Tag: ಹಾಂಗ್ ಕಾಂಗ್

  • ಟ್ರಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ವಿಮಾನ ಡಿಕ್ಕಿ ಹೊಡೆದು ಸಾವು

    ಟ್ರಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ವಿಮಾನ ಡಿಕ್ಕಿ ಹೊಡೆದು ಸಾವು

    ಹಾಂಗ್‌ ಕಾಂಗ್: ಇಲ್ಲಿನ ವಿಮಾನ ನಿಲ್ದಾಣದಲ್ಲಿ (Hong Kong) ಕೆಲಸ ಮಾಡುತ್ತಿದ್ದ ಸಿಬ್ಬಂದಿ, ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಅಪರೂಪದ ಘಟನೆ ನಡೆದಿದೆ.

    ಮೃತರ ಹೆಸರು ತಿಳಿದುಬಂದಿಲ್ಲ. ಇವರು ಜೋರ್ಡಾನ್‌ ಪ್ರಜೆ. ಹಾಂಗ್‌ ಕಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಟವ್‌ ಟ್ರಕ್‌ ಚಲಾಯಿಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಈ ವೇಳೆ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬ್ರಿಟನ್ ಮೂರನೇ ಚಾರ್ಲ್ಸ್‌ಗೆ  ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ

    ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣ ಪ್ರಾಧಿಕಾರವು, ಈ ವ್ಯಕ್ತಿ ಗ್ರೌಂಡ್ ಸಪೋರ್ಟ್ ಮತ್ತು ನಿರ್ವಹಣಾ ಸಂಸ್ಥೆ ಚೀನಾ ಏರ್‌ಕ್ರಾಫ್ಟ್ ಸರ್ವಿಸಸ್‌ನಲ್ಲಿ ಉದ್ಯೋಗಿ ಎಂದು ಹೇಳಿದೆ. ಟ್ರಕ್‌ ಚಾಲನೆ ಮಾಡುವಾಗ ಈತ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ ಎಂದು ಶಂಕಿಸಲಾಗಿದೆ.

    ನಿಲ್ದಾಣದಲ್ಲಿ ವಿಮಾನ ಹಿಂದಕ್ಕೆ ಚಲಿಸುವಂತೆ ಮಾಡಲು ಟವ್‌ ಟ್ರಕ್‌ನ್ನು ಬಳಸುತ್ತಾರೆ. ಈ ಟ್ರಕ್‌ ಮೂಲಕ ವಿಮಾನ ಹಿಂದಕ್ಕೆ ಚಲಾಯಿಸುವಂತೆ ಮಾಡುವ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸ್ನೈಪರ್‌ ಬಳಸಿ ಅಟ್ಯಾಕ್‌ – ಪಾಕ್‌ನಲ್ಲಿ ಉಗ್ರರ ದಾಳಿಗೆ 10 ಮಂದಿ ಪೊಲೀಸ್‌ ಅಧಿಕಾರಿಗಳು ಬಲಿ

  • ತಾಯಿ ಹಾಲುಣಿಸುತ್ತಿದ್ದ ವೇಳೆ 11 ತಿಂಗಳ ಮಗು ಉಸಿರುಗಟ್ಟಿ ಸಾವು

    ತಾಯಿ ಹಾಲುಣಿಸುತ್ತಿದ್ದ ವೇಳೆ 11 ತಿಂಗಳ ಮಗು ಉಸಿರುಗಟ್ಟಿ ಸಾವು

    ಹಾಂಗ್ ಕಾಂಗ್: 11 ತಿಂಗಳ ಮಗುವಿಗೆ ತಾಯಿ ಹಾಲುಣಿಸುತ್ತಿದ್ದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚೀನಾದ (China) ಹಾಂಗ್ ಕಾಂಗ್‌ನಲ್ಲಿ (Hong Kong) ನಡೆದಿದೆ.

