Tag: ಹಾರ್ಟ್ ಅಟ್ಯಾಕ್

  • ಕೊಪ್ಪಳ | ಹೃದಯಾಘಾತದಿಂದ 26 ವರ್ಷದ ಯುವತಿ ಸಾವು

    ಕೊಪ್ಪಳ | ಹೃದಯಾಘಾತದಿಂದ 26 ವರ್ಷದ ಯುವತಿ ಸಾವು

    ಕೊಪ್ಪಳ: ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್‌ಗೆ (Heartattack) ಯುವಜನರೇ ಬಲಿಯಾಗುತ್ತಿದ್ದು, ಕೊಪ್ಪಳದಲ್ಲಿ (Koppala) ಬುಧವಾರ ಹೃದಯಾಘಾತದಿಂದ 26 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಮಂಜುಳಾ ಹೂಗಾರ್ (26) ಮೃತಪಟ್ಟಿದ್ದಾರೆ. ಮಧ್ಯಾಹ್ನ ಮಂಜುಳಾಗೆ ಲೋ ಬಿಪಿಯಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿದ್ದ ಮಂಜುಳಾ, ಕಳೆದ ಕೆಲ ದಿನಗಳಿಂದ ಕೆಲಸ ತೊರೆದು ವಾಪಾಸ್ ಕೊಪ್ಪಳಕ್ಕೆ ಬಂದಿದ್ದಳು. ಮಂಜುಳಾ, ಪೋಷಕರು ಕೊಪ್ಪಳದ ಬಸ್ ನಿಲ್ದಾಣದ ಬಳಿ ಹೂವಿನ ವ್ಯಾಪಾರಸ್ಥರಾಗಿದ್ದಾರೆ.

  • ಹಲಸೂರು ಗೇಟ್ ಸಂಚಾರಿ ಎಎಸ್‌ಐ ಮಲಗಿದ್ದಲ್ಲೇ ಸಾವು

    ಹಲಸೂರು ಗೇಟ್ ಸಂಚಾರಿ ಎಎಸ್‌ಐ ಮಲಗಿದ್ದಲ್ಲೇ ಸಾವು

    ಬೆಂಗಳೂರು: ಹಲಸೂರಿನ ಗೇಟ್ ಸಂಚಾರಿ ಎಎಸ್‌ಐ (ASI) ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಆನಂದ್ ಕುಮಾರ್ ಮೃತ ಎಎಸ್‌ಐ. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿ ಮನೆಗೆ ತೆರಳಿದ್ದ ಆನಂದ್ ಕುಮಾರ್ ಕಳೆದ ರಾತ್ರಿ ಮಲಗಿದ್ದವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.

    ನಾಗರಬಾವಿ ಬಳಿಯ ಮನೆಯಲ್ಲಿ ಆನಂದ್ ಕುಮಾರ್ ಮಲಗಿದ್ದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಬಳಿಕ ವೈದ್ಯರು ಆನಂದ್ ಕುಮಾರ್ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?

  • ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಬೆಂಗಳೂರು: ಚಳಿಗಾಲದಲ್ಲಿ ಹೃದಯ ಜೋಪಾನ. ಚಳಿಗಾಲದಲ್ಲಿ ಹೆಚ್ಚಾಗುತ್ತಿದೆ ಹೃದಯಘಾತದ ಸಮಸ್ಯೆ. ವೈದ್ಯರಿಂದ ರವಾನೆಯಾಗಿದೆ ಎಚ್ಚರಿಕೆಯ ಸಂದೇಶ. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆ ಇರೋರು ಎಚ್ಚರವಾಗಿರಬೇಕು.

    ಚಳಿಗಾಲ (Winter) ಬಂತು ಅಂದ್ರೆ ದೇಹ ಸೋಮಾರಿತನ ಬಯಸುತ್ತೆ. ಕರಿದ ತಿಂಡಿಯತ್ತ ಮನಸು ಹಾತೊರೆಯುತ್ತೆ. ವಾಕಿಂಗ್ ಜಾಗಿಂಗ್ ವ್ಯಾಯಾಮಕ್ಕೆಲ್ಲ ಗುಡ್ ಬೈ ಹೇಳಿ ಚೆನ್ನಾಗಿ ಹೊದ್ದು ಮಲಗಿಬಿಡೋಣ ಅಂತಾ ಅಂದುಕೊಳ್ಳೋರೆ ಹೆಚ್ಚು. ಆದರೆ ಶಾಕಿಂಗ್ ವಿಚಾರವೆಂದರೆ ಚಳಿಗಾಲದ ಸಮಯದಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಿದೆಯಂತೆ. 32-40 ಪರ್ಸೆಂಟ್ ಹಾರ್ಟ್ ಆಟ್ಯಾಕ್‍ಗಳು ಚಳಿಗಾಲದಲ್ಲಿ ಆಗುತ್ತೆ ಅಂತಾ ವೈದ್ಯರು ಶಾಕಿಂಗ್ ವಿಚಾರ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!

    ಚಳಿಗಾಲದಲ್ಲಿ ಹಾರ್ಟ್ ಆಟ್ಯಾಕ್ (Heart Attack) ಹೆಚ್ಚು: ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತನಾಳ ಸಂಕುಚಿತಗೊಂಡಿರುತ್ತೆ. ಹೀಗಾಗಿ ಬಿಪಿ (BP) ಇದ್ದವರಲ್ಲಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದವರಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೃದಯಾಘಾತ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟೋದು ಕೊಂಚ ಹೆಚ್ಚು. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನೋದ್ರಿಂದ ಕೆಲವರಲ್ಲಿ ಕೊಲೆಸ್ಟ್ರಾಲ್ (Cholesterol) ಪ್ರಮಾಣ ಕೊಂಚ ಹೆಚ್ಚಾಗುತ್ತೆ. ಬಹುತೇಕರು ವ್ಯಾಯಾಮ, ವಾಕಿಂಗ್ (Walking) , ಜಾಗಿಂಗ್ (Jogging) ಕಡಿಮೆ ಮಾಡೋದ್ರಿಂದ ದೈಹಿಕ ಚಟುವಟಿಕೆ ಕಡಿಮೆ. ಇದರಿಂದ ಹೃದಯಘಾತ ಹೆಚ್ಚಾಗುವ ಸಾಧ್ಯತೆಗಳು ಇರುತ್ತೆ ಎಂದು ವೈದ್ಯರು ಹೇಳುತ್ತಾರೆ.

    ಚಳಿಗಾಲದಲ್ಲಿ `ಹೃದಯ’ದ ಬಗ್ಗೆ ಇರಲಿ ಎಚ್ಚರ: ಹೃದಯ ಸಂಬಂಧಿ ಸಮಸ್ಯೆ ಇದ್ರೆ ನಿಯಮಿತವಾಗಿ ಚಳಿಗಾಲದಲ್ಲಿ ಪರೀಕ್ಷೆ ಮಾಡಿಸಬೇಕು. ನಿಯಮಿತವಾಗಿ ಇಸಿಜಿ ಟೆಸ್ಟ್ ಮಾಡಿಸಬೇಕು. ತಾಜಾ ತರಕಾರಿ- ಹಣ್ಣುಗಳನ್ನು ಸೇವನೆ ಮಾಡಬೇಕು. ಕರಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ರಾಮಯ್ಯ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಅನುಪಮಾ.ವಿ ಹೆಗ್ಡೆ ಸಲಹೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬದಲಾದ ವಾತಾವರಣದಿಂದ ಯುವಕರಲ್ಲಿ ಹೆಚ್ಚಿದ ಹೃದಯಾಘಾತ

    ಬದಲಾದ ವಾತಾವರಣದಿಂದ ಯುವಕರಲ್ಲಿ ಹೆಚ್ಚಿದ ಹೃದಯಾಘಾತ

    ಬೆಂಗಳೂರು: ವಾತಾವರಣ ಬದಲಾದಂತೆ ಮನುಷ್ಯರು ಕೂಡ ಬದಲಾಗುತ್ತಿದ್ದಾರೆ. ಆಚಾರ, ವಿಚಾರದಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯವಾಗಿ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯುವಕರು ಚಿಕ್ಕ ವಯಸ್ಸಿಗೆ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಮುಖವಾಗಿ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. 10 ವರ್ಷಗಳ ಹಿಂದೆ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಕಳೆದ 10 ವರ್ಷದಿಂದ ಯುವಕರು ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ 22% ಏರಿಕೆ ಆಗಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ಈ ಬಗ್ಗೆ ಅಚ್ಚರಿಯ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

    manjunath

    ಬದಲಾದ ಜೀವನ ಶೈಲಿಯಿಂದ 25 ರಿಂದ 45 ವರ್ಷ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಚಿಕ್ಕ ವಯಸ್ಸು, ಯಂಗ್ ಆಗಿದ್ದೇವೆ ಅಂತ ನಿರ್ಲಕ್ಷ್ಯ ಮಾಡಬೇಡಿ. 1,000 ಜನಕ್ಕೆ ಟ್ರೀಟ್ ಮೆಂಟ್ ಕೊಟ್ಟರೆ 30% ಅಷ್ಟು 45 ವರ್ಷ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೃದಯಾಘಾತಕ್ಕೆ ಏನು ಕಾರಣ ಎನ್ನುವುದನ್ನು ಡಾ. ಮಂಜುನಾಥ್ ವಿವರಣೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‌ ನೀರು ಮರುಬಳಸಿ ತಯಾರಿಸಿದ ಬಿಯರ್‌ ಸೂಪರ್‌ ಎಂದ ಮದ್ಯಪ್ರಿಯರು!

    ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಏನು ಕಾರಣವೇನು?
    * ಧೂಮಪಾನ ಮಾಡುವುದು
    * ಮದ್ಯಪಾನ ಮಾಡುವುದು
    * ಆಹಾರ ಪದ್ದತಿ ಬದಲಾವಣೆ
    * ಆಹಾರ ಪದಾರ್ಥ ಬದಲಾವಣೆ
    * ಸಕ್ಕರೆ ಖಾಯಿಲೆ ಜೊತೆಗೆ ಬರುತ್ತಿರುವುದು
    * ದಿನಚರಿ ಬದಲಾಗಿರುವುದು
    * ನಿದ್ರೆ ಬರದೇ ಇರುವುದು
    * ಫ್ಯಾಮಿಲಿ ಸ್ಟ್ರೆಸ್
    * ನಿರುದ್ಯೋಗದ ಸಮಸ್ಯೆ
    * ವಿದ್ಯಾರ್ಥಿಗಳಿಗೆ ಸಿಕ್ಕಪಟ್ಟೆ ಒತ್ತಡ
    * ಭವಿಷ್ಯದ ಒತ್ತಡ
    * ಪೋಷಕರ ಒತ್ತಡ
    * ವರ್ಷದಲ್ಲಿ ಮಾಡಬೇಕಾದ ಸಾಧನೆ 10 ತಿಂಗಳಲ್ಲಿ ಮಾಡಬೇಕು ಅನ್ನೋದು
    * ವಾಯುಮಾಲಿನ್ಯ ಕಾರಣ

    ಹೃದಯಾಘಾತ ಆಗದಂತೆ ಎಚ್ಚರವಹಿಸುವುದು ಹೇಗೆ?
    * ಚಿಕ್ಕಂದಿನಿಂದಲೇ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು
    * ವ್ಯಾಯಾಮ ಮಾಡಬೇಕು
    * ಕೊಬ್ಬಿನಾಂಶ ಇರುವ ಆಹಾರ ಸೇರಿಸಬಾರದು
    * ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇರಿಸಬಾರದು
    * ಧೂಮಪಾನ ಮಾಡಬಾರದು
    * ಮದ್ಯಪಾನ ಮಾಡಬಾರದು
    * 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಗಂಡಸರು ವಾರ್ಷಿಕವಾಗಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು . ಬ್ಲಡ್ ಬ್ರೆಸರ್, ಬ್ಲಡ್ ಕೊಲೆಸ್ಟ್ರಾಲ್ ಚೆಕ್ ಮಾಡಿಸಿಕೊಳ್ಳಬೇಕು
    * ಕುಟುಂಬದಲ್ಲಿ ಯಾರಿಗಾದ್ರು ಹಾರ್ಟ್ ಅಟ್ಯಾಕ್ ಆಗಿದ್ದರೆ ಎಚ್ಚರವಹಿಸಬೇಕು ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    ಒಟ್ಟಾರೆ 80 ರಿಂದ 90 ವರ್ಷ ಬಾಳಿ ಬದುಕಬೇಕಾದ ಯುವಕರು ಕೆಟ್ಟ ಚಟ ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗುವುದು ನಿಜಕ್ಕೂ ಆತಂಕ ಪಡುವಂತಹ ವಿಚಾರವಾಗಿದೆ.

    Live Tv