Tag: ಹಾಲಿನ ದರ ಏರಿಕೆ

  • ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಸಾಧ್ಯತೆ – ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಗೆ ಚರ್ಚೆ?

    ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಸಾಧ್ಯತೆ – ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಕೆಗೆ ಚರ್ಚೆ?

    ಬೆಂಗಳೂರು: ರಾಜ್ಯದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾದ ಬಳಿಕ ಇದೀಗ ಮತ್ತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಸರ್ಕಾರ (State Government) ಮತ್ತೆ ಜನರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.

    ಹೌದು, ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆಯನ್ನು ಸರ್ಕಾರ ಲೀಟರ್‌ಗೆ 4 ರೂ. ಏರಿಕೆ ಮಾಡಿ, ಜನರಿಗೆ ಶಾಕ್ ಕೊಟ್ಟಿತ್ತು. ಈ ದರ ಏರಿಕೆಯ ಭಾರ ಹೊರುತ್ತಿರುವಾಗಲೇ ಮತ್ತೆ ಹಾಲಿನ ದರ ಏರಿಕೆ ವಿಚಾರ ಚರ್ಚೆಗೆ ಬಂದಿದ್ದು, ಮತ್ತೆ ದರ ಹೆಚ್ಚಳವಾಗುತ್ತಾ ಎನ್ನುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 18-05-2025

    ಇದೇ ತಿಂಗಳ 21ಕ್ಕೆ ಈಗಿನ ಕೆಎಂಎಫ್ (KMF) ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಇದೇ 25ಕ್ಕೆ ಹೊಸ ನಿರ್ದೇಶಕರ ಆಯ್ಕೆ ಆಗಲಿದೆ. ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಮುಂದೆ ಮತ್ತೆ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲು ಚರ್ಚೆ ನಡೆಯುತ್ತಿದೆ.

    ಈ ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಸುಳಿವು ನೀಡಿದ್ದಾರೆ. ಬಮುಲ್‌ನ 18 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಕನಕಪುರ ತಾಲೂಕು ನಿರ್ದೇಶಕ ಸ್ಥಾನಕ್ಕೆ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಿದ್ದಾರೆ. ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ಡಿಕೆ ಸುರೇಶ್ ಕೆಎಂಎಫ್ ಅಧಿಕಾರ ಹಿಡಿಯಲು ಹಲವು ಬದಲಾವಣೆ ಮಾಡಬೇಕಿದೆ. ರೈತರಿಗೆ ಒಳ್ಳೆಯದನ್ನು ಮಾಡಬೇಕಿದೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗಿ ಬಂದರೆ, ಸಿಎಂ, ಡಿಸಿಎಂಗೆ ಹತ್ತಿರವಿರುವ ಕಾರಣ ರೈತರಿಗೆ ದರ ಹೆಚ್ಚಳ ಮಾಡಲು ಸಹಕಾರಿಯಾಗಲಿದ್ದು, ಇನ್ನೂ ಹತ್ತು ರೂ. ಹೆಚ್ಚಳ ನೀಡಬೇಕಿದೆ. ಡಿಕೆ ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ ಸಿಎಂ ಜೊತೆ ಮಾತನಾಡಿ 5 ರೂ. ಆದರೂ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

    ಕೆಎಂಎಫ್ ಆಡಳಿತ ಮಂಡಳಿ ಬದಲಾವಣೆ ಬಳಿಕ ಈ ಎಲ್ಲಾ ಬೆಳವಣಿಗೆಗಳು ಶೀಘ್ರವೇ ಆರಂಭವಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಜನ ಈಗಾಗಲೇ ದರ ಏರಿಕೆಯಿಂದ ಕಂಗೆಟ್ಟಿದ್ದು, ಈ ಮಧ್ಯೆ ಮತ್ತೆ ಸರ್ಕಾರ ದರ ಏರಿಕೆ ಬಗ್ಗೆ ಯೋಚನೆ ಮಾಡುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.ಇದನ್ನೂ ಓದಿ: ಸ್ವಾದಿಷ್ಟವಾದ ಕಡಾಯಿ ಪನ್ನೀರ್‌ ಹೀಗೆ ಮಾಡಿ..

