Tag: ಹಾವಿನ ಮರಿ

  • ಪೈಪಿನಲ್ಲಿ ಹೆಬ್ಬಾವು ಮರಿ ಹಿಡಿದ ಪೇಜಾವರ ಶ್ರೀ

    ಪೈಪಿನಲ್ಲಿ ಹೆಬ್ಬಾವು ಮರಿ ಹಿಡಿದ ಪೇಜಾವರ ಶ್ರೀ

    – ಉಡುಪಿಯ ನೀಲಾವರ ಗೋಶಾಲೆಯಲ್ಲಿ ರಕ್ಷಣೆ

    ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇಜಾವರ ಮಠದಲ್ಲಿ ಅಡ್ಡಾಡುತ್ತಿದ್ದ ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಲಾಗಿದೆ. ಹಾವನ್ನು ರಕ್ಷಣೆ ಮಾಡಿದ್ದು ಮತ್ಯಾರೂ ಅಲ್ಲ, ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು.

    ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ತುಂಬಿದ್ದಾರೆ. ನಂತರ ಅದನ್ನು ಮಠದ ತೋಟಕ್ಕೆ ತಂದು ಬಿಟ್ಟಿದ್ದಾರೆ. ಮಾಮೂಲಿಯಾಗಿ ಹೆಬ್ಬಾವು ಹತ್ತಾರು ಸಂಖ್ಯೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ. ಹರಿದಾಡಲು ಶುರು ಮಾಡಿದ ಮೇಲೆ ಮರಿಗಳು ಸ್ವತಂತ್ರ ಆಗುತ್ತವೆ. ಹೀಗೆ ಗುಂಪಿನಿಂದ ಬೇರ್ಪಟ್ಟ ಹೆಬ್ಬಾವಿನ ಮರಿ ಮಠದೊಳಗೆ ಬಂದಿತ್ತು.

    ದನ ಕರುಗಳಿರುವ ಹಟ್ಟಿಯತ್ತ ಹೋಗಿತ್ತು. ಹಸುಗಳ ಕಾಲಿನಡಿ ಹಾವು ಸಿಲುಕಬಾರದೆಂದು ಸ್ವಾಮೀಜಿ ಹೆಬ್ಬಾವು ಮರಿ ರಕ್ಷಣೆ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತಮಾಡಿದ ಅವರು, ನೀಲಾವರ ಗೋಶಾಲೆ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಕಾಡುಪ್ರಾಣಿಗಳ ಓಡಾಟ ಸಾಮಾನ್ಯ. ಹೆಬ್ಬಾವಿನ ಮರಿ ಆಗಿರುವುದರಿಂದ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ಕೃಷಿ ಚಟುವಟಿಕೆ ಮಾಡುವಾಗ ಹಾವು ಕಾಣ ಸಿಗುತ್ತಿರುತ್ತದೆ ಎಂದರು.

  • 45 ಹಾವಿನ ಮರಿ ರಕ್ಷಿಸಿ ಕೆರೆಯ ಬಳಿ ಬಿಟ್ಟ ಉರಗ ತಜ್ಞ

    45 ಹಾವಿನ ಮರಿ ರಕ್ಷಿಸಿ ಕೆರೆಯ ಬಳಿ ಬಿಟ್ಟ ಉರಗ ತಜ್ಞ

    ಧಾರವಾಡ: ಜಿಲ್ಲೆಯ ಉರಗ ತಜ್ಞರೊಬ್ಬರು ಸುಮಾರು 45 ಹಾವಿನ ಮರಿಗಳನ್ನ ರಕ್ಷಿಸಿ ಅದನ್ನು ಕೆರೆ ದಂಡೆ ಬಳಿ ಬಿಟ್ಟು ಮಾನವಿಯತೆ ಮೆರೆದಿದ್ದಾರೆ.

    ಧಾರವಾಡದ ಕಲ್ಯಾಣನಗರದ ಮಂಜುನಾಥ ಕಾಲೋನಿಯ ಕವಿತಾ ದೇವರ ಅವರ ಮನೆ ಪಕ್ಕ ಹಾವೊಂದು ಮೊಟ್ಟೆ ಇಟ್ಟು ಹೋಗಿತ್ತು. ಈ ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬಂದಿವೆ. ಇದನ್ನ ನೋಡಿದ ಮನೆಯ ಮಾಲೀಕರು ಉರಗ ತಜ್ಞ ಮಂಜು ಭಜಂತ್ರಿಯವರಿಗೆ ಮಾಹಿತಿ ತಿಳಿಸಿದ್ದಾರೆ. ಮಂಜು ಅವರು ಈ ಮರಿಗಳನ್ನ ರಕ್ಷಿಸಿ ಅವುಗಳನ್ನು ತಂದು ಸುರಕ್ಷಿತವಾಗಿ ಕೆರೆಯ ಪಕ್ಕದಲ್ಲಿ ಬಿಟ್ಟಿದ್ದಾರೆ.

    ಈ ಹಾವಿನ ಮರಿಗಳು ಚಾಗರೆಟ್ ಎಂಬ ಕೆರೆ ಹಾವಿನ ಜಾತಿಗೆ ಸೇರಿದ್ದು, ಇವು ಯಾರಿಗಾದರೂ ಕಚ್ಚಿದರೂ ವಿಷ ಏರಲ್ಲ ಎನ್ನಲಾಗುತ್ತೆ. ಯಾಕಂದರೆ ಇವು ಕೆರೆಯ ಹಾವಿನ ಮರಿಗಳಾಗಿರುವುದರಿಂದ ಇವುಗಳಲ್ಲಿ ವಿಷ ಇರಲ್ಲ. ಆದರೆ ಜನರಿಗೆ ಈ ಬಗ್ಗೆ ಗೊತ್ತಿರಲ್ಲ, ಹೀಗಾಗಿ ಯಾವುದೇ ಹಾವು ಕಚ್ಚಿದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಈ ಉರಗ ತಜ್ಞ ತಿಳಿಸಿದರು. ಮಂಗಳವಾರ ಸಂಜೆ ಈ ಮರಿಗಳನ್ನ ಹಿಡಿದಿದ್ದ ಮಂಜು, ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇವುಗಳನ್ನ ಹಿಡಿದು ತಂದು ಕೆರೆಯ ಪಕ್ಕದಲ್ಲಿ ಬಿಟ್ಟು, ಈ ಹಾವಿನ ಮರಿಗಳನ್ನ ಉಳಿಸಿದ್ದಾರೆ.

  • ಶೂ ಒಳಗೆ ಸೈಲೆಂಟಾಗಿ ಕೂತ ಪುಟಾಣಿ ನಾಗ!

    ಶೂ ಒಳಗೆ ಸೈಲೆಂಟಾಗಿ ಕೂತ ಪುಟಾಣಿ ನಾಗ!

    -ಬೆಳಗ್ಗೆ ಬಾಗಿಲು ತೆರೆದವರಿಗೆ ದರ್ಶನ ಕೊಟ್ಟ ಹಾವು

    ಬೆಂಗಳೂರು: ಮನೆ ಹೊರಗಡೆ ಇರಿಸಲಾಗಿದ್ದ ಶೂ ಒಳಗೆ ಸೈಲೆಂಟಾಗಿ ಕೂತಿದ್ದ ಪುಟಾಣಿ ಹಾವಿನ ಮರಿಗಳನ್ನು ಕಂಡು ಮನೆಮಂದಿಯಲ್ಲ ಗಾಬರಿಗೊಂಡಿದ್ದಾರೆ.

    ಶೂ ಧರಿಸುವಾಗ ಎಚ್ಚರವಹಿಸಿ ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿರತ್ತೋ ಎಂಬ ಮಾತಿನಂತೆ ಈಗ ಯಾವ ಶೂನಲ್ಲಿ ಯಾವ ಹಾವಿರತ್ತೋ ಎನ್ನುವ ಸ್ಥಿತಿ ಬಂದಿದೆ. ಹೌದು. ಬೆಂಗಳೂರಿನ ವಿದ್ಯಾರಣ್ಯಪುರದ ಮನೆಯೊಂದರಲ್ಲಿ ಶೂನೊಳಗೆ ಹಾವಿನ ಮರಿ ಸೇರಿಕೊಂಡ ಘಟನೆ ನಡೆದಿದೆ. ಮನೆಯಲ್ಲಿದ್ದ ಶೂ ಹಾಗೂ ಚಪ್ಪಲಿ ರಾಶಿಯಲ್ಲಿದ್ದ ಶೂ ಒಳಗೆ ಹಾವಿನ ಮರಿಯೊಂದು ಸೇರಿಕೊಂಡಿದ್ದು, ಚಪ್ಪಲಿ ರಾಶಿಯಲ್ಲಿ ಎನೋ ಸದ್ದಾಗುತ್ತಿದೆ ಎಂದು ಮನೆಮಂದಿ ಹತ್ತಿರ ಹೋಗಿ ನೋಡಿದಾಗ ಹಾವಿನ ಮರಿ ಪತ್ತೆಯಾಗಿದೆ.

