Tag: ಹಾಡುಗಾರ

  • ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಅವರನ್ನು ಉಗ್ರರು ಹತ್ಯೆ ಗೈದಿದ್ದಾರೆ.

    ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಹಾಡುಗಾರ ಫವಾದ್ ಕಿಶನಾಬಾದ್ ತಾಲಿಬಾನ್‍ಗೆ ವಿರುದ್ದವಾಗಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ತಾಲಿಬಾನಿಗಳು ಫವಾದ್‍ರನ್ನು ಹುಡುಕಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ:  ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ. ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ.

  • ಸಹೋದರಿ ಬರ್ತ್ ಡೇ- ಸಂಪಾದಿಸಿದ ಹಣದಿಂದ್ಲೇ ಮಕ್ಕಳಿಗೆ ಅರ್ಜುನ್ ಇಟಗಿ ಸಹಾಯ ಹಸ್ತ

    ಸಹೋದರಿ ಬರ್ತ್ ಡೇ- ಸಂಪಾದಿಸಿದ ಹಣದಿಂದ್ಲೇ ಮಕ್ಕಳಿಗೆ ಅರ್ಜುನ್ ಇಟಗಿ ಸಹಾಯ ಹಸ್ತ

    ಕೊಪ್ಪಳ: ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸಿಕೊಂಡ ಅರ್ಜುನ್ ಇಟಗಿ, ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಈಗ ಮತ್ತೆ ಸುದ್ದಿಯಾಗಿದ್ದಾನೆ. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ಅರ್ಜುನ್ ಸಹಾಯಹಸ್ತ ಚಾಚಿದ್ದಾನೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅರ್ಜುನ್ ಇಟಗಿ ತನ್ನದೇ ಸ್ಟೈಲ್‍ನಲ್ಲಿ ಹಾಡುತ್ತಾ, ಹಾಸ್ಯನಟರ ಧ್ವನಿಗಳನ್ನು ಮಿಮಿಕ್ರಿ ಮಾಡುತ್ತಾ ರಂಜಿಸಿದ್ದಾನೆ. ಈತನ ತುಂಟಾಟಗಳಿಗೆ ನಗುತ್ತಾ, ಹಾಡಿಗೆ ವಿದ್ಯಾರ್ಥಿಗಳು ಕೂಡ ತಲೆದೂಗಿದ್ದಾರೆ.

    9 ವರ್ಷದ ಅರ್ಜುನ್ ಅಲ್ಲಿ ನೆರೆದಿದ್ದವರ ರಂಜಿಸಿಲ್ಲ. ಬದಲಿಗೆ ಎಲ್ಲರಿಗೂ ಮಾದರಿಯಾಗೋ ಕೆಲಸ ಮಾಡಿದ್ದಾನೆ. ಈ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಪೆನ್ನು, ನೋಟ್‍ಬುಕ್ ಸಹಾಯ ಮಾಡಿದ್ದಾನೆ. ಬಡತನದಲ್ಲಿ ಬೆಳೆದಿದ್ದರೂ ತನ್ನ ಸಹೋದರಿ ಅಪೂರ್ವಳ ಹುಟ್ಟುಹಬ್ಬದ ಅಂಗವಾಗಿ ತಾನು ಸಂಪಾದಿಸಿದ ಹಣದಲ್ಲೇ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದ್ದಾನೆ.

    ಈ ಎಳೆವಯಸ್ಸಿನಲ್ಲೇ ಅರ್ಜುನ್ ಇಟಗಿಯ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಕಿತ್ತೂರ್ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಎಂದಿನಂತೆ ಎಲ್ಲ ಹಾಡು ಹಾಡುತ್ತಲೇ ವಿದ್ಯಾರ್ಥಿನಿಯರ ನಡುವೆ ಬಂದು ನಟಿಸಿದ್ರು. ವಿದ್ಯಾರ್ಥಿನಿಯರು ಕೂಡ ಅರ್ಜುನ್ ಕೈ ಹಿಡಿದು ನಟಿಸಿದ್ರು. ಅದರಲ್ಲೂ ಗಾನಯೋಗಿ ಗುರುವೇ ಹಾಡಿಗಂತು ಥೇಟ್ ಪಂಚಾಕ್ಷರಿ ಗವಾಯಿಗಳ ರೀತಿಯಲ್ಲೇ ಮನಮುಟ್ಟುವಂತೆ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.

    ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿನಲ್ಲೇ ಮತ್ತೊಬ್ಬರ ಸಹಾಯಕ್ಕೆ ಮುಂದಾಗಿರೋ ಅರ್ಜುನ್ ನಿಜವಾಗಿಯೂ ಮಾದರಿ ಎನಿಸಿಕೊಂಡಿದ್ದಾನೆ.

  • 3 ಲಕ್ಷ ರೂ. ನೀಡಿ 62 ಕೈದಿಗಳನ್ನು ಜೈಲಿಂದ ಬಿಡಿಸಿದ್ದರು ದುನಿಯಾ ವಿಜಯ್!

    3 ಲಕ್ಷ ರೂ. ನೀಡಿ 62 ಕೈದಿಗಳನ್ನು ಜೈಲಿಂದ ಬಿಡಿಸಿದ್ದರು ದುನಿಯಾ ವಿಜಯ್!

