Tag: ಹಾರ್ದಿಕ್ ಪಾಂಡ್ಯಾ

  • ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಮತ್ತೆ ಪ್ರೀತಿಯಲ್ಲಿ ಬಿದ್ರಾ?

    ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಮತ್ತೆ ಪ್ರೀತಿಯಲ್ಲಿ ಬಿದ್ರಾ?

    ಬಾಲಿವುಡ್ ಬೆಡಗಿ ನತಾಶಾ (Natasa) ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ (Hardik Pandya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮತ್ತೆ ಪ್ರೀತಿಯಲ್ಲಿ ಬಿದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿರುವ ಪೋಸ್ಟ್‌ನಿಂದ ಚರ್ಚೆ ಶುರುವಾಗಿದೆ.

    ಫೋಟೋವೊಂದನ್ನು ನಟಿ ಶೇರ್ ಮಾಡಿ, ದೇವರ ಮಾರ್ಗದರ್ಶನ ಸಿಕ್ಕಿದೆ. ಪ್ರೀತಿ ಸುತ್ತುವರೆದಿದೆ. ಕೃತಜ್ಞತೆಯಿಂದ ಬದುಕುತ್ತಿದ್ದೇನೆ. ನನಗೆ ಖುಷಿಯಾಗಿದೆ ಎಂದು ನಟಿ ನತಾಶಾ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ನತಾಶಾ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ನಟಿಗೆ ಬೇರೆ ಅವರೊಂದಿಗೆ ಲವ್‌ ಆಗಿದ್ಯಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ರಾಜ್‌ಕುಮಾರ್ ರಾವ್‌ಗೆ ಮಾನುಷಿ ಚಿಲ್ಲರ್ ನಾಯಕಿ

    ಅಂದಹಾಗೆ, ಜುಲೈ 18ರಂದು ನಟಿ ಡಿವೋರ್ಸ್ (Divorce) ಬಗ್ಗೆ ಅನೌನ್ಸ್ ಮಾಡಿದ್ದರು. 4 ವರ್ಷಗಳ ಕಾಲ ಜೊತೆಯಾಗಿ ಇದ್ದ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಜೊತೆಯಾಗಿ ಇರಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೊನೆಗೆ ಭಿನ್ನಾಭಿಪ್ರಾಯ ಮಿತಿ ಮೀರಿದಾಗ ನಮ್ಮ ಒಳ್ಳೆಯದಕ್ಕೆ ಬೇರೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ ಎಂದು ನತಾಶಾ ಹೇಳಿಕೆಯಲ್ಲಿ ತಿಳಿಸಿದ್ದರು.

    ನಮ್ಮಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಅಗಸ್ತ್ಯ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದರು.

    ಇನ್ನೂ ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 2020ರಲ್ಲಿ ಮೇ 31ರಂದು ವಿವಾಹವಾದರು. ಜುಲೈ 2020ರಲ್ಲಿ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು. 2023ರ ಫೆಬ್ರವರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮತ್ತೊಮ್ಮೆ ಮದುವೆಯಾದರು.

  • ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್‌- ಮತ್ತೆ ಒಂದಾಗ್ತಾರಾ?

    ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್‌- ಮತ್ತೆ ಒಂದಾಗ್ತಾರಾ?

    ಬಾಲಿವುಡ್ ಬೆಡಗಿ ನತಾಶಾ (Actress Natasa) ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಹಾರ್ದಿಕ್ ಪಾಂಡ್ಯಾ (Hardik Pandya) ಜೊತೆಗಿನ ಡಿವೋರ್ಸ್ ಖಚಿತಪಡಿಸಿದ ಬಳಿಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮಾಜಿ ಪತ್ನಿ ನತಾಶಾಗೆ ಹಾರ್ದಿಕ್ ಮತ್ತೆ ಪ್ರೀತಿ ತೋರಿದ್ದಾರೆ.

    ಸದ್ಯ ತವರು ಮನೆ ಸೆರ್ಬಿಯಾದಲ್ಲಿ ಮಗನ ಜೊತೆ ನಟಿ ನತಾಶಾ ಕಾಲ ಕಳೆಯುತ್ತಿದ್ದಾರೆ. ಮೃಗಾಲಯಕ್ಕೆ ಹೋಗಿರುವ ಕೆಲವು ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಪತ್ನಿಯ ಪೋಸ್ಟ್‌ಗೆ ಹಾರ್ದಿಕ್, ಲೈಕ್ ಮತ್ತು ಹಾರ್ಟ್ ಸಿಂಬಲ್ ಕೊಟ್ಟು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಅತ್ತಿಗೆಯಿಂದಲೇ ದರ್ಶನ್ ಅಣ್ಣನಿಗೆ ಬಲ: ವಿಜಯಲಕ್ಷ್ಮಿ ಆಪ್ತೆ ಲತಾ ಜೈಪ್ರಕಾಶ್

    ನತಾಶಾಗೆ ಹಾರ್ದಿಕ್ ಮಾಡಿರುವ ಕಾಮೆಂಟ್ ನೋಡಿ ಮಾಜಿ ಪತ್ನಿ ಮೇಲೆ ಇನ್ನೂ ಪ್ರೀತಿ ಇದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

    ಅಂದಹಾಗೆ, ಜುಲೈ 18ರಂದು ನಟಿ ಡಿವೋರ್ಸ್ ಬಗ್ಗೆ ಅನೌನ್ಸ್ ಮಾಡಿದ್ದರು. 4 ವರ್ಷಗಳ ಕಾಲ ಜೊತೆಯಾಗಿ ಇದ್ದ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಜೊತೆಯಾಗಿ ಇರಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೊನೆಗೆ ಭಿನ್ನಾಭಿಪ್ರಾಯ ಮಿತಿ ಮೀರಿದಾಗ ನಮ್ಮ ಒಳ್ಳೆಯದಕ್ಕೆ ಬೇರೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ ಎಂದು ನತಾಶಾ ಹೇಳಿಕೆಯಲ್ಲಿ ತಿಳಿಸಿದ್ದರು.

    ನಮ್ಮಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಅಗಸ್ತ್ಯ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದರು.

    ಇನ್ನೂ ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 2020ರಲ್ಲಿ ಮೇ 31ರಂದು ವಿವಾಹವಾದರು. ಜುಲೈ 2020ರಲ್ಲಿ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು. 2023ರ ಫೆಬ್ರವರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮತ್ತೊಮ್ಮೆ ಮದುವೆಯಾದರು.

  • ಬೆಡ್‌ರೂಮ್ ಫೋಟೋ ವೈರಲ್‌, ಹಾರ್ದಿಕ್ ಪಾಂಡ್ಯಾ ದಂಪತಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ನೆಟ್ಟಿಗರ ಕ್ಲಾಸ್

    ಬೆಡ್‌ರೂಮ್ ಫೋಟೋ ವೈರಲ್‌, ಹಾರ್ದಿಕ್ ಪಾಂಡ್ಯಾ ದಂಪತಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ನೆಟ್ಟಿಗರ ಕ್ಲಾಸ್

    ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ(Hardik Pandya)- ನತಾಶಾ (Nathasha) ಅವರು ಈ ವರ್ಷ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮದುವೆಯಾದರು. 3 ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದ ಈ ಜೋಡಿ, ಮತ್ತೆ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಮುದ್ದು ಮಗ ಅಗಸ್ತ್ಯ ಕೂಡ ಸಾಕ್ಷಿಯಾಗಿದ್ದಾನೆ. ಸದ್ಯ ಹ್ಯಾಪಿ ಲೈಫ್ ಲೀಡ್ ಮಾಡ್ತಿರೋ ಈ ಜೋಡಿಯ ಬೆಡ್ ರೂಮ್ ಫೋಟೋ ವೈರಲ್ ಆಗುತ್ತಿದೆ.

    ಫೆಬ್ರವರಿ 14-15ರಂದು ಹಾರ್ದಿಕ್ ಪಾಂಡ್ಯಾ- ನತಾಶಾ ಜೋಡಿ ಅದ್ದೂರಿಯಾಗಿ ಮದುವೆಯಾದರು. ಈ ಮದುವೆಗೆ ಯಶ್- ರಾಧಿಕಾ ಪಂಡಿತ್ ದಂಪತಿ ಕೂಡ ಆಗಮಿಸಿದ್ದರು. ಹಾರ್ದಿಕ್ ಜೊತೆ ಯಶ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ರು. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಬೆಡ್‌ರೂಮ್ ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಹಾರ್ದಿಕ್ ದಂಪತಿ ಗುರಿಯಾಗಿದ್ದಾರೆ.

