Tag: ಹಾರ್ದಿಕ್ ಪಟೇಲ್

  • ಇದು ಚಾಣಕ್ಯರ ರಣನೀತಿ ಅಲ್ಲ, ದುಡ್ಡಿನ ರಣನೀತಿ: ಹಾರ್ದಿಕ್ ಪಟೇಲ್

    ಇದು ಚಾಣಕ್ಯರ ರಣನೀತಿ ಅಲ್ಲ, ದುಡ್ಡಿನ ರಣನೀತಿ: ಹಾರ್ದಿಕ್ ಪಟೇಲ್

    ಗಾಂಧಿನಗರ: ಗುಜರಾತಿನಲ್ಲಿ ನಡೆದಿರುವುದು ಚಾಣಕ್ಯರ ರಣನೀತಿ ಅಲ್ಲ, ಇದು ಕೇವಲ ದುಡ್ಡಿನ ರಣನೀತಿ ಅಂತಾ ಎಂದು ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

    ಗುಜರಾತ್ ವಿಧನಾಸಭಾ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಜನ ಎಚ್ಚೆತ್ತುಕೊಂಡಿದ್ದು, ಅವರಿಗೆ ಏನು ಬೇಕು, ಬೇಡ ಎಂಬುದನ್ನು ಅರಿತುಕೊಂಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಜನರು ಜಾಗೃತರಾಗಬೇಕಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಜಯವನ್ನು ಸಾಧಿಸಿದೆ. ಈ ಬಾರಿ ಗುಜರಾತಿನ ಜನರು ಹೆಚ್ಚಿನ ಸಂಖ್ಯೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ನಾನೊಬ್ಬ ಹೋರಾಟಗಾರ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಬಿಜೆಪಿ ನಮ್ಮ ಸಮುದಾಯದ ಜನರಿಗೆ ಮೋಸ ಮಾಡಿದ್ದು, ಆ ಪಕ್ಷದ ವಿರುದ್ಧ ಯಾವಗಲೂ ಹೋರಾಟ ನಡೆಯುತ್ತಿರುತ್ತದೆ ಅಂತಾ ತಿಳಿದರು.

    ಇವಿಎಂ ಗೊಂದಲ: ಮತದಾನದ ವೇಳೆಯಲ್ಲಿ ರಾಜ್‍ಕೋಟ್, ಅಹಮದಾಬಾದ್ ಮತ್ತು ಸೂರತ್ ನ ಕೆಲವು ಭಾಗಗಳಲ್ಲಿ ಇವಿಎಂ ಯಂತ್ರವನ್ನು ತಿರುಚಲಾಗಿದೆ. ಆದರೆ ಬಿಜೆಪಿ ಎವಿಎಂ ಯಂತ್ರವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ನನಗೆ ಇವಿಎಂ ಯಂತ್ರದ ಬಗ್ಗೆ ಸಂಪೂರ್ಣ ನಂಬಿಕೆಯಿಲ್ಲ. ಬಿಜೆಪಿ ಇವಿಎಂ ಯಂತ್ರಗಳಲ್ಲಿ ಕುತಂತ್ರ ಮಾಡಿ ಗೆಲವುನ್ನು ಸಾಧಿಸಿದೆ. ಈ ಕಾರಣದಿಂದ ಚುನಾವಣಾ ಆಯೋಗ ಮತ್ತೊಮ್ಮೆ ಮತಗಳ ಮರು ಎಣಿಕೆ ನಡೆಸಬೇಕು ಎಂದು ಹಾರ್ದಿಕ್ ಪಟೇಲ್ ಆಗ್ರಹಿಸಿದ್ದಾರೆ.

    ಇತ್ತೀಚೆಗೆ ಎಟಿಎಂ ಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದ್ದು, ನಿಮ್ಮ ಹಣದ ಬಗ್ಗೆ ಎಚ್ಚರಿಕೆಯಿಂದರಿಬೇಕು ಎಂದು ಸರ್ಕಾರ ತಿಳಿಸಿತ್ತು. ಎಟಿಎಂ ರೀತಿಯಲ್ಲಿ ಇವಿಎಂ ಕೂಡ ಒಂದು ಸಾಮಾನ್ಯ ಯಂತ್ರವಾಗಿದ್ದರಿಂದ ಇದನ್ನು ಹ್ಯಾಕ್ ಮಾಡಿರಬಹುದು. ನಮ್ಮೆಲ್ಲರ ದೇಹವನ್ನು ದೇವರು ರೂಪಿಸಿದ್ರು, ಡಾಕ್ಟರ್ ದೇಹದಲ್ಲಿ ಏನು ಬೇಕಾದ್ರೂ ಪ್ರಯೋಗಗಳನ್ನು ಮಾಡುತ್ತಾರೆ. ಹೀಗಾಗಿ ಮಾನವ ನಿರ್ಮಿತ ಇವಿಎಂ ಗಳಲ್ಲಿ ಬದಲಾಯಿಸುವುದು ಅಷ್ಟು ಸಾಧ್ಯವಿಲ್ಲವೇ ಅಂತಾ ಹಾರ್ದಿಕ್ ಪ್ರಶ್ನೆ ಮಾಡಿದರು.

  • ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು: ಅಖಿಲೇಶ್ ಯಾದವ್

    ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು: ಅಖಿಲೇಶ್ ಯಾದವ್

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿ ಎಂದು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದೇವೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

    ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದರಿಂದ ಮತಗಳ ವಿಭಜನೆ ಆಗುತ್ತದೆ. ಇದು ನೇರವಾಗಿ ಬಿಜೆಪಿಗೆ ಲಾಭವಾಗಲಿದ್ದು, ಆದ್ದರಿಂದ ಗುಜರಾತ್ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಿಲ್ಲ. ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮತ್ತು ಸಂಪುಟದ ಸಚಿವರು ಕೇವಲ ಚುನಾವಣೆ ಗೆಲ್ಲವುದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜವಾದಿ ಸರ್ಕಾರವಿದ್ದಾಗ ಉತ್ತರ ಪ್ರದೇಶ ರಾಜ್ಯದ 50 ಜಿಲ್ಲೆಗಳಲ್ಲಿ ತ್ವರಿತವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು ಅಂತಾ ಯೋಗಿ ಸರ್ಕಾರದ ವಿರುದ್ಧ ಹರಿಹಾಯ್ದರು.

     

    ಬಿಜೆಪಿಯಿಂದ ಸುಳ್ಳು ಪ್ರಚಾರ: ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಕುರಿತು ಮಾತನಾಡಿದ ಅಖಿಲೇಶ್, ಬಿಜೆಪಿ ಸುಳ್ಳು ಪ್ರಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಒಬ್ಬ ವ್ಯಕ್ತಿಯ ಖಾಸಗಿ ಜೀವನವನ್ನು ಸಾರ್ವಜನಿಕ ರಂಗದಲ್ಲಿ ಸಿಡಿ ತೋರಿಸುವ ಮೂಲಕ ಬಿಜೆಪಿ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಗುಜರಾತ್ ಜನರು ಸಿಡಿ ವಿಚಾರಕ್ಕಿಂತ ನೋಟ್ ಬ್ಯಾನ್, ಜಿಎಸ್‍ಟಿ ವಿಚಾರಗಳಿಂದ ಬೇಸತ್ತಿದ್ದಾರೆ ಅಂತಾ ಅಂದ್ರು.

    ಶ್ರೀ ಶ್ರೀ ರವಿಶಂಕರ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಇಬ್ಬರೂ ದೊಡ್ಡ ಸ್ವಾಮೀಜಿಗಳು. ಅವರಿಬ್ಬರ ನಡುವೆ ಯಾವ ಮಾತಕತೆಗಳು ನಡೆದಿವೆ ಎಂಬುದರ ಬಗ್ಗೆ ಗೊತ್ತಿಲ್ಲ. ದೇಶದ ಸಂವಿಧಾನವನ್ನು ಎಲ್ಲರು ಗೌರವಿಸುತ್ತಾರೆ ಹಾಗೂ ದೇಶದ ಕಾನೂನುಗಳು ಎಲ್ಲರಿಗೂ ಒಂದೇ ಆಗಿದ್ದು, ಎಲ್ಲರೂ ಅವುಗಳನ್ನು ಪಾಲನೆ ಮಾಡಬೇಕು. ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದು ಅಖಿಲೇಶ್ ಹೇಳಿದರು.

  • ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್‍ಗೆ ಸಂಬಂಧಿಸಿದೆ ಎಂದುಹೇಳಲಾಗುತ್ತಿರುವ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ.

    ಮೇ 22ರಂದು ತನ್ನ ಮೂವರು ಗೆಳೆಯರೊಂದಿಗೆ ಯುವತಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ರೆಕಾರ್ಡ್ ಆಗಿದ್ದಾಗ ಹಾರ್ದಿಕ್ ಸೇರಿ ಮೂವರು ತಲೆಬೋಳಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

    ಸೋಮವಾರ ಮಹಿಳೆಯೊಂದಿಗೆ ಹಾರ್ದಿಕ್ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದ ವೀಡಿಯೋ ವೈರಲ್ ಆಗಿತ್ತು. ಇದು ಚುನಾವಣೆ ಗೆಲ್ಲಲು ಬಿಜೆಪಿ ಹಿಡಿದಿರುವ ಅಡ್ಡದಾರಿ ಅಂತಾ ಹಾರ್ದಿಕ್ ಆರೋಪಿಸಿದ್ದಾರೆ. ಈ ವರ್ಷದ ಮೇ 22 ರಂದು ಈ ವಿಡಿಯೋ ಸೆರೆಯಾಗಿದೆ.

     

     

     

     

     

     

     

    https://twitter.com/HardikPatel_/status/930005238991478784

    https://youtu.be/rePlIfEZkVQ

  • ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    – ಈ ವಿಡಿಯೋದಲ್ಲಿರೋದು ನಾನಲ್ಲ : ಹಾರ್ದಿಕ್ ಪಟೇಲ್

    ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿದೆ. ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದಾರೆ.

    ಮಾಧ್ಯಮಗಳಲ್ಲಿ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ನಕಲಿ ಸಿಡಿಯೊಂದು ನನ್ನ ವಿರುದ್ಧ ಬಿಡುಗಡೆ ಆಗಲಿದೆ ಅಂತಾ ಹಾರ್ದಿಕ್ ಹೇಳಿಕೊಂಡಿದ್ರು. ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸಿಡಿ ನನ್ನ ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ.

    https://twitter.com/HardikPatel_/status/930005238991478784

     

    https://youtu.be/rePlIfEZkVQ

  • ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

    ಗಾಂಧಿನಗರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಶತಯಗಾತಯ ನಿರ್ಧರಿಸಿದಂತಿದ್ದು, ಹೊಸ ಬೆಳವಣಿಗೆಯೊಂದರಲ್ಲಿ ಗುಜರಾತ್ ಜಾಟ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಪಕ್ಷಕ್ಕೆ ಆಹ್ವಾನವನ್ನು ನೀಡಿದೆ.

    ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನವನ್ನು ಕೈಗೊಂಡರೆ ಪಕ್ಷದಿಂದ ಟಿಕೆಟ್ ನೀಡುವುದಾಗಿಯು ತಿಳಿಸಿದ್ದು, ಪಟೇಲ್ ಅವರ ಹೋರಾಟ ಹಾಗೂ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ತಿಳಿಸಿದೆ.

    ಗುಜರಾತ್ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್, ರಾಜ್ಯದ ಪ್ರಬಲ ಸಮುದಾಯದ ನಾಯಕರನ್ನು ಭೇಟಿ ಮಾಡಿ ಬೆಂಬಲವನ್ನು ಕೋರಿದೆ. ಪ್ರಮುಖವಾಗಿ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ಕೋರಿ ಹೋರಾಟವನ್ನು ನಡೆಸಿದ್ದ ಹಾರ್ದಿಕ್ ಪಟೇಲ್, ಠಾಕೋರ್ ಸಮುದಾಯದ ನಾಯಕರದ ಅಲ್ಪೇಸ್ ಠಾಕೋರ್ ಮತ್ತು ದಲಿತ ಸಮುದಾಯದ ನಾಯಕರಾದ ಜಿಗ್ನೇಶ್ ಮೇವಾನಿ ಅವರ ಬೆಂಬಲವನ್ನು ಪಡೆದು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾರ್ಯ ತಂತ್ರರೂಪಿಸಿದೆ.

    ಕಾಂಗ್ರೆಸ್ ಪ್ರಬಲ ಸಮುದಾಯಗಳ ಬೆಂಬಲ ಮಾತ್ರವಲ್ಲದೆ, ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಸಿಪಿ ಯ ಶರತ್ ಪವರ್ ಮತ್ತು ಜೆಡಿಯು ನ ವಾಸಾವ ಅವರೊಂದಿಗೆ ಮಾತುಕತೆಯನ್ನು ನಡೆಸಿದೆ. ಈ ಕುರಿತು ಮಾಹಿತಿಯನ್ನು ನೀಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭರತೀಶ್ ಸೋಲಂಕಿ, ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿ 125 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಲವು ನಾಯಕರು ಬಿಜೆಪಿ ಪರ ಮತ ಚಲಾಯಿಸಿದರು ಸಹ ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಇದರಲ್ಲಿ ಪ್ರಮುಖವಾಗಿ ಜೆಡಿಯು ಎಂಎಲ್‍ಎ ವಾಸಾವ ಬಿಜೆಪಿ ಪಕ್ಷದ ಆಡಳಿತ ಕ್ರಮ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

    ಸೋಲಂಕಿಯವರು ಆಪ್ ಪಕ್ಷ ರಾಜ್ಯ ನಾಯಕರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಬೆಂಬಲವನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಪಕ್ಷದಲ್ಲಿ ಉತ್ತಮ ಹಾಗೂ ಪ್ರಬಲ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 22 ವರ್ಷಗಳಿಂದ ಅಧಿಕಾರವನ್ನೇ ಪಡೆದಿಲ್ಲ.