Tag: ಹಾಲಿಡೇಸ್

  • ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೋವಿಡ್ ಗೂ ಮುನ್ನ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು ನಂತರದ ದಿನಗಳಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ, ಇದೀಗ ಮಹಿಳಾ ಪ್ರಧಾನ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಸದ್ಯ ಹಾಲಿಡೇ ಮೂಡ್ ನಲ್ಲಿರುವ ಅವರು, ಅಲ್ಲಿಂದ ಬಂದ ನಂತರ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಲಿದ್ದಾರಂತೆ. ಅಭಿಮಾನಿಗಳ ಜತೆ ಸೋಷಿಯಲ್ ಮೀಡಿಯಾ ಮೂಲಕ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುವ ಅವರು ಇದೀಗ ಚಲಿಸುವ ಬೋಟ್ ನಲ್ಲಿ ಕೂತ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಒಂದು ಮಗುವಿನ ತಾಯಿಯಾದರೂ, ಇನ್ನೂ ತಾವು ಚೆಲುವು ಉಳಿಸಿಕೊಂಡಿದ್ದರ ಕುರಿತು ಸಂದೇಶ ರವಾನಿಸಿದ್ದಾರೆ.

    ಡಾನ್ಸ್, ಜಿಮ್ ಹೀಗೆ ದಿನಗಳನ್ನು ಕಳೆಯುತ್ತಿರುವ ರಾಧಿಕಾ ಕುಮಾರಸ್ವಾಮಿ, ಸಿನಿಮಾ ನಿರ್ಮಾಣದಲ್ಲೂ ಮುಂದುವರೆಯಲಿದ್ದಾರೆ. ಯಶ್ ನಟನೆಯ ಸಿನಿಮಾ ಸೇರಿದಂತೆ ಹಲವು ಚಿತ್ರಗಳನ್ನು ರಾಧಿಕಾ ನಿರ್ಮಾಣ ಮಾಡಿದ್ದರು. ಆನಂತರ ಬಿಟ್ಟಿದ್ದರು. ಇದೀಗ ಮತ್ತೆ ಸಿನಿಮಾವನ್ನು ತಯಾರಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಹಲವು ಸ್ಟಾರ್ ನಟರ ಜತೆ ಈಗಾಗಲೇ ಕೆಲಸ ಮಾಡಿರುವ ರಾಧಿಕಾ ಕುಮಾರಸ್ವಾಮಿ ಆನಂತರ ಮಹಿಳಾ ಪ್ರಧಾನ ಚಿತ್ರಗಳತ್ತ ಮುಖ ಮಾಡಿದರು. ತೀರಾ ಗ್ಲಾಮರ್ ಆಗಿಯೂ ಕಾಣಿಸಿಕೊಳ್ಳದೇ ತಮ್ಮ ಮಿತಿಯಲ್ಲೇ ಪಾತ್ರ ನಿರ್ವಹಿಸಿದರು. ಈಗಲೂ ಅಂತಹ ಚಿತ್ರಗಳತ್ತ ಅವರು ಒಲವು ತೋರುತ್ತಿದ್ದಾರಂತೆ.