Tag: ಹಾರಂಗಿ ಡ್ಯಾಂ

  • ಕೊಡಗು | ಮಳೆಯಬ್ಬರಕ್ಕೆ ಹಾರಂಗಿ ಡ್ಯಾಂಗೆ ಹೆಚ್ಚಿದ ಒಳಹರಿವು – ನಾಲೆಗಳ ಬಳಿ ಭೂಕುಸಿತದ ಆತಂಕ

    ಕೊಡಗು | ಮಳೆಯಬ್ಬರಕ್ಕೆ ಹಾರಂಗಿ ಡ್ಯಾಂಗೆ ಹೆಚ್ಚಿದ ಒಳಹರಿವು – ನಾಲೆಗಳ ಬಳಿ ಭೂಕುಸಿತದ ಆತಂಕ

    ಕೊಡಗು: ಜಿಲ್ಲೆಯಾದ್ಯಂತ ಮಳೆಯಬ್ಬರ ಹೆಚ್ಚಾದ ಹಿನ್ನೆಲೆ ಹಾರಂಗಿ ಡ್ಯಾಂಗೆ (Harangi Dam) ಒಳಹರಿವು ಹೆಚ್ಚಾಗಿದ್ದು, ನಾಲೆಗಳಲ್ಲಿ ಭೂಕುಸಿತ (Land Slide) ಉಂಟಾಗುವ ಸಾಧ್ಯತೆಯಿದೆ.

    ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಮಳೆಗಾಲದಲ್ಲೇ ನಾಲೆಗಳ ದುರಸ್ತಿ ಕಾರ್ಯ ನಡೆಸುತ್ತಿರುವುದರಿಂದ ನಾಲೆಯಲ್ಲಿ ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ.ಇದನ್ನೂ ಓದಿ: ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಚೀನಾ ಪ್ರವೇಶ? ಪ್ರವಾಸಿಗರನ್ನು ಸೆಳೆಯಲು ಕಾರಣಗಳೇನು?

    ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ನೀರು ಹೆಚ್ಚಾದ ಹಿನ್ನೆಲೆ ಕೊಡಗು-ಮೈಸೂರು-ಹಾಸನ ಭಾಗದ ರೈತರು ನಾಲೆಗಳ ಮುಖಾಂತರ ನೀರು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕುಶಾಲನಗರ ತಾಲೂಕಿನ ಮದಲಾಪುರ ಗ್ರಾಮದ ಹಾರಂಗಿಯ ಎಡದಂಡೆಯಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಮಳೆ ಸಮಯದಲ್ಲಿ ನಾಲೆಗಳ ಬದಿಯ ಮಣ್ಣು ಸಡಿಲಗೊಂಡು ಭೂಕುಸಿತ ಉಂಟಾಗುವ ಸಾದ್ಯತೆ ಇದೆ.

    ಹಾರಂಗಿಯ ನಾಲೆಯಲ್ಲಿ ಕಾಮಗಾರಿ ನಡೆಸಲು ಅವಕಾಶ ಇಲ್ಲ. ಆದರೆ ನಾಲೆಗಳ ಏರಿಯ ಮೇಲೆ ರೋಡ್ ಸರ್ವಿಸ್ ಕೊಡುವುದಕ್ಕೆ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮೇ ತಿಂಗಳಲ್ಲಿ ಭಾರೀ ಮಳೆಯಾಗಿ ಕೆಲಸಕ್ಕೆ ತೊಂದರೆ ಉಂಟಾಗಿದೆ. ಈಗ ಕಾಮಗಾರಿ ನಡೆಸಿದರೆ ಮಣ್ಣು ಸಡಿಲಗೊಂಡು ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಮಳೆ ನಿಂತ ಬಳಿಕ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಕಾವೇರಿ ನೀರಾವರಿ ನಿಗಮದ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಇದೀಗ ರೈತರು ಕಂಗಾಲಾಗಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 19-07-2025

     

  • ಹಾರಂಗಿ ಜಲಾಶಯ ಭರ್ತಿ ಆಯ್ತು: ಕೆಆರ್‍ಎಸ್‍ಗೆ ಹರಿಯುತ್ತಿದೆ ನೀರು, ರೈತರ ಮೊಗದಲ್ಲಿ ಸಂತಸ

    ಹಾರಂಗಿ ಜಲಾಶಯ ಭರ್ತಿ ಆಯ್ತು: ಕೆಆರ್‍ಎಸ್‍ಗೆ ಹರಿಯುತ್ತಿದೆ ನೀರು, ರೈತರ ಮೊಗದಲ್ಲಿ ಸಂತಸ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯ ಭರ್ತಿಯಾಗಿದೆ. ವರ್ಷಕ್ಕೊಮ್ಮೆ ಕಾಣಸಿಗುವ ಅಪರೂಪದ ವಯ್ಯಾರದ ಸೊಬಗನ್ನು ನೋಡಲು ಪ್ರವಾಸಿಗರ ದಂಡು ಹರಿದುಬರುತ್ತಿದೆ.

    ಭರ್ಜರಿಯಾಗಿ ಸುರಿಯುತ್ತಿರೋ ಪುನರ್ವಸು ಮಳೆಯ ಅಬ್ಬರಕ್ಕೆ ಕಾವೇರಿ ಸೇರಿದಂತೆ ಹಾರಂಗಿ, ಬೇತ್ರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿಹರಿಯುತ್ತಿದೆ. ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಒಂದಾದ ಹಾರಂಗಿಯೂ ಉಕ್ಕಿ ಹರಿಯುತ್ತಿರುವ ಕಾರಣ ಜಲಾಶಯ ಭರ್ತಿಯಾಗಿದೆ.

    ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜುಲೈ ಎರಡನೇ ವಾರದ ಬಳಿಕ ವಾಡಿಕೆಯಂತೆ ಮಳೆ ಆಗುತ್ತಿದ್ದು, ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2855.91 ಅಡಿ ನೀರು ಸಂಗ್ರಹವಾಗಿದೆ. 7042 ಸಾವಿರ ಕ್ಯೂಸೆಕ್ ಒಳಹರಿವು ಇದ್ದು ಭಾನುವಾರ ಮಧ್ಯಾಹ್ನ ನಾಲ್ಕು ಕ್ರಸ್ಟ್ ಗೇಟ್ ಓಪನ್ ಮಾಡಿ 1200 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.

    ಜಲಾಶಯದ ನಾಲ್ಕು ಗೇಟ್‍ಗಳನ್ನು ತೆರೆದು ನೀರನ್ನು ಹರಿಸಲಾಗುತ್ತಿರುದರಿಂದ ಎತ್ತರದಿಂದ ಧುಮ್ಮುಕ್ಕಿ ಹರಿಯುವ ನೀರು ಹಾಲ್ನೋರೆಯಂತೆ ರಭಸವಾಗಿ ಕೆಳಗಿಳಿಯೋ ದೃಶ್ಯ ನಯನಮನೋಹರಕವಾಗಿದೆ.

    ನೀರಿನ ಅಂದ ನೋಡಲು ಪ್ರವಾಸಿಗರ ದಂಡು ಹಾರಂಗಿ ಆಗಮಿಸುತ್ತಿದ್ದು, ಬೇಸಿಗೆಯಲ್ಲಿ ಸೊರಗಿದ್ದ ಜಲಾಶಯ ಮುಂಗಾರಿನ ಅಬ್ಬರಕ್ಕೆ ತುಂಬಿಹರಿಯುತ್ತಿದೆ. ಶನಿವಾರ ಮತ್ತು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹಾರಂಗಿಯ ಅಪರೂಪದ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲಿ ಮಂಕಾಗಿದ್ದರಿಂದ ಕಂಗಾಲಾಗಿದ್ದ ರೈತರಿಗೆ ಮಳೆಯ ಅರ್ಭಟದಿಂದ ಜಲಾಶಯ ಭರ್ತಿಯಾಗಿರೋದು ಸಂತಸ ತರಿಸಿದೆ. ಇನ್ನೇನು ಕಾಲುವೆಗಳ ಮೂಲಕ ಬೇಸಾಯಕ್ಕೆ ನೀರುಹರಿಯಲಿದ್ದು ರೈತರ ಹೊಲಗದ್ದೆಗಳಿಗೆ ಬರಲಿದೆ. ಕಳೆದ ವರ್ಷ ಜುಲೈ 10ಕ್ಕೆ ಭರ್ತಿಯಾಗಿದ್ದರೆ ಈ ವರ್ಷ 13 ದಿನ ತಡವಾಗಿ ಭರ್ತಿಯಾಗಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    https://www.youtube.com/watch?v=wZEvmy9E5-4

  • ಭಾರೀ ಮಳೆಗೆ ಭರ್ತಿ ಆಯ್ತು ಹಾರಂಗಿ ಡ್ಯಾಂ: ಕೆಆರ್‍ಎಸ್‍ಗೆ ಬರಲಿದೆ ನೀರು

    ಭಾರೀ ಮಳೆಗೆ ಭರ್ತಿ ಆಯ್ತು ಹಾರಂಗಿ ಡ್ಯಾಂ: ಕೆಆರ್‍ಎಸ್‍ಗೆ ಬರಲಿದೆ ನೀರು

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಡಲಾಗಿದೆ.

    ಡ್ಯಾಂನ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನೀರನ್ನು ಹರಿಸಲಾಗುತ್ತಿದ್ದು ಹಾರಂಗಿ ಮೂಲಕ ಈ ನೀರು ಕೆಆರ್‍ಎಸ್ ಗೆ ಸೇರಲಿದೆ. 2859 ಅಡಿ ಸಾಮರ್ಥ್ಯದ  ಜಲಾಶಯದಲ್ಲಿ 2855.91 ಅ ಡಿ  ನೀರು ಸಂಗ್ರಹವಾಗಿದ್ದು,  ಸುಮಾರು 7,042 ಸಾವಿರ ಕ್ಯೂಸೆಕ್ ನೀರಿ ಒಳಹರಿವು ಇರುವುದರಿಂದ ಇಂದಿನಿಂದ ನೀರನ್ನು ಹರಿಯಬಿಡಲಾಗಿದೆ.

    ಕೇವಲ ಒಂದು ತಿಂಗಳ ಹಿಂದೆ ಬರಿದಾಗಿ ಬಣಗುಡುತ್ತಿದ್ದ 8 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯ ಭರ್ತಿಯಾಗಿರೋದು ಇದರಿಂದ ಹರಿಸಲಾಗಿರುವ ನೀರು ಕೆಆರ್‍ಎಸ್ ಸೇರಲಿದೆ.