Tag: ಹಾಲಿನ ವಾಹನ

  • ನಾಯಿ ತಪ್ಪಿಸಲು ಹೋಗಿ ವಾಹನ ಪಲ್ಟಿ- ಸಾವಿರ ಲೀಟರ್ ಹಾಲು ರಸ್ತೆ ಪಾಲು

    ನಾಯಿ ತಪ್ಪಿಸಲು ಹೋಗಿ ವಾಹನ ಪಲ್ಟಿ- ಸಾವಿರ ಲೀಟರ್ ಹಾಲು ರಸ್ತೆ ಪಾಲು

    ಧಾರವಾಡ: ಬೀದಿ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಹಾಲಿನ ವಾಹನ ಪಲ್ಟಿಯಾಗಿದ್ದು, 1 ಸಾವಿರಕ್ಕೂ ಅಧಿಕ ಲೀಟರ್ ಹಾಲು ರಸ್ತೆ ಪಾಲಾಗಿವೆ.

    ನಗರದ ಜೆಎಸ್‍ಎಸ್ ಕಾಲೇಜ್ ಬಳಿ ಘಟನೆ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ಧಾರವಾಡ ಕೆಎಂಎಫ್‍ಗೆ ಹಾಲು ತುಂಬಿಕೊಂಡು ಬರುತ್ತಿದ್ದ ಬುಲೆರೊ ಗುಡ್ಸ್ ವಾಹನ ಪಲ್ಟಿಯಾಗಿದೆ. ನಾಯಿ ತಪ್ಪಿಸಲು ಹೋಗಿ ಬಿಆರ್ ಟಿಎಸ್ ಬಸ್ ಕಾರಿಡಾರ್ ನ ಬ್ಯಾರಿಕೇಡ್ ಗೆ ಡಿಕ್ಕಿ ಹೊಡದು ಪಲ್ಟಿಯಾಗಿದೆ. ಒಂದು ಸಾವಿರ ಲೀಟರ್ ಹಾಲು ರಸ್ತೆ ಪಾಲಾಗಿವೆ.

    ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಲಿನ ವಾಹನಕ್ಕೆ ನಾಯಿ ಅಡ್ಡ ಬಂದಿದ್ದರಿಂದ ಘಟನೆ ಸಂಭವಿಸಿದೆ.

  • ಹಾಲಿನ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ – ಇಬ್ಬರ ಬಂಧನ

    ಹಾಲಿನ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ – ಇಬ್ಬರ ಬಂಧನ

    – ವಾಹನ ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರು

    ಮಂಗಳೂರು: ಹಾಲಿನ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಟೆಂಪೋವನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಕೆಎ 19 ಎಸಿ 4688 ನಂಬರಿನ ಹಾಲಿನ ಟೆಂಪೋದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಆಗುತ್ತಿದೆ ಎಂದು ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ಮಂಗಳೂರಿನ ಪಂಪ್ ವೆಲ್ ಬಳಿ ಕಾಯುತ್ತಿದ್ದರು. ಈ ವೇಳೆ ಹಾಲಿನ ವಾಹನ ಆಗಮಿಸಿದ್ದು ಕಾರ್ಯಕರ್ತರು ಟೆಂಪೋವನ್ನು ಬೆನ್ನಟ್ಟಿಕೊಂಡು ಬಂದಿದ್ದಾರೆ.

    ಟೆಂಪೋ ನಗರದ ವೆನ್ಲಾಕ್ ಆಸ್ಪತ್ರೆ ಬಳಿ ಅಂಗಡಿಗೆ ಹಾಲು ಹಾಕಲು ನಿಲ್ಲಿಸಿದಾಗ ಹಿಂಬಾಲಿಸಿಕೊಂಡು ಬಂದಿದ್ದ ಕಾರ್ಯಕರ್ತರು ಟೆಂಪೋವನ್ನು ಅಡ್ಡಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಬಂದರು ಠಾಣಾ ಪೊಲೀಸರು ಗೋಮಾಂಸ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂದರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  • ಸೇತುವೆಗೆ ವಾಹನ ಡಿಕ್ಕಿ- ಮಂಡ್ಯದಲ್ಲಿ ನೂರಾರು ಪ್ಯಾಕೆಟ್ ನಂದಿನಿ ಹಾಲು ಮಣ್ಣುಪಾಲು!

    ಸೇತುವೆಗೆ ವಾಹನ ಡಿಕ್ಕಿ- ಮಂಡ್ಯದಲ್ಲಿ ನೂರಾರು ಪ್ಯಾಕೆಟ್ ನಂದಿನಿ ಹಾಲು ಮಣ್ಣುಪಾಲು!

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಂದಿನಿ ಹಾಲಿನ ವಾಹನವೊಂದು ರಸ್ತೆ ಬದಿ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಬಳಿ ಇಂದು ಮುಂಜಾನೆ ನಡೆದಿದೆ.

    ಉರುಳಿ ಬಿದ್ದ ಪರಿಣಾಮ ನೂರಾರು ನಂದಿನಿ ಹಾಲಿನ ಪ್ಯಾಕೆಟ್ ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೇ ಅದರಲ್ಲಿ ಕೆಲವೊಂದು ಹಾಲಿನ ಪ್ಯಾಕೆಟ್ ಒಡೆದು ಹೋದ ಪರಿಣಾಮ ಹಾಲು ಮಣ್ಣು ಪಾಲಾಗಿದೆ.

    ಚೆನ್ನಾಗಿರುವ ಹಾಲಿನ ಪ್ಯಾಕೆಟ್ ಗಳನ್ನು ಬೇರೊಂದು ವಾಹನದಲ್ಲಿ ಬೆಳ್ಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಒಂದಷ್ಟು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.