    ಮತ್ತೆ ಮದುವೆಯಾದ ಮೇಲೆ ಇಬ್ಬರೂ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಸಖತ್ ವೈರಲ್ ಆಗಿದೆ. ಆದರೆ ಇದು ತೀರಾ ಅಶ್ಲೀಲ ಫೋಟೋಶೂಟ್ ಆಗಿರುವುದಾಗಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಅಸಲಿಗೆ ಫೋಟೋದಲ್ಲಿ, ಹಾರ್ದಿಕ್ ದಂಪತಿ ಮಂಚದ ಮೇಲೆ ಪೋಸ್ ನೀಡಿದ್ದಾರೆ. ಪತಿಗೆ ನತಾಶಾ ಚುಂಬನ ಮಾಡುವ ಫೋಟೋ ಇದಾಗಿದೆ. ಹಾರ್ದಿಕ್ ಕಪ್ಪು ಶರ್ಟ್ ಧರಿಸಿದ್ದರೆ, ನತಾಶಾ ಬ್ಲ್ಯಾಕ್ & ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ನತಾಶಾ ಪಾಂಡ್ಯಾ ಒಬ್ಬರಿಗೊಬ್ಬರು ಕಿಸ್ ಮಾಡುತ್ತಿರುವ ರೀತಿಯಲ್ಲಿ ಫೋಟೋ ಸದ್ದು ಮಾಡುತ್ತಿದೆ. ಈ ಫೋಟೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು ದಂಪತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಸ್ ಮನೆಯಲ್ಲಿ ಮಾಡಿ, ಊರಿಗೆಲ್ಲ ಏಕೆ ಫೋಟೋ ತೋರಿಸುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆ ಸೂಕ್ತವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ ಎಂದು ಹಾರ್ದಿಕ್‌ಗೆ ಕೆಲವರು ಬುದ್ಧಿ ಹೇಳಿದ್ದಾರೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಹಾರ್ದಿಕ್- ನತಾಶಾ ಜೋಡಿ ಈ ಹೊಸ ಫೋಟೋಗೆ ಅಭಿಮಾನಿಗಳು ಕಿಡಿಕಾರಿದ್ದಾರೆ. ನೆಟ್ಟಿಗರ ತರಾಟೆಗೆ ಹಾರ್ದಿಕ್ ಜೋಡಿ ಪ್ರತಿಕ್ರಿಯೆ ನೀಡುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ನವದೆಹಲಿ: ಕೌಟುಂಬಿಕ ಕಾರಣಗಳನ್ನು ಎದುರಿಟ್ಟು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದ ರೋಹಿತ್ ಶರ್ಮಾ (Rohit Sharma) ನಡೆಗೆ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಗರಂ ಆಗಿದ್ದಾರೆ.

    ಪ್ರತಿ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಆಡಬೇಕು. ವಯಕ್ತಿಕ ವಿಷಯಗಳನ್ನು ಬಿಟ್ಟು ತಂಡವನ್ನು ಸದೃಢಗೊಳಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲು – ನಂ.1 ಪಟ್ಟ ಕಳೆದುಕೊಂಡ ಭಾರತ

    ವಿಶ್ವಕಪ್ ಪಂದ್ಯ (World Cup) ನಡೆಯಲಿರುವ ಈ ವರ್ಷ ಆಟಗಾರರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಕೌಟುಂಬಿಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.

    ರೋಹಿತ್ ಗೈರಿನಲ್ಲಿ ಮೊದಲ ಪಂದ್ಯದ ಹಾರ್ದಿಕ್ ಪಾಂಡ್ಯಾ ( Hardik Pandya) ನಾಯಕತ್ವದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ 1-0 ಮುನ್ನಡೆ ಪಡೆದಿತ್ತು.

    ನಂತರದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿ ತಂಡ ಸೋಲು ಅನುಭವಿಸಿತ್ತು. ಈ ಮೂಲಕ 1-2 ಅಂತರದಲ್ಲಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಇದನ್ನೂ ಓದಿ: 3 ಪಂದ್ಯ, ಫಸ್ಟ್ ಬಾಲಿಗೆ ಔಟ್ – ಕೆಟ್ಟ ದಾಖಲೆ ಬರೆದ ಸೂರ್ಯ

  • ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ- ಹಾರ್ದಿಕ್, ರಾಹುಲ್ ಸ್ಥಾನಕ್ಕೆ ಇಬ್ಬರ ಪ್ರವೇಶ

    ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ- ಹಾರ್ದಿಕ್, ರಾಹುಲ್ ಸ್ಥಾನಕ್ಕೆ ಇಬ್ಬರ ಪ್ರವೇಶ

    ನವದೆಹಲಿ: ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಆಸ್ಟ್ರೇಲಿಯಾ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಹೊರ ಉಳಿದಿದ್ದಾರೆ. ಈಗಾಗಲೇ ಇಬ್ಬರು ಆಟಗಾರರನ್ನು ತನಿಖೆ ಅಂತಿಮವಾಗುವರೆಗೂ ಕ್ರಿಕೆಟ್ ನಿಂದ ಹೊರ ಉಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

    ಹಾರ್ದಿಕ್ ಮತ್ತು ಕೆ.ಎಲ್.ರಾಹುಲ್ ಸ್ಥಾನವನ್ನು ಶುಭಮನ್ ಗಿಲ್ ಮತ್ತು ತಮಿಳುನಾಡಿನ ಆಲ್‍ರೌಂಡರ್ ವಿಜಯ್ ಶಂಕರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಕಿರಿಯರ ವಿಶ್ವಕಪ್ ಗೆದ್ದ ತಂಡದ ನಾಯಕನಾಗಿದ್ದ ಶುಭಮನ್ ಗಿಲ್ ನ್ಯೂಜಿಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:  ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ

    ಈ ಹಿಂದೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಗಿಲ್, 2018 ವರ್ಷ ನನಗೆ ಎಲ್ಲವನ್ನು ನೀಡಿದೆ. 2018ರಲ್ಲಿ ಹೊಸತನವನ್ನು ಹಿರಿಯರ ಮಾರ್ಗದರ್ಶನದಲ್ಲಿ ಕಲಿಯುವ ಅವಕಾಶ ನನ್ನದಾಗಿತ್ತು. 2019ರಲ್ಲಿ ಭಾರತದ ಪರವಾಗಿ ಹಿರಿಯರ ತಂಡದಲ್ಲಿ ಆಡಬೇಕೆಂಬ ಆಸೆ ಇದೆ. ಅದುವೇ ನನ್ನ ಮುಖ್ಯ ಗುರಿ ಅಂತಾ ಹೇಳಿಕೊಂಡಿದ್ದರು. ಇದನ್ನು ಓದಿ: ನಾನು ಇಂಜಿನಿಯರಿಂಗ್ ಮಾಡದಕ್ಕೆ ಈಗಲೂ ಅಮ್ಮನಿಗೆ ದುಃಖವಿದೆ: ಕೆಎಲ್ ರಾಹುಲ್

    27 ವರ್ಷದ ವಿಜಯ್ ಶಂಕರ್ ನಿದಾ ಹಸ ಟ್ರೋಫಿಯಲ್ಲಿ ಭಾರತದ ಪರವಾಗಿ ಆಡಿದ್ದರು. ವಿಜಯ್ ಶಂಕರ್ ಇದೂವರೆಗೂ 5 ಟಿ-ಟ್ವೆಂಟಿ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಡಿಲೇಡ್ ನಲ್ಲಿ ನಡೆಯುವ ಏಕದಿನ ಪಂದ್ಯದಲ್ಲಿ ವಿಜಯ್ ಶಂಕರ್ ಟೀಂ ಇಂಡಿಯಾವನ್ನು ಸೇರ್ಪಡೆಯಾಗುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

    ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

    ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ 3 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದರೆ ಟಿ-20ಯಲ್ಲೂ ನಂ.2 ಪಟ್ಟಕ್ಕೇರಲಿದೆ. ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಟಿ20ಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ.

