Tag: ಹಸುಗಳು

  • ಹಸುಗಳನ್ನ ಸಾಗಿಸ್ತಿದ್ದ ಕಾರು ಅಪಘಾತ – 5 ಗೋವುಗಳು ಸಾವು

    ಹಸುಗಳನ್ನ ಸಾಗಿಸ್ತಿದ್ದ ಕಾರು ಅಪಘಾತ – 5 ಗೋವುಗಳು ಸಾವು

    ಮಂಗಳೂರು: ಹಸುಗಳನ್ನು ಸಾಗಿಸುತ್ತಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಐದು ಜಾನುವಾರಗಳು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನಡೆದಿದೆ.

    ಕಳ್ಳರು ಐಷಾರಾಮಿ ಕಾರಿನಲ್ಲಿ ಆರು ಹಸುಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಕಾರು ಅಪಘಾತಕ್ಕೀಡಾಗಿದೆ. ಪರಿಣಾಮ ಕಾರಿನಲ್ಲಿದ್ದ ಐದು ಹಸುಗಳು ಸಾವನ್ನಪ್ಪಿದ್ದು, ಹಸುವೊಂದರ ಸ್ಥಿತಿ ಗಂಭೀರವಾಗಿದೆ.

    ಮಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳ ಹೆಚ್ಚಾಗುತ್ತಿದ್ದು, ಅತೀ ಹೆಚ್ಚಾಗಿ ದನಕಳ್ಳತನ ಮಾಡುತ್ತಿದ್ದಾರೆ. ಅದೇ ರೀತಿ ಕಳೆದ ದಿನವೂ ಒಂದು ಕಾರಿನಲ್ಲಿ ಆರು ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ಕಾರಿನ ಹಿಂದಿನ ಸೀಟ್‍ಗಳನ್ನು ತೆಗೆದು ಹಸುಗಳನ್ನು ತುಂಬಿದ್ದರು. ಜೊತೆಗೆ ಕಳ್ಳತನ ಬಗ್ಗೆ ಬೇರೆಯವರಿಗೆ ತಿಳಿಯಬಾರದೆಂದು ಕಾರಿಗೆ ಟಿಂಟ್ ಗ್ಲಾಸ್ ಹಾಕಿದ್ದರು.

    ಅದರಂತೆಯೇ ಇವರು ಯಾರಿಗೂ ಗೊತ್ತಾಗದಂತೆ ಎರಡು ಚೆಕ್ ಪೋಸ್ಟ್ ದಾಟಿ ಹೋಗಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕೂಡ ಚೆಕ್ ಮಾಡಿಲ್ಲ. ಆದರೆ ಅಪಘಾತವಾದ ತಕ್ಷಣ ಕಾರು ಮತ್ತು ಗೋವುಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 7 ಹಸುಗಳ ಮೇಲೆ ಅತ್ಯಾಚಾರವೆಸೆಗಿದ ಕಾಮುಕ!

    7 ಹಸುಗಳ ಮೇಲೆ ಅತ್ಯಾಚಾರವೆಸೆಗಿದ ಕಾಮುಕ!

    – ಸ್ವಯಂಸೇವಕರಿಂದ ಧರ್ಮದೇಟು

    ಅಯೋಧ್ಯೆ: ಮದ್ಯದ ಅಮಲಿನಲ್ಲಿದ್ದ ಕಾಮುಕನೊಬ್ಬ ಗೋಶಾಲೆಯಲ್ಲಿದ್ದ ಹಸುಗಳ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಕೃತ್ಯ ಅಯೋಧ್ಯೆ ನಗರದ ಕರ್ತಾಲಿಯ ಬಾಬಾ ಆಶ್ರಮದ ಗೋಶಾಲೆಯಲ್ಲಿ ನಡೆದಿದೆ.

    ಆರೋಪಿಯ ಹೆಸರು ರಾಜ್‍ಕುಮಾರ್ ಎಂಬುದು ತಿಳಿದು ಬಂದಿದೆ. ಆದರೆ ಆತನ ಇತರೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕುಡಿದ ಅಮಲಿನಲ್ಲಿ ಆಶ್ರಮಕ್ಕೆ ಬರುತ್ತಿದ್ದ ಕಾಮುಕ ಗೋಶಾಲೆಯಲ್ಲಿದ್ದ ಏಳು ಹಸುಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಕೃತ್ಯವು ಗೋಶಾಲೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಆಶ್ರಮ ಸಿಬ್ಬಂದಿ ಹಾಗೂ ಸ್ವಯಂಸೇವಕರು ಕಾಮುಕನನ್ನು ಹಿಡಿಯಬೇಕು ಎಂದು ಗೋಶಾಲೆ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಇದೇ ವೇಳೆ ಮತ್ತೆ ಕಾಮುಕ, ಹಸುಗಳ ಮೇಲೆ ಅತ್ಯಾಚಾರವೆಸಗಲು ಬಂದಾಗ ಆಶ್ರಮದ ಸ್ವಯಂಸೇವಕರು ಆತನನ್ನು ಹಿಡಿದು ಸಖತ್ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 511ರ ಪ್ರಾಣಿಗಳ ವಿರುದ್ಧ ಕ್ರೌರ್ಯ ನಡೆಸುವ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಯು ವಿಚಾರಣೆ ವೇಳೆ ತಾನು ಕುಡಿದ ಮತ್ತಿನಲ್ಲಿ ಏನು ಮಾಡಿದೆ ಎಂದು ಗೊತ್ತಿಲ್ಲ. ಆದರೆ ಜನ ನನ್ನನ್ನು ಹೊಡೆದಿರುವುದು ಮಾತ್ರ ನೆನಪಿದೆ ಎಂದು ಹೇಳಿದ್ದಾನೆ.

  • ಹಸುಗಳಿಗೂ ಜೋಡಿ ಹುಡುಕಲು ಬಂದಿದೆ ಡೇಟಿಂಗ್ ಆ್ಯಪ್!

    ಹಸುಗಳಿಗೂ ಜೋಡಿ ಹುಡುಕಲು ಬಂದಿದೆ ಡೇಟಿಂಗ್ ಆ್ಯಪ್!

    ಲಂಡನ್: ಬರೀ ಮನುಷ್ಯರಿಗೆ ಮಾತ್ರ ತಮ್ಮ ಜೋಡಿ ಹುಡುಕಲು ಡೇಟಿಂಗ್ ಆ್ಯಪ್ ಇತ್ತು, ಆದ್ರೆ ಈಗ ಹಸುಗಳಿಗೂ ಡೇಟಿಂಗ್ ಆ್ಯಪ್ ಬಂದಿದೆ.

    ಹೌದು, ಇಂಗ್ಲೆಂಡ್‍ನಲ್ಲಿ ಹಸುಗಳಿಗಾಗಿಯೇ ಟಡ್ಡರ್ ಎಂಬ ಡೇಟಿಂಗ್ ಆ್ಯಪ್ ತಯಾರಿಸಲಾಗಿದೆ. ಹೆಕ್ಟೇರ್ ಅಗ್ರಿಟೆಕ್ ಎಂಬ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

    ಈ ಆ್ಯಪ್‍ನಲ್ಲಿ ಹಸುಗಳ ಬ್ರೀಡ್ ಮಾಡುವವರು ಹಾಗೂ ರೈತರು ತಮ್ಮ ಗೋವುಗಳಿಗೆ ಪರ್ಫೆಕ್ಟ್ ಮ್ಯಾಚ್‍ಗಳನ್ನು ಹುಡುಕಬಹುದಾಗಿದೆ. ಮೊದಲು ಆ್ಯಪ್‍ನಲ್ಲಿ ಮಾಲೀಕರು ತಮ್ಮ ಹಸುಗಳ ಫೋಟೋ ಪೋಸ್ಟ್ ಮಾಡಿ, ಅದರ ದೈಹಿಕ ಲಕ್ಷಣಗಳು, ಆರೋಗ್ಯ ಹಾಗೂ ಓನರ್ ಕುರಿತು ಮಾಹಿತಿಯನ್ನ ನೀಡಬೇಕು. ಬಳಿಕ ತಮ್ಮ ಹಸುವಿಗಾಗಿ ಬೇರೊಂದು ಗೋವು ಇಷ್ಟವಾದರೆ ಆ ಪ್ರೊಫೈಲ್ ಆಯ್ಕೆ ಮಾಡಿ ಜೊಡಿಯನ್ನು ಹುಡುಕಬಹುದು. ಸದ್ಯ ಈ ಆ್ಯಪ್ ಆಪಲ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

    ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

    ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಜಾನುವಾರುಗಳನ್ನು ರಾಯಚೂರು ಪೊಲೀಸರು ರಕ್ಷಿಸಿ, ಅವುಗಳನ್ನು ಎಲ್ಲಿ ಬಿಡುವುದು ಅಂತ ತಿಳಿಯದೇ ಠಾಣೆಯಲ್ಲೇ ಈಗ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಗರದಲ್ಲಿ ಮಿತಿಮೀರಿದ್ದರೆ, ಇನ್ನೊಂದೆಡೆ ಕಸಾಯಿಖಾನೆಯಲ್ಲಿ ಸಿಕ್ಕಸಿಕ್ಕವರು ಜಾನುವಾರುಗಳನ್ನ ತಂದು ಕತ್ತರಿಸುತ್ತಿದ್ದಾರೆ. ಕಸಾಯಿಖಾನೆ ಗುತ್ತಿಗೆಯನ್ನು ಇದುವರೆಗೂ ನಗರಸಭೆ ಅಧಿಕಾರಿಗಳು ಯಾರಿಗೂ ನೀಡಿಲ್ಲ. ಆದರೆ ಜಾನುವಾರುಗಳನ್ನು ತರುವ ಕಟುಕರಿಂದ ದುಡ್ಡುವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಸಿಕ್ಕ ಸಿಕ್ಕ ಜಾನುವಾರುಗಳನ್ನು ಕಸಾಯಿಖಾನೆಗೆ ತರಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸದರಬಜಾರ್ ಠಾಣೆಯ ಪೊಲೀಸರು 70 ಜಾನುವಾರುಗಳಲ್ಲಿ 15 ದನ ಹಾಗೂ ಕರುಗಳನ್ನು ರಕ್ಷಿಸಿದ್ದಾರೆ.

    ನಗರದಲ್ಲಿರುವ ಬಿಡಾಡಿ ದನಗಳನ್ನೇ ಕೆಲವರು ನೇರವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳದೇ ನಗರಸಭೆ ಕೈಕಟ್ಟಿ ಕುಳಿತಿದೆ. ಗುತ್ತಿಗೆ ಪಡೆಯದೇ ಸಿಕ್ಕಸಿಕ್ಕವರು ಕಸಾಯಿಖಾನೆಯಲ್ಲಿ ಜಾನುವಾರುಗಳನ್ನು ಕತ್ತರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ದನದ ಮಾಂಸ ಹಾಗೂ ಚರ್ಮ ಪಡೆದು ಉಳಿದ ತ್ಯಾಜ್ಯಗಳನ್ನು ಹಾಗೇ ಬಿಡುತ್ತಿದ್ದಾರೆ. ಇದರಿಂದಾಗಿ ಕೆಟ್ಟವಾಸನೆ ಬರುತ್ತಿದೆ. ಕಸಾಯಿಖಾನೆಯನ್ನೇ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಗರದಲ್ಲಿ ಓಡಾಡಿ ಪ್ಲಾಸ್ಟಿಕ್ ನಂತ ಪದಾರ್ಥಗಳನ್