Tag: ಹಾಟ್ ವಿಡಿಯೋ

  • ಪೂನಂ ವಿಡಿಯೋ ಕಂಡು ಬೆಚ್ಚಿದ ಫ್ಯಾನ್ಸ್

    ಪೂನಂ ವಿಡಿಯೋ ಕಂಡು ಬೆಚ್ಚಿದ ಫ್ಯಾನ್ಸ್

    ಬಾಲಿವುಡ್ ಹಾಟ್ ತಾರೆ ಪೂನಂ ಪಾಂಡೆ ಅವರ ಹೊಸ ವಿಡಿಯೋ (Hot Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ. ಬಹುತೇಕ ಎದೆಭಾಗ ಕಾಣುವಂತೆ ಡ್ರೆಸ್ ಮಾಡಿಕೊಂಡು ಬೀದಿಗೆ ಬಂದಿದ್ದ ಪೂನಂ ಕಂಡು ಫ್ಯಾನ್ಸ್ ಬೆಚ್ಚಿದ್ದಾರೆ. ಬರ್ತಾ ಬರ್ತಾ ಪೂನಂ ಮೈಯಲ್ಲಿ ಬಟ್ಟೆ ನಿಲ್ತಾ ಇಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

    ಒಂದು ಕಡೆ ಈ ರೀತಿ ಮೈ ಪ್ರದರ್ಶನ ಮಾಡುವಂತಹ ಬಟ್ಟೆಗಳನ್ನು ಧರಿಸಿಕೊಂಡು ಪೂನಂ ಬೀದಿಗೆ ಬರುತ್ತಿದ್ದರೆ, ಮತ್ತೊಂದು ಕಡೆ ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಸಾವಿನ ನಾಟಕವಾಡಿದ್ದ ಇವರು (Poonam Pandey) ಮಾನನಷ್ಟ ಸಂಕಷ್ಟ ಎದುರಿಸುತ್ತಿದ್ದಾರೆ. ಇವರು ಮಾಡಿದ ನಾಟಕದಿಂದಾಗಿ ಬಾಲಿವುಡ್ ನಟ ನಟಿಯರ, ಮಾಡೆ‍ಲ್ ಗಳನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಫೈಜರ್ ಅನ್ಸಾರಿ ಎನ್ನುವವರು ಕಾನ್ಪುರ ಪೊಲೀಸ್ ಕಮಿಷ್ನರ್ ಗೆ ದೂರು ಸಲ್ಲಿಸಿದ್ದಾರೆ.

    ಇದಷ್ಟೇ ಅಲ್ಲದೇ,  ಮೊನ್ನೆಯಷ್ಟೇ ಪೂನಂ ಪಾಂಡೆ ಮೇಲೆ ಎಫ್.ಐ.ಆರ್ (F.I.R) ದಾಖಲಾಗಿದೆ. ಅಲಿ ಕಾಶಿಪ್ ಅನ್ನೋ ವಕೀಲರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೂನಂ ಮತ್ತು ಆಕೆಯ ಮ್ಯಾನೇಜರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.

    ಈ ಪ್ರಕರಣದ ಕುರಿತಂತೆ ಪೂನಂ ಮೇಲೆ  ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು.

     

    ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದರು. ಆದರೂ, ಪೂನಂ ಮೇಲೆ ಕ್ರಮ ತಗೆದುಕೊಳ್ಳಲೇಬೇಕು ಎಂದು ಹಲವರು ಆಗ್ರಹ ಮಾಡಿದ್ದಾರೆ.

  • ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಿ ನಟಿ ಮೀರಾ ಜಾಸ್ಮಿನ್ ಇನ್ ಸ್ಟಾಗ್ರಾಮ್ ನಲ್ಲಿ ಹಾಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸದಾ ಸಾಂಪ್ರದಾಯಿಕ ಉಡುಗಿಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಈ ನಟಿ, ದಿಢೀರ್ ಅಂತ ಅಂತ ಆ ವಿಡಿಯೋ ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಕನ್ನಡದಲ್ಲಿ ಪುನೀತ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಹಲವು ನಟರೊಂದಿಗೆ ತೆರೆ ಹಂಚಿಕೊಂಡಿರುವ ಮೀರಾ ಜಾಸ್ಮಿನ್, ಕನ್ನಡ ಸಿನಿಮಾ ರಂಗದಲ್ಲಿ ‘ದೇವರು ಕೊಟ್ಟ ತಂಗಿ’ ಎಂದೇ ಫೇಮಸ್. ಓ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ತಂಗಿಯಾಗಿ ಮೀರಾ ನಟಿಸಿದ್ದರು. ಕನ್ನಡಿಗರ ಮನದಲ್ಲಿ ತಂಗಿಯಾಗಿಯೇ ಭಾವನಾತ್ಮಕವಾಗಿ ಬೆರೆತು ಹೋಗಿದ್ದರು. ಇದೀಗ ಮೀರಾ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

     

    View this post on Instagram

     

    A post shared by Meera Jasmine (@meera_jasminn)

    ಸೋಷಿಯಲ್ ಮೀಡಿಯಾದಿಂದ ಸದಾ ದೂರ ಇರುತ್ತಿದ್ದ ಮತ್ತು ಅವರು ದಪ್ಪ ಆಗಿದ್ದನ್ನು ಟ್ರೋಲ್ ಮಾಡಿದ್ದ ಕಾರಣದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಮ್ ಪೇಜ್ ತೆರೆದು, ಅಭಿಮಾನಿಗಳ ಜತೆ ಸಂವಾದ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ದಿನಕ್ಕೊಂದು ಫೋಟೋ ಮತ್ತು ನೆನಪಿನ ಮಾತುಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದರು. ಏಕಾಏಕಿ ಎದೆ ಸೀಳು ಕಾಣುವಂತಹ ವಿಡಿಯೋ ಹಾಕಿ, ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಮೀರಾ ಜಾಸ್ಮೀನ್ ಅವರ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ರಾಶಿ ರಾಶಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಭಿಮಾನಿಗಳ ಸಂದೇಶಕ್ಕೆ ಸ್ವತಃ ಮೀರಾ ಬೆಚ್ಚಿ ಬಿದ್ದಿದ್ದಾರೆ.