Tag: ಹಾರ್ದಿಕ್ ಪಾಂಡ್ಯ

  • ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ನಟಿ ನತಾಶಾ (Natasa) ಅವರಿಂದ ವಿಚ್ಛೇದನ ಪಡೆದು ದೀರ್ಘಕಾಲದ ಬಳಿಕ ಮತ್ತೆ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ (Hardik Pandya) ಲವ್‌ನಲ್ಲಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಹುಟ್ಟಿಕೊಳ್ತಿದ್ದಂತೆ ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪಾಂಡ್ಯ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಹೊಸ ಗರ್ಲ್‌ಫ್ರೆಂಡ್‌ ಯಾರು ಅನ್ನೋದನ್ನೂ ಬಹಿರಂಗಪಡಿಸಿದ್ದಾರೆ.

    ಟಿ20 ಏಷ್ಯಾಕಪ್‌ ಟೂರ್ನಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಪಾಂಡ್ಯ, ಹೊಸ ಗರ್ಲ್‌ಫ್ರೆಂಡ್‌ ಮಹೀಕಾ ಶರ್ಮಾ (Mahieka Sharma) ಅವರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡ್ತಿದ್ದಾರೆ. ಈ ವೇಳೆ ಬೀಚ್‌ ಎದುರು ಹಾಗೂ ನೈಟ್‌ ಔಟ್‌ ವೇಳೆ ತೆಗೆದ ಫೋಟೋಗಳನ್ನ ಪಾಂಡ್ಯ ಹಂಚಿಕೊಂಡಿದ್ದು, ಮಹೀಕಾ ಅವರಿಗೂ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

    ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್‌ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಹೀಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಪಾಂಡ್ಯ ಸಿಂಪಲ್ಲಾಗಿ ಡ್ರೆಸ್‌ ಮಾಡಿಕೊಂಡಿದ್ದಾರೆ. ಫೋಟೋಗಳಿಗೆ ಪಾಂಡ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಯಾರು ಈ ಬ್ಯೂಟಿ?
    ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಮಹೀಕಾ ಶರ್ಮಾ, ಫ್ಯಾಷನ್‌ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಎಫ್‌ಎ ಮಾಡೆಲ್‌ ಆಫ್‌ ದಿ ಇಯರ್‌ ಹಾಗೂ ಎಲ್ಲೆ ಮಾಡೆಲ್‌ ಆಫ್‌ ದಿ ಸೀಸನ್‌ ಪ್ರಶಸ್ತಿಗಳನ್ನು ಮಹೀಕಾ ಮುಡಿಗೇರಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಮಹೀಕಾ ಶರ್ಮಾ ಇನ್‌ಸ್ಟಾದಲ್ಲಿ 1.47 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    Jasmin Walia 4

    2024ರಲ್ಲಿ ಭಾರತ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಹಾರ್ದಿಕ್‌ ಪಾಂಡ್ಯ ನಟಿ ನತಾಶಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಬಾಲಿವುಡ್‌ ಬ್ಯೂಟಿ ಅನನ್ಯಾ ಪಾಂಡೆ ಅವರೊಂದಿಗೆ ಡೇಟಿಂಗ್‌ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ನಂತ್ರ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದ್ರೆ, ಇಬ್ಬರು ಪರಸ್ಪರ ಮಾತನಾಡ್ತಿದ್ದೆವು, ಡೇಟಿಂಗ್‌ ಹಂತಕ್ಕೆ ಬರುವ ಮೊದಲೇ ಇಬ್ಬರ ಸಂಬಂಧ ಅಂತ್ಯಗೊಂಡಿತು ಎಂದು ಪಾಂಡ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೀಗ ಖುದ್ದು ಪಾಂಡ್ಯ ಅವರೇ ಮಹೀಕಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರೋದನ್ನ ಬಹಿರಂಗಪಡಿಸಿದ್ದಾರೆ.

  • Asia Cup: ಪಾಕ್‌ ವಿರುದ್ಧದ ಫೈನಲ್‌ ಪಂದ್ಯದಿಂದ ಹೊರಗುಳಿದ ಹಾರ್ದಿಕ್‌ ಪಾಂಡ್ಯ

    Asia Cup: ಪಾಕ್‌ ವಿರುದ್ಧದ ಫೈನಲ್‌ ಪಂದ್ಯದಿಂದ ಹೊರಗುಳಿದ ಹಾರ್ದಿಕ್‌ ಪಾಂಡ್ಯ

    – ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆಯ್ಕೆ

    ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ 2025 ರ ಏಷ್ಯಾ ಕಪ್ ಫೈನಲ್ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ರಿಂಕು ಸಿಂಗ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

    ಶ್ರೀಲಂಕಾ ವಿರುದ್ಧ ಭಾರತದ ರೋಮಾಂಚಕ ಗೆಲುವಿನಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಕುಸಲ್ ಮೆಂಡಿಸ್ ಅವರನ್ನು ಔಟ್ ಮಾಡುವ ಒಂದೇ ಒಂದು ಓವರ್ ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಯಿತು.

    ಅವರ ಅನುಪಸ್ಥಿತಿಯಿಂದಾಗಿ ಭಾರತ ಪಂದ್ಯಕ್ಕಾಗಿ ತನ್ನ ಸಂಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಹಾರ್ದಿಕ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ರಿಂಕು ಸ್ಥಾನ ಪಡೆದರೆ, ಹರ್ಷಿತ್ ರಾಣಾ ಮತ್ತು ಅರ್ಶ್ದೀಪ್ ಸಿಂಗ್ ಬದಲಿಗೆ ಜಸ್ಪ್ರೀತ್ ಬುಮ್ರಾ ಮತ್ತು ಶಿವಂ ದುಬೆ ತಂಡಕ್ಕೆ ಮರಳಿದ್ದಾರೆ.

    ಭಾರತ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಎರಡನೇ ಬಾರಿಗೆ ಏಷ್ಯಾ ಕಪ್ ಟಿ20ಐ ಟೂರ್ನಿಯನ್ನು ಗೆಲ್ಲುವ ಗುರಿ ಹೊಂದಿದೆ.

  • India Vs Pakistan: ಮೊದಲ ಎಸೆತಕ್ಕೆ ವಿಕೆಟ್‌; ಪಾಕ್‌ ವಿರುದ್ಧದ ಪಂದ್ಯದಲ್ಲಿ ಇತಿಹಾಸ ಬರೆದ ಹಾರ್ದಿಕ್‌ ಪಾಂಡ್ಯ

    India Vs Pakistan: ಮೊದಲ ಎಸೆತಕ್ಕೆ ವಿಕೆಟ್‌; ಪಾಕ್‌ ವಿರುದ್ಧದ ಪಂದ್ಯದಲ್ಲಿ ಇತಿಹಾಸ ಬರೆದ ಹಾರ್ದಿಕ್‌ ಪಾಂಡ್ಯ

    ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ಮೊದಲ ಎಸತೆದಲ್ಲೇ ವಿಕೆಟ್‌ ಪಡೆದು ಟೀಂ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ ಇತಿಹಾಸ ಬರೆದಿದ್ದಾರೆ.

    ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹಾರ್ದಿಕ್‌ ಪಾಂಡ್ಯ ಮೊದಲ ಎಸೆತದಲ್ಲೇ ಸೈಮ್‌ ಅಯೂಬ್‌ ವಿಕೆಟ್‌ ಪಡೆದರು. ಆ ಮೂಲಕ ಪಾಕ್‌ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್‌ ಬೀಳಿಸಿದ ಸ್ಟಾರ್‌ ಆಲ್‌ರೌಂಡರ್‌ ಎಂಬ ದಾಖಲೆ ಬರೆದಿದ್ದಾರೆ.

    ಪಾಕಿಸ್ತಾನ ವಿರುದ್ಧದ ಅಂತರರಾಷ್ಟ್ರೀಯ ಟಿ20 ಪಂದ್ಯದ ಮೊದಲ ಎಸೆತದಲ್ಲಿ ಭಾರತೀಯ ಆಟಗಾರನೊಬ್ಬ ವಿಕೆಟ್ ಪಡೆದಿರುವುದು ಇದೇ ಮೊದಲು. 2024 ರ ಟಿ20 ವಿಶ್ವಕಪ್‌ನಲ್ಲಿ ಯುಎಸ್ಎ ವಿರುದ್ಧ ಅರ್ಶ್ದೀಪ್‌ ಸಿಂಗ್‌ ಈ ಸಾಧನೆ ಮಾಡಿದ್ದಾರೆ. ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

    ಪಾಕಿಸ್ತಾನ ವಿರುದ್ಧದ ಟಿ20ಐ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಬೌಲರ್ ಆಗಿದ್ದಾರೆ. ಶ್ರೀಲಂಕಾದ ನುವಾನ್ ಕುಲಶೇಖರ 2009 ರಲ್ಲಿ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಜಾರ್ಜ್ ಲಿಂಡೆ 2021 ರಲ್ಲಿ ಮೊದಲ ಎಸೆತಕ್ಕೆ ಪಾಕ್‌ ಆಟಗಾರನ ವಿಕೆಟ್‌ ಕಿತ್ತು ಈ ಸಾಧನೆ ಮಾಡಿದ್ದಾರೆ.

  • IPL 2025 | ಸೂಪರ್‌ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್‌

    IPL 2025 | ಸೂಪರ್‌ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್‌

    ಮುಂಬೈ: ಐಪಿಎಲ್‌ (IPL 2025) ಇತಿಹಾಸದಲ್ಲಿ ತಲಾ ಐದು ಬಾರಿ ಚಾಂಪಿಯನ್‌ ಪಟ್ಟ ಗೆದ್ದು ಅತ್ಯಂತ ಯಶಸ್ವಿ ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) 18ನೇ ಆವೃತ್ತಿ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿವೆ. ಉಭಯ ತಂಡಗಳು ಗೆಲುವಿಗಾಗಿ ಹಾತೊರೆಯುತ್ತಿದ್ದು, ಮಹತ್ವದ ಪಂದ್ಯದಲ್ಲಿ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ.

    ಇಂದು ಸಂಜೆ 7:30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede stadium) ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳು ಈವರೆಗೆ 38 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 18ರಲ್ಲಿ ಸಿಎಸ್‌ಕೆ, 20 ಪಂದ್ಯಗಳಲ್ಲಿ ಮುಂಬೈ ಗೆಲುವು ಸಾಧಿಸಿದೆ. ಪ್ರಸ್ತುತ ಆವೃತ್ತಿಯಲ್ಲಿ ಮುಂಬೈ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಕೇವಲ 2 ಪಂದ್ಯಗಳಲ್ಲಿ ಗೆದ್ದು ಕೊನೆಯ ಸ್ಥಾನದಲ್ಲಿದೆ.

    ಈಗಾಗಲೇ ಉಭಯ ತಂಡಗಳು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಎದುರಾಗಿದ್ದು, ಚೆನ್ನೈ ಜಯಭೇರಿ ಬಾರಿಸಿತ್ತು. ಅಲ್ಲದೇ ಚೆನ್ನೈ ಕಳೆದ 5 ಮುಖಾಮುಖಿಯಲ್ಲಿ ಎರಡೂ ಬಾರಿಯೂ ಮುಂಬೈಯನ್ನು ಸೋಲಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಮುಂಬೈ ತಂಡ ಕಾಯುತ್ತಿದೆ. ನ್ನೈಗೆ ಹೋಲಿಸಿದ್ರೆ ಮುಂಬೈ ತಂಡ ಬಲಿಷ್ಠವಾಗಿದೆ.

    ರೋಹಿತ್ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದರು, ರಿಕಲ್ಟನ್‌, ತಿಲಕ್ ವರ್ಮಾ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮುಂತಾದವರು ಬ್ಯಾಟಿಂಗ್‌ನಲ್ಲಿ ಬಲ ತುಂಬುತ್ತಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ಜಸ್ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌, ಮಿಚೆಲ್‌ ಸ್ಯಾಂಟ್ನರ್‌ ತಂಡಗಳ ಕೈ ಹಿಡಿಯುವ ನಿರೀಕ್ಷೆಯಲ್ಲಿದೆ. ಅಲ್ಲದೇ ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯ ಎನಿಸಿದ್ದು, ಯಾರು ಸೋತರು ಪ್ಲೇ ಆಫ್ಸ್‌ ಹಾದಿ ಬಹುತೇಕ ಬಂದ್‌ ಆಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್‌ ವಿಶ್ಲೇಷಕರು ಅಂದಾಜಿಸಿದ್ದಾರೆ.

  • ಹಾರ್ದಿಕ್‌ ಪಾಂಡ್ಯ ಕಮಾಲ್‌ – ಜಸ್ಟ್‌ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್‌

    ಹಾರ್ದಿಕ್‌ ಪಾಂಡ್ಯ ಕಮಾಲ್‌ – ಜಸ್ಟ್‌ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್‌

    ನವದೆಹಲಿ: ಟೀ ಇಂಡಿಯಾದ (Team India) ಆಲ್‌ರೌಂಡರ್‌ ಆಟಗಾರ ಹಾರ್ದಿಕ್‌ ಪಾಂಡ್ಯ (Hardik Pandya) ವಿರಾಟ್‌ ಕೊಹ್ಲಿ ಹೆಸರಿನಲ್ಲಿದ ಸೋಶಿಯಲ್‌ ಮೀಡಿಯಾ (Social Media) ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅತಿ ಕಡಿಮೆ ಅವಧಿಯಲ್ಲಿ 10 ಲಕ್ಷ ಲೈಕ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರವಾಗಿದ್ದಾರೆ.

    ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು (ICC Champions Trophy) ಗೆದ್ದ ಬಳಿಕ ಪಾಂಡ್ಯ ಕ್ರಿಕೆಟ್‌ ಪಿಚ್‌ನಲ್ಲಿ ಟ್ರೋಫಿಯನ್ನು ಇರಿಸಿ ಪೋಸ್‌ ನೀಡಿದ್ದರು. ಈ ಫೋಟೋಗೆ ಕೇವಲ 6 ನಿಮಿಷದಲ್ಲೇ 10 ಲಕ್ಷ ಜನ ಲೈಕ್‌ ಮಾಡಿದ್ದರು. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ಈ ಹಿಂದೆ ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಗೆದ್ದ ಬಳಿಕ ಅಪ್ಲೋಡ್‌ ಮಾಡಿದ ಫೋಟೋಗೆ 7 ನಿಮಿಷದಲ್ಲಿ 10 ಲಕ್ಷ ಲೈಕ್‌ ಸಿಕ್ಕಿತ್ತು.

    ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್‌ ಕೊಹ್ಲಿ ಅವರನ್ನು 27 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ಹಾರ್ದಿಕ್‌ ಪಾಂಡ್ಯ ಅವರನ್ನು 3.9 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

  • ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮೊದಲೇ ಭಾರತಕ್ಕೆ ಆಘಾತ – ಪಂತ್‌ ಮೊಣಕಾಲಿಗೆ ಪೆಟ್ಟು

    ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮೊದಲೇ ಭಾರತಕ್ಕೆ ಆಘಾತ – ಪಂತ್‌ ಮೊಣಕಾಲಿಗೆ ಪೆಟ್ಟು

    ದುಬೈ: ಚಾಂಪಿಯನ್ಸ್‌ ಟ್ರೋಫಿ (Champions Trophy) ಪಂದ್ಯದ ಆರಂಭಕ್ಕೂ ಮೊದಲೇ ಭಾರತ (Team India) ತಂಡಕ್ಕೆ ಆಘಾತ ಎದುರಾಗಿದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ.

    ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ (Hardik Pandya) ಅವರು ಪಂತ್‌ಗೆ ಬಾಲ್‌ ಎಸೆಯತ್ತಿದ್ದರು. ಈ ವೇಳೆ ಬಾಲ್‌ ಪಂತ್‌ ಅವರ ಎಡ ಮೊಣಕಾಲಿಗೆ ಬಡಿದಿದೆ. ಪೆಟ್ಟು ಬಿದ್ದ ನಂತರ ಪಂತ್‌ ಕುಂಟುತ್ತಾ ನಡೆದಿದ್ದಾರೆ.

    ವೈದ್ಯಕೀಯ ಆರೈಕೆಯ ನಂತರ ಪಂತ್ ಮೊಣಕಾಲಿನ ಪಟ್ಟಿಯೊಂದಿಗೆ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ. 2022 ರಲ್ಲಿ ರಿಷಭ್ ಪಂತ್‌ ಅವರ ಕಾರು ಭೀಕರ ಅಪಘಾತವಾಗಿದ್ದು. ಈ ಸಂದರ್ಭದಲ್ಲಿ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿತ್ತು. ಇದನ್ನೂ ಓದಿ: WPL ನಿಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕ ಹೊರಕ್ಕೆ?

    ಪಂತ್ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದಾರೆ. ಭಾರತವು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ. ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

    ಭಾರತವು ಎರಡು ಬಾರಿ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದುಕೊಂಡಿದೆ. 2002 ರಲ್ಲಿ ಶ್ರೀಲಂಕಾದ ಜೊತೆ ಜಂಟಿಯಾಗಿ ಜಯಗಳಿಸಿದ್ದರೆ 2013 ರಲ್ಲಿ ಆತಿಥೇಯ ಇಂಗ್ಲೆಂಡ್ ಅನ್ನು 5 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

     

  • ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಪುಣೆ: ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಪರಾಕ್ರಮ, ರವಿ ಬಿಷ್ಣೋಯಿ, ಹರ್ಷಿತ್‌ ರಾಣಾ ಉರಿ ಚೆಂಡಿನ ದಾಳಿ ನೆರವಿನಿಂದ ಭಾರತ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 15 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿತು.

    19ನೇ ಓವರ್‌ ರೋಚಕ:
    ಕೊನೇ 12 ಎಸೆತಗಳಲ್ಲಿ ಇಂಗ್ಲೆಂಡ್‌ ಗೆಲುವಿಗೆ 25 ರನ್‌ ಅಗತ್ಯವಿತ್ತು. ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿದ್ದರೆ, ಕೊನೆಯ ಬ್ಯಾಟಿಂಗ್‌ ಭರವಸೆಯಾಗಿದ್ದ ಜೇಮೀ ಓವರ್ಟನ್ ಕ್ರೀಸ್‌ನಲ್ಲಿದ್ದರು. ಹರ್ಷಿತ್‌ ರಾಣಾ ಮೊದಲ ಎಸೆತವನ್ನೇ ಓವರ್ಟನ್‌ ಬೌಂಡರಿಗಟ್ಟಿದರು. ಬಳಿಕ 2ನೇ ಬಾಲ್‌ ಡಾಟ್‌ ಆಯಿತು. 3ನೇ ಎಸೆತದಲ್ಲಿ 2 ರನ್‌ ಕದ್ದಾಗ ಪಂದ್ಯ ಕೊಂಚವೇ ಇಂಗ್ಲೆಂಡ್‌ನತ್ತ ವಾಲುತ್ತಿತ್ತು. ಆದ್ರೆ 4, 5ನೇ ಎಸೆತದಲ್ಲಿ ಯಾವುದೇ ರನ್‌ ಬಿಟ್ಟುಕೊಡದ ರಾಣಾ 6ನೇ ಎಸೆತದಲ್ಲಿ ಓವರ್ಟನ್‌ ವಿಕೆಟ್‌ ಉಡೀಸ್‌ ಮಾಡಿದ್ರು. ಇದರೊಂದಿಗೆ ಇಂಗ್ಲೆಂಡ್‌ ತಂಡದ ಗೆಲುವೂ ಕಸಿಯಿತು.

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿಂದು ನಡೆದ 4ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 181 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ ಗಳಿಸಿತ್ತು. ಡಕೆಟ್‌ 19 ಎಸೆತಗಳಲ್ಲಿ 39 ರನ್‌ ಚಚ್ಚಿದ್ರೆ, ಸಾಲ್ಟ್‌ 21 ಎಸೆತಗಳಲ್ಲಿ ಕೇವಲ 23 ರನ್‌ ಸಿಡಿಸಿದ್ರು. ಆದ್ರೆ ಬೆಂಕಿ ಆಟವಾಡುತ್ತಿದ್ದ ಡಕೆಟ್‌ ವೇಗಕ್ಕೆ ರವಿ ಬಿಷ್ಣೋಯಿ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿದರು. ಆರಂಭಿಕ ಜೋಡಿ ಔಟಾಗುತ್ತಿದ್ದಂತೆ ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಾಕೋಬ್‌ ಬೇಥೆಲ್‌ ಹಾಗೂ ಆಲ್‌ರೌಂಡರ್‌ ಬ್ರೈಡನ್ ಕಾರ್ಸ್ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ಸಂಕಷ್ಟಕ್ಕೀಡಾಯಿತು.

    ಬ್ರೂಕ್‌ ಸ್ಫೋಟಕ ಬ್ಯಾಟಿಂಗ್‌:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಇಂಗ್ಲೆಂಡ್‌ ತಂಡಕ್ಕೆ ಹ್ಯಾರಿ ಬ್ರೂಕ್‌ ಅವರ ಅರ್ಧಶತಕ ಬಲ ತುಂಬಿತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್‌ 26 ಎಸೆತಗಳಲ್ಲಿ ಸ್ಫೋಟಕ 51 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದು ಇಂಗ್ಲೆಂಡ್‌ ತಂಡಕ್ಕೆ ಜೀವದಾನ ನೀಡಿತ್ತು. ಹ್ಯಾರಿ ಬ್ರೂಕ್‌ ವಿಕೆಟ್‌ ಬೀಳುತ್ತಿದ್ದಂತೆ ಮತ್ತೆ ಉಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ ಜೇಮೀ ಓವರ್ಟನ್ (19 ರನ್‌ ಗಳಿಸಿ) ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆ ಹೆಚ್ಚಿಸಿದ್ದರು. ಈ ವೇಳೆ ಟೀಂ ಇಂಡಿಯಾ ವೇಗಿ ಹರ್ಷಿತ್‌ ರಾಣಾ 19ನೇ ಓವರ್‌ನ ಕೊನೇ ಎಸೆತದಲ್ಲಿ ಓವರ್ಟನ್‌ಗೆ ಪೆವಿಲಿಯನ್‌ ದಾರಿ ತೋರಿ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್‌ ಗಳಿಸಿತ್ತು. ಮೊದಲ 12 ರನ್‌ಗಳಿಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ ತಂಡಕ್ಕೆ ಒಂದೆಡೆ ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು.

    ಪಾಂಡ್ಯ, ದುಬೆ ಅರ್ಧಶತಕಗಳ ಬ್ಯಾಟಿಂಗ್‌:
    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 27 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ ಸ್ಫೋಟಕ ಅರ್ಧಶತಕ ಸಿಡಿಸಿದ್ರು. ಒಟ್ಟು 30 ಎಸೆತಗಳಲ್ಲಿ 53 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಶಿವಂ ದುಬೆ 34 ಎಸೆತಗಳಲ್ಲಿ 53 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ಅಭಿಷೇಕ್‌ ಶರ್ಮಾ 29 ರನ್‌, ರಿಂಕು ಸಿಂಗ್‌ 30 ರನ್‌ಗಳ ಕೊಡುಗೆ ನೀಡಿದರು.

  • T20 ವಿಶ್ವಕಪ್‌ಗೂ ಮುನ್ನ ರೋಹಿತ್ – ಪಾಂಡ್ಯ ಐಪಿಎಲ್ ಮುನಿಸು ಕೊನೆಗೊಂಡಿದ್ದು ಹೇಗೆ..?

    T20 ವಿಶ್ವಕಪ್‌ಗೂ ಮುನ್ನ ರೋಹಿತ್ – ಪಾಂಡ್ಯ ಐಪಿಎಲ್ ಮುನಿಸು ಕೊನೆಗೊಂಡಿದ್ದು ಹೇಗೆ..?

    – ಮೊದಲ ದಿನ ಇಬ್ಬರೂ ಮಾತನಾಡಿರಲಿಲ್ಲ!

    ಮುಂಬೈ: 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಕ್ಯಾಪ್ಟನ್ಸಿ ವಿಚಾರವಾಗಿ ರೋಹಿತ್‌-ಹಾರ್ದಿಕ್‌ ಪಾಂಡ್ಯ ನಡುವಿನ ಕಿತ್ತಾಟ ಚರ್ಚೆಗೆ ಗ್ರಾಸವಾಗಿತ್ತು. ಇವರಿಬ್ಬರ ಕಿತ್ತಾಟ ಟಿ20 ವಿಶ್ವಕಪ್‌ನಲ್ಲೂ (T20 World Cup 2024) ಮುಂದುವರಿಯಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಪಾಂಡ್ಯ-ರೋಹಿತ್‌ ಟ್ರೋಫಿ ಗೆದ್ದು ತರುವಲ್ಲಿ ಯಶಸ್ವಿಯಾದರು. ಅಷ್ಟಕ್ಕೂ ಇವರಿಬ್ಬರ ಮುನಿಸು ಕೊನೆಗೊಂಡಿದ್ದು ಹೇಗೆ? ಅನ್ನೋ ಆಸಕ್ತಿದಾಯಕ ವಿಚಾರವನ್ನ ಹಿರಿಯ ಪತ್ರಕರ್ತ ವಿಮಲ್ ಕುಮಾರ್ ರಿವೀಲ್‌ ಮಾಡಿದ್ದಾರೆ.

    ಹೌದು. 2024ರ ಐಪಿಎಲ್‌ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ನಲ್ಲಿದ್ದ ಪಾಂಡ್ಯ (Hardik Pandya) ಅವರನ್ನು ಕರೆ ತಂದು ಮುಂಬೈ ತಂಡದ ನಾಯಕತ್ವದ ಹೊಣೆ ನೀಡಲಾಯಿತು. ಆದ್ರೆ‌ 13 ವರ್ಷಗಳಿಂದ ತಂಡಕ್ಕೆ 5 ಬಾರಿ ಟ್ರೋಫಿ ತಂದುಕೊಟ್ಟ ರೋಹಿತ್‌ (Rohit Sharma) ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಪಾಂಡ್ಯ ವಿರುದ್ಧ ಮುಗಿಬಿದ್ದಿದ್ದರು, ಮೈದಾನದಲ್ಲಿ ನಾಯಿಯೊಂದು ಪ್ರವೇಶಿಸಿದಾಗ ಹಾರ್ದಿಕ್‌ ಹಾರ್ದಿಕ್‌ ಅಂತ ಕೂಗಿ ಅವಮಾನಿಸಿದ್ದರು. ಇದನ್ನೂ ಓದಿ: IPL 2025 | ಐಪಿಎಲ್‌ ಅಖಾಡದಲ್ಲಿ ʻಇಂಪ್ಯಾಕ್ಟ್‌ʼ ವಾರ್‌, ಪರ-ವಿರೋಧ ಚರ್ಚೆ; ಏನಿದು ನಿಯಮ?

    ಇಷ್ಟೆಲ್ಲಾ ಆಗಿದ್ದರೂ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಾಂಡ್ಯ ನಿರ್ಣಾಯಕ ಪಾತ್ರ ವಹಿಸಿದರು. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್‌ ಗೆಲ್ಲಲು ಸಹಕಾರಿಯಾದರು. ಆದರೀಗ ರೋಹಿತ್‌-ಪಾಂಡ್ಯ ಅವರ ಮುನಿಸು ಕೊನೆಗೊಂಡಿದ್ದು ಹೇಗೆ ಅನ್ನುವ ಆಸಕ್ತಿದಾಯಕ ವಿಚಾರವನ್ನು ಹಿರಿಯ ಪತ್ರಕರ್ತ ವಿಮಲ್‌ ಕುಮಾರ್‌ (Vimal Kumar) ಹಂಚಿಕೊಂಡಿದ್ದಾರೆ.

    ಸಂವಾದವೊಂದರಲ್ಲಿ ಮಾತನಾಡಿದ ವಿಮಲ್‌ ಕುಮಾರ್‌, ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯದ ವೇಳೆ ನೆಟ್ಸ್‌ಗೆ ಹೋದಾಗ ಹಾರ್ದಿಕ್‌ ಮತ್ತು ರೋಹಿತ್‌ ಮಧ್ಯೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದೆ. ಮೊದಲ ದಿನ ಅವರಿಬ್ಬರೂ ಮಾತನಾಡಿದ್ದು ಕಂಡುಬರಲಿಲ್ಲ. ಆದ್ರೆ 2ನೇ ದಿನ ಅವರಿಬ್ಬರು ಸಂಭಾಷಣೆ ನಡೆಸುತ್ತಿದ್ದ ರೀತಿ ನೋಡಿ ನನಗೆ ತುಂಬಾ ಖುಷಿ ಆಯ್ತು. ಹಾರ್ದಿಕ್‌ ಪಾಂಡ್ಯ, ರೋಹಿತ್‌ ಜೊತೆಗೆ ಮಾತನಾಡುತ್ತಿದ್ದ ರೀತಿ ನೋಡಿ ನನ್ನ ಕಣ್ಣನ್ನು ನಾನೇ ನಂಬಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಸಲಹೆ ನೀಡುತ್ತಿದ್ದರು. ಆಗ ತಂಡದ ಪ್ರದರ್ಶನದ ಬಗ್ಗೆ ಸಂಪೂರ್ಣ ವಿಶ್ವಾಸ ಮೂಡಿತು ಅಂತ ಭಾವುಕರಾಗಿದ್ದಾರೆ.

    ಒಬ್ಬರಿಗೊಬ್ಬರು ಸಲಹೆ ನೀಡುತ್ತಾ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಲ್ಲದೇ ಡ್ರೆಸ್ಸಿಂಗ್ ರೂಮ್‌ನ ವಾತಾವರಣವೂ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಭಾರತ ತಂಡದ ಸಲುವಾಗಿ ಇವರಿಬ್ಬರು ಒಂದಾದರು. ಇದರ ಕ್ರೆಡಿಟ್‌ ಏನಿದ್ದರೂ ಅಂದಿನ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಸೇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನೂತನ ಮೆಂಟರ್‌ ಆಗಿ ಜಹೀರ್‌ ಖಾನ್‌ ನೇಮಕ

    ಮ್ಯಾಚ್‌ಗೆ ಇನ್ನೂ ಮೂರು ದಿನ ಬಾಕಿಯಿರುವಂತೆಯೇ ಅವರಿಬ್ಬರ ಮುನಿಸು ಕೊನೆಗೊಂಡಿತು. ಬಳಿಕ ಸಮಾನಾಂತರವಾಗಿ ಇಬ್ಬರು ಬ್ಯಾಟ್‌ ಬೀಸಲು ಶುರು ಮಾಡಿದರು. ರೋಹಿತ್‌ ಬ್ಯಾಟಿಂಗ್‌ನಲ್ಲಿ, ಪಾಂಡ್ಯ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನ ಸೆಳೆದರು. ಆ ವಾತಾವರಣವನ್ನು ನಾನು ನೋಡಿ ಬಹಳ ಖುಷಿಪಟ್ಟೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    2025ರ ಐಪಿಎಲ್‌ ಮೊದಲ ಪಂದ್ಯಕ್ಕೆ ಪಾಂಡ್ಯ ಬ್ಯಾನ್‌:
    2024ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಕಾರಣ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್‌ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ 1 ಪಂದ್ಯದಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಿಗೆ 12 ಲಕ್ಷ ರೂ. ದಂಡ ಅಥವಾ ಪಂದ್ಯದ ಸಂಭಾವನೆಯಲ್ಲಿ ಶೇ.50 ರಷ್ಟು ದಂಡವನ್ನು ವಿಧಿಸಲಾಗಿದೆ. ಆದ್ದರಿಂದ 2025ರ ಐಪಿಎಲ್‌ ಆವೃತ್ತಿಯ ಮೊದಲ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ.

  • ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಮುಂಬೈ/ಲಂಡನ್‌: ನಟಿ ನತಾಶಾ (Natasa) ಜೊತೆಗಿನ ಡಿವೋರ್ಸ್ (Divorce) ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟರ್‌ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನತಾಶಾಗೆ ಗುಡ್ ಬೈ ಹೇಳಿದ್ಮೇಲೆ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿಕೊಂಡಿದೆ.

    ಇತ್ತೀಚೆಗಷ್ಟೇ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಂಡ್ಯ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಈ ಬೆನ್ನಲ್ಲೇ ಅನನ್ಯ ಪಾಂಡೆ ಅವರೊಂದಿಗೆ ಹಾರ್ದಿಕ್‌ ಲವ್ವಿ ಡವ್ವಿ ಶುರುವಾಗಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಪಾಂಡ್ಯ ಬ್ರಿಟಿಷ್‌ ಗಾಯಕಿ ಜಾಸ್ಮಿನ್‌ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ಗ್ರೀಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ ಹೇಳಲಾಗುತ್ತಿದೆ. ಇದನ್ನೂ ಓದಿ: ನಾನು ತುಂಬಾ ಅದೃಷ್ಟವಂತೆ: ಜೈಲಿನಲ್ಲಿರುವ ಪವಿತ್ರಾ ನೆನೆದು ಮಗಳು ಭಾವುಕ ಪೋಸ್ಟ್

    ಯಾರು ಈ ಬ್ರಿಟಿಷ್‌ ಬ್ಯೂಟಿ?
    ಜಾಸ್ಮಿನ್‌ ಇಂಗ್ಲೆಂಡಿನ ಎಸೆಕ್ಸ್‌ನಲ್ಲಿ ಜನಿಸಿದ್ರೂ ಈಕೆಯ ಪೋಷಕರು ಭಾರತೀಯ ಮೂಲದವರೇ ಆಗಿದ್ದಾರೆ. ಜಾಸ್ಮಿನ್‌ ಗಾಯಕಿ ಆಗೋದಕ್ಕೂ ಮುನ್ನ ʻದಿ ಓನ್ಲಿ ವೇ ಈಸ್‌ ಎಸೆಕ್ಸ್‌ʼ ಎಂಬ ಬ್ರಿಟಿಷ್‌ ರಿಯಾಲಿಟಿ ಶೋನಲ್ಲಿ ತೊಡಗಿಸಿಕೊಂಡು, 2010ರ ವೇಳೆಗೆಲ್ಲಾ ಜನಪ್ರಿಯತೆ ಗಳಿಸಿದ್ದರು. 2012ರ ವೇಳೆಗೆ ಈ ಶೋನಲ್ಲಿ ಪೂರ್ಣಪಾತ್ರಧಾರಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇದು ಅವರು ಮನರಂಜನಾ ಉದ್ಯಮದಲ್ಲಿ ಮುಂದುವರಿಯಲು ಸಹಾಯ ಮಾಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

    ಇಷ್ಟಕ್ಕೆ ಸುಮ್ಮನಾಗದ ಜಾಸ್ಮಿನ್‌ 2014ರಲ್ಲಿ ಯೂಟ್ಯೂಬ್‌ ಚಾನೆಲ್‌ವೊಂದನ್ನ ಪ್ರಾರಂಭಿಸಿದ್ರು, ತಮ್ಮದೇ ಹಾಡುಗಳನ್ನ ರೆಕಾರ್ಡಿಂಗ್‌ ಮಾಡಿ ಗಾಯನ ಪ್ರದರ್ಶನಗಳನ್ನು ನೀಡಲು ಶುರು ಮಾಡಿದರು. ಝಾಕ್ ನೈಟ್, ಇಂಟೆನ್ಸ್-ಟಿ ಮತ್ತು ಆಲ್ಲಿ ಗ್ರೀನ್ ಮ್ಯೂಸಿಕ್‌ನಂತಹ ಕಲಾವಿದರೊಂದಿಗೆ ಹಾಡಿ ಜನಮನ್ನಣೆ ಗಳಿಸಿದರು. ಆದ್ರೆ 2017ರಲ್ಲಿ ರಿಲೀಸ್‌ ಆದ ʻಬೊಮ್ ಡಿಗ್ಗಿ ಡಿಗ್ಗಿʼ ಆಲ್‌ಬಂಬ್‌ ಸಾಂಗ್‌ ಜಾಸ್ಮಿನ್‌ ಅವರ ಲೈಫ್‌ ಕರಿಯರ್‌ಗೆ ದೊಡ್ಡ ತಿರುವು ಕೊಟ್ಟಿತ್ತು. ಝಾಕಾ ನೈಟ್‌ ಅವರೊಂದಿಗೆ ಹಾಡಿದ ಈ ಗೀತೆ ಸಿಕ್ಕಾಪಟ್ಟೆ ಹಿಟ್‌ ಆಯ್ತು. ಇದರಿಂದ 2018ರಲ್ಲಿ ʻಸೋನು ಕೆ ಟಿಟು ಕಿ ಸ್ವೀಟಿʼ ಬಾಲಿವುಡ್‌ ಚಿತ್ರದಲ್ಲಿ ಹಾಡುವ ಚಾನ್ಸ್‌ ಗಿಟ್ಟಿಸಿಕೊಂಡರು. ಆ ನಂತರ ಗಾಯಕಿಯಾಗಿ ಗುರುತಿಸಿಕೊಂಡರು.

    ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ 6.48 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಜಾಸ್ಮಿನ್‌, 5.7 ಲಕ್ಷ ಯುಟ್ಯೂಬ್‌ ಸಬ್‌ಸ್ಕ್ರೈಬರ್ಸ್‌ಗಳನ್ನ ಹೊಂದಿದ್ದಾರೆ. ಇತ್ತೀಚೆಗೆ ಬಿಕಿನಿ ಫ್ಯಾಷನ್‌ಗೆ ಹೆಸರು ವಾಸಿಯಾಗಿದ್ದಾರೆ. ಸದ್ಯ ಇವರಿಬ್ಬರು ರಿಲೇಷನ್‌ಶಿಪ್‌ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

    2024ರ ಟಿ20 ವಿಶ್ವಕಪ್‌ ಬಳಿಕ ಹಾರ್ದಿಕ್‌ ಪಾಂಡ್ಯ ಅವರು ನಟಿ ನತಾಶಾ ಅವರೊಂದಿಗಿನ ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ್ದರು.  ಇದನ್ನೂ ಓದಿ: ಶ್ರೀದೇವಿ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಜೊತೆ ಜಾನ್ವಿ ಕಪೂರ್ ಟೆಂಪಲ್ ರನ್

  • ಡಿವೋರ್ಸ್ ಬೆನ್ನಲ್ಲೇ ಅನನ್ಯಾ ಪಾಂಡೆ ಜೊತೆ ಹಾರ್ದಿಕ್ ಲವ್ವಿ ಡವ್ವಿ

    ಡಿವೋರ್ಸ್ ಬೆನ್ನಲ್ಲೇ ಅನನ್ಯಾ ಪಾಂಡೆ ಜೊತೆ ಹಾರ್ದಿಕ್ ಲವ್ವಿ ಡವ್ವಿ

    ಟಿ ನತಾಶಾ (Natasa) ಜೊತೆಗಿನ ಡಿವೋರ್ಸ್ (Divorce) ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನತಾಶಾಗೆ ಗುಡ್ ಬೈ ಹೇಳಿದ್ಮೇಲೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Pandya) ಜೊತೆ ಹಾರ್ದಿಕ್ ಪಾಂಡ್ಯ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಮಾನಿ ಹಬ್ಬಿದೆ.

    ಬಾಲಿವುಡ್‌ನಲ್ಲಿ ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಕಾಮನ್ ಆಗಿದೆ. ಸೆಲೆಬ್ರಿಟಿಗಳು ಹಿಂದಿನ ಬದುಕಿನ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಾರೆ. ಹೀಗಿರುವಾಗ ನತಾಶಾಗೆ ಡಿವೋರ್ಸ್ ಕೊಟ್ಟು ಸಿಂಗಲ್ ಆಗಿರುವ ಹಾರ್ದಿಕ್ ಪಾಂಡ್ಯ ಜೊತೆ ನಟಿ ಅನನ್ಯಾ ಮಿಂಗಲ್ ಆಗೋಕೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಹಾರ್ದಿಕ್ ಮತ್ತು ಅನನ್ಯಾ ಡೇಟಿಂಗ್ ಬಗ್ಗೆ ಅಧಿಕೃತಪಡಿಸಿಲ್ಲ. ಆದರೆ ಈ ಸುದ್ದಿಗೆ ಪುಷ್ಠಿ ನೀಡಿರೋದು ಮಾತ್ರ ಅಂಬಾನಿ ಮನೆ ಮದುವೆ. ಅನಂತ್‌ ಮತ್ತು ರಾಧಿಕಾ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕುಣಿದಿರುವ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರ ಡ್ಯಾನ್ಸ್ ನೋಡಿ ಇವರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಈ ಕಾರ್ಯಕ್ರಮದ ಬಳಿಕ ಇಬ್ಬರೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನೊಬ್ಬರು ಹಿಂಬಾಲಿಸುತ್ತಿದ್ದಾರೆ. ಇತ್ತ ಅನನ್ಯಾ ಪಾಂಡೆ ಕೂಡ ಆದಿತ್ಯಾ ರಾಯ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಹಾಗಾಗಿ ಅನನ್ಯಾ ಮತ್ತು ಹಾರ್ದಿಕ್ ನಡುವೆ ಹೊಸ ಪ್ರೇಮ ಕಹಾನಿ ಶುರುವಾಗಿದೆ ಎಂದೇ ಗುಮಾನಿ ಹಬ್ಬಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡ್ತಾರಾ ಕಾದುನೋಡಬೇಕಿದೆ.

    ಅಂದಹಾಗೆ, ನತಾಶಾ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜು.18ರಂದು ಅಂತ್ಯ ಹಾಡಿದ್ದಾರೆ. ಡಿವೋರ್ಸ್ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.