     

  • ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

    ಅರ್ಥಶಾಸ್ತ್ರದ ಬಗ್ಗೆ ಗೊತ್ತಿರೋರು ಬೆಲೆ ಏರಿಕೆ ವಿರೋಧ ಮಾಡಲ್ಲ: ಆರ್.ವಿ.ದೇಶಪಾಂಡೆ

    ಬೆಂಗಳೂರು: ಅರ್ಥಶಾಸ್ತ್ರದ(Economics) ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ದೇಶಪಾಂಡೆ(R V Deshpande) ಅವರು ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.

    ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ವಿರೋಧಿಸಿ ಬಿಜೆಪಿ(BJP) ಅಹೋರಾತ್ರಿ ಧರಣಿ ಮಾಡುವುದು ಅವರ ಇಷ್ಟ. ಆದರೆ, ಅದರಲ್ಲಿ ಯಶಸ್ಸು ಆಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಬೆಲೆ ಏರಿಕೆ ಮಾಡಿರಲಿಲ್ವಾ? ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಪ್ರಮುಖ ಕಾರಣ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವರು ವಕ್ಫ್ ಆಸ್ತಿ ಕಬಳಿಕೆ ಮುಚ್ಚಿ ಹಾಕಲು ತಿದ್ದುಪಡಿಗೆ ವಿರೋಧ ಮಾಡ್ತಿದ್ದಾರೆ: ಬೊಮ್ಮಾಯಿ

    ರಾಜ್ಯ ಸರ್ಕಾರ ಹಾಲಿನ ದರ ಏರಿಕೆ(Milk Rate Hike) ಮಾಡಿದೆ. ಇದಕ್ಕೆ ಕಾರಣ ಮೇವಿನ ಬೆಲೆ ಜಾಸ್ತಿ ಆಗಿರುವುದು. ಬೆಲೆ ಏರಿಕೆ ಆದಾಗ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಹಣ ಎಲ್ಲಿಂದ ತರಲು ಆಗುತ್ತದೆ. ಸರ್ಕಾರ ಸ್ವಲ್ಪ ಬೆಲೆ ಏರಿಕೆ ಮಾಡಿದೆ ನಿಜ. ಹಾಗಂತ ಜನರನ್ನ ಲೂಟಿ ಮಾಡಲು ಮಾಡಿದೆ ಎಂದು ಹೇಳುವುದು ಸರಿಯಲ್ಲ. ಪೆಟ್ರೋಲ್, ಡೀಸೆಲ್ ದರ ಕಂಟ್ರೋಲ್ ಮಾಡುವುದು ಕೇಂದ್ರ ಸರ್ಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯವಾಗಿರುತ್ತದೆ. ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವವರು ಯಾರು ಬೆಲೆ ಏರಿಕೆ ವಿರೋಧಿಸಲ್ಲ ಇದು ರಿಯಾಲಿಟಿ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ನೀತಿ ಪಾಠ ಬೋಧನೆ ಮಾಡಿದರು. ಇದನ್ನೂ ಓದಿ: ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಶೈನ್ ಶೆಟ್ಟಿ ಗುಡ್ ಬೈ- ಫ್ಯಾನ್ಸ್‌ಗೆ ಬಹಿರಂಗ ಪತ್ರ ಬರೆದ ನಟ

    ಜನರಿಗೆ ತೊಂದರೆ ಆಗಲು ಬೆಲೆ ಏರಿಕೆ ಮಾಡಿಲ್ಲ. ಕಾಂಗ್ರೆಸ್ ಏನೇ ಮಾಡಿದರೂ ನ್ಯಾಯ ಬದ್ಧವಾಗಿ ಮಾಡುತ್ತದೆ. ಅನೇಕ ಯೋಜನೆಯನ್ನು ಜನರಿಗಾಗಿಯೇ ತರುತ್ತಿದ್ದೇವೆ. ಅದರ ಲಾಭ ಎಲ್ಲರಿಗೂ ಹೋಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಎಲ್ಲಾ ಜನರಿಗೆ ಅನುಕೂಲ ಆಗಿದೆ ಎಂದು ಸಮರ್ಥಿಸಿಕೊಂಡರು.