    ಈ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೆ ಭಾರತ 2ನೇ ಸ್ಥಾನ ಖಚಿತವಾಗಲಿದೆ. ರಾಂಚಿಯ ಜೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸರಣಿ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಕಾರಣ ನಾಯಕ ಸ್ಟೀವ್ ಸ್ಮಿತ್ ಭುಜದ ನೋವಿನಿಂದಾಗಿ ಸರಣಿಯಿಂದ ಸಂಪೂರ್ಣವಾಗಿ ಹೊರಗೆ ಬಿದ್ದಿದ್ದಾರೆ. ಸ್ಮಿತ್ ಸ್ಥಾನಕ್ಕೆ ಮಾಕ್ರ್ಸ್ ಸ್ಟಾಯಿನ್ಸ್ ಆಯ್ಕೆಯಾಗಿದ್ದಾರೆ. ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ ರಾಂಚಿಯಲ್ಲಿ ಸ್ಮಿತ್ ಗೆ ಗಾಯವಾಗಿತ್ತು. ಆರಂಭದಲ್ಲಿ ವೈದ್ಯರು ಪಂದ್ಯ ಆಡಬಹುದು ಎಂದಿದ್ದರೂ ಈಗ ಸರಣಿಯಲ್ಲಿ ಆಡಲು ಸ್ಮಿತ್ ಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ದಾಖಲೆಗಳಿಂದ…: ಭಾರತ ಹಾಗೂ ಆಸೀಸ್ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು ಇದರಲ್ಲಿ ಭಾರತ 9 ಹಾಗೂ ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದಿದೆ. ಭಾರತದಲ್ಲಿ ಎರಡೂ ತಂಡಗಳು 3 ಪಂದ್ಯವನ್ನಾಡಿದ್ದು ಇದರಲ್ಲಿ ಮೂರೂ ಪಂದ್ಯಗಳನ್ನು ಭಾರತವೇ ಗೆದ್ದಿದೆ. ಭಾರತದಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 23 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು 12ರಲ್ಲಿ ಗೆಲುವು ಸಾಧಿಸಿದರೆ, 11 ಪಂದ್ಯದಲ್ಲಿ ಸೋತಿದೆ.

    ಆಸೀಸ್ ಇದುವರೆಗೆ ವಿದೇಶದಲ್ಲಿ 63 ಪಂದ್ಯವನ್ನಾಡಿದೆ. ಇದರಲ್ಲಿ 29 ಗೆಲುವು ಸಾಧಿಸಿದರೆ 31ರಲ್ಲಿ ಸೋತಿದೆ. 2 ಪಂದ್ಯ ಟೈ ಆಗಿದ್ದು 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

    2012ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿದ್ದು, ಇದಾದ ನಂತರ ಒಟ್ಟು 6 ಪಂದ್ಯಗಳು ಇತ್ತಂಡಗಳ ನಡುವೆ ನಡೆದಿದೆ. ಈ ಆರೂ ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆಲುವು ಸಾಧಿಸಿದೆ ಎನ್ನುವುದೇ ವಿಶೇಷ.

  • ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

    ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

    ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 26 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಆಸೀಸ್ ಬ್ಯಾಟಿಂಗ್ ಆರಂಭಕ್ಕೂ ಮುನ್ನಾ ಭಾರೀ ಮಳೆ ಸುರಿದ ಪರಿಣಾಮ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ 21 ಓವರ್ ಗಳಲ್ಲಿ 164 ರನ್ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಆಸೀಸ್ ಪರ ಗ್ಲೇನ್ ಮ್ಯಾಕ್ಸ್ ವೆಲ್ ಸ್ಫೋಟಕ 39 ರನ್(18 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದರೆ ಜೇಮ್ಸ್ ಫಾಲ್ಕನರ್ ಔಟಾಗದೇ 32 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭಾರತದ ಪರವಾಗಿ ಸ್ಪಿನ್ನರ್ ಚಹಲ್ 3 ವಿಕೆಟ್ ಕಬಳಿಸಿದರೆ, ಕಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು. ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿದ್ದರೂ ಟೀಂ ಇಂಡಿಯಾದ ಫೀಲ್ಡಿಂಗ್ ಉತ್ತಮವಿರಲಿಲ್ಲ. ಕೈಗೆ ಸಿಕ್ಕಿದ್ದ ಹಲವು ಸುಲಭದ ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದರು.

    ಭಾರತದ ಭರ್ಜರಿ ಬ್ಯಾಟಿಂಗ್: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿತ್ತು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

    ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

    ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತ್ತು.

    ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

    ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು.

    ಸ್ಫೋಟಕ 83 ರನ್ ಸಿಡಿಸಿ 2 ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     

    https://twitter.com/editorsuresh/status/909275189392715777
     


  • 11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

    11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

    ಚೆನ್ನೈ: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

    ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

    ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್‍ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತು.

    ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

    ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.