Tag: ಹಾಲಪ್ಪಾ ಆಚಾರ್

  • ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    ಧಾರವಾಡ: ಸಿದ್ದರಾಮೋತ್ಸವ ಅದೊಂದು ಜನಪರವಲ್ಲದ ಉತ್ಸವ. ತಮ್ಮ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ಜನರಿಗೆ ಯಾವುದೇ ಲಾಭವಿಲ್ಲ. ಅವರು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಈ ಉತ್ಸವ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದರು.

    Siddaramaiah

    ಆರ್‌ಎಸ್‌ಎಸ್ ಒಂದು ಸುಳ್ಳು ಸಂಘ ಎಂಬ ಹೇಳಿಕೆ ಕೊಟ್ಟ ಪ್ರೊ.ಕೆ.ಎಸ್ ಭಗವಾನ್ ಅವರಿಗೆ ತಿರುಗೇಟು ನೀಡಿದ ಸಚಿವರು, ಒಬ್ಬ ವ್ಯಕ್ತಿಯ ಬೆಳವಣಿಗೆ ಸಹಿಸಲಾರದ ವ್ಯಕ್ತಿ, ಬಾಯಿಗೆ ಬಂದಂತೆ ಮಾತನಾಡುವುದು ಹಾಗೂ ತಮ್ಮ ವ್ಯಕ್ತಿತ್ವ, ವಿಚಾರಗಳನ್ನು ಹೊರ ಹಾಕುವ ಕೆಲಸ ಮಾಡುತ್ತಾನೆ. ಅದಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ- ಬಿಜೆಪಿಗರಿಗೆ ಜಮೀರ್ ಟಾಂಗ್

    ಸಿಎಂ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕಾಗಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆಗೆ ಹೋಗಿಲ್ಲ. ಆ ಪ್ರಸಂಗ ಬಂದರೆ ದೆಹಲಿ ವರಿಷ್ಠರೇ ಸಿಎಂ ಅವರನ್ನು ಕರೆಯುತ್ತಾರೆ ಎಂದರು.

    ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿನ ಜನ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಆದರೆ, ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ. ಆಮೇಲೆ ಗಣಿಗಾರಿಕೆ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತದೆ ಎಂದರು. ಇದನ್ನೂ ಓದಿ: ಚುನಾವಣೆ ವರ್ಷ ಇದು, ಏನೇ ಮಾಡಿದರೂ ಪಕ್ಷಕ್ಕೆ ಲಾಭ: ಕೆ.ಎನ್ ರಾಜಣ್ಣ

    Live Tv
    [brid partner=56869869 player=32851 video=960834 autoplay=true]