  • ಯತ್ನಾಳ್ ಉಚ್ಚಾಟನೆ ದುರಾದೃಷ್ಟಕರ: ಶರಣಪ್ರಕಾಶ್ ಪಾಟೀಲ್

    ಯತ್ನಾಳ್ ಉಚ್ಚಾಟನೆ ದುರಾದೃಷ್ಟಕರ: ಶರಣಪ್ರಕಾಶ್ ಪಾಟೀಲ್

    – ಹಾಲಿನ ದರ ಏರಿಕೆಯ ಹೆಚ್ಚುವರಿ ಹಣ ರೈತರಿಗೆ ಸೇರುತ್ತೆ

    ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದಾರೆ. ಅವರನ್ನು ಉಚ್ಚಾಟನೆ ಮಾಡಿರುವುದು ದುರಾದೃಷ್ಟಕರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanaprakash Patil) ಹೇಳಿದರು.

    ಕಲಬುರಗಿಯಲ್ಲಿ (Kalaburagi) ನಡೆಸಿದ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ರಾಜಕಾರಣದಲ್ಲಿ ಉಚ್ಚಾಟನೆಯಂತಹ ಘಟನೆಗಳು ನಡೆಯಬಾರದು. ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಅವರನ್ನು ಕರೆತರಲು ತಾವು ಸಾಮರ್ಥ್ಯ ಹೊಂದಿಲ್ಲ. ಅದಕ್ಕಾಗಿ ಬೇರೆ ವ್ಯಕ್ತಿಗಳು ಇದ್ದಾರೆ ಎಂದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಗೆ ನಾನು ಹೊಣೆ ಅಲ್ಲ: ವಿಜಯೇಂದ್ರ

    ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ದರ ಏರಿಕೆಯಾದರೂ ಹೆಚ್ಚುವರಿ 4 ರೂ. ನೇರವಾಗಿ ರೈತರಿಗೆ ಹೋಗುತ್ತದೆ. ಈ ಹೆಚ್ಚಳವನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ಪಡೆದುಕೊಳ್ಳದೇ, ರೈತರಿಗೆ ಲಾಭವಾಗುವಂತೆ ಮಾಡಲಾಗಿದೆ. ಇತರ ರಾಜ್ಯಗಳ ಹಾಲಿನ ದರಗಳೊಂದಿಗೆ ಹೋಲಿಸಿದರೆ, ಉದಾಹರಣೆಗೆ ಗುಜರಾತ್‌ನಲ್ಲಿ (Gujarat), ನಮ್ಮ ರಾಜ್ಯದ ದರಗಳು ಸಮಾನವಾಗಿವೆ ಎಂದು ವಿವರಿಸಿದರು. ಇದನ್ನೂ ಓದಿ: ಯುಗಾದಿ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ ಸರಣಿ ಹೋರಾಟ

  • ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ

    ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ

    – ಮೋಸ ಮಾಡುವುದರಲ್ಲಿ ಸಿದ್ದರಾಮಯ್ಯ ನಂಬರ್ 1

    ಬೆಂಗಳೂರು: ಐ ಲವ್ ಯು ನಂದಿನಿ ಅಂತಾ ಜಾಹೀರಾತು ಕೊಡ್ತಾ ಇದ್ರು. ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ, ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿದ ಅವರು, ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿನ್ ಹೆಂಡ್ತಿಗೂ ಫ್ರೀ ನನ್ ಹೆಂಡ್ತಿಗೂ ಫ್ರೀ ಅಂತಾ ಸಿದ್ದರಾಮಯ್ಯ (Siddaramaiah) ಅವರು ಹೇಳುತ್ತಿದ್ದರು. ಈಗ ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್ ಅನ್ನಬೇಕು ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

    ಸಿದ್ದರಾಮಯ್ಯ ಬಜೆಟ್ ಮೋಸದ ಬಜೆಟ್, ಇದು ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಹೇಳಿದ್ದೆ. ತೆರಿಗೆ ಹಾಕುವಂತದ್ದೇ ಬಜೆಟ್, ಏನೇನು ತೆರಿಗೆ ಮಾಡುತ್ತೇವೆ, ಏನು ತೆರಿಗೆ ಹಾಕುತ್ತೇವೆ ಎಂದು ಹೇಳಲಿಲ್ಲ. ಮೋಸ ಮಾಡುವುದರಲ್ಲಿ ದೇಶದಲ್ಲಿ ಸಿದ್ದರಾಮಯ್ಯ ನಂಬರ್ 1. ಏನೇನು ತೆರಿಗೆ ಹಾಕುತ್ತೇವೆ ಎನ್ನುವುದನ್ನು ಬಚ್ಚಿಟ್ಟರು. ಈಗ ರಾಜ್ಯದ ಜನರಿಗೆ ಮಾರಿಹಬ್ಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬೊಮ್ಮಾಯಿ

    ಬಜೆಟ್ ಆಗಿ 10 ದಿನನೂ ಆಗಿಲ್ಲ. ಸರ್ಕಾರದ ತಿಥಿಯೂ ಆಗಿಲ್ಲ. ಆಗಲೇ ದರ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ 9 ರೂ. ಏರಿಕೆ ಆಗಿದೆ. ಇದು ಕಾಂಗ್ರೆಸ್‌ನ ಮನೆ ಹಾಳು ಕೆಲಸ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Photo Gallary: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..

    ಯುಗಾದಿ ಹಬ್ಬಕ್ಕೆ ಸರ್ಕಾರ ಶಾಕ್ ನೀಡಿದೆ. ಮತ್ತೊಂದೆಡೆ ಡಿಕೆಶಿ ನೀರಿನ ದರ ಏರಿಕೆ ಮಾಡಲು ಹೊರಟಿದ್ದಾರೆ. ನೀರಿನ ದರ ಏರಿಕೆಯ ಮತ್ತೊಂದು ದೆವ್ವ ಬಾಗಿಲಿಗೆ ಬಂದು ನಿಂತಿದೆ. ಚುನಾವಣೆಗೂ ಮುಂಚೆ ಕಾಂಗ್ರೆಸ್ (Congress) ಜನರೇ ದೇವರು ಎಂದು ಹೇಳಿದ್ದರು. ಈಗ ಎಲ್ಲರಿಗೂ ಟ್ಯಾಕ್ಸ್. ಮುಂದೆ ಗ್ರೀನ್ ಟ್ಯಾಕ್ಸ್ ಹಾಕುತ್ತಾರೆ. ಗಾಳಿ ಒಂದು ಬಿಟ್ಟು ಎಲ್ಲಾ ತೆರಿಗೆ ಹಾಕಿದ್ದಾರೆ. ಬ್ರಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂತು. ಮುಂದೆ ಜನರಿಗೆ ಬೆಲೆ ಏರಿಕೆಯ ಮತ್ತಷ್ಟು ತ್ರಿಬಲ್ ಧಮಾಕಾ ಆಗಲಿದೆ ಎಂದರು. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಸ್ವಾಧೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

    ರಾಜಣ್ಣ (Rajanna) ಅವರ ನೋಟಿನ ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದೆಲ್ಲಾ ಅವರ ದುರಹಂಕಾರದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದರು.

  • ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

    ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

    – ಹಾಲು ಮತ್ತು ವಿದ್ಯುತ್ ದರ ಏರಿಕೆಗೆ ಕುಮಾರಸ್ವಾಮಿ ಕಿಡಿ

    ನವದೆಹಲಿ: ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಅವರು, ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಾಲು ಮತ್ತು ವಿದ್ಯುತ್ ದರ ಏರಿಕೆಯ ವಿರುದ್ಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, 2 ವರ್ಷಗಳ ಸರಣಿ ಸುಲಿಗೆ! ಯುಗಾದಿ ಹಬ್ಬಕ್ಕೆ ಬೆಲೆ `ಏರಿಕೆ ಹೋಳಿಗೆ!!’ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

    ರಾಜ್ಯದಲ್ಲಿ ಹಾಲಿನ ಹಾಲಾಹಲ ಶುರುವಾಗಿದೆ. 3ನೇ ಸಲ ದರ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ 3 ರೂ., 2024 ಜೂನ್ ತಿಂಗಳಿನಲ್ಲಿ 2 ರೂ. ಹಾಗೂ 2025 ಮಾರ್ಚ್ ಅಂದರೆ ಈಗ 4 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಕೂಡ ದುಬಾರಿ ಆಗಿದೆ. ಜನರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್‌ಗೆ 36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!! ಎಂದು ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

    ಒಂದು ಕೈಯಲ್ಲಿ ಕೊಟ್ಟು 10 ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದ್ದು, ಲಾಭ ಕೆಎಂಎಫ್‌ಗೆ! (KMF) ಕಂಪನಿ ಆಡಳಿತ ನಡೆಸುತ್ತಿದೆ ಸರ್ಕಾರ! ಮೊಸರು ದರ 4 ರೂ. ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ 3ನೇ ಪ್ಯಾಕೇಜ್‌ಗೆ ಕೇಂದ್ರ ಅನುಮೋದನೆ

    ಇದು ಪ್ರಜಾಪ್ರಭುತ್ವ ಸರಕಾರವಲ್ಲ. ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ! ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ! ಸುಲಿಗೆಯಷ್ಟೇ ನಿತ್ಯ ಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್!! ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಳೆ ವರ್ಷದ ಮೊದಲ ಸೂರ್ಯಗ್ರಹಣ – 30 ರಿಂದ 50 ವರ್ಷಗಳ ಬಳಿಕ ಸಂಭವಿಸಲಿದೆ ಷಡ್ ಗ್ರಹಯೋಗ

  • ಹಾಲಿನ ದರ ಏರಿಕೆ ಸರ್ಕಾರದ ಆರನೇ ಭಾಗ್ಯ: ಮಹೇಶ್ ಟೆಂಗಿನಕಾಯಿ

    ಹಾಲಿನ ದರ ಏರಿಕೆ ಸರ್ಕಾರದ ಆರನೇ ಭಾಗ್ಯ: ಮಹೇಶ್ ಟೆಂಗಿನಕಾಯಿ

    ಹುಬ್ಬಳ್ಳಿ: ಸರ್ಕಾರ ಬಂದಾಗ 5 ಗ್ಯಾರಂಟಿಗಳನ್ನು ಕೊಟ್ಟಿತ್ತು. ನಂತರ ದರ ಏರಿಕೆಯ ಐದು ಬರೆ ಗ್ಯಾರಂಟಿ ಕೊಡುತ್ತಿದೆ. ಇದೀಗ ಹಾಲಿನ ದರ ಏರಿಕೆಯ ಮೂಲಕ ಸರ್ಕಾರ ಆರನೇ ಭಾಗ್ಯ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ವ್ಯಂಗ್ಯವಾಡಿದರು.

    ಹುಬ್ಬಳ್ಳಿಯಲ್ಲಿ (Hubballi) ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ಸರ್ಕಾರ ಒಂದು ಕಡೆ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಏರಿಸಲು ನಿರ್ಧರಿಸಿದೆ. ಮತ್ತೊಂದು ಕಡೆ ವಿದ್ಯುತ್ ದರ ಏರಿಕೆಗೂ ಮುಂದಾಗಿದೆ. ಇದರ ನಡುವೆ ನೋಂದಣಿ ಸೇರಿ ಹಲವಾರು ಶುಲ್ಕಗಳ ಏರಿಕೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

    ಕಾಂಗ್ರೆಸ್ (Congress) ಸರ್ಕಾರ ದರ ಏರಿಕೆಯ ಗ್ಯಾರಂಟಿಗಳನ್ನು ಕೊಡುತ್ತಲೇ ಸಾಗಿದೆ. ಕೂಡಲೇ ಹಾಲಿನ ದರ ಏರಿಕೆ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

  • ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ (Milk Rate Hike) ಪ್ರಸ್ತಾಪಿಸಿದ್ದು, ಇಂದು ಕ್ಯಾಬಿನೆಟ್‌ನಲ್ಲಿ (Cabinet) ನಿರ್ಧಾರವಾಗಲಿದೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!

    ನಡೆದ ಸಭೆಯಲ್ಲಿ ಸಿಎಂ (CM Siddaramaiah) ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು.

    ಒಕ್ಕೂಟಗಳ ಪ್ರಸ್ತಾಪವನ್ನು ಒಪ್ಪದೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸುವಾಗಿ ಸಿಎಂ ತಿಳಿಸಿದ್ದರು. ಈ ಹಿನ್ನೆಲೆ ಇವತ್ತು ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪಿಸುವ ಸಾಧ್ಯತೆಯಿದ್ದು, 2 ಅಥವಾ 3 ರೂ. ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಇಬ್ಬರು ವ್ಯಕ್ತಿಗಳ ಸಾವು – ಚಾಲಕ, ನಿರ್ವಾಹಕ ಎಸ್ಕೇಪ್

  • ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

    ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

    ಬೆಂಗಳೂರು: ರೈತನ ಹೆಸರಿನಲ್ಲಿ ಗ್ರಾಹಕನಿಗೆ ಬೆಲೆ ಜಾಸ್ತಿ ಮಾಡಿ ರೈತನಿಗೂ ಹಣ ಕೊಡದೆ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ. ಇದು ಸರ್ಕಾರದ ಹವ್ಯಾಸ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಹಾಲಿನ ದರ ಏರಿಕೆ (Milk Price Hike) ಮಾಡುವ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಯಾರ ಹತ್ತಿರ ಕಿತ್ತುಕೊಂಡು ಯಾರಿಗೋ ದಾನ ಮಾಡಿದಂತೆ ಇವರು ಮಾಡುತ್ತಿದ್ದಾರೆ. ಗ್ರಾಹಕರ ಮೇಲೆ ಹೊರೆ ಹೊರಿಸಿ ಕೊಡುತ್ತೇವೆ ಎನ್ನುತ್ತಿದ್ದಾರೆ. ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಮಾಡುತ್ತಾರೆ. ರೈತನಿಗೆ (Farmers) ಹಾಲು ಉತ್ಪಾದಕರ ಸಂಘದಲ್ಲಿ ಒಂದೂವರೆ- ಎರಡು ರೂಪಾಯಿ ಈ ಸರ್ಕಾರ ಕಡಿಮೆ ಮಾಡಿದೆ. ಯಾಕೆ ಕಡಿಮೆ ಮಾಡಿದ್ರಿ? ರೈತನಿಗೆ ಕೊಡೋ ಹಣವನ್ನು ಈ ಸರ್ಕಾರ ಕಡಿತ ಮಾಡಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೇಡಿಕೆ ಈಡೇರಿಸಲು ಸ್ವಲ್ಪ ಸಮಯ ಕೊಡಿ: ಪ್ರತಿಭಟನಾ ನಿರತ ಕಿರಿಯ ವೈದ್ಯರಿಗೆ ಸಿಎಂ ಮಮತಾ ಬ್ಯಾನರ್ಜಿ ಮನವಿ

    ರೈತರಿಗೆ ಕುಮಾರಸ್ವಾಮಿ, ದೇವೇಗೌಡ ಏನು ಮಾಡಿದ್ದಾರೆ ಎಂದು ಶುಕ್ರವಾರ ಮಾಗಡಿಯಲ್ಲಿ ಪ್ರಶ್ನೆ ಮಾಡಿದ ಸಿಎಂಗೆ ತಿರುಗೇಟು ಕೊಟ್ಟ ಅವರು, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ. ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕರ್ನಾಟಕ ನೀರಾವರಿ ಯೋಜನೆಗಳಿಗೆ ಶಕ್ತಿ ಕೊಟ್ಟಿದ್ದು ದೇವೇಗೌಡರು. ರಸಗೊಬ್ಬರ ಸಬ್ಸಿಡಿ ಕೊಟ್ಟಿದ್ದು ದೇವೇಗೌಡರು. ರೈತರಿಗೆ 2 ರೂ. ಹಾಲಿನ ಪ್ರೋತ್ಸಾಹ ಧನ ಕೊಟ್ಟಿದ್ದು ಯಡಿಯೂರಪ್ಪ ಅವರು. ನಾನು ಸಿಎಂ ಆದಾಗ ಎರಡನೇ ಬಾರಿಗೆ 6 ರೂ. ಮಾಡಲು ಹೋಗಿದ್ದೆ. ನಾನು ಇದನ್ನು ಜಾರಿ ಮಾಡಲು ಆಗದಂತೆ ಸರ್ಕಾರ ತೆಗೆದಿದ್ದು ಯಾರು? ನಾವು ಇವರಿಂದ ಹೇಳಿಸಿಕೊಳ್ಳಬೇಕಾ? ಇವರೇನು ಮಾಡಿದ್ದಾರೆ ನಮಗೆ ಗೊತ್ತಿಲ್ಲವಾ? ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