Tag: ಹಾನಗಲ್ ಪೊಲೀಸ್

  • Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

    Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

    – ಸುಮಾರು 2 ಕೆಜಿಯಷ್ಟು ಮಾದಕ ವಸ್ತು ವಶಕ್ಕೆ

    ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ಅಕ್ಕಿಆಲೂರು ಪಟ್ಟಣದಲ್ಲಿ ಬಳಿ ನಡೆದಿದೆ.

    ಅಕ್ಕಿಆಲೂರು ಪಟ್ಟಣದ ದನಮಾರುಕಟ್ಟೆಯಲ್ಲಿ ಬಳಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.20 ಲಕ್ಷ ಮೌಲ್ಯದ 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನ ಮುಬಾರಕ್ ಮಕಾಂದರ್, ಮುಕ್ತಿಯಾರ್ ಮಕಾಂದರ್, ಮಹಮ್ಮದ್ ಫಜ್ಜಲ್ ಹಾಗೂ ಮಹಮ್ಮದ್ ಸಾಧಿಕ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗಕ್ಕೆ ವಿಪಕ್ಷಗಳ ಸಿದ್ಧತೆ

    ಆರೋಪಿತರು ಹಾನಗಲ್ ಮತ್ತು ಹಾವೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾನಗಲ್ ಪಿಎಸ್‌ಐ ಸಂಪತ್ತ ಆನಿಕಿವಿ ನೇತೃತ್ವದಲ್ಲಿ ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ವಿರುದ್ಧ 24 ಕೊಲೆಗಳ ಆರೋಪ – ಯಾವುದೇ ಕ್ಷಣದಲ್ಲಿ ತಿಮರೋಡಿ ಬಂಧನ ಸಾಧ್ಯತೆ

  • ಹಾನಗಲ್ ಗ್ಯಾಂಗ್‌ರೇಪ್ ಕೇಸ್ – 58 ದಿನಗಳ ನಂತ್ರ 873 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಹಾನಗಲ್ ಗ್ಯಾಂಗ್‌ರೇಪ್ ಕೇಸ್ – 58 ದಿನಗಳ ನಂತ್ರ 873 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಹಾವೇರಿ: ರಾಜ್ಯಾದ್ಯಾಂತ ಸದ್ದುಮಾಡಿದ್ದ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪೊಲೀಸರು (Hanagal Police) 873 ಪುಟಗಳ ದೋಷಾರೋಪ ಪಟ್ಟಿಯನ್ನು ಜೆಎಮ್‌ಎಫ್‌ಸಿ ಹಾನಗಲ್ ಕೋರ್ಟ್‌ಗೆ (JMFC Hanagal Court) ಸಲ್ಲಿಕೆ ಮಾಡಿದ್ದಾರೆ.

    ಗ್ಯಾಂಗರೇಪ್ ಘಟನೆ ನಡೆದು 58 ದಿನಗಳ ಬಳಿಕ ಚಾರ್ಜ್ ಶೀಟ್ (ChargSheet) ಸಲ್ಲಿಕೆಯಾಗಿದೆ. ಕಳೆದ ಜನವರಿ 8 ರಂದು ಹಾನಗಲ್ ಬಳಿ ಗ್ಯಾಂಗ್ ರೇಪ್ ಪ್ರಕರಣ ನಡೆದಿತ್ತು. ಶಿರಸಿ ಮೂಲದ 26 ವರ್ಷದ ಮುಸ್ಲಿಂ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು.

    ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದ 7 ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 19 ಆರೋಪಿಗಳ ಹೆಸರನ್ನೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಗುರುತು ಪತ್ತೆ ಪರೇಡ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು. 7 ಪ್ರಮುಖ ಆರೋಪಿಗಳಾದ ಅಫ್ತಾಬ್, ಚಂದನ್‌ಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲಾನವರ, ಶೋಯಿಬ್ ನಿಯಾಜ್ ಅಹ್ಮದ್ ಮುಲ್ಲಾ, ಮಹಮದ್ ಸಾದೀಕ್ ಅಗಸಿಮನಿ, ತೌಷಿಪ್ ಕಾಟಲಾ ರಿಯಾಜ್ ಸಾವಿಕೇರಿ ಇವರನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ; ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ: ಸಂತ್ರಸ್ತೆ ಸಂಬಂಧಿ

    ವಿಧಿವಿಜ್ಞಾನ ಪ್ರಯೋಗಾಲಯ ವರದಿ ಹಾಗೂ ಡಿಎನ್‌ಎ ಮಾದರಿ, ಕೂದಲು, ಆರೋಪಿಗಳ ರಕ್ತದ ಮಾದರಿ ಸೇರಿದಂತೆ ಘಟನೆ ವೇಳೆ ಸಿಕ್ಕ ಬಟ್ಟೆಗಳು, ಸಿಸಿಟಿವಿ ದ್ಯಶ್ಯಾವಳಿ, ಕೃತ್ಯಕ್ಕೆ ಬಳಸಿದ್ದ ಬೈಕ್, ಕಾರ್ ಸೇರಿದಂತೆ ಎಲ್ಲದರ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ವೈದ್ಯರು, ಪೊಲೀಸರು, ಕೆಲವು ಸ್ಥಳೀಯರು ಸೇರಿದಂತೆ 87 ಸಾಕ್ಷಿಗಳ ವಿಚಾರಣೆಯನ್ನೂ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಅತ್ಯಾಚಾರ ಮಾಡಿದ್ರು – ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ

  • ಸಹಾಯ ಮಾಡೋ ನೆಪದಲ್ಲಿ ಎಟಿಎಂನಿಂದ ಹಣ ಎಗರಿಸುತ್ತಿದ್ದ ಕಳ್ಳಿ ಅಂದರ್

    ಸಹಾಯ ಮಾಡೋ ನೆಪದಲ್ಲಿ ಎಟಿಎಂನಿಂದ ಹಣ ಎಗರಿಸುತ್ತಿದ್ದ ಕಳ್ಳಿ ಅಂದರ್

    – 8 ಎಟಿಎಂ ಕಾರ್ಡ್, 55 ಸಾವಿರ ನಗದು ವಶ

    ಹಾವೇರಿ: ಎಟಿಎಂ ಆಪರೇಟ್ ಮಾಡೋಕೆ ಬಾರದ ಅಮಾಯಕ ಮತ್ತು ಅನಕ್ಷರಸ್ಥ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಪಡೆದು ಅವರಿಗೆ ಗೊತ್ತಾಗದಂತೆ ಪಾಸ್ ವರ್ಡ್ ಪಡೆದು ಹಣ ಎಗರಿಸುತ್ತಿದ್ದ ಆರೋಪಿಯನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಮಹಿಳೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ನಿವಾಸಿ 38 ವರ್ಷದ ಕೌಸರಬಾನು ಬಂಕಾಪುರ ಎಂದು ಗುರುತಿಸಲಾಗಿದೆ. ಈಕೆ ಜಿಲ್ಲೆಯ ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಶಿಕಾರಿಪುರ ಸೇರಿದಂತೆ ಹಲವೆಡೆ ಜನರನ್ನು ವಂಚಿಸಿ ಎಟಿಎಂ ಕಾರ್ಡ್ ಎಗರಿಸಿ ಹಣ ಲಪಟಾಯಿಸಿದ್ದಾಳೆ.

    ಎಟಿಎಂ ಬರುವ ಅಸಹಾಯಕ ಮತ್ತು ಅನಕ್ಷರಸ್ಥ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ, ಅವರಿಂದ ಎಟಿಎಂ ಕಾರ್ಡ್ ಎಗರಿಸಿ ಹಣ ದೋಚುತ್ತಿದ್ದಳು. ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಎಟಿಎಂ ಕಾರ್ಡ್ ತೆಗೆದು ಅವರಿಗೆ ಹಣ ತೆಗೆದುಕೊಡುತ್ತಿದ್ದಳು. ಈ ವೇಳೆ ಹಣ ಎಣಿಸೋದು ಅಥವಾ ಬಣ್ಣಬಣ್ಣದ ಮಾತುಗಳಲ್ಲಿ ತೊಡಗಿ ಅವರ ಎಟಿಎಂ ಕಾರ್ಡ್ಅನ್ನು ಕ್ಷಣಾರ್ಧದಲ್ಲಿ ಬದಲಿಸುತ್ತಿದ್ದಳು. ಹಣ ಡ್ರಾ ಮಾಡೋ ವೇಳೆ ಪಿನ್ ನಂಬರ್ ಗಮನಿಸಿ ಬಳಿಕ ಬೇರೆ ಬೇರೆ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುತ್ತಿದ್ದಳು.

    ಆರೋಪಿಯಿಂದ ವಂಚನೆಗೊಳಗಾಗಿದ್ದ ಇಬ್ಬರು ಎಟಿಎಂ ಕಾರ್ಡ್ ಕಳೆದುಕೊಂಡ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಪಿಎಸ್‍ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳಿಯನ್ನು ಬಂಧಿಸಿದ್ದಾರೆ. ವಿಶೇಷವಾಗಿ ಆರೋಪಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂಗಳ ಬಳಿ ಹೆಚ್ಚಾಗಿದ್ದು, ಸಹಾಯದ ನೆಪದಲ್ಲಿ ಯಾಮಾರಿಸುತ್ತಿದ್ದಳು. ಬಂಧಿತಳಿಂದ ಎಂಟು ಎಟಿಎಂ ಕಾರ್ಡ್ ಮತ್ತು ಐವತ್ತೈದು ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.