗರಹಾವಿತ್ತು. ಶೂ ಒಳಭಾಗದಲ್ಲೇ ಹೆಡೆ ಎತ್ತಿ ಆತಂಕ ಮೂಡಿಸಿತ್ತು. ಮಳೆ ಕಾರಣದಿಂದಾಗಿ ಹಾವುಗಳು ಬೆಚ್ಚಗಿನ ಜಾಗವನ್ನು ಅರಸಿಬಂದಿರುತ್ತವೆ. ಶೂ, ಚಪ್ಪಲಿಗಳು ತುಂಬಾ ಬೆಚ್ಚಗಿರುವುದರಿಂದ ಇವುಗಳಲ್ಲಿ ಸೇರಿರುತ್ತವೆ.
3 ದಿನಗಳ ಹಿಂದೆ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಹಾವು ಕಚ್ಚಿ ಟೆಕ್ಕಿ ಪ್ರಕಾಶ್ ಮೃತ ಪಟ್ಟಿದ್ದರು. ಇನ್ನೂ ರಾಜ್ಯದಲ್ಲಿ ಜನವರಿ 1ರಿಂದ ಆಗಸ್ಟ್ 17ರ ತನಕ 13,494 ಹಾವು ಕಡಿತ ಪ್ರಕರಣ ದಾಖಲಾಗಿವೆ.ಇದನ್ನೂ ಓದಿ: ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನಕ್ಕೆ ಈಶ್ವರ್ ಖಂಡ್ರೆ ಚಾಲನೆ
ಶ್ರೀಶೈಲ ಎಂಬ ಮಹಿಳೆ ಜಡ್ಚರ್ಲಾ ಪುರಸಭೆಯಲ್ಲಿರುವ ಅಯ್ಯಂಗಾರ್ ಬೇಕರಿಯಿಂದ ಎಗ್ ಪಪ್ಸ್ (Egg Pups) ಹಾಗೂ ಕರ‍್ರಿ ಪಪ್ಸ್ ಖರೀದಿಸಿದ್ದರು. ಅಲ್ಲಿಂದ ಮನೆಗೆ ಬಂದ ಮಹಿಳೆ ತಮ್ಮ ಮಕ್ಕಳೊಂದಿಗೆ ತಿನ್ನಲು ಕುಳಿತರು. ಈ ವೇಳೆ ರ‍್ರಿ ಪಪ್ಸ್ ತೆರೆದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ.
ಇದು ಮಂಡಲದ ಹಾವಾಗಿದ್ದು ವಿಷಕಾರಿ ಅಲ್ಲ. ಈ ಹಾವು ಕಚ್ಚಿದರೆ ಜನರು ಸಾಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಹಾವಿನ ಜಾತಿಯ ಬಗ್ಗೆ ರಾಜು ಅರಿವು ಮೂಡಿಸಿದರು.
ಸುಮಾರು ಎರಡು ಅಡಿಯ ಉದ್ದದ ಹಾವು ಇದಾಗಿದ್ದು, ಇದು ಮನೆಯ ಗೋಡೆ ಹಾಗೂ ಸಂದಿಗೊಂದಿಗಳಲ್ಲಿ ಸಂಚರಿಸುತ್ತದೆ. ಅಡಗಿರುವ ಇಲಿಯನ್ನು ಬೇಟೆಯಾಡುತ್ತದೆ. ಆಹಾರ ಅರಸುತ್ತಾ ಡಿಸಿ ಕಚೇರಿಗೆ ಬಂದಿರಬಹುದು ಎಂದು ರಾಜು ಹೇಳಿದರು.
ಮಂಗಳೂರು: ಹೆಬ್ಬಾವಿನ (Python) ಮರಿ ಎಂದು ವಿಷದ (Venom) ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.
