Tag: ಹಾರ್ಮೋನಿಯಂ

  • ಲಾಕ್‍ಡೌನ್ ಸಡಿಲಿಕೆ ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರೋ ಪಿಎಸ್‍ಐ

    ಲಾಕ್‍ಡೌನ್ ಸಡಿಲಿಕೆ ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರೋ ಪಿಎಸ್‍ಐ

    ಚಿಕ್ಕೋಡಿ: ಕೊರೊನಾ ಲಾಕ್‍ಡೌನ್ ಘೋಷಣೆ ಆದಾಗಿನಿಂದಲೂ ಲಾಕ್‍ಡೌನ್ ಜಾರಿ ಮಾಡಲು ಹಗಲಿರಳು ಶ್ರಮಿಸಿದ ಪೊಲೀಸರು ಲಾಕ್‍ಡೌನ್ ಸಡಿಲಿಕೆಯ ನಂತರ ರಿಲ್ಯಾಕ್ಸ್ ಆಗುತ್ತಿದ್ದಾರೆ.

    ಕೆಲ ಪೊಲೀಸರು ಲಾಕ್‍ಡೌನ್ ಸಡಿಲಿಕೆ ನಂತರ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯುತ್ತಿದ್ದರೆ, ಕೆಲವರು ಆಟ ಆಡಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸವನ್ನು ಕಳೆಯುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ಜವಾಬ್ದಾರಿ ಸೇರಿದಂತೆ ಹುಕ್ಕೇರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಷ್ಟೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು, ಇಷ್ಟೆಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಈ ನಡುವೆ ತಮ್ಮ ಬಿಡುವಿನ ವೇಳೆಯಲ್ಲಿ ದೈನಂದಿನ ಜಂಜಾಟಗಳನ್ನು ಮರೆತು ಅದ್ಭುತವಾಗಿ ಹಾರ್ಮೋನಿಯಂ ನುಡಿಸುತ್ತಾರೆ.

    ಹಾರ್ಮೋನಿಯಂ ನುಡಿಸುವುದನ್ನು ಯಾವುದೇ ಗುರು ಇಲ್ಲದೇ ಯುಟ್ಯೂಬ್ ನೋಡಿ ನುಡಿಸಲು ಕಲಿತಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆದ ನಂತರವೂ ಇವರ ತಮ್ಮ ಕರ್ತವ್ಯ ಮುಗಿಸಿ ಬಂದ ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸ ಕಳೆಯುತ್ತಿದ್ದರು. ಲಾಕ್‍ಡೌನ್ ಜಾರಿ ಇದ್ದ ಸಂದರ್ಭದಲ್ಲಿ ತಮ್ಮ 2 ವರ್ಷದ ಮಗಳು ಆಸ್ಪತ್ರೆಯಲ್ಲಿ ಇದ್ದರು, ಪತ್ನಿಯನ್ನು ಮಾತ್ರ ಆಸ್ಪತ್ರೆಯಲ್ಲಿ ಬಿಟ್ಟು ಶಿವಾನಂದ ಗುಡಗನಟ್ಟಿ ಲಾಕ್‍ಡೌನ್ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಕಾರಣವಾಗಿದ್ದರು.

  • ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಬೆಂಗಳೂರು: ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಎಂತಲೇ ಖ್ಯಾತಿ ಪಡೆದಿರುವ ಹನುಮಂತ ಅವರು ಸರಿಗಮಪ ಸೀಸನ್ 15ರ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

    ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತ ಅವರಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಹನುಮಂತ ಅವರು ಸೆಮಿ ಫೈನಲ್ ನಲ್ಲಿ ‘ಜೋಗಿ’ ಸಿನಿಮಾದ ‘ಬೇಡುವೇನು ವರವನ್ನು..’ ಹಾಡನ್ನು ಹಾಡಿದ್ದರು.  ತಮ್ಮ ಗಾಯನ ಪ್ರತಿಭೆ ಮೂಲಕ ಹನುಮಂತ ಅವರು ಸೆಮಿ ಫೈನಲ್ ನಲ್ಲಿಯೇ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದರು.

    ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು.

    ಲತಾ ಹಂಸಲೇಖ ಅವರು ಈ ಹಿಂದೆ ಅಂದರೆ ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡಿದ್ದರು. ಈ ಹಿಂದೆ ಹನುಮಂತ ಅವರಿಗೆ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಇಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

    ಸರಿಗಮಪ ಕಾರ್ಯಕ್ರಮದ ಅಂತಿಮದಲ್ಲಿ ಕೀರ್ತನ್, ವಿಜೇತ್, ಸಾಸ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಒಟ್ಟು ಆರು ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಬೆಂಗಳೂರು: ಪಾಶ್ಚಾತ್ಯ, ಅಬ್ಬರದ ಸಂಗೀತದ ಸಾಧನಗಳ ಮಧ್ಯೆ ನಶಿಸಿ ಹೋಗಿರುವ ಗ್ರಾಮೀಣ ರಂಗಕಲೆಯ ಸಾಧನಗಳಲ್ಲಿ ಹಾರ್ಮೋನಿಯಂ ಸಹ ಒಂದು. ಆದ್ರೆ ನೆಲಮಂಗಲದ ಇವತ್ತಿನ ಪಬ್ಲಿಕ್ ಹೀರೋ ಗಂಗರಾಜು ದೃಷ್ಟಿ ಸಮಸ್ಯೆ ಹೊಂದಿದ್ರೂ ಹಾರ್ಮೋನಿಯಂ ಮೂಲಕ ಗಮನ ಸೆಳೆದಿದ್ದಾರೆ.

    ರಾಗಬದ್ಧವಾಗಿ ಹಾರ್ಮೋನಿಯಂ ನುಡಿಸೋ ಗಂಗರಾಜು ಇವತ್ತಿನ ಪಬ್ಲಿಕ್ ಹೀರೋ. ಬೆಂಗಳೂರು ಹೊರವಲಯದ ನೆಲಮಂಗಲದ ಚಿಕ್ಕಮಾರನಹಳ್ಳಿ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ಹಾರ್ಮೋನಿಯಂ ಕಲಿತ ಇವರು ಆಸಕ್ತರಿಗೆ 15 ವರ್ಷಗಳಿಂದ ಉಚಿತವಾಗಿ ಹಾರ್ಮೋನಿಯಂ ಕಲಿಸಿಕೊಡ್ತಿದ್ದಾರೆ. ಅಲ್ಲದೆ ಹರಿಕಥೆ ಅಥವಾ ಸಾವಿನ ಮನೆಯ ಭಜನೆಗಳಲ್ಲಿ ಉಚಿತವಾಗಿ ಹಾರ್ಮೋನಿಯಂ ನುಡಿಸ್ತಾರೆ.

    ಹಲವು ಕಡೆ ಪೌರಾಣಿಕ ನಾಟಕ ಪ್ರದರ್ಶನ ಮಾಡಿಸುವುದರ ಜೊತೆಗೆ ಮಹಿಳೆಯರಿಗಾಗಿ ಹೊಸ ನಾಟಕ ತಂಡವನ್ನೇ ಕಟ್ಟಿದ್ದು, ಎರಡು ನಾಟಕಗಳನ್ನ ಆಡಿಸಿದ್ದಾರೆ. ವ್ಯವಸಾಯವನ್ನೂ ಮಾಡಿ ಜೀವನ ಸಾಗಿಸ್ತಿರೋ ಗಂಗರಾಜು ಸ್ವಚ್ಛ ಭಾರತ ಅಭಿಯಾನದ ಅಭಿಮಾನಿಯಾಗಿದ್ದಾರೆ.

    https://www.youtube.com/watch?v=cLaa02G9ygA