Tag: ಹಾಫ್ ಹೆಲ್ಮೆಟ್

  • ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರು: ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಹಾಫ್ ಹೆಲ್ಮೆಟ್ ಧರಿಸಿದ ಇನ್ನೊಬ್ಬ ಪೊಲೀಸ್‍ಗೆ ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಫೈನ್ ಹಾಕಿದ ಫೋಟೋವನ್ನು ಆರ್ ಟಿ ನಗರ ಟ್ರಾಫಿಕ್ ಬಿಟಿಪಿ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಫೋಟೋದಲ್ಲಿ ಹಾಫ್ ಹೆಲ್ಮೆಟ್‌ (Half Helmet) ಧರಿಸಿದ ಪೊಲೀಸ್‍ಗೆ ಟ್ರಾಫಿಕ್ ಪೊಲೀಸ್ ಫೈನ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.

    ನಗರದ ರಸ್ತೆಗಳಲ್ಲಿ ಗೇರ್ ಲೆಸ್ ಸ್ಕೂಟರ್ ಓಡಿಸುವಾಗ ಹಾಫ್ ಹೆಲ್ಮೆಟ್ ನಿಷೇಧಿಸಲಾಗಿದೆ. ಅದಾಗ್ಯೂ ಪೊಲೀಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಫೋಟೋ ಸಮೇತ ಟ್ವೀಟ್ ಮಾಡುತ್ತಿದ್ದಂತೆಯೇ ಅನೇಕರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಓರ್ವ ಟ್ವಿಟ್ಟರ್ ಬಳಕೆದಾರ, ಫೈನ್ (Fine) ಹಾಕಿದ್ರೂ ಅವರು ಅದನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದಂತಿದೆ. ಒಂದು ಉತ್ತಮ ಫೋಟೋಗೆ ಅವಕಾಶ ಸಿಕ್ಕಿದೆ ಅನ್ನೋ ಖುಷಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಇನ್ನೊಬ್ಬರು, ಇಂತಹ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಅನೇಕ ಪೊಲೀಸರು ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅಲ್ಲದೆ ಇಂಥವರನ್ನು ಕಂಡರೂ ಪೊಲೀಸರು ಅವರನ್ನು ಹೋಗಲು ಬಿಡುತ್ತಾರೆ. ಅವರಿಗಿಲ್ಲದ ಫೈನ್ ಸಾಮಾನ್ಯ ಜನರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ದಯಮಾಡಿ ಸಂಚಾರ ನಿಯಮಗಳನ್ನು ಅನುಸರಿಸಿ ಅಂದ್ರೆ ಮಗದೊಬ್ಬರು ಪ್ರಚಾರದ ಸಾಹಸ ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಕ್ ಸವಾರರ ಪ್ರಾಣಕ್ಕೆ ಹಾಫ್ ಹೆಲ್ಮೆಟ್ ಸಂಚಕಾರ- ಹೊರ ಬಿತ್ತು ಅಘಾತಕಾರಿ ಸತ್ಯ

    ಬೈಕ್ ಸವಾರರ ಪ್ರಾಣಕ್ಕೆ ಹಾಫ್ ಹೆಲ್ಮೆಟ್ ಸಂಚಕಾರ- ಹೊರ ಬಿತ್ತು ಅಘಾತಕಾರಿ ಸತ್ಯ

    ಬೆಂಗಳೂರು: ಹಾಫ್ ಹೆಲ್ಮೆಟ್ ಬಗ್ಗೆ ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಹಾಫ್ ಹೆಲ್ಮೆಟ್ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದೆ ಎಂಬ ಅಘಾತಕಾರಿ ಸುದ್ದಿ ತಜ್ಞ ವೈದ್ಯರ ಅಧ್ಯಯನದಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಹಾಫ್ ಹೆಲ್ಮೆಟ್‍ಗೆ ಬ್ರೇಕ್ ಹಾಕಲು ಅಖಾಡಕ್ಕಿಳಿದ್ದಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟಿರೋ ಬೈಕ್ ಸವಾರರು ಹಾಫ್ ಹೆಲ್ಮೆಟ್ ಹಾಕಿರೋದ್ರಿಂದಲ್ಲೆ ಅನ್ನೋದು ದೃಢಪಟ್ಟಿದೆ. ಯಾಕೆ ಹಾಫ್ ಹೆಲ್ಮೆಟ್ ಬೈಕ್ ಸವಾರರ ಪಾಲಿಗೆ ಮಾರಕವಾಗ್ತಾಯಿದೆ ಅನ್ನೋದನ್ನ ಅಧ್ಯಾಯನ ಮಾಡಿದಾಗ ಹಾಫ್ ಹೆಲ್ಮೆಟ್ ಅಪಘಾತಕ್ಕೆ ಒಳಗಾದ ಬೈಕ್ ಸವಾರನ ಮೇದುಳು ಬಳ್ಳಿಗೆ ಬಲವಾದ ಪೆಟ್ಟುಕೊಡ್ತಾ ಇದೆ. ಅದು ಚಿಕಿತ್ಸೆ ನೀಡಿದ್ರು ಫಲಪ್ರದವಾಗೋದಿಲ್ಲ. ಹಾಗಾಗಿ ಬೈಕ್ ಸವಾರರು ಅಪಘಾತದಲ್ಲಿ ಹೆಚ್ಚು ಮೃತಪಡ್ತಿದ್ದಾರೆ ಅನ್ನೋ ಸತ್ಯ ಸಂಗತಿ ಹೊರಬಿದ್ದಿದೆ.

    ಹಾಫ್ ಹೆಲ್ಮೆಂಟ್‍ನಿಂದಾಗುವ ಅನಾಹುತದ ಬಗ್ಗೆ ಸಂಚಾರಿ ಪೊಲೀಸರು, ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಗರದಾದ್ಯಂತ ಬೈಕ್ ಸವಾರರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ಮನವಿ ಮಾಡಿದ್ರು. ಕೆಎಸ್ ಲೇಔಟ್‍ನಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿಮ ನೂರಕ್ಕು ಹೆಚ್ಚು ಹಾಫ್ ಹೆಲ್ಮೆಟ್‍ಗಳನ್ನು ರಸ್ತೆಯಲ್ಲಿ ಜೋಡಿಸಿ, ಲಾರಿ ಹರಿಸಿ ನಾಶ ಮಾಡಿದ್ರು. ಇದನ್ನೂ ಓದಿ: ಜೈಲಿನಲ್ಲೇ ವೈಭೋಗ – ಜೆಸಿಬಿ ನಾರಾಯಣನ ರಾಯಲ್ ಜೈಲ್ ಲೈಫ್ ಸ್ಟೋರಿ

    ಪೊಲೀಸರ ಜಾಗೃತಿ ಕಾರ್ಯಕ್ರಮಕ್ಕೆ ಕೆಲವರು ಸ್ಪಂದಿಸಿದ್ರೆ, ಮತ್ತೆ ಕೆಲ ಬೈಕ್ ಸವಾರರು ಪೊಲೀಸರ ಜೊತೆಯೇ ವಾಗ್ವಾದಕ್ಕಿಳಿದ ದೃಶ್ಯ ಕಂಡು ಬಂತು. ಒಟ್ಟಾರೆ ಹಾಫ್ ಹೆಲ್ಮೆಟ್ ಧರಿಸಿ ಜೀವಕ್ಕೆ ಆಪತ್ತು ತಂದುಕೊಳ್ಳುವ ಬದಲು, ಸೇಫ್ ಮತ್ತು ಗುಣಮಟ್ಟದ ಹೆಲ್ಮೆಟ್ ಬಳಸಿ.

  • ಕಡಿಮೆ ರೇಟ್ ಹೆಲ್ಮೆಟ್ ಹಾಕ್ತೀರಾ ಹುಷಾರ್ – ಪೊಲೀಸ್ ಕೈಗೆ ಸಿಕ್ಕಿಬಿದ್ರೆ ಅಲ್ಲೇ ಪೀಸ್ ಪೀಸ್

    ಕಡಿಮೆ ರೇಟ್ ಹೆಲ್ಮೆಟ್ ಹಾಕ್ತೀರಾ ಹುಷಾರ್ – ಪೊಲೀಸ್ ಕೈಗೆ ಸಿಕ್ಕಿಬಿದ್ರೆ ಅಲ್ಲೇ ಪೀಸ್ ಪೀಸ್

    ಹಾಸನ: ಅರ್ಧ ಹೆಲ್ಮೆಟ್ ಹಾಕುವ ಬೈಕ್ ಸವಾರರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದು, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಂದು ಖರೀದಿಸಿದರೆ ಅದು ಪೊಲೀಸರು ಪಾಲಾಗುವುದು ಖಂಡಿತ.

    ಹಾಸನ ನಗರ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಪ್ರಾರಂಭಿಸಿದ್ದು, ಸಿಕ್ಕ ಸಿಕ್ಕ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಕಸಿದು ಕಸಕ್ಕೆ ಎಸೆಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೆ ಕೇವಲ ದಂಡ ತಪ್ಪಿಸಿಕೊಳ್ಳಲು ಹಾಕುತ್ತಿದ್ದ ಹೆಲ್ಮೆಟ್ ಗಳು ಇದೀಗ ತಿಪ್ಪೆ ಸೇರುತ್ತಿವೆ.

    ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಖರೀದಿಸುತ್ತೇವೆ. ಆದರೆ ಇಂತಹ ಹೆಲ್ಮೆಟ್‍ಗಳಿಗೆ ಪೊಲೀಸರು ಮುಕ್ತಿ ಕಾಣಿಸುತ್ತಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಐಎಸ್‍ಐ ಗುರುತಿರುವ ಗುಣಮಟ್ಟದ ಫುಲ್ ಹೆಲ್ಮೆಟ್‍ಗಳನ್ನು ಧರಿಸಬೇಕಿದೆ. ಆಫ್ ಹೆಲ್ಮೆಟ್ ಎಲ್ಲವನ್ನೂ ಪೊಲೀಸರು ಕಿತ್ತುಕೊಂಡು ಒಡೆದು ಹಾಕುತ್ತಿದ್ದು, ಹೊಸ ಹೆಲ್ಮೆಟ್ ಖರೀದಿಸುವಂತೆ ಸೂಚನೆ ನೀಡುತ್ತಿದ್ದಾರೆ.

    ಕಳೆದ ಎರಡು ದಿನಗಳಿಂದ ಈ ಆಪರೇಷನ್ ನಡೆಯುತ್ತಿದ್ದು, ಒಂದು ಸಾವಿರಕ್ಕೂ ಅಧಿಕ ಹಾಫ್ ಹೆಲ್ಮೆಟ್‍ಗಳನ್ನು ಪೊಲೀಸರು ಕಿತ್ತು ಬಿಸಾಡುತ್ತಿದ್ದಾರೆ. ಪ್ರಾಣ ರಕ್ಷಣೆಗೆ ಫುಲ್ ಹಾಗೂ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ತಾಕೀತು ಮಾಡುತ್ತಿದ್ದಾರೆ.

  • ವಾಹನ ಸವಾರರಿಗೆ ಕಾದಿದೆ ಶಾಕ್ – ಹಾಫ್ ಹೆಲ್ಮೆಟ್‍ಗೆ ಫೈನ್

    ವಾಹನ ಸವಾರರಿಗೆ ಕಾದಿದೆ ಶಾಕ್ – ಹಾಫ್ ಹೆಲ್ಮೆಟ್‍ಗೆ ಫೈನ್

    ಬೆಂಗಳೂರು: ವಾಹನ ಸವಾರರಿಗೆ ಬಿಗ್ ಶಾಕ್ ಕಾದಿದ್ದು, ಇನ್ಮುಂದೆ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ.

    ಸೆಪ್ಟೆಂಬರ್ 1ರಂದು ಗೌರಿ-ಗಣೇಶನನ್ನು ಬರಮಾಡಿಕೊಳ್ಳಲು ಎಲ್ಲಡೆ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ಹಬ್ಬದ ಸಂಭ್ರಮದ ನಡುವೆ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದ್ದು, ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುತ್ತಿದೆ. ಈ ಕಾಯ್ದೆಯಂತೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಾಹನ ಸವಾರರು ಮೂರು ಪಟ್ಟು ದಂಡ ಕಟ್ಟಬೇಕಾಗುತ್ತದೆ.

    ನಗರದ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಇದೇ ವರ್ಷ ಜನವರಿ 1 ರಿಂದ ಜೂನ್ ಅಂತ್ಯಕ್ಕೆ ನಗರದಲ್ಲಿ ಉಂಟಾದ ಬೈಕ್ ಅಪಘಾತಗಳಲ್ಲಿ 105 ಮಂದಿ ಬೈಕ್ ಸವಾರರು ಮೃತಪಟ್ಟಿದ್ದಾರೆ. 667 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಹೆಲ್ಮೆಟ್ ಕಡ್ಡಾಯಗೊಳಿಸಿದ್ದರು. ಈಗ ಟೋಪಿಯಂತಹ ಅಥವಾ ಅರ್ಧ ಹೆಲ್ಮೆಟ್ ಧರಿಸಿದರೆ ಫೈನ್ ಹಾಕಲು ಸಂಚಾರಿ ಪೊಲೀಸ್ ಆಯುಕ್ತ ಡಾ. ಬಿ.ಆರ್ ರವಿಕಾಂತೇಗೌಡ ಸೂಚಿಸಿದ್ದಾರೆ ಎನ್ನಲಾಗಿದೆ.

    4 ವರ್ಷದ ನಂತರದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಟೋಪಿಯಂತಹ ಹೆಲ್ಮೆಟ್ ಅನ್ನು ಹೆಚ್ಚಾಗಿ ಪೊಲೀಸರೇ ಹಾಕಿಕೊಳ್ಳುತ್ತಾರೆ. ಹೀಗೆ ಹಾಕಿಕೊಳ್ಳುವವರಿಗೆ ದಂಡ ವಿಧಿಸಲು ಕಾನೂನಿನಲ್ಲಿಯೂ ಅವಕಾಶವಿದೆ. ಈ ನಿಯಮ ಸೆಪ್ಟೆಂಬರ್ 1 ಅಥವಾ ಗಣೇಶ ಹಬ್ಬದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ನಿಯಮಕ್ಕೆ ವಾಹನ ಸವಾರರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

    ಈ ಹೊಸ ಕಾನೂನಿನ ಪ್ರಕಾರ ನಿಯಮ ಮೀರಿದರೆ ಕಟ್ಟಬೇಕಾದ ದಂಡಗಳ ವಿವರ ಇಂತಿದೆ.
    ಹೆಲ್ಮೆಟ್ ಹಾಕದಿದ್ರೆ: ಈಗಿನ ದಂಡ 100 ರೂ.  ಇದ್ದು, ಪರಿಷ್ಕೃತ ದಂಡ  1000 ರೂ.+3 ತಿಂಗಳು ಅಮಾನತು
    ಕುಡಿದು ವಾಹನ ಚಾಲನೆ:  2000 ರೂ. – 10,000 ರೂ.
    ಸೀಟ್ ಬೆಲ್ಟ್ ಹಾಕ್ಕೊಳ್ಳದಿದ್ರೆ : 100 ರೂ. –  1000 ರೂ.
    ಲೈಸೆನ್ಸ್ ಇಲ್ಲದಿದ್ರೆ : 500 ರೂ. – 5000 ರೂ.
    ಅತಿವೇಗ: 400 ರೂ. – 1000 ರೂ.
    ರೇಸಿಂಗ್ : 500 ರೂ. – 5000 ರೂ.
    ಇನ್ಶೂರೆನ್ಸ್ ಇಲ್ಲದಿದ್ರೆ : 1000 ರೂ. – 2000 ರೂ.
    ಡೇಂಜರಸ್ ಡ್ರೈವಿಂಗ್: 1000 ರೂ. – 5000 ರೂ.
    ಓವರ್ ಲೋಡಿಂಗ್: 100 ರೂ. – 2000 ರೂ.
    ಡಿಎಲ್ ರದ್ದಾದ್ರೂ ಚಾಲನೆ : 500 ರೂ. – 10,000 ರೂ.
    ಅಂಬ್ಯುಲೆನ್ಸ್ ಗೆ ದಾರಿ ಬಿಡದಿದ್ರೆ :  10,000 ರೂ.
    ಪರ್ಮಿಟ್ ಇಲ್ಲದ ವಾಹನ ಚಾಲನೆ: 5000 ರೂ. – 10,000 ರೂ.