ಈ ವೇಳೆ ಹಾವಿನ ಮರಿ ಕೈಗೆ ಕಚ್ಚಿದ್ದರೂ ಅದು ಹೆಬ್ಬಾವಿನ ಮರಿ ಎಂದು ನಿರ್ಲಕ್ಷಿಸಿದ್ದರು. ಬಳಿಕ ರಾಮಚಂದ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆ ದಾಖಲು ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಉಡುಪಿ: ಮಳೆಗಾಲದಿಂದಾಗಿ ಹಾವು (Snake), ವಿಷ ಜಂತುಗಳು ಪ್ರತ್ಯಕ್ಷವಾಗತೊಡಗಿದೆ. ಬೆಚ್ಚನೆಯ ಸ್ಥಳ ಅರಸಿ ಬರುವ ಹಾವುಗಳು ಕಾರು ಮತ್ತು ಬೈಕ್‌ಗಳ ಆಸನದ ಕೆಳ ಭಾಗ, ಹೆಲ್ಮೆಟ್, ಶೂ ಒಳ ಭಾಗದಲ್ಲಿ ಅವಿತುಕೊಳ್ಳುವ ಸಾಧ್ಯತೆಗಳೂ ಇವೆ. ಹಾಗಾಗಿ ಮಳೆಗಾಲದಲ್ಲಿ (Rainy Season) ಹಾವು, ವಿಷಜಂತುಗಳ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸುವ ಅಗತ್ಯವೂ ಅಷ್ಟೇ ಇದೆ.
ಫ್ರಿಡ್ಜ್‌ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ (Cauliflower) ಹಾವಿನ ಮರಿ ಕಂಡು ಮನೆಮಂದಿ ಹೌಹಾರಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾಪು ತಾಲೂಕು ಪಡುಬಿದ್ರೆಯಲ್ಲಿ ಬೇಂಗ್ರೆಯ ಮಹಿಳೆಯೋರ್ವರು ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು. ಅಡುಗೆ ಮಾಡುವುದಕ್ಕಾಗಿ ಫ್ರಿಡ್ಜ್‌ನಲ್ಲಿಟ್ಟಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ಹೌಹಾರಿದ್ದಾರೆ. ಕೈಯಲ್ಲಿದ್ದ ತರಕಾರಿಯನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೊರಕ್ಕೆ ಓಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇದು ಮರಿ ಹೆಬ್ಬಾವು ಎಂದು ಉರಗ ತಜ್ಞರು ಗುರುತಿಸಿದ್ದಾರೆ.
ಕಾಪುವಿನ ಸ್ಥಳೀಯ ಸುರೇಶ್ ಮಾಹಿತಿ ನೀಡಿ, ಮಳೆಗಾಲದಲ್ಲಿ ಹಾವು, ಹುಳಹುಪ್ಪಟೆಗಳು ಮರಿ ಇಡುವ ಸಂದರ್ಭ ಸುರಕ್ಷಿತ ಪ್ರದೇಶವನ್ನು ಅರಸುತ್ತದೆ. ಹೀಗಾಗಿ ಹಾವಿನ ಮರಿ ಹೂಕೋಸಿನ ಒಳಗೆ ಅವಿತುಕೊಂಡಿರಬಹುದು. ತರಕಾರಿ ಖರೀದಿಸುವಾಗ ಮತ್ತು ಬಳಸುವಾಗ ಬಹಳ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಪಾಟ್ನಾ: ಹಾವೊಂದು ಕಾರ್ಮಿಕನಿಗೆ ಎರಡು ಬಾರಿ ಕಚ್ಚಿದ್ದು, ಇದರಿಂದ ಕೋಪಗೊಂಡ ಆತ ಹಾವಿಗೆ ಮೂರು ಬಾರಿ ಕಚ್ಚಿದ್ದ ವಿಲಕ್ಷಣ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.
ಈ ಘಟನೆ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿದೆ. ಹಾವಿಗೆ ಕಚ್ಚಿದವನನ್ನು ಸಂತೋಷ್ ಲೋಹರ್ ಎಂದು ಗುರುತಿಸಲಾಗಿದ್ದು, ಇವರು ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನಡೆದಿದ್ದೇನು..?: ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್, ಕಬ್ಬಿಣದ ಸಲಾಕೆಯನ್ನು ಬಳಸಿಕೊಂಡು ಹಾವನ್ನು ಹಿಡಿದಿದ್ದಾರೆ. ಬಳಿಕ ಒಂದಲ್ಲ ಬರೋಬ್ಬರಿ ಮೂರು ಬಾರಿ ಕಚ್ಚಿದ್ದಾರೆ. ಕೊನೆಗೆ ಹಾವನ್ನು ಕೊಂದು ಹಾಕಿದ್ದಾರೆ. ಇದನ್ನೂ ಓದಿ: ಕುಖ್ಯಾತ ರೌಡಿಶೀಟರ್‌ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್ ಮೇಲೆ ಸಿಸಿಬಿ ಕಣ್ಣು
ಬಳಿಕ ಈ ಬಗ್ಗೆ ಕಾರ್ಮಿಕನನ್ನು ಕೇಳಿದಾಗ, ಹಳ್ಳಿಯಲ್ಲಿ ಹಾವು ಕಚ್ಚಿದರೆ ಅದನ್ನು ಎರಡು ಬಾರಿ ನಾವು ಕಚ್ಚಬೇಕು. ಹೀಗೆ ಮಾಡಿದರೆ ಹಾವಿನ ವಿಷ ಹರಡಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೂಢನಂಬಿಕೆ ನಂಬಿ ಸಂತೋಷ ಈ ನಿರ್ಧಾರ ತೆಗೆದುಕೊಂಡಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಾವು ವಿಷಕಾರಿಯಾಗಿರಲಿಲ್ಲ, ಇಲ್ಲವಾದಲ್ಲಿ ಸಂತೋಷ್‌ನ ಜೀವಕ್ಕೆ ಗಂಭೀರ ಅಪಾಯ ಉಂಟಾಗಬಹುದೆಂದು ಸ್ಥಳೀಯರು ಊಹಿಸಿದ್ದಾರೆ.
ಜಾರ್ಖಂಡ್ ಮೂಲದ ಸಂತೋಷ್ ಅವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ.
ಬೆಂಗಳೂರು: ಬೇಸಿಗೆ (Summer Season) ಬಂತೆಂದರೆ ಬಿಸಿಲಿನ ತಾಪದಿಂದ ಪಾರಾಗಲು ತಣ್ಣನೆಯ ವಾತಾವರಣ ಅರಸಿ ಜನವಸತಿ ಪ್ರದೇಶಗಳತ್ತ ಹಾವುಗಳು (Snakes) ಬರುವುದು ಸಹಜ. ತಂಪು ವಾತಾವರಣ ಹರಸುತ್ತಾ ದೇಹವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಬೇಸಿಗೆ ಸಮಯದಲ್ಲಿ ಸಂದುಗಳನ್ನ ಹುಡುಕುತ್ತವೆ ಇದೇ ವೇಳೆ ಮನೆಗಳಿಗೂ ಬರಬಹುದು. ಇದರಿಂದ ಆತಂಕಗೊಳ್ಳುವ ಕೆಲವರು ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ, ಇನ್ನೂ ಕೆಲವರು ಉರಗ ರಕ್ಷಕರಿಗೆ ತಿಳಿಸಿ ರಕ್ಷಣೆ ಮಾಡುತ್ತಾರೆ.
ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ 9902794711 ಗೆ ಕರೆ ಮಾಡಿ.#Snakespic.twitter.com/rj1xvhtWl1
ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಹಾವುಗಳ ರಕ್ಷಣೆಗೆ ಮುಂದಾಗಿದೆ. ಮನೆಯ ಸುತ್ತಮುತ್ತ ಹಾವುಗಳು ಕಂಡರೆ ಅವುಗಳನ್ನು ರಕ್ಷಿಸಲು ಕೂಡಲೇ ಮಾಹಿತಿ ನೀಡುವಂತೆ ಸಹಾಯವಾಣಿ ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್ ಕರ್ನಾಟಕ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.
ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ (BBMP Helpline) 9902794711 ಗೆ ಕರೆ ಮಾಡಿ ಎಂದು ತಿಳಿಸಿದೆ.
ಹಾವುಗಳನ್ನು ಹಿಡಿಯುವುದು, ಕೊಲ್ಲುವುದು ಶಿಕ್ಷಾರ್ಹ ಅಪರಾಧ ಏಕೆ?
1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಹಾವುಗಳನ್ನು ಕೊಲ್ಲುವುದು, ಸ್ಥಳಾಂತರ ಮಾಡುವುದು, ಓಡಿಸುವುದು, ಸೆರೆ ಹಿಡಿಯುವುದು, ಬಲೆಗೆ ಬೀಳಿಸುವುದು, ದೇಹದ ಅಂಗಗಳನ್ನು ತೆಗೆಯುವುದು, ಮೊಟ್ಟೆಯ ಗೂಡು ನಾಶ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನೂ ಓದಿ: ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್
ಭುವನೇಶ್ವರ್: ವಿಷಪೂರಿತ ಹಾವನ್ನು (Snake) ಹೆಂಡತಿ (Wife) ಮತ್ತು ಮಗಳು ಮಲಗಿದ್ದ ಕೋಣೆಗೆ ಬಿಟ್ಟು ಅವರನ್ನು ಕೊಲೆಗೈದಿದ್ದ ಆರೋಪಿಯನ್ನು ಒಡಿಶಾ (Odisha) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೆ.ಗಣೇಶ್ (25) ಎಂದು ಗುರುತಿಸಲಾಗಿದೆ. ಆರೋಪಿ ಅಧೇಗಾಂವ್ ಗ್ರಾಮದ ತನ್ನ ಮನೆಯಲ್ಲಿ ಹೆಂಡತಿ ಬಸಂತಿ ಪತ್ರಾ (23) ಹಾಗೂ ತನ್ನ 2 ವರ್ಷದ ಮಗಳು ದೇಬಾಸ್ಮಿತಾ ಮಲಗಿದ್ದ ವೇಳೆ ಅವರನ್ನು ಕೊಲ್ಲುವ ಉದ್ದೇಶದಿಂದ ರೂಂ ಒಳಗೆ ಹಾವನ್ನು ಬಿಟ್ಟಿದ್ದ. ಬಳಿಕ ಆಕಸ್ಮಿಕವಾಗಿ ಹಾವು ಕಚ್ಚಿದೆ ಎಂಬಂತೆ ಬಿಂಬಿಸಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಸಲು 74,000 ರೂ.ಗೆ ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಪೋಷಕರು – ಅಪ್ಪ-ಅಮ್ಮ ಅರೆಸ್ಟ್
ಈ ಸಂಬಂಧ ಮೃತ ಮಹಿಳೆಯ ಮಾವ ಅನುಮಾನ ವ್ಯಕ್ತಪಡಿಸಿ, ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ಭಾವಿಸಿದ್ದರು. ಬಳಿಕ ತನಿಖೆ ನಡೆಸಿ ಸಾಕ್ಷ್ಯ ಕಲೆಹಾಕಿ ಘಟನೆ ನಡೆದ ಒಂದು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಕ್ಟೋಬರ್ 6 ರಂದು ಹಾವಾಡಿಗನಿಂದ, ಧಾರ್ಮಿಕ ಕಾರ್ಯಕ್ರಮಕ್ಕೆ ಎಂದು ಹಾವು ತಂದಿದ್ದ ಎಂದು ತಿಳಿದು ಬಂದಿದೆ. ಮೊದಲು ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ. ಬಳಿಕ ತೀವ್ರ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಕೇರಳದ ಕೊಲ್ಲಂನಲ್ಲಿ ಆಸ್ತಿಗಾಗಿ ವ್ಯಕ್ತಿಯೊಬ್ಬ ಪತ್ನಿಯನ್ನು ಇದೇ ಮಾದರಿಯಲ್ಲಿ ಕೊಲೆಗೈದು ಹಾವಿನ ದ್ವೇಷದ ಕಥೆ ಕಟ್ಟಿದ್ದ. ಬಳಿಕ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗನಾಗಿದ್ದ. ಎಸ್.ಉತ್ತರ (25) ಕೊಲೆಯಾದ ಮಹಿಳೆ ಆಗಿದ್ದಳು. ಇದನ್ನೂ ಓದಿ: ಮಥುರಾದ ಪಟಾಕಿ ಮಳಿಗೆಯಲ್ಲಿ ಅಗ್ನಿ ಅವಘಡ- ಮೃತರ ಸಂಖ್ಯೆ 12ಕ್ಕೆ ಏರಿಕೆ
ಕಲಬುರಗಿ: ಹಾವು ಕಂಡ್ರೆ ಸಾಕು ಜನ ಮಾರುದ್ದ ಹೌಹಾರಿ ಓಡಿ ಹೋಗುತ್ತಾರೆ. ಅಂಥದ್ದರಲ್ಲಿ ಕಲಬುರಗಿಯ (Kalaburagi) ಓರ್ವ ಬಾಲಕನಿಗೆ ಕಳೆದ ಎರಡು ತಿಂಗಳಲ್ಲಿಯೇ 9 ಬಾರಿ ಹಾವು ಕಚ್ಚಿದೆಯಂತೆ.
ಹೌದು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್‍ಗೆ ಜುಲೈ 3ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಹಾವು (Snake Bite) ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಅಂತಾ ಬಾಲಕ ಹೇಳಿದ್ದಾನೆ. ಕೂಡಲೇ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಬೆಳಕಿಗೆ ಬಂದಿದೆ.
ಸದ್ಯ ಇಲ್ಲಿಯವರೆಗೆ 9 ಬಾರಿ ಹಾವು ಕಚ್ಚಿರುವ ಗುರುತುಗಳು ಕೂಡ ಆತನ ಕಾಲಿನಲ್ಲಿದೆ. ಅದರಲ್ಲಿ 5 ಬಾರಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ, ಇನ್ನುಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಪೋಷಕರು ಕೊಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಸಹ ಕಂಡಿಲ್ಲ. ಹೀಗಾಗಿ ಆತನ ಮನೆ ಸುತ್ತ ಹಾವು ಹುಡುಕುವುದೇ ಸದ್ಯ ನೆರೆಹೊರೆಯವರ ಕೆಲಸವಾಗಿದೆ. ಇದನ್ನೂ ಓದಿ: ಲೇಟ್ ಆದ್ರೂ ಲೆಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ
ಪ್ರತಿ ಬಾರಿ ಈ ಬಾಲಕ ಒಬ್ಬನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಹಲವು ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ. ಇನ್ನು ಪ್ರತಿ ಬಾರಿ ಹಾವು ಕಚ್ಚಿದೆ ಅಂದಾಗ ಸಾವಿರಾರು ರೂಪಾಯಿ ಖರ್ಚು ಮಾಡಿ ಇತನ ಪೋಷಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಾ ಇದೀಗ ದಿಕ್ಕು ಕಾಣದಂತಾಗಿದೆ. ಹೀಗಾಗಿ ಈತನ ಪೋಷಕರು ಸಿಕ್ಕ ಸಿಕ್ಕ ದೇವರುಗಳ ಮೊರೆ ಹೋಗುತ್ತಿದ್ದಾರೆ.
ನಾಗರ ಪಂಚಮಿ ಹಬ್ಬವನ್ನು (Naga Panchami Festival) ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷವಾಗಿ ಹಾವುಗಳನ್ನು (Snake) ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರು ಹಾವುಗಳನ್ನು ದೇವತೆಗಳಿಗೆ ಹೋಲಿಸಿ ‘ನಾಗದೇವತೆ’ ಎಂದು ಕರೆದಿದ್ದಾರೆ. ಹಾವುಗಳ ಪರಂಪರೆ ಕುರಿತು ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಿಂದ ಬಂದ ಅನೇಕ ಆಚರಣೆಗಳೂ ಜಾರಿಯಲ್ಲಿವೆ. ಆದರೆ ನಾಗ, ಫಲವನ್ನು ನೀಡುವ ದೇವರು ಎಂಬುದು ತುಂಬಾ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲಾಗಿದೆ. ಏಕೆಂದರೆ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇತರ ಜಂತುಗಳನ್ನ ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ನಾಗನ ಮಹಿಮೆಗಳನ್ನು ಸಾರುವ ಅನೇಕ ಸಿನಿಮಾಗಳೂ ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಮೂಡಿಬಂದಿವೆ. ಅವುಗಳತ್ತ ಒಮ್ಮೆ ಚಿತ್ತ ಹಾಯಿಸೋಣ….
ನಾಗಕನ್ಯೆ:
1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ನಿರ್ದೇಶನದ ಸಿನಿಮಾವಿದು. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತ್ಯಂ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ನಾಗಕನ್ಯೆಯ ಸಂಗೀತ ಅನೇಕ ವರ್ಷಗಳ ಕಾಲ ಇಂತಹ ಚಿತ್ರಗಳಿಗೆ ಮಾದರಿ ಆಗಿತ್ತು. ಇದನ್ನೂ ಓದಿ: ನಾಗಭೂಷಣ್, ಅಮೃತಾ ನಟನೆಯ ‘ಟಗರು ಪಲ್ಯ’ ಟೈಟಲ್ ಟ್ರ‍್ಯಾಕ್ ರಿಲೀಸ್
ಗರುಡರೇಖೆ:
1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಹಲವು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ. ಪಿ.ಎಸ್. ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಗರುಡ ರೇಖೆಯ ಮಹತ್ವವನ್ನು ತಿಳಿಸಲಾಗಿತ್ತು. ಗರುಡರೇಖೆ ಹೊಂದಿರುವ ವ್ಯಕ್ತಿಯ ಕಥೆಯನ್ನೂ ಇದು ಒಳಗೊಂಡಿತ್ತು.
ಬೆಳ್ಳಿನಾಗ:
1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’. ಟೈಗರ್ ಪ್ರಭಾಕರ್, ನಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎನ್.ಎಸ್ ಧನಂಜಯ್ ಅವರ ನಿರ್ದೇಶನ ಈ ಚಿತ್ರಕ್ಕಿದ್ದು, ವಿ.ಲಕ್ಷ್ಮಣ ಅವರ ಸಿನಿಮಾಟೋಗ್ರಫಿಯಲ್ಲಿ ನಾಗನನ್ನು ಅದ್ಭುತವಾಗಿ ತೋರಿಸಲಾಗಿತ್ತು. ಇದನ್ನೂ ಓದಿ: ಮೊದಲು ಪ್ರಪೋಸ್ ಮಾಡಿದ್ದು ಯಾರು? ಲವ್ ಸ್ಟೋರಿ ಬಿಚ್ಚಿಟ್ಟ ಹರ್ಷಿಕಾ-ಭುವನ್ ಜೋಡಿ
ನಾಗಿಣಿ:
1991ರಲ್ಲಿ ಬಂದಿದ್ದ ನಾಗಿಣಿ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಈ ಚಿತ್ರ ಸೇಡಿನ ಕಥೆಯನ್ನ ಒಳಗೊಂಡಿದೆ. ನಾಗರಾಜನನ್ನ ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು. ಶ್ರೀಪ್ರಿಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿತ್ತು.
ಶಿವನಾಗ:
1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನ ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆಎಸ್‌ಆರ್ ದಾಸ್ ಈ ಚಿತ್ರ ನಿರ್ದೇಶಿಸಿದ್ದರು. ಈ ಸಿನಿಮಾ ನೋಡಿದ ಅದೆಷ್ಟೂ ಅಭಿಮಾನಿಗಳು ಶಿವನಾಗ ಪೂಜೆಯನ್ನು ಕೈಗೊಂಡಿದ್ದು ಇತಿಹಾಸ.
ಖೈದಿ:
ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ಖೈದಿ ಸಿನಿಮಾದ ಹಾಡೊಂದು ಇಂದಿಗೂ ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ ‘ತಾಳೆ ಹೂವು ಪೊದೆಯಿಂದ…’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ. ಈ ಸಿನಿಮಾ ಬಿಡುಗಡೆಯಾದ ವೇಳೆಯಲ್ಲಿ ಶಾಲಾ ಕಾಲೇಜು ಸಮಾರಂಭದಲ್ಲಿ ಅತೀ ಹೆಚ್ಚು ಮಕ್ಕಳು ಡಾನ್ಸ್ ಮಾಡಿದ ಹಾಡು ಇದಾಗಿತ್ತು.
ನಾಗಮಂಡಲ:
ಗಿರೀಶ್ ಕಾರ್ನಾಡ್ ಅವರ ನಾಟಕವನ್ನು ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿ.ಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ 5 ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಎರಡು ಬಗೆಯ ಪಾತ್ರ ಮಾಡಿದ್ದರು. ಒಂದು ಮನುಷ್ಯನ ಪಾತ್ರವಾದರೆ, ಮತ್ತೊಂದು ಹಾವಿನ ಪಾತ್ರ. ಅಣ್ಣಪ್ಪನ ಹೆಂಡತಿಯನ್ನು ಹಾವಾಗಿ ಬಂದು ಮೋಹಿಸುವ ಕಥೆಯನ್ನು ಇದು ಒಳಗೊಂಡಿತ್ತು. ವಿಜಯಲಕ್ಷ್ಮಿ ಈ ಸಿನಿಮಾದ ನಾಯಕಿ. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ನಾಗ ಪೂಜೆಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಗೀತೆಯೊಂದನ್ನು ಸಂಯೋಜನೆ ಮಾಡಿದ್ದರು ಸಿ.ಅಶ್ವತ್ಥ್.
ನಾಗದೇವತೆ:
2000ನೇ ವರ್ಷದಲ್ಲಿ ತೆರೆಗೆ ಬಂದ ಸಿನಿಮಾ ನಾಗದೇವತೆ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಪ್ರೇಮ, ಚಾರುಲತಾ, ಸೌಂದರ್ಯ, ಸಾಯಿ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು. ಸೌಂದರ್ಯ ನಾಗದೇವತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ನಾಗ ದೇವತೆಯನ್ನು ಪೂಜಿಸುವುದರಿಂದ ಆಗುವ ಲಾಭದ ಕುರಿತಾದ ಸಿನಿಮಾ ಇದಾಗಿತ್ತು.
ಶ್ರೀನಾಗಶಕ್ತಿ:
ಭಕ್ತಿ ಪ್ರಧಾನ ಕಥೆಗಳಿಗೆ ಹೆಸರುವಾಸಿವಾಗಿರುವ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಬಂದ ಸಿನಿಮಾ ಶ್ರೀನಾಗಶಕ್ತಿ. ಶ್ರುತಿ, ರಾಮ್ ಕುಮಾರ್ ಹಾಗೂ ಚಂದ್ರಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಂದ್ರಿಕಾ ಈ ಸಿನಿಮಾದಲ್ಲಿ ಹಾವಿನ ಪಾತ್ರ ಮಾಡಿದ್ದರು. ಚಂದ್ರಿಕಾ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟ ಸಿನಿಮಾ ಕೂಡ ಇದಾಗಿದೆ. 2011ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.
ಹಾವಿನ ಮಹಿಮೆ ಸಾರುವ ಕನ್ನಡ ಸಿನಿಮಾಗಳು:
ನಾಗದೇವತೆ-ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಅನೇಕ ಸಿನಿಮಾಗಳು ತೆರೆಯಲ್ಲಿ ಮಿಂಚಿವೆ. 1972ರಲ್ಲಿ ವಿಷ್ಣುವರ್ಧನ್, 2002ರಲ್ಲಿ ಉಪೇಂದ್ರ ಹಾಗೂ 2016ರಲ್ಲಿ ರಮ್ಯಾ-ದಿಗಂತ್ ನಟಿಸಿದ ಚಿತ್ರಕ್ಕೆ ʻನಾಗರಹಾವುʼಎಂದು ಹೆಸರಿಡಲಾಗಿತ್ತು. ರುದ್ರನಾಗ, ನಾಗರಹೊಳೆ, ನಾಗ ಕಾಳ ಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿವೆ.
ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ನಾಗದೇವತೆ ಕುರಿತಾದ ಧಾರಾವಾಹಿಗಳು ಬಂದಿವೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯವಾದ ಧಾರಾವಾಗಿ ಎಂದರೆ ಅದು ‘ನಾಗಿಣಿ’. ಇತ್ತೀಚೆಗೆ ನಾಗಿಣಿಯ ಕಥಾ ಹಂದರವನ್ನು ಹೊಂದಿರುವ ಸಾಕಷ್ಟು ಧಾರಾವಾಹಿಗಳು ಕಿರಿತೆರೆಯಲ್ಲಿ ಪ್ರಸಾರವಾಗುತ್ತಿವೆ. ಹಾವಿನ ಟ್ರೆಂಡ್ ಇದೀಗ ಕಿರುತೆರೆಯಲ್ಲಿ ಜನಪ್ರಿಯ.