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ದುನಿಯಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದ ನಟ ದುನಿಯಾ ವಿಜಯ್ ಹೆಚ್ಚು ಸಿನಿಮಾಗಳ ಮೂಲಕವೇ ಗುರುತಿಸಿಕೊಂಡವರು, ಆದರೆ ಅವರು ತೆರೆ ಹಿಂದೆ ಮಾಡಿದ ಸಾಮಾಜಿಕ ಕಳಕಳಿಯ ಕುರಿತು ಹಾಡುಗಾರ ಮಹದೇವಸ್ವಾಮಿ ಬಿಚ್ಚಿಟ್ಟಿದ್ದಾರೆ.

    ಖಾಸಗಿ ವಾಹಿನಿವೊಂದರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಹದೇವಪ್ಪ, ದುನಿಯಾ ವಿಜಯ್ ಅವರು ಜೈಲಿನಿಂದ 62 ಕೈದಿಗಳನ್ನು ಬಿಡುಗಡೆ ಮಾಡಿಸಿದ್ದ ಕುರಿತು ರಿವೀಲ್ ಮಾಡಿದ್ದಾರೆ.

    2013 ರಲ್ಲಿ ದುನಿಯಾ ವಿಜಯ್ ಅಭಿನಯದ `ದೇವ್ರು’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡ ಜೈಲಿಗೆ ಬಂದಿತ್ತು. ಅದನ್ನು ಗಮನಿಸದೆ ನಾನು ಅಮ್ಮನ ಕುರಿತು ಕವಿತೆ ಬರೆಯುತ್ತಿದ್ದೆ. ಬಳಿಕ ಪುಸ್ತಕ ಎತ್ತಿಟ್ಟು ಊಟ ಮಾಡಲು ತೆರಳಿದ ವೇಳೆ ಕೆಲ ಜನರು ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದರು. ಆಗ ಸ್ವತಃ ದುನಿಯಾ ವಿಜಯ್ ಅವರೇ ನನ್ನ ತಟ್ಟೆಯಿಂದ ಅನ್ನ ತೆಗೆದುಕೊಂಡು ತಿಂದರು. ಇದನ್ನು ಕಂಡು ಅಚ್ಚರಿಗೊಂಡೆ. ಬಳಿಕ ನನ್ನ ಬಳಿ ಮಾತನಾಡಿ ನಾನು ಬರೆಯುತ್ತಿದ್ದ ಪುಸ್ತಕ ತೆಗೆದುಕೊಡುವಂತೆ ಹೇಳಿದರು. ನಾನು ಬರೆದಿದ್ದ ಅಮ್ಮನ ಕುರಿತ ಕವಿತೆ ಓದಿ ಪುಸ್ತಕದಲ್ಲಿ ಸಹಿ ಮಾಡಿದರು ಅಂದ್ರು.

    ಊಟ ಬೇಡ, ದಂಡ ಕಟ್ಟಿ ಎಂದು ಮನವಿ:
    ನನ್ನ ಜೊತೆ ಮಾತನಾಡುವ ವೇಳೆ ವಿಜಯ್ ಅವರು ಊಟ ಕೊಡಿಸುವುದಾಗಿ ಹೇಳಿದರು. ಆದರೆ ಈ ವೇಳೆ ಅಲ್ಲಿನ ಕೆಲ ಹಿರಿಯರೊಂದಿಗೆ ಮಾತನಾಡಿ ಊಟ ಬೇಡ ವಿವಿಧ ಕಾರಣಗಳಿಂದ ಹಣ ಕಟ್ಟಲಾಗದೆ ಜೈಲಿನಲ್ಲೇ ಉಳಿದ ಕೆಲ ಕೈದಿಗಳ ಬಿಡುಗಡೆಗೆ ಮನವಿ ಮಾಡಿದೆವು. ಇದನ್ನು ಒಪ್ಪಿದ ದುನಿಯಾ ವಿಜಯ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ 62 ಕೈದಿಗಳ ಬಿಡುಗಡೆಗೆ 3 ಲಕ್ಷ ರೂ. ಹಣವನ್ನು ನೀಡಿದರು ಅಂತ ಮಹದೇವಪ್ಪ ಭಾವುಕರಾದರು.

    ದುನಿಯಾ ವಿಜಯ್ ಷರತ್ತು:
    ತಮ್ಮನ್ನು ಬಿಡುಗಡೆ ಮಾಡುವ ಕುರಿತು ಯಾವುದೇ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಹೇಳಿಕೆ ನೀಡಬಾರದು ಎಂದು ದುನಿಯಾ ವಿಜಯ್ ಅವರು ಷರತ್ತು ವಿಧಿಸಿದ್ದರು. ಆದರೆ ಇಂದು ಅನಿವಾರ್ಯವಾಗಿ ಅವರ ಕುರಿತು ಹೇಳಬೇಕೆನಿಸಿತು. ಅದ್ದರಿಂದ ಇದನ್ನು ಹೇಳಿದ್ದಾಗಿ ಮಹದೇವಪ್ಪ ತಿಳಿಸಿದರು. ಅಂದಹಾಗೇ ರಿಯಾಲಿಟಿ ಶೋ ಸ್ಪರ್ಧಿಯಾಗಿರುವ ಮಹದೇವಸ್ವಾಮಿ ಅವರು ಸಂದರ್ಭವೊಂದರಲ್ಲಿ ಮಾಡಿದ ತಪ್ಪಿನಿಂದ 11 ವರ್ಷ ಜೈಲು ಶಿಕ್ಷೆ ಆನುಭವಿಸಿದ್ದರು. ಬಳಿಕ ಸನ್ನಡತೆಯ ಆಧಾರ ಮೇಲೆ ಅವರನ್ನು ಬಿಡುಗಡೆ ಮಾಡಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews