Tag: ಹಸುಗೂಸು

  • ಮೈಕೊರೆವ ಚಳಿಯಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ – ಮಗು ಸಾವು

    ಮೈಕೊರೆವ ಚಳಿಯಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ – ಮಗು ಸಾವು

    ಬೀದರ್: ಮೈಕೊರೆವ ಚಳಿಯಲ್ಲಿ ಹಸುಗೂಸನ್ನು ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯ ಜಿಲ್ಲೆಯ ಭಾಲ್ಕಿ ತಾಲೂಕಿನ ರುದನೂರ್ (Rudnoor) ಗ್ರಾಮದಲ್ಲಿ ನಡೆದಿದೆ.

    ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಹಸುಗೂಸು ಪ್ರತ್ಯಕ್ಷವಾಗಿದ್ದು, ಗಂಡು ಮಗು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    ಮಗುವನ್ನು ಬಿಟ್ಟು ಹೋದ ದೃಶ್ಯಾವಳಿಗಳು ಅಲ್ಲಿಯೇ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಒಂದು ಚೀಲದಲ್ಲಿ ಮಗುವನ್ನು ತಂದಿದ್ದಾಳೆ. ಸುತ್ತಲೂ ಯಾರಾದರೂ ಇದ್ದಾರಾ ಎಂಬುವುದನ್ನು ಗಮನಿಸಿ. ಮಗುವನ್ನು ಕಾಂಪೌಂಡ್ ಪಕ್ಕದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ.

    ಬೆಳಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಜಮಾವಣೆಯಾಗಿ, ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ. ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಹಸುಗೂಸು ಬಿಟ್ಟು ಹೋದ ಮಹಿಳೆಯನ್ನು ಪತ್ತೆ ಹಚ್ಚಲು ನಿರತರಾಗಿದ್ದಾರೆ.ಇದನ್ನೂ ಓದಿ:ವೈದ್ಯೆಯಿಂದ 2.52 ಕೋಟಿ ರೂ., 2.350 ಕೆಜಿ ಚಿನ್ನ ಪಡೆದು ವಂಚನೆ – ಐಶ್ವರ್ಯಗೌಡ ಮೇಲೆ ಮತ್ತೊಂದು ಎಫ್‌ಐಆರ್

  • ಬಾಗಲಕೋಟೆ: ರಸ್ತೆಬದಿಯ ಡಸ್ಟ್ ಬಿನ್ ನಲ್ಲಿ ಹಸುಗೂಸಿನ ಶವ ಪತ್ತೆ

    ಬಾಗಲಕೋಟೆ: ರಸ್ತೆಬದಿಯ ಡಸ್ಟ್ ಬಿನ್ ನಲ್ಲಿ ಹಸುಗೂಸಿನ ಶವ ಪತ್ತೆ

    – ಕಲಬುರಗಿಯಲ್ಲಿ ರಸ್ತೆ ಬದಿ ಸಿಕ್ತು ನವಜಾತ ಶಿಶು
    – ಬೆಳಗಾವಿ ದೇವಸ್ಥಾನದಲ್ಲಿ 3 ದಿನದ ಮಗು ಪತ್ತೆ

    ಬಾಗಲಕೋಟೆ: ರಸ್ತೆ ಬದಿಯ ಡಸ್ಟಬಿನ್ ನಲ್ಲಿ ಆಗತಾನೇ ಜನಿಸಿರುವ ಹಸುಗೂಸಿನ ಶವವೊಂದು ಪತ್ತೆಯಾಗಿದೆ.

    ನಗರದ ವಾಸವಿ ಥೇಟರ್ ಬಳಿ ಐಡಿಬಿಐ ಬ್ಯಾಂಕ್ ಎದುರಿನ ಡಸ್ಟ್ ಬಿನ್ ನಲ್ಲಿ ಅಪರಿಚಿತ ಹಸುಗೂಸಿನ ಶವ ಪತ್ತೆಯಾಗಿದ್ದು, ಯಾರು ಎಸೆದು ಹೋಗಿದ್ದಾರೆಂದು ಮಾಹಿತಿ ಇಲ್ಲ. ಪೋಷಕರೇ ಶನಿವಾರ ತಡರಾತ್ರಿ ಹಸುಗೂಸಿನ ಶವವನ್ನ ಡಸ್ಟ್ ಬಿನ್ ನಲ್ಲಿ ಎಸೆದು ಹೋಗಿರಬಹುದು ಎಂಬುದು ಸ್ಥಳೀಯರ ಮಾತಾಗಿದೆ.

    ಶವವನ್ನ ಒಂದು ರಟ್ಟಿನ ಬಾಕ್ಸ್ ನಲ್ಲಿ ಇಟ್ಟು ಪರಾರಾರಿಯಾಗಿದ್ದಾರೆ. ಸದ್ಯ ಶವಕ್ಕೆ ಇರುವೆಗಳು ಮುತ್ತಿಕ್ಕಿಕೊಂಡಿದ್ದು, ಸ್ಥಳಕ್ಕೆ ಬಾಗಲಕೋಟೆ ಶಹರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎರಡು ದಿನದ ಹೆಣ್ಣು ನವಜಾತ ಶಿಶುವನ್ನು ರಸ್ತೆಯ ಬದಿಯಲ್ಲಿ ಪೋಷಕರು ಬಿಟ್ಟು ಹೋಗಿರುವ ಘಟನೆ ಕಲಬುರಗಿ ನಗರದ ಕಾಳನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಮಗುವಿನ ರಕ್ಷಣೆ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸದ್ಯ ಮಗುವಿನ ಆರೋಗ್ಯ ತಪಾಸಣೆ ಮಾಡಿ ಅಮೂಲ್ಯ ಶಿಶು ಗೃಹದಲ್ಲಿ ಆಶ್ರಯ ನೀಡಲಾಗಿದೆ. ಮಗುವನ್ನು ಹೀಗೆ ರಸ್ತೆ ಬದಿ ಬಿಟ್ಟು ಹೋದ ಪೊಷಕರ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ರಾತ್ರಿ 3 ದಿನದ ಹೆಣ್ಣು ಮಗುವನ್ನು ದೇವಸ್ಥಾನ ದಲ್ಲಿ ಬಿಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಅಳುತ್ತಿದ್ದ ಮಗುವನ್ನ ಕಂಡ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ರಾಯಭಾಗ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ. ಮಗುವಿನ ತಾಯಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.