Tag: ಹಾರ್ದಿಕ್ ಪ್ರಾಂಡ್ಯ

  • ‘ಪ್ರೆಶರ್ ಕುಕ್ಕರ್’ – ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ ಬುಮ್ರಾ

    ‘ಪ್ರೆಶರ್ ಕುಕ್ಕರ್’ – ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ ಬುಮ್ರಾ

    ಮುಂಬೈ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಜಿಮ್‍ನಲ್ಲಿ ವ್ಯಾಯಾಮ ಮಾಡುತ್ತಿದ್ದ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವಿಡಿಯೋ ಪ್ರತಿಕ್ರಿಯೆ ನೀಡಿರುವ ಜಸ್ಪ್ರೀತ್ ಬುಮ್ರಾ ಹಾರ್ದಿಕ್‍ರನ್ನು ಟ್ರೋಲ್ ಮಾಡಿದ್ದಾರೆ.

    ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾ ದೇಶದ ವಿರುದ್ಧ ಟೂರ್ನಿಗೆ ಅಲಭ್ಯರಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ವಿವಿಧ ಪೈಲೇಟ್ಸ್ ವ್ಯಾಯಾಮ ಮಾಡುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಹಿಂದಿಗಿಂತಲೂ ಮತ್ತಷ್ಟು ಶಕ್ತಿಶಾಲಿಯಾಗಿ ಕಮ್ ಬ್ಯಾಕ್ ಮಾಡುವ ಕುರಿತು ಹೇಳಿದ್ದರು. ಅಲ್ಲದೇ ತಮಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ್ದರು.

    https://twitter.com/hardikpandya7/status/1195283628218961925

    ಇತ್ತ ಹಾರ್ದಿಕ್ ಪಾಂಡ್ಯ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಬುಮ್ರಾ, ಸರ್ ನೀವು ಪ್ರೆಶರ್ ಕುಕ್ಕರ್ ನಂತೆ ಧ್ವನಿ ಮಾಡುತ್ತಿದ್ದೀರಿ ಎಂದು ನಗುತ್ತಿರುವ ಇಮೋಜಿಯನ್ನು ಹಾಕಿ ಕಾಲೆಳೆದಿದ್ದಾರೆ. ಇತ್ತ ಬುಮ್ರಾ ಕೂಡ ಬೆನ್ನು ನೋವಿನ ಸಮಸ್ಯೆ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ. ಆದರೆ ಮುಂದಿನ ವರ್ಷ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿಯವರೆಗೂ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.