Tag: ಹಾಕಿ ವಿಶ್ವಕಪ್

  • ಕ್ರಿಕೆಟ್ ಬಳಿಕ ಹಾಕಿಯಲ್ಲೂ ಭಾರತಕ್ಕೆ ಕಂಟಕವಾದ ನ್ಯೂಜಿಲೆಂಡ್ – ಮರೆಯಲಾಗದ ಆ 3 ಸೋಲು

    ಕ್ರಿಕೆಟ್ ಬಳಿಕ ಹಾಕಿಯಲ್ಲೂ ಭಾರತಕ್ಕೆ ಕಂಟಕವಾದ ನ್ಯೂಜಿಲೆಂಡ್ – ಮರೆಯಲಾಗದ ಆ 3 ಸೋಲು

    ಮುಂಬೈ: ಪುರುಷರ ಹಾಕಿ ವಿಶ್ವಕಪ್ (Hockey World cup 2023) ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಭಾರತ (India) ಸೋಲು ಕಾಣುವುದರೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದೆ. ಈ ಮೂಲಕ ಕ್ರಿಕೆಟ್ (Cricket) ಬಳಿಕ ಹಾಕಿಯಲ್ಲೂ ಕಿವೀಸ್, ಟೀಂ ಇಂಡಿಯಾಗೆ ಕಂಟಕವಾಗಿ ಕಾಡಿದೆ.

    ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೆಜ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಸೋಲಿಸಿ ನ್ಯೂಜಿಲೆಂಡ್, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ 48 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಆತಿಥೇಯ ತಂಡದ ಕನಸು ಭಗ್ನಗೊಂಡಿತು. ಶೂಟೌಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಜಯದ ಸಂಭ್ರಮ ಆಚರಿಸಿತು. ಇತ್ತ ಭಾರತ ಸೋಲಿನೊಂದಿಗೆ ನಿರಾಸೆ ಅನುಭವಿಸಿತು. ಇದನ್ನೂ ಓದಿ: 48 ವರ್ಷಗಳ ಕನಸು ಮತ್ತೆ ಭಗ್ನ – ನ್ಯೂಜಿಲೆಂಡ್‌ ವಿರುದ್ಧ ಸೋತು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಭಾರತ

    ಈ ಸೋಲು ಭಾರತದ ಕ್ರೀಡಾ ಅಭಿಮಾನಿಗಳ ಕಣ್ಣಿನಲ್ಲಿ ಕಣ್ಣೀರು ತರಿಸಿದೆ. ಈ ಮೂಲಕ ಪ್ರಧಾನ ಹಂತದಲ್ಲಿ ಭಾರತಕ್ಕೆ ಕ್ರಿಕೆಟ್ ಬಳಿಕ ಹಾಕಿಯಲ್ಲೂ ನ್ಯೂಜಿಲೆಂಡ್ ತಡೆಯಾಗಿ ನಿಂತಿದೆ. ಈ ಹಿಂದೆ 2019ರ ಏಕದಿನ ವಿಶ್ವಕಪ್ (ODI World cup 2019) ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗುವುದರೊಂದಿಗೆ ಭಾರತದ ಫೈನಲ್ ಕನಸನ್ನು ಭಗ್ನ ಗೊಳಿಸಿತ್ತು. ಆ ಬಳಿಕ 2021ರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (WTC) ಫೈನಲ್ ಪಂದ್ಯದಲ್ಲೂ ಭಾರತವನ್ನು ಮಣಿಸುವುದರೊಂದಿಗೆ ನ್ಯೂಜಿಲೆಂಡ್‌ ಭಾರತದ ಕ್ರೀಡಾ ಪ್ರೇಮಿಗಳಿಗೆ ಶಾಕ್ ನೀಡಿತ್ತು. ಇದನ್ನೂ ಓದಿ: ರೋಹಿತ್ ಶರ್ಮಾ ಈ ತಪ್ಪನ್ನು ಮಾಡ್ತಾರೆ: ಇರ್ಫಾನ್ ಪಠಾಣ್