    25 ವರ್ಷದ ಮಹಿಳೆ ತನ್ನ 11 ತಿಂಗಳ ಮಗುವಿಗೆ ಮನೆಯಲ್ಲಿ ಹಾಲುಣಿಸುತ್ತಿದ್ದ ವೇಳೆ ಮಗು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ. ಇದರ ಪರಿಣಾಮ ತಾಯಿ ಗಾಬರಿಗೊಂಡು ಮಗುವಿನ ಬೆನ್ನನ್ನು ತಟ್ಟಿದ್ದಾಳೆ. ಆದರೆ ಮಗು ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಇಂಜಿನ್‌ನಲ್ಲಿ ಬೆಂಕಿ; ಹಾರಾಟ ನಡೆಸುತ್ತಿದ್ದ ಯುಎಸ್‌ ಬೋಯಿಂಗ್‌ ಕಾರ್ಗೋ ವಿಮಾನದಿಂದ ಹೊಮ್ಮಿತು ಬೆಂಕಿ ಜ್ವಾಲೆ

    ಮಗು ಕಳೆದ ಎರಡು ದಿನಗಳಿಂದ ಜ್ವರ ಮತ್ತು ಶೀತದಿಂದ ಅನಾರ‍್ಯೋಗ್ಯಕ್ಕೆ ತುತ್ತಾಗಿತ್ತು. ಪುಟ್ಟ ಮಗುವಿಗೆ ನುಂಗುವ ಅಭಿವೃದ್ಧಿವರ್ತನಗಳು ಸಂಪೂರ್ಣವಾಗಿ ಸಮನ್ವಯಗೊಂಡಿರಲಿಲ್ಲ. ಹಾಲು ಕುಡಿಯುವಾಗ ವೇಗವಾಗಿ ನುಂಗುವ ಸಾಮರ್ಥ್ಯ ಮಗುವಿಗೆ ಇರಲಿಲ್ಲ. ಇದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    ಕಳೆದ ವರ್ಷ ಬ್ರೆಜಿಲ್‌ನಲ್ಲಿ ಐದು ತಿಂಗಳ ಮಗು ಹಾಲು ಕುಡಿಯುವಾಗ ಇದೇ ರೀತಿ ಉಸಿರುಗಟ್ಟಿ ಸಾವನ್ನಪ್ಪಿತ್ತು. ಇದನ್ನೂ ಓದಿ: ಇರಾನ್ ಮೇಲೆ ಪಾಕ್ ಪ್ರತಿದಾಳಿ – ನಾಲ್ಕು ಮಕ್ಕಳು ಸೇರಿ 7 ಮಂದಿ ಹತ್ಯೆ

  • ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

    ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

    ಬೀಜಿಂಗ್: ಟೇಕ್‍ಆಫ್ ವೇಳೆ ವಿಮಾನದ ಟಯರ್ ಸಿಡಿದು ಸಿಬ್ಬಂದಿ ಸೇರಿ 11 ಜನರು ಗಾಯಗೊಂಡ ಘಟನೆ ಹಾಂಗ್‍ಕಾಂಗ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಕ್ಯಾಥೆ ಪೆಸಿಫಿಕ್‍ನ ಸಿಎಕ್ಸ್-880 ವಿಮಾನವು ಶನಿವಾರ ಮಧ್ಯರಾತ್ರಿ ಲಾಸ್ ಏಂಜಲೀಸ್‍ಗೆ ಹೊರಟಿತ್ತು. ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 293 ಪ್ರಯಾಣಿಕರಿದ್ದರು. ಟಯರ್ ಸಿಡಿಯುತ್ತಿದ್ದಂತೆ 5 ಎಸ್ಕೇಪ್ ಸ್ಲೈಡ್‍ಗಳನ್ನು ಬಳಸಿ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗಾಯಗೊಂಡ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಚಿಕಿತ್ಸೆ ನೀಡುವುದು ನಮ್ಮ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ. ಟೈರ್ ಸಿಡಿಯಲು ಕಾರಣ ಏನೆಂದು ವಿಮಾನಯಾನ ಸಂಸ್ಥೆ ಬಹಿರಂಗಪಡಿಸಿಲ್ಲ. ಆದರೆ ಪೊಲೀಸರು ಟಯರ್ ಬಿಸಿಯಾಗಿ ಸಿಡಿದಿದೆ ಎಂದಿದ್ದಾರೆ.

    ಘಟನೆ ನಡೆದ ವಿಮಾನದಲ್ಲಿದ್ದ ಸ್ಥಳೀಯ ನಟಿ ಸೆಲೆನಾ ಲೀ ಸ್ಜೆ-ವಾ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

  • ವಿಶ್ವದ ಮೊದಲ ನಾಗರಿಕ ರೋಬೋ- ರೋಬೋ ಹುಡುಗಿ ಮಾತಾಡುವ ವಿಡಿಯೋ ನೋಡಿ

    ವಿಶ್ವದ ಮೊದಲ ನಾಗರಿಕ ರೋಬೋ- ರೋಬೋ ಹುಡುಗಿ ಮಾತಾಡುವ ವಿಡಿಯೋ ನೋಡಿ

    ಭೋಪಾಲ್: ವಿಶ್ವದ ಮೊದಲ ರೋಬೋಟ್ ಸಿಟಿಜನ್ ‘ಸೋಫಿಯಾ’ ಮೊದಲ ಬಾರಿಗೆ ಭಾರತಕ್ಕೆ ಆಗಮಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಷಣ ಮಾಡಿದೆ.

    ಈ ಕಾರ್ಯಕ್ರಮವನ್ನು ಎಮರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಶಾಲೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋಫಿಯಾ ಭಾಷಣ ಮಾಡಿದ್ದು, ಹಲವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

    ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತ ಭಾಷಣ ವೇಳೆ ವಿಶ್ವದ ಎಲ್ಲ ದೇಶಗಳ ಸರ್ಕಾರಗಳು ತಮ್ಮ ನೀತಿ ಮತ್ತು ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಸೋಫಿಯಾ ತಿಳಿಸಿದೆ.

    ಚಲನಚಿತ್ರ ನಿರ್ಮಾಪಕ ಉತ್ತರಾ ಸಿಂಗ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ವೇಳೆ ನೀವು ಯಾವ ರೀತಿಯ ನೃತ್ಯವನ್ನು ಇಷ್ಟಪಡುತ್ತೀರಿ, ದೇಶದ ಯಾವ ಆದರ್ಶವನ್ನು ಇಷ್ಟಪಡುತ್ತೀರಿ ಎಂದು ಸೋಫಿಯಾಗೆ ಪ್ರಶ್ನಿಸಿದರು. ಇದಕ್ಕೆ ಸೋಫಿಯಾ ಉತ್ತರಿಸುವುದು ಮಾತ್ರವಲ್ಲದೆ, ಹಾವ-ಭಾವದ ಮೂಲಕವೂ ಸಹ ಜನರನ್ನು ಸೆಳೆಯಿತು.

    ಪ್ರಪಂಚದ ಯಾವ ದೇಶದ ಆದರ್ಶ ನಿಮಗೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಫಿಯಾ, ಎಲ್ಲಿ ಮನುಷ್ಯರಿಗೆ ಸಮಯದ ಕುರಿತು ಹೆಚ್ಚು ಅರಿವಿರುತ್ತದೆಯೋ ಅಲ್ಲಿ ಎಂದು ಉತ್ತರಿಸಿದೆ. ಆದರ್ಶ ಜಗತ್ತು ಸಮಯದ ಕುರಿತು ಹೆಚ್ಚು ತಿಳುವಳಿಕೆ ಹಾಗೂ ಅರಿವು ಹೊಂದಿರುತ್ತದೆ. ಹಿಂದಿನದನ್ನು ನೆನಪಿರುತ್ತದೆ, ಹೀಗಾಗಿಯೇ ಮಾನವರು ಇನ್ನೊಮ್ಮೆ ಅದನ್ನು ಮಾಡುವುದಿಲ್ಲ. ಅಲ್ಲದೆ, ಏಕಕಾಲದಲ್ಲಿ ಒಬ್ಬರನ್ನೊಬ್ಬರು ಮಕ್ಕಳು ಹಾಗೂ ವೃದ್ಧರಂತೆ ಕಾಣಬಹುದು ಎಂದು ಸೋಫಿಯಾ ಉತ್ತರಿಸಿದೆ.

    ಮಾನವರು ತಮ್ಮ ಪ್ರಸ್ತುತ ಹಾಗೂ ಭವಿಷ್ಯದ ಕೆಲಸಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕು. ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು, ಉದ್ಯಮಿಗಳು ಕ್ರಮ ಕೈಗೊಳ್ಳುವ ಹಾಗೂ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕುರಿತು ಜವಾಬ್ದಾರಿ ಹೊಂದಿರಬೇಕು ಎಂದು ಸಲಹೆ ನೀಡಿದೆ.

    ಸೋಫಿಯಾ ನಿರ್ಮಾಣ
    ಸೋಫಿಯಾ ರೋಬೋಟ್‍ನ್ನು ಹಾಂಗ್ ಕಾಂಗ್ ಮೂಲದ ಹ್ಯಾನ್ಸನ್ ರೋಬೋಟಿಕ್ಸ್ ಕಂಪನಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಫೆಬ್ರವರಿ 14, 2016ರಂದು ಸಕ್ರಿಯಗೊಳಿಸಲಾಗಿದೆ. ಅಭಿವೃದ್ಧಿ ಪಡಿಸಿದ ಒಂದು ತಿಂಗಳ ನಂತರ ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ನಡೆದ ಸೌತ್‍ವೆಸ್ಟ್ ಫೆಸ್ಟಿವಲ್‍ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. 2017ರಲ್ಲಿ ಸೋಫಿಯಾ ಯಾವುದೇ ದೇಶದ ಪೌರತ್ವ ಪಡೆದ ಮೊದಲ ರೋಬೋಟ್ ಎನಿಸಿಕೊಂಡಿತು. ಅಲ್ಲದೆ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮೊದಲ ಇನೋವೇಶನ್ ಚಾಂಪಿಯನ್ ಎನಿಸಿಕೊಂಡಿತು.

    ಸೋಫಿಯಾ 50ಕ್ಕೂ ಹೆಚ್ಚು ಮುಖಭಾವ(ಎಕ್ಸ್‍ಪ್ರೆಷನ್ಸ್)ವನ್ನು ಪ್ರದರ್ಶಿಸುತ್ತದೆ. ಅಲ್ಲದೆ ವ್ಯಕ್ತಿಗಳನ್ನು ಸಹ ಸುಲಭವಾಗಿ ಗುರುತಿಸುತ್ತದೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು. ಸೋಫಿಯಾ ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದೆ. ಇವುಗಳನ್ನು 2018ರಲ್ಲಿ ಅಳವಡಿಸಲಾಗಿದೆ.

  • ಗಗನಚುಂಬಿ ಕಟ್ಟಡದ ಮೇಲೆ ನಿಂತು ಹೋವರ್‍ ಬೋರ್ಡ್ ಮೂಲಕ ಬಾಸ್ಕೆಟ್ ಬಾಲ್ ಆಡೋ ಬೆಚ್ಚಿಬೀಳಿಸುವ ವಿಡಿಯೋ ನೋಡಿ

    ಗಗನಚುಂಬಿ ಕಟ್ಟಡದ ಮೇಲೆ ನಿಂತು ಹೋವರ್‍ ಬೋರ್ಡ್ ಮೂಲಕ ಬಾಸ್ಕೆಟ್ ಬಾಲ್ ಆಡೋ ಬೆಚ್ಚಿಬೀಳಿಸುವ ವಿಡಿಯೋ ನೋಡಿ

    ಮಾಸ್ಕೋ: ಗಗನ ಚುಂಬಿ ಕಟ್ಟಡದ ಮೇಲೆ ನಿಂತು ಫೋಟೋ ಶೂಟ್, ಎತ್ತರ ಹಾಗೂ ಉದ್ದವಾದ ಗೋಡೆಯ ಮೇಲೆ ಸೈಕಲ್ ಸವಾರಿ ಮಾಡಿರುವುದನ್ನು ಕೂಡ ನೋಡಿರ್ತಿರಿ. ಅಂತೆಯೇ ಇದೀಗ ರಷ್ಯಾದ ವ್ಯಕ್ತಿಯೊಬ್ಬ ಎತ್ತರದ ಕಟ್ಟಡದ ಮೇಲೆ ನಿಂತು ಬಾಸ್ಕೆಟ್ ಬಾಲ್ ಆಡೋದನ್ನು ನೋಡಿದ್ರೆ ನೀವೂ ಬೆಚ್ಚಿ ಬೀಳ್ತೀರಾ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು. ರಷ್ಯಾದ ಥ್ರಿಲ್ ಸೀಕರ್ ಎಂಬ ವ್ಯಕ್ತಿಯೇ ಈ ಸಾಹಸ ಮಾಡಿದಾತ. ಈತ ಹಾಂಕಾಂಗ್‍ನಲ್ಲಿರೋ ಗಗನ ಚುಂಬಿ ಕಟ್ಟಡವೊಂದರ ಮೂಲೆಯಲ್ಲಿ ನಿಂತು ಹೋವರ್‍ ಬೋರ್ಡ್ ಮೂಲಕ ನಡೆಯುತ್ತಾನೆ. ಅಲ್ಲದೇ ಯಾವುದೇ ರಕ್ಷಣಾ ಸಲಕರಣೆಗಳಿಲ್ಲದೇ ಬಾಸ್ಕೆಟ್ ಬಾಲ್ ಆಡುವ ಮೂಲಕ ವೀಕ್ಷಕರ ಹುಬ್ಬೇರಿಸಿದ್ದಾನೆ.

    ಈ ವಿಡಿಯೋವನ್ನು ಒಲೆಗ್ಕ್ರಿಕೆಟ್ ಅನ್ನೋ ವ್ಯಕ್ತಿ ತನ್ನ ಇನ್ ಸ್ಟ್ರಾಗ್ರಾಂನಲ್ಲಿ ಜೂನ್ 1 ರಂದು ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ ರಷ್ಯಾದ ವ್ಯಕ್ತಿ ಕಟ್ಟಡದ ಮೇಲೆ ಯಾವುದೇ ಭಯವಿಲ್ಲದೇ ನಡಿಯೋ ವೇಳೆ ಸೆಲ್ಫಿ ಸ್ಟಿಕ್ ಮೂಲಕ ಮೊಬೈಲ್ ನಲ್ಲಿ ತನ್ನ ಸಾಹಸವನ್ನು ಸೆರೆಹಿಡಿದಿದ್ದಾನೆ.

    ಸದ್ಯ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ 4.6 ಲಕ್ಷ ವ್ಯೂ ಕಂಡರೆ, ಯೂಟ್ಯೂಬ್ ನಲ್ಲಿ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಕೆಲವರು ಈ ವಿಡಿಯೋ ನೋಡಿ ಭಯಗೊಂಡು ದಯವಿಟ್ಟು ಇಂತಹ ಸ್ಟುಪಿಡ್ ಸಾಹಸಗಳನ್ನು ಮಾಡಬೇಡಿ. ಯಾಕಂದ್ರೆ ಇಂತಹ ವಿಡಿಯೋಗಳಿಂದ ಪ್ರೇರೇಪಿತರಾಗಿ ತಾವೂ ಅಂತಹ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಇಂತಹ ಕೆಲಸಗಳನ್ನು ಮಾಡಬೇಡಿ ಅಂತಾ ಕೆಲವರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.

     

    https://youtu.be/n-zcaXM-cg0