Tag: ಹಾಕಿ ಆಟಗಾರರು

  • ಕಾರು ಅಪಘಾತ – ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದಾರುಣ ಸಾವು

    ಕಾರು ಅಪಘಾತ – ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದಾರುಣ ಸಾವು

    ಭೋಪಾಲ್: ಕಾರು ಅಪಘಾತದಲ್ಲಿ ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಹೋಶಂಗಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ರಾಷ್ಟ್ರೀಯ ಹೆದ್ದಾರಿ 69 ರ ರೈಸಲ್ಪರ್ ಎಂಬ ಗ್ರಾಮದಲ್ಲಿ ನಡೆದಿದ್ದು, ಮೃತ ಆಟಗಾರರನ್ನು ಇಂದೋರ್‍ನ ಶಹನಾವಾಜ್ ಖಾನ್, ಇಟಾರ್ಸಿಯ ಆದರ್ ಹರ್ದುವಾ, ಜಬ್ಬಲ್ಪುರದ ಆಶಿಶ್ ಲಾಲ್ ಮತ್ತು ಗ್ವಾಲಿಯರ್‍ನ ಅನಿಕೇತ್ ಎಂದು ಗುರುತಿಸಲಾಗಿದೆ. ನಾಲ್ವರೂ ಭೋಪಾಲ್‍ನ ಎಂಪಿ ಸ್ಪೋರ್ಟ್ಸ್  ಅಕಾಡೆಮಿಯ ಹಾಕಿ ಆಟಗಾರರು ಎಂದು ತಿಳಿದುಬಂದಿದೆ.

    ಏಳು ಜನ ಆಟಗಾರರು ಧ್ಯಾನ್ ಚಂದ್ ಟ್ರೋಫಿ ಪಂದ್ಯಕ್ಕಾಗಿ ಹೋಶಂಗಾಬಾದ್‍ನಿಂದ ಇಟಾರ್ಸಿಗೆ ಹೋಗುವಾಗ ಮಾರುತಿ ಸುಜಕಿ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಏಳು ಜನ ಹಾಕಿ ಆಟಗಾರರು ಮಧ್ಯ ಪ್ರದೇಶಕ್ಕೆ ಸೇರಿದವರಾಗಿದ್ದು, ಈ ಸಂಬಂಧ ಹೋಶಂಗಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.