    https://twitter.com/ImRealDynamo/status/1617228556513476610

    ಆ ಬಳಿಕ ಇದೀಗ ಹಾಕಿಯಲ್ಲೂ ಅದೇ ರೀತಿಯ ಅಚ್ಚರಿಯ ಫಲಿತಾಂಶ ಹೊರಬಂದಿದ್ದು, ನ್ಯೂಜಿಲೆಂಡ್ ವಿರುದ್ಧ ಕಂಡ ಈ ಮೂರು ಸೋಲುಗಳು ಭಾರತ ಕ್ರೀಡಾ ಅಭಿಮಾನಿಗಳಿಗೆ ಕಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 48 ವರ್ಷಗಳ ಕನಸು ಮತ್ತೆ ಭಗ್ನ – ನ್ಯೂಜಿಲೆಂಡ್‌ ವಿರುದ್ಧ ಸೋತು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಭಾರತ

    48 ವರ್ಷಗಳ ಕನಸು ಮತ್ತೆ ಭಗ್ನ – ನ್ಯೂಜಿಲೆಂಡ್‌ ವಿರುದ್ಧ ಸೋತು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಭಾರತ

    ಭುವನೇಶ್ವರ್‌: ನ್ಯೂಜಿಲೆಂಡ್‌ (New Zealand) ವಿರುದ್ಧದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಆಘಾತ ಅನುಭವಿಸಿದ ಭಾರತ ಪುರುಷರ ಹಾಕಿ ತಂಡವು (India Mens Hockey Team) ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ (Hockey World Cup 2023) ಟೂರ್ನಿಯ ಕ್ವಾರ್ಟರ್‌ ಫೈನಲ್ಸ್‌ ಪ್ರವೇಶಿಸುವಲ್ಲಿ ವಿಫಲವಾಯಿತು.

    ಇದರಿಂದ 48 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಆತಿಥೇಯ ತಂಡದ ಕನಸು ಮತ್ತೊಮ್ಮೆ ಭಗ್ನಗೊಂಡಿತು. ಶೂಟೌಟ್‌ನಲ್ಲಿ ಮಿಂಚಿದ ನ್ಯೂಜಿಲೆಂಡ್‌ ಜಯದ ಸಂಭ್ರಮ ಆಚರಿಸಿತು.

    ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಪೆನಾಲ್ಟಿಯಲ್ಲಿ ಆತಿಥೇಯ ಭಾರತ ತಂಡವನ್ನು ಸೋಲಿಸಿ ನ್ಯೂಜಿಲೆಂಡ್‌, ಕ್ವಾರ್ಟರ್‌ ಫೈನಲ್ಸ್‌ಗೆ ಅರ್ಹತೆ ಪಡೆದುಕೊಂಡಿತು. ಇದನ್ನೂ ಓದಿ: IND vs NZ 2nd ODI: ರಾಯ್‍ಪುರದಲ್ಲಿ ಟೀಂ ಇಂಡಿಯಾಗೆ ರಾಜ ಮರ್ಯಾದೆ – ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯದೊಂದಿಗೆ ಸರಣಿ ಕೈವಶ

    ಇದಕ್ಕೂ ಮುನ್ನ ಪಂದ್ಯದ ಪೂರ್ಣಾವಧಿಯಲ್ಲಿ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಪುರುಷರ ಹಾಕಿ ತಂಡ ವಿಶ್ವಕಪ್‌ ಗೆಲ್ಲುವ ಕನಸು ಕಂಡಿತ್ತು. ಇದನ್ನೂ ಓದಿ: 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್? – 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Hockey World Cup: ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು – ಕ್ವಾರ್ಟರ್ ಫೈನಲ್ ಆಸೆ ಜೀವಂತ

    Hockey World Cup: ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು – ಕ್ವಾರ್ಟರ್ ಫೈನಲ್ ಆಸೆ ಜೀವಂತ

    ರೊರ್ಕೆಲಾ: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ (Hockey World Cup 2023) ಭಾರತದ (India) ಅಜೇಯ ಓಟ ಮುಂದುವರಿದಿದೆ. ವೇಲ್ಸ್ (Wales) ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 4-2 ಅಂತರದ ಗೋಲುಗಳಿಂದ ಗೆಲುವು ದಾಖಲಿಸಿತು.