     

    ಹಾವನ್ನು ಕಂಡು ಗಾಬರಿಯಾಗಿ ಮನೆಯವರು ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಉರಗ ತಜ್ಞ ರಾಜೇಶ್ ಅವರು ಹಾವನ್ನು ಶೂ ಇಂದ ಹೊರತೆಗೆದು ರಕ್ಷಿಸಿದ್ದಾರೆ.

    ಇನ್ನೊಂದೆಡೆ, ಪುಟ್ಟ ನಾಗರಾಜ ದೊಮ್ಮಲೂರಿನಲ್ಲಿ ಇರುವ ಮನೆಯೊಂದರ ಬಾಗಿಲಿನಿ ಮುಂದೆ ಸೈಲೆಂಟಾಗಿ ಕೂತಿತ್ತು. ಬೆಳಗ್ಗೆ ಮನೆಮಂದಿ ಬಾಗಿಲು ತೆಗೆಯುತ್ತಿದ್ದಂತೆ ಹಾವಿನ ಮರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಉರಗ ತಜ್ಞ ಜಯರಾಜ್ ಹಾವನ್ನು ಸೆರೆಹಿಡಿದು ರಕ್ಷಿಸಿ ಮನೆಮಂದಿಯ ಆತಂಕ ದೂರ ಮಾಡಿದ್ದಾರೆ.

    https://www.youtube.com/watch?v=uAMKmcXmC-U

  • ರಸ್ತೆಯಲ್ಲಿ ಹೋಗ್ತಿದ್ದ ಹಾವಿನ ಮರಿಯನ್ನು ಹಿಡಿದು ತಿಂದೇ ಬಿಟ್ಟ

    ರಸ್ತೆಯಲ್ಲಿ ಹೋಗ್ತಿದ್ದ ಹಾವಿನ ಮರಿಯನ್ನು ಹಿಡಿದು ತಿಂದೇ ಬಿಟ್ಟ

    ಪಾಟ್ನಾ: ಪಾನಮತ್ತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಹಾವಿನ ಮರಿಯನ್ನು ತಿಂದು ಸಾವನ್ನಪ್ಪಿರುವ ವಿಚಿತ್ರ ಘಟನೆ ಶನಿವಾರ ನಡೆದಿದೆ.

    ಮಹಿಪಾಲ್ ಹಾವಿನ ಮರಿ ತಿಂದು ಸಾವನ್ನಪ್ಪಿದ ವ್ಯಕ್ತಿ. ಅಮರೋಹಾ ಜಿಲ್ಲೆಯ ನಿವಾಸಿಯಾಗಿದ್ದ ಮಹಿಪಾಲ್ ಶನಿವಾರ ನಶೆಯಲ್ಲಿ ತೂರಾಡುತ್ತಾ ಬರುತ್ತಿದ್ದನು. ಈ ಮಧ್ಯೆ ಆತನಿಗೆ ಪುಟಾಣಿ ಹಾವಿನ ಮರಿಯೊಂದು ಸಿಕ್ಕಿದೆ. ಕೂಡಲೇ ಹಾವಿನ ಮರಿಯನ್ನು ಕೈಯಲ್ಲಿ ಹಿಡಿದುಕೊಂಡ ಮಹಿಪಾಲ್ ಅದರೊಂದಿಗೆ ಆಟವಾಡಿದ್ದಾನೆ.

    ರಸ್ತೆಯಲ್ಲಿ ನಿಂತಿದ್ದ ಮಹಿಪಾಲ್ ನೋಡ ನೋಡುತ್ತಿದ್ದಂತೆ ಜೀವಂತ ಹಾವಿನ ಮರಿಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಮರಿಯನ್ನ ಹೊರ ಉಗುಳದೇ ಒಂದೆರಡು ಸಾರಿ ಅಗಿದು ನುಂಗಿದ್ದಾನೆ ಎಂದು ಹೇಳಲಾಗಿದೆ. ಹಾವಿನ ಮರಿಯನ್ನು ಬಾಯಿಯಲ್ಲಿ ಹಾಕಿಕೊಳ್ಳತ್ತಿದ್ದಂತೆ ಜನರು ಸೇರಿದ್ದಾರೆ. ಆರಂಭದಲ್ಲಿ ಆರೋಗ್ಯವಾಗಿ ಕಾಣಿಸುತ್ತಿದ್ದರೂ, ಕೆಲ ಸಮಯದ ಬಳಿಕ ಆತನ ದೇಹದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.

    ಸ್ಥಳೀಯರು ಕೂಡಲೇ ಅಸ್ವಸ್ಥಗೊಂಡ ಮಹಿಪಾಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾವು ತಿಂದ ಬಳಿಕ ಬರೋಬ್ಬರಿ 4 ಗಂಟೆಯ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಹಿಪಾಲ್ ಹಾವು ತಿನ್ನುತ್ತಿರುವ ವಿಡಿಯೋವನ್ನು ಕೆಲವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ಮಹಿಪಾಲ್‍ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವನ್ನಪ್ಪಿದ ಮಹಿಪಾಲ ಪತ್ನಿ ಹಾಗು ನಾಲ್ವರು ಮಕ್ಕಳನ್ನು ಅಗಲಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಗರಹಾವಿನ ಮರಿಗಳ ಜಗಳ- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ನಾಗರಹಾವಿನ ಮರಿಗಳ ಜಗಳ- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಉಡುಪಿ: ನಾಗರಹಾವು- ಮುಂಗುಸಿ ಜಗಳ ಆಡೋದನ್ನು ನೋಡಿದ್ದೀರಿ. ಆದ್ರೆ ಇದು ನಾಗರ ಹಾವಿನ ಮರಿಗಳ ಜಗಳ.

    ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಶಿಲೆ ಕಲ್ಲು ರಾಶಿಯಲ್ಲಿ ನಾಗರ ಹಾವು ಅವಿತಿತ್ತು. ಕಲ್ಲು ತೆರವು ಮಾಡುವಾಗ ಹಾವಿನ ಬಲಭಾಗದ ವಿಷದಗ್ರಂಥಿಗೆ ಏಟಾಗಿತ್ತು. ಹಾವು ಹಿಡಿಯುವ ಬಾಬಣ್ಣ ಎಂಬವರು ಈ ಹಾವನ್ನು ಉರಗತಜ್ಞ ಗುರುರಾಜ ಸನಿಲ್ ಅವರಿಗೆ ನೀಡಿದ್ದರು. ಇದರ ಶುಶ್ರೂಷೆ ನಡೆಸುತ್ತಿರುವಾಗಲೇ 20 ಮೊಟ್ಟೆಯನ್ನಿಟ್ಟಿತ್ತು. ಕೃತಕ ಕಾವಿನ ವ್ಯವಸ್ಥೆ ಮಾಡಿ, 12 ಮರಿಗಳನ್ನು ಉಳಿಸಕೊಳ್ಳಲಾಗಿದೆ.

    ಮೊದಲ ಬಾರಿಗೆ ಮೊಟ್ಟೆಯೊಡೆದು ಹಾವಿನ ಮರಿಗಳು ಹೊರಬಂದ ದೃಶ್ಯವನ್ನು ನಾವಿಲ್ಲಿ ನೋಡಬಹುದು. ಆಟವೋ, ಕಚ್ಚಾಟವೋ ನಾಗನ ಮರಿಗಳು ಭಯಗೊಂಡು ಒಂದನ್ನೊಂದು ಬೆದರಿಸುವ, ತುಂಟಾಟ ಮಾಡುವ ದೃಶ್ಯ ಮಾತ್ರ ಎಲ್ಲರ ಗಮನಸೆಳೆದಿದೆ. ಇದೀಗ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

    https://www.youtube.com/watch?v=k0FYf5MPdOU&feature=youtu.be