ರಾಮನಗರ: ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿ ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ.
ಕಳೆದ 2020ರ ಮೇನಲ್ಲಿ ಹಾರೋಹಳ್ಳಿ (Harohalli) ತಾಲೂಕಿನ ಮರಳವಾಡಿ ಗ್ರಾಮದ ಅನಿಲ್ ಎಂಬಾತನ ಪತ್ನಿ ಅಶ್ವಿನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬುಕ್ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್!
ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಗುರುವಾರ ತೀರ್ಪು ಪ್ರಕಟ ಮಾಡಿದೆ. ಸಾಕ್ಷ್ಯಾಧಾರಗಳ ಮೂಲಕ ವರದಕ್ಷಿಣೆ ಕಿರುಕುಳ ಆರೋಪ ಸಾಬೀತಾದ ಹಿನ್ನೆಲೆ ಅನಿಲ್‌ಗೆ ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಮೈಸೂರು: ಅಯೋಧ್ಯೆ (Ayodhya) ವಿವಾದದ ಬಳಿಕ ಇದೀಗ ಮೈಸೂರಿನಲ್ಲಿ (Mysuru) ಮತ್ತೆ ವಿವಾದ ಶುರುವಾಗಿದೆ. ಅಯೋಧ್ಯೆ ರಾಮನನ್ನು ಕೆತ್ತಲು ಬಳಸಿದ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಜಮೀನು ಮಾಲೀಕ ಮುಂದಾಗಿದ್ದಾರೆ. ಆದರೆ ದಲಿತ ಸಂಘಟನೆಗಳನ್ನು ಶಾಲೆ ಕಟ್ಟುತ್ತೇವೆ ಹೊರತಾಗಿ ಮಂದಿರಕ್ಕೆ ಅವಕಾಶ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ.
ಮೈಸೂರು ತಾಲೂಕಿನ ಹಾರೋಹಳ್ಳಿ (Harohalli) ಗ್ರಾಮದ ರಾಮದಾಸ್ ಎಂಬುವವರು ಜಮೀನಿನಲ್ಲಿ ಸಿಕ್ಕಿದ್ದ ಕಪ್ಪುಶಿಲೆಯನ್ನು ಬಳಸಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಲಾಗಿತ್ತು. ಇದೀಗ ಜಮೀನು ಮಾಲೀಕ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಮುಂದಾಗಿದ್ದು, ಇಂದು ದಕ್ಷಿಣ ಅಯೋಧ್ಯೆ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ
ಆದರೆ ದಲಿತ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಮಮಂದಿರ ಕಟ್ಟಲು ಬಿಡುವುದಿಲ್ಲ. ಇಲ್ಲಿ ಶಾಲೆ ಕಟ್ಟುತ್ತೇವೆ ಎಂದಿದ್ದಾರೆ. ಬಾಲರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ಕಾರ್ಯಕರ್ತರು ಬಾವುಟಗಳನ್ನ ನೆಟ್ಟು, ಶಂಕುಸ್ಥಾಪನೆಗೆ ಹಾಕಿದ ಚಪ್ಪರದ ಸುತ್ತ ಬಾವುಟಗಳನ್ನ ಕಟ್ಟಿ ಹೋರಾಟ ನಡೆಸಿದ್ದಾರೆ. ದಿಢೀರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಮೀನು ಮಾಲೀಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಈ ಕುರಿತು ಜಮೀನು ಮಾಲೀಕ ರಾಮದಾಸ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಾಮಮಂದಿರ ಕಟ್ಟೇ ಕಟ್ಟುತ್ತೇನೆ. ಮಂದಿರ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೆ. ಹೀಗಾಗಿ ಅದನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನ ಜಮೀನು. ದೇವಸ್ಥಾನ ಕಟ್ಟುವುದು, ಬಿಡುವುದು ನನ್ನ ನಿರ್ಧಾರ. ಇದಕ್ಕೆ ಯಾರ ಒಪ್ಪಿಗೆಯೂ ಬೇಡ. ಕೆಲ ಸಂಘಟನೆಗಳು ರಾಮ ಮಂದಿರಕ್ಕೆ ವಿರೋಧ ಮಾಡಿದ್ದಾರೆ. ಅವರಿಂದ ಸಮಾರಂಭಕ್ಕೆ ಬರುವ ಗಣ್ಯರಿಗೆ ಮುಜುಗರ ಆಗುತ್ತದೆ ಎಂದು ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.ಇದನ್ನೂ ಓದಿ: ಚಿತ್ತಾಪುರದಲ್ಲಿ ಛಲವಾದಿ ಮೇಲೆ ಹಲ್ಲೆ ಯತ್ನ – ಸಿಎಂ, ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ; ಕೆ.ಎಸ್ ನವೀನ್
ರಾಮನಗರ: ಸ್ನೇಹಿತನನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ರಾಮನಗರ (Ramanagara) ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹಾರೋಹಳ್ಳಿ (Harohalli) ತಾಲೂಕಿನ ಕೊಟ್ಟಗಾಳು ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಣ್ಣಯ್ಯಪ್ಪ ಎಂಬಾತನನ್ನು ಸ್ನೇಹಿತರಾದ ಚಿಕ್ಕೇಗೌಡ ಹಾಗೂ ಕುಮಾರ್ ಎಂಬವರು ಕೊಲೆಗೈದಿದ್ದರು. ಚಿಕ್ಕೇಗೌಡ ಪತ್ನಿಯೊಂದಿಗೆ ಅಣ್ಣಯ್ಯಪ್ಪ ಅಸಭ್ಯವಾಗಿ ವರ್ತಿಸಿದ್ದ ಎಂಬ ವಿಚಾರಕ್ಕೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣಯ್ಯಪ್ಪನಿಗೆ ಚಾಕು ಇರಿದು ಚಿಕ್ಕೇಗೌಡ ಹಾಗೂ ಕುಮಾರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನ ಬಂಧಿಸಲಾಗಿತ್ತು. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಡಿ.16 ಕ್ಕೆ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಮಂಡನೆ
ಈ ಬಗ್ಗೆ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ಸಾಕ್ಷ್ಯಗಳ ಆಧಾರದ ಮೇಲೆ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟ ಮಾಡಿದೆ. ಇಬ್ಬರೂ ಆಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಹೆಚ್.ಎನ್.ಕುಮಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: Mandya | ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಆತ್ಮಹತ್ಯೆ
ರಾಮನಗರ: ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ (Harohalli) ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ: ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು
ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ ಬಾಲಕರ ಪೋಷಕರು ಮೆಕ್ಕಾ ಮದೀನ ತೀರ್ಥಯಾತ್ರೆಗೆ ತೆರಳಿದ್ದು, ಸಾರ್ವಜನಿಕರು ಘಟನೆ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.
– ಘೋಷಣೆ ಮಾಡುವುದಲ್ಲ ಕೆಲಸ ಮಾಡಬೇಕು ಎಂದ ಸಚಿವ – ಬುರುಡೇ ಬಿಡುವುದಲ್ಲ, ಮಲ್ಲೇಶ್ವರಂನಲ್ಲಿ ಅಭಿವೃದ್ಧಿ ಮಾಡಲಿ
ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ (Ramanagara) ಬಿಜೆಪಿ, ಜೆಡಿಎಸ್ ನಡುವಿನ ಟಾಕ್ ಫೈಟ್ ಮುಂದುವರಿದಿದೆ. ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನಾ ಸಮಾರಂಭ ಮತ್ತೊಂದು ಮಾತಿನ ಜಟಾಪಟಿಗೆ ಸಾಕ್ಷಿಯಾಗಿದೆ. ಸಚಿವ ಅಶ್ವಥ್ ನಾರಾಯಣ್ (Ashwath Narayan) ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ನಡುವೆ ಅಭಿವೃದ್ಧಿ ವಿಚಾರದ ಬಗ್ಗೆ ಕ್ರೆಡಿಟ್ ವಾರ್ ನಡೆದಿದ್ದು ವೇದಿಕೆ ಮೇಲೆಯೇ ಇಬ್ಬರು ವಾಗ್ವಾದ ನಡೆಸಿದ್ದಾರೆ.
ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಬಿಟ್ಟು ಕಚೇರಿ ಉದ್ಘಾಟನೆ ನಡೆಸಿದ್ದ ಜೆಡಿಎಸ್ (JDS) ಕಾರ್ಯಕರ್ತರನ್ನ ಕೆರಳಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಕಿಡಿಕಾರಿದ್ದಾರೆ.
ನೂತನ ತಾಲೂಕು ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್, ನಮ್ಮ ಸರ್ಕಾರದಲ್ಲಿ ಈಗ ಎರಡು ತಾಲೂಕು ಕೇಂದ್ರ ಮಾಡಿದ್ದೇವೆ. ತಾಲೂಕು ಕೇಂದ್ರಕ್ಕೆ ಪೋಸ್ಟ್ ಸ್ಯಾಂಕ್ಷನ್ ಮಾಡಿದ್ದೇವೆ. ಇದು ಕೇವಲ ಒಂದು ದಿನದಲ್ಲಿ ಆಗುವ ಕೆಲಸ ಅಲ್ಲ. ಚುನಾವಣೆ ಸಮಯದಲ್ಲಿ ವೇಗವಾಗಿ ಕೆಲಸ ಮಾಡಿ ತಾಲೂಕು ರಚನೆ ಆಗಿದೆ. ರಾಮನಗರ ಜಿಲ್ಲೆಗೆ ಶೈಕ್ಷಣಿಕ ಯೋಜನೆ ನೀಡಲಾಗುತ್ತಿದೆ. ಹಿಂದೆ ಬೇಸಿಗೆ ಅರಂಭ ಆದರೆ ಜಿಲ್ಲೆಯಲ್ಲಿ ಕುಡಿಯಲು ನೀರು ಇರುತ್ತಿರಲಿಲ್ಲ. 450 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಮೂಲಕ ನೀರು ನೀಡಿದ್ದು ನಮ್ಮ ಸರ್ಕಾರ. 1800 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ತಂದಿದ್ದೇವೆ ಎಂದರು.
ಈ ಹೇಳಿಕೆ ಬರುತ್ತಿದ್ದಂತೆ ವೇದಿಕೆಯಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಕಾಲದಲ್ಲೇ ಘೋಷಣೆ ಆಗಿತ್ತು ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ಮಾತು ಮುಂದುವರಿಸಿದ ಸಚಿವ ಅಶ್ವಥ್ ನಾರಾಯಣ್, ಆಗಲಿ ಮೇಡಂ ನಿಮ್ಮ ಸರದಿ ಬಂದಾಗ ಬಂದು ಹೇಳಿ. ಘೋಷಣೆ ಎಲ್ಲರೂ ಮಾಡುತ್ತಾರೆ. ಆದರೆ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ
ನಂತರ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಅಧ್ಯಕ್ಷತೆಗೆ ನನ್ನ ಹೆಸರು ಹಾಕಿ ನಾನು ಬರುವುದಕ್ಕೂ ಮುನ್ನವೇ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಕಾಟಾಚಾರಕ್ಕೆ ನನ್ನನ್ನ ಕರೆದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಹಾರೋಹಳ್ಳಿ ತಾಲೂಕು ರಚನೆಗೆ ನನ್ನ ಶ್ರಮ ಇದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನೂತನ ತಾಲೂಕುಗೆ ಅನುಮೋದನೆ ಪಡೆದಿದ್ದೇನೆ. ಈಗ ಪೋಸ್ಟ್‌ಗಳ ಅನುಮೋದನೆ ಮಾಡುವ ಬಗ್ಗೆಯೂ ಸರ್ಕಾರಕ್ಕೆ ಪತ್ರ ಬರೆದು ಕೆಲಸ ಮಾಡಿಸಿದ್ದೇನೆ. ಉಸ್ತುವಾರಿ ಸಚಿವರು ಈಗ ಹೇಳಿದ ನೀರಾವರಿ ಯೋಜನೆ ಆಗಿದ್ದೂ ಕುಮಾರಸ್ವಾಮಿ ಕಾಲದಲ್ಲಿ. ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರನ್ನು ನಾನು ಕರೆದಿದ್ದೆ. ಆದರೆ ಅವರು ಪಂಚರತ್ನ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ ಎಂದರು.
ಕುಮಾರಸ್ವಾಮಿ ಬಂದಿದ್ದರೆ ಬೇರೆ ಯಾರೂ ಮಾತನಾಡ್ತಿರಲಿಲ್ಲ ಎಂದು ಉಸ್ತುವಾರಿ ಸಚಿವರಿಗೆ ಅನಿತಾ ಕುಮಾರಸ್ವಾಮಿ ಟಾಂಗ್ ನೀಡಿದ್ರು. ಅಲ್ಲದೇ ಉಸ್ತವಾರಿ ಸಚಿವರಿಗೆ ಬರೀ ಬುರುಡೆ ಬಿಡೋದಷ್ಟೇ ಮಾತ್ರ ಇವರಿಗೆ ಗೊತ್ತು. ಸಚಿವರು ಮೊದಲು ಮಲ್ಲೇಶ್ವರಂಗೆ ಹೋಗಿ ಅಭಿವೃದ್ಧಿ ಮಾಡಲಿ. ನಾನು ಶಿವನ ಭಕ್ತೆ, ಮಲ್ಲೇಶ್ವರಂನ ಕಾಡುಮಲ್ಲೇಶ್ಚರ ದೇವಸ್ಥಾನಕ್ಕೆ ಹೋಗುತ್ತಿರುತ್ತೇನೆ. ಅಲ್ಲಿಯ ಅಭಿವೃದ್ಧಿಯನ್ನೂ ನೋಡಿದ್ದೇನೆ. ಕಾರ್ಯಕ್ರಮ ಮಗಿಯೋವರೆಗೂ ಸಚಿವರು ಇರಬೇಕಿತ್ತು. ಅವರ ಸಾಧನೆ ಬಗ್ಗೆ ಹೇಳುತ್ತಿದ್ದೆ ಎಂದು ಕಾರ್ಯಕ್ರಮದಿಂದ ಅರ್ಧಕ್ಕೆ ಹೋದ ಸಚಿವ ಅಶ್ವಥ್ ನಾರಾಯಣ್‌ಗೆ ತಿರುಗೇಟು ನೀಡಿದರು.
ತಾಲೂಕು ಕೇಂದ್ರದ ಶಿಲಾನ್ಯಾಸ ಫಲಕದಲ್ಲಿ ಕುಮಾರಸ್ವಾಮಿ ಹೆಸರನ್ನು ಸಣ್ಣದಾಗಿ ಹಾಕಿದ್ದಾರೆ. ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಗೌತಮ್ ಗೌಡ ಹೆಸರನ್ನು ದಪ್ಪಕ್ಷರಗಳಿಂದ ಹಾಕಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಬಳಿಕ ಕಾರ್ಯಕರ್ತರನ್ನ ಪೊಲೀಸರು ಸಮಾಧಾನ ಪಡಿಸಿದರು.
LIVE TV
[brid partner=56869869 player=32851 video=960834 autoplay=true]
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರ ತವರು ಕ್ಷೇತ್ರ ರಾಮನಗರದ ಹಾರೋಹಳ್ಳಿ ಹೋಬಳಿಯ ಅಭಿವೃದ್ದಿಗಾಗಿ ಕಳೆದ ಬಜೆಟ್‍ನಲ್ಲಿ ಗ್ರಾಮ ಪಂಚಾಯತ್ ಅನ್ನು ತಾಲೂಕಾಗಿ ಘೋಷಣೆ ಮಾಡಿದ್ದರು. ಹಾರೋಹಳ್ಳಿ ತಾಲೂಕಾಗಿ ಘೋಷಣೆಯಾಗಿ ಎಂಟು ತಿಂಗಳುಗಳೇ ಕಳೆದಿದ್ದರೂ ತಾಲೂಕು ಎಂದೆನಿಸಿಕೊಳ್ಳಲು ಪ್ರಗತಿ ಮಾತ್ರ ಶೂನ್ಯವಾಗಿದೆ. ತಾಲೂಕಿನ ಬಗ್ಗೆ ಸರ್ಕಾರ ಅಧಿಸೂಚನೆ ಸಹ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಸಿಎಂ ಆಗಿದ್ದ ಕುಮಾರಸ್ವಾಮಿಯವರ ಬಜೆಟ್‍ನಲ್ಲಿ ರಾಮನಗರ ಜಿಲ್ಲೆಯ ಜನರಿಗೆ ಅಚ್ಚರಿ ಕಾದಿತ್ತು. ಸಾತನೂರು ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗೆ ಬದಲಾಗಿ ಅನಿರೀಕ್ಷಿತವಾಗಿ ಹಾರೋಹಳ್ಳಿ ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡಲಾಗಿತ್ತು. ಅದು ಕೂಡಾ ಗ್ರಾಮ ಪಂಚಾಯತ್‍ನ್ನ ತಾಲೂಕಾಗಿ ಘೋಷಣೆ ಮಾಡಿದ್ದು ಸಾಕಷ್ಟು ಚರ್ಚೆಗೂ ಕೂಡಾ ಗ್ರಾಸವಾಗಿತ್ತು. ಆದರೆ ತಾಲೂಕಾಗಿ ಘೋಷಣೆಯಾಗಿ 8 ತಿಂಗಳೇ ಕಳೆದಿದ್ದರೂ ಯಾವುದೇ ಪ್ರಗತಿಯ ಬೆಳವಣಿಗೆ ಮಾತ್ರ ನಡೆದಿಲ್ಲ. ಅಷ್ಟೇ ಏಕೆ ಜಿಲ್ಲಾಡಳಿತದಿಂದ ತಾಲೂಕಾಗಿ ಮೇಲ್ದರ್ಜೆಗೆ ಏರಿಸಿ ಪೂರಕವಾಗಿ ಕಚೇರಿ ಹಾಗೂ ವಾತಾವರಣ ಕಲ್ಪಿಸಲು ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಸೂಚನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರೋದು ಹಾರೋಹಳ್ಳಿ ತಾಲೂಕು ಹೋರಾಟ ಸಮಿತಿಯ ಹೋರಾಟಗಾರರನ್ನು ಸಿಡಿದೆಬ್ಬಿಸಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಏಷ್ಯಾದ ದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಹೆಗ್ಗಳಿಕೆಯನ್ನ ಹೊಂದಿದೆ. ಕಳೆದ ಬಜೆಟ್‍ನಲ್ಲಿ ಎಚ್‍ಡಿಕೆಯವರು ತಮ್ಮ ಕ್ಷೇತ್ರದ ಋಣ ತೀರಿಸಲು ಹಾರೋಹಳ್ಳಿಗೆ ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳನ್ನು ಸೇರಿಸಿ ತಾಲೂಕಾಗಿ ಘೋಷಿಸಿದ್ದರು. ಹಾರೋಹಳ್ಳಿಯಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು, 63 ದಾಖಲೆ ಗ್ರಾಮಗಳಿವೆ. ಇತ್ತ ಮರಳವಾಡಿ ಹೋಬಳಿಯಲ್ಲಿ ಒಟ್ಟು 46 ಕಂದಾಯ ಗ್ರಾಮಗಳು, 118 ದಾಖಲೆ ಗ್ರಾಮಗಳಿದ್ದು, ಎರಡು ಹೋಬಳಿಗಳಿಂದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.
ಈಗಾಗಲೇ ತಾಲೂಕಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೂ ಕೂಡಾ ತಾಲೂಕಿಗೆ ಬೇಕಾದ ಸವಲತ್ತು ಕಲ್ಪಿಸಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಮಾತ್ರ ಸಿಕ್ಕಿಲ್ಲ. ಕುಮಾರಸ್ವಾಮಿಯವರು ಕಾಟಾಚಾರಕ್ಕೆ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ಪತಿ, ಪತ್ನಿ ಇಬ್ಬರಿಂದ ನಯಾಪೈಸೆಯ ಕೆಲಸವಾಗದಿದ್ದರು ರಾಮನಗರ ಜನತೆ ಜೊತೆಗೆ ನಾವಿದ್ದೇವೆ ಎನ್ನಲು ತಾಲೂಕು ಘೋಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ವ್ಯಾಪ್ತಿಗೆ ಸೇರುವ ಪರಿಮಿತಿಯನ್ನ ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು, ಸರ್ಕಾರದಿಂದ ಅಧಿಸೂಚನೆ ಬಂದ ಬಳಿಕ ಕಚೇರಿಗಳ ಸ್ಥಳಾಂತರ ಹಾಗೂ ತಾಲೂಕು ಕಚೇರಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.