    ಈ ಗೆಲುವಿನೊಂದಿಗೆ ಡಿ ಗುಂಪಿನ 2ನೇ ಸ್ಥಾನ ಅಲಂಕರಿಸಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ನ್ಯೂಜಿಲೆಂಡ್ ವಿರುದ್ಧ ಕ್ರಾಸ್‍ಓವರ್ ಪಂದ್ಯ ಆಡಬೇಕಿದೆ. ವೇಲ್ಸ್ ವಿರುದ್ಧದ ಪಂದ್ಯ ಮುಂದಿನ ಹಂತಕ್ಕೇರಲು ಭಾರತಕ್ಕೆ ಮಹತ್ವದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ ಜಯ ಗಳಿಸಿದೆ.

    ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಕಾಶ್‍ದೀಪ್ ಸಿಂಗ್ ಎರಡು ಗೋಲ್ ಸಿಡಿಸಿ ಭಾರತದ ಸ್ಟಾರ್ ಎನಿಸಿದರು. ಇನ್ನುಳಿದ ಎರಡು ಗೋಲ್ ಶಂಶೇರ್ ಸಿಂಗ್ ಮತ್ತು ಹರ್ಮನ್‍ಪ್ರೀತ್ ಸಿಂಗ್ ಸಿಡಿಸಿದರು. ವೇಲ್ಸ್ ಪರ ಗರೆಥ್ ಫರ್ಲಾಂಗ್ ಮತ್ತು ಜೇಕಬ್ ಡ್ರೇಪರ್ ತಲಾ ಒಂದೊಂದು ಗೋಲ್ ಬಾರಿಸಿ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ ಭಾರತ ಗೆಲುವು ದಾಖಲಿಸಿತು.

    ಮೊದಲ ಕ್ವಾರ್ಟರ್‌ನಲ್ಲಿ 2 ತಂಡಗಳು ಸಮಬಲ ಸಾಧಿಸಿದವು. 2ನೇ ಕ್ವಾರ್ಟರ್‌ನ 21ನೇ ನಿಮಿಷದಲ್ಲಿ ಶಂಶೇರ್ ಸಿಂಗ್  ಭಾರತಕ್ಕೆ ಮೊದಲ ಗೋಲ್ ಬಾರಿಸಿ ಮುನ್ನಡೆ ತಂದುಕೊಟ್ಟರು. ಆ ಬಳಿಕ ಮೂರನೇ ಕ್ವಾರ್ಟರ್‌ನ 32ನೇ ನಿಮಿಷದಲ್ಲಿ ಆಕಾಶ್‍ದೀಪ್ ಸಿಂಗ್ 2ನೇ ಗೋಲ್ ಸಿಡಿಸಿ 2-0 ಮುನ್ನಡೆ ತಂದುಕೊಟ್ಟರು. ಆ ಬಳಿಕ ವೇಲ್ಸ್ ಪರ ಗರೆಥ್ ಫರ್ಲಾಂಗ್ 42ನೇ ನಿಮಿಷದಲ್ಲಿ ಮತ್ತು ಜೇಕಬ್ ಡ್ರೇಪರ್ 44ನೇ ನಿಮಿಷದಲ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ ಬಾರಿಸಿ ಸಮಬಲ ಸಾಧಿಸಲು ನೆರವಾದರು.

    ನಂತರ ಮತ್ತೆ ಭಾರತದ ಪರ ಆಕಾಶ್‍ದೀಪ್ ಸಿಂಗ್ 45ನೇ ನಿಮಿಷದಲ್ಲಿ ಗೋಲ್ ಬಾರಿಸಿ ಮತ್ತೆ 3-2 ಮುನ್ನಡೆ ತಂದುಕೊಟ್ಟರು. ನಂತರ ಕೊನೆಯ ಹಂತದಲ್ಲಿ 59ನೇ ನಿಮಿಷದಲ್ಲಿ ಹರ್ಮನ್‍ಪ್ರೀತ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ 4-2 ಮುನ್ನಡೆಯೊಂದಿಗೆ ಗೆಲುವು ದಾಖಲಿಸಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k