ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ಅಕ್ಕಿಆಲೂರು ಪಟ್ಟಣದಲ್ಲಿ ಬಳಿ ನಡೆದಿದೆ.
ಅಕ್ಕಿಆಲೂರು ಪಟ್ಟಣದ ದನಮಾರುಕಟ್ಟೆಯಲ್ಲಿ ಬಳಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.20 ಲಕ್ಷ ಮೌಲ್ಯದ 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನ ಮುಬಾರಕ್ ಮಕಾಂದರ್, ಮುಕ್ತಿಯಾರ್ ಮಕಾಂದರ್, ಮಹಮ್ಮದ್ ಫಜ್ಜಲ್ ಹಾಗೂ ಮಹಮ್ಮದ್ ಸಾಧಿಕ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗಕ್ಕೆ ವಿಪಕ್ಷಗಳ ಸಿದ್ಧತೆ
ಹಾವೇರಿ: ಹಾನಗಲ್(Hanagal) ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳು ಜಾಮೀನು ಸಿಕ್ಕ ಬೆನ್ನಲ್ಲೇ ಆರೋಪಿಗಳು ಭರ್ಜರಿ ರೋಡ್ ಶೋ ನಡೆಸಿರುವ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಪಟ್ಟಣದಲ್ಲಿ ನಡೆದಿದೆ.
ಕಳೆದ 3 ದಿನಗಳ ಹಿಂದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಸಂತ್ರಸ್ತೆ ಆರೋಪಿಗಳನ್ನು ಗುರುತಿಸಲು ವಿಫಲವಾದ ಹಿನ್ನಲೆ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ
ಎ1 ಆರೋಪಿ ಅಪ್ತಾಬ್ ಚಂದನಕಟ್ಟಿ, ಎ2 ಮದರ್ ಸಾಬ್ ಮಂಡಕ್ಕಿ, ಎ3 ಸಮಿವುಲ್ಲಾ ಲಾಲನವರ, ಎ4 ಮಹಮದ್ ಸಾದಿಕ್ ಅಗಸಿಮನಿ, ಎ8 ಶೊಯಿಬ್ ಮುಲ್ಲಾ, ಎ11 ತೌಸಿಪ್ ಚೋಟಿ, ಎ13 ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ
2024, ಜನವರಿ 8ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಆರೋಪಿಗಳ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಆದರೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆ ಆರೋಪಿಗಳಿಗೆ ಈಗ ಜಾಮೀನು ಸಿಕ್ಕಿದೆ. ಇದನ್ನೂ ಓದಿ: ಮಂಗಳೂರು | ಮದುವೆಯ ವಿಚಾರಕ್ಕೆ ಕಿರಿಕ್ – ಸಂಧಾನಕ್ಕೆ ಬಂದಿದ್ದ ನೆಂಟನ ಬರ್ಬರ ಹತ್ಯೆ
ಆರೋಪಿಗಳು ಜಾಮೀನು ಸಿಕ್ಕ ಬೆನ್ನಲ್ಲೇ ಕಾರಿನಲ್ಲಿ ರೋಡ್ ಶೋ ನಡೆಸಿರುವುದು ಜಿಲ್ಲೆಯ ಜನರ ಆಕ್ರೋಶ ಕಾರಣವಾಗಿದೆ. ಪೊಲೀಸ್ ಇಲಾಖೆ ಮತ್ತೆ ಪ್ರಕರಣ ದಾಖಲಿಸಿಕೊಂಡು ಜಾಮೀನು ರದ್ದು ಮಾಡುವಂತೆ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.
ಹಾವೇರಿ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್(Hanagal) ತಾಲೂಕಿನ ಚಿಕ್ಕಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಮಾಲತೇಶ ರಕ್ಷಣೆಗೆ ಹೋದ ಬಸವರಾಜ್ ಸೇರಿ ಇಬ್ಬರೂ ನೀರಿನಿಂದ ಹೊರಬರಲಾರದೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ, ಮಾಲತೇಶ ಶವ ಮೇಲಕ್ಕೆತ್ತಿದ್ದಾರೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ಲೋಕಾ ರೇಡ್ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ
ಇನ್ನೋರ್ವ ವ್ಯಕ್ತಿ ಬಸವರಾಜ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಹಾನಗಲ್ ಪೊಲೀಸ್ ಠಾಣೆಯ(Hanagal Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿ: ಸಿಡಿಲು ಬಡಿದು(Lightning strikes) ಇಬ್ಬರು ವೃದ್ಧರು ಮೃತಪಟ್ಟಿರುವ ಪ್ರತ್ಯೇಕ ಘಟನೆ ಹಾವೇರಿ(Haveri) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಾನಗಲ್(Hanagal) ತಾಲೂಕಿನ ಕೊಂಡೊಜಿ ಗ್ರಾಮದ ಮರಿಯವ್ವ ನಾಯ್ಕರ್(60) ಮೃತರು. ಮೂಲತಃ ಗದಗ(Gadag) ಜಿಲ್ಲೆ ಬಸಾಪುರ ಗ್ರಾಮದ ನಿವಾಸಿಯಾದ ಮರಿಯವ್ವ ಕಳೆದ ಕೆಲವು ತಿಂಗಳಿನಿಂದ ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದರು. ಇಂದು ಸಂಜೆ ಸಿಡಿಲು ಬಡಿದು ಮರಿಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪಾಕ್ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್ ಮಾತು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ಬಿರುಗಾಳಿ ಸಮೇತ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ.
ಹಾವೇರಿ: ಹೊಸ ಬೈಕ್ ಖರೀದಿಸಿ ಮನೆಗೆ ತೆರಳುತ್ತಿದ್ದ ವೇಳೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ(Haveri) ತಾಲೂಕಿನ ಗೌರಾಪುರ(Gowarapura) ಗ್ರಾಮದಲ್ಲಿ ನಡೆದಿದೆ.
ಹಾವೇರಿ: ನಿಧಿ ಆಸೆಗಾಗಿ ಕಳ್ಳರು ಕೋಣಕಲ್ಲ ಭರಮ ದೇವರ ಕಲ್ಲು ಅಗೆದಿರುವ ಘಟನೆ ಜಿಲ್ಲೆಯ ಹಾನಗಲ್(Hanagal) ತಾಲೂಕು ಮಲಗುಂದ(Malagunda) ಗ್ರಾಮದಲ್ಲಿ ನಡೆದಿದೆ. ನಿಧಿಗಳ್ಳರ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಜಾಗದಲ್ಲಿ ನಿಧಿ ಆಸೆಗಾಗಿ ಗ್ರಾಮದ ಜನ ಆರಾಧಿಸುತ್ತಿದ್ದ ಕೋಣಕಲ್ಲ ಭರಮ ದೇವರ ಕಲ್ಲನ್ನು ಅಗೆದು ಹಾಕಿದ್ದಾರೆ. ಆರಾಧ್ಯ ದೇವರ ಕಲ್ಲು ಅಗೆದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ
ಕಳೆದ 2-3 ದಿನಗಳಿಂದ ಪುರಾತನ ಕಾಲದ ದೇವಾಲಯ ಬಳಿ ನಿಧಿಗಳ್ಳರು ಓಡಾಡುತ್ತಿದ್ದಾರೆ. ನಿಧಿ ಆಸೆಗಾಗಿ ಕಲ್ಲು ಅಗೆದ ದುಷ್ಕರ್ಮಿಗಳು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯ(Aduru Police Station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ
ನಮ್ಮ ದೇವರು ನನ್ನ ಇವತ್ತು ಕರೆಸಿಕೊಳ್ಳುತ್ತಿದ್ದಾನೆ. ನಮ್ಮ ಬೋರ್ವೆಲ್ ಪಂಪ್ಸೆಡ್ನಲ್ಲಿ ನನ್ನ ಉಸಿರು ನಿಂತಿದೆ. ತಮ್ಮ, ಅಪ್ಪನನ್ನು ಚೆನ್ನಾಗಿ ನೋಡಿಕೋ ಎಂದು ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನ ಸಮಗ್ರ ತನಿಖೆಯಾಗಲಿ: ಬೊಮ್ಮಾಯಿ
ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಎಮ್ಮೆ ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಎಮ್ಮೆ (Buffalo) ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಬಳಿ ನಡೆದಿದೆ.
ಗ್ರಾಮದ ರೈತ ಬಾಷಾಸಾಬ್ ಬಂಕಾಪುರ ಎಂಬ ರೈತನಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ಕಾಡು ಹಂದಿ ಬೇಟೆಗಾಗಿ ಬೇಟೆಗಾರರು ಇಟ್ಟಿದ್ದ ಕಚ್ಚಾ ನಾಡಬಾಂಬ್ ಸೇವಿಸಿ ಈ ದುರ್ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ದನಗಳು ಮೇಯಿಸಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: ಛತ್ತೀಸ್ಗಢ| ಇಬ್ಬರು ನಾಗರಿಕರ ಹತ್ಯೆ ಮಾಡಿದ ನಕ್ಸಲರು
ಹಾವೇರಿ/ ಬೆಂಗಳೂರು: ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (80) ವಿಧಿವಶರಾಗಿದ್ದಾರೆ.
ಹಾನಗಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಮನೋಹರ್ ತಹಶೀಲ್ದಾರ್ (Manohar Tahsildar) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರ್ ಆಸ್ಪತ್ರೆಯಲ್ಲಿ (Shankar Hospital) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ (Excise Minister) ಇವರು 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ (Congress) ತೊರೆದು ಜೆಡಿಎಸ್ (JDS) ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: PUBLiC TV Impact | – ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್ಗೆ ಸಿಎಂ ಆದೇಶ
ಇತ್ತೀಚಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದರು. ಇಂದು ಮಧ್ಯಾಹ್ನ ಮೃತದೇಹವನ್ನು ಹಾನಗಲ್ ಎನ್ಸಿಜೆಸಿ ಮಹಾವಿದ್ಯಾಲಯ ಅವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹುಟ್ಟೂರಾದ ಅಕ್ಕಿಹೊಳಿ ಗ್ರಾಮದಲ್ಲಿರುವ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನ ಮನೋಹರ್ ತಹಶೀಲ್ದಾರ್ ಅಗಲಿದ್ದಾರೆ.
ಬಲಿಜ ಸಮುದಾಯಕ್ಕೆ ಸೇರಿದ್ದ ತಹಶೀಲ್ದಾರ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಮನೋಹರ್ ತಹಶೀಲ್ದಾರ್ ಅವರು 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದರು.
ಹಾವೇರಿ: ನಿಶ್ಚಿತಾರ್ಥದ ಬಳಿಕ ಮದುವೆಯಾಗಲು (Marriage) ನಿರಾಕರಿಸಿದ ಯುವತಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಘಟನೆ ಹಾನಗಲ್ (Hangal) ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.
ಹತ್ಯೆಗೀಡಾದ ಯುವತಿಯನ್ನು ದೀಪಾ ಗೊಂದಿ (21) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮಾಲತೇಶ್ ಬಾರ್ಕಿ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಆರೋಪಿ ಮಾಲತೇಶ್, ಸೊಸೆ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ನಂತರ ಮಾವನೊಂದಿಗೆ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು
ಏ.22 ರಂದು ಮದುವೆ ಫಿಕ್ಸ್ ಆಗಿತ್ತು. ತಕ್ಷಣ ಮದುವೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಲತೇಶ್ ಯುವತಿಯನ್ನು ಕರೆದೊಯ್ದು ಸಮೀಪದ ತೋಟವೊಂದಕ್ಕೆ ಕರೆದೊಯ್ದು ಆಕೆಗೆ ವಿಷ ಕುಡಿಸಿದ್ದಾನೆ. ಬಳಿಕ ಆಕೆಗೆ ನೇಣು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.