Tag: ಹಾಲಿನ ಉತ್ಪನ್ನ

  • ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ನವದೆಹಲಿ: ಅಮೂಲ್ (Amul) ಬಳಿಕ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲಿನ ಬೆಲೆಯನ್ನು (Milk Price) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಅಕ್ಟೋಬರ್ 16ರಿಂದಲೇ ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.

    ಅಮೂಲ್ ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಮದರ್ ಡೈರಿ ಈ ನಿರ್ಧಾರ ತೆಗೆದುಕೊಂಡಿದೆ. ಇದು ವರ್ಷದಲ್ಲಿ 3ನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ವ್ಯಕ್ತಿಯಿಂದ 7 ಲಕ್ಷ ರೂ. ದೋಚಿದ ಕಳ್ಳರು

    ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರಷ್ಟು ಹೆಚ್ಚಿಸಿತು. ನಂತರ ಮದರ್ ಡೈರಿ (MotherDairy) ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!

    ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಮಾತನಾಡಿ, `ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಅಮುಲ್ ಗೋಲ್ಡ್ (Amul Gold) ಮತ್ತು ಎಮ್ಮೆ ಹಾಲಿನ ಬೆಲೆಯನ್ನು ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಜೈಪುರ: ಮಾರಣಾಂತಿಕ ಲಿಂಪಿ ವೈರಸ್‌ನಿಂದಾಗಿ (Lumpy Virus Disease) ರಾಜಸ್ಥಾನದಲ್ಲಿ (Rajasthan) ಹಾಲಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಾಲಿನಿಂದ ತಯಾರಿಸುವ ಸಿಹಿ ತಿನಿಸುಗಳ (Milk Production) ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    ಲಿಂಪಿ ವೈರಸ್ ಚರ್ಮರೋಗದಿಂದ (Skin Diseases) ಪ್ರತಿದಿನ 600 ರಿಂದ 700 ಹಸುಗಳು ಸಾಯುತ್ತಿದ್ದು, ಇದರಿಂದ ಹಾಲಿನ ಸಂಗ್ರಹ ಪ್ರಮಾಣ ಶೇ.15 ರಿಂದ 18ರಷ್ಟು ಕಡಿಮೆಯಾಗಿದೆ.

    ಈ ಕುರಿತು ಜೈಪುರ ಡೈರಿ ಫೆಡರೇಶನ್‌ನ ಅಧ್ಯಕ್ಷ ಓಂ. ಪೂನಿಯಾ ಮಾತನಾಡಿ, ದಿನನಿತ್ಯದ ಹಾಲಿನ ಸಂಗ್ರಹ ಪ್ರಮಾಣವು 14 ಲಕ್ಷದಿಂದ 12 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ. ಸದ್ಯ ಹಾಲು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಆದರೆ ಪ್ರಾಣಿಗಳ ಸಾವಿನ ಸಂಖ್ಯೆ ಹೀಗೇ ಮುಂದುವರಿದರೆ, ಬಿಕ್ಕಟ್ಟು ಎದುರಾಗಬಹುದು. ಕೋವಿಡ್ ಸಮಯಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದ್ದಂತೆ ಸಿಹಿ ತಿನಿಸುಗಳ ಬೆಲೆ ದುಬಾರಿಯಾಗುತ್ತಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಮಾರಕ ವೈರಸ್‌ಗೆ ತುತ್ತಾಗಿದ್ದು, ಈಗಾಗಲೇ 51 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಉಳಿದವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, 12.32 ಲಕ್ಷ ಜಾನುವಾರುಗಳಿಗೆ ಗಾಟ್ ಪಾಕ್ಸ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೂ 16.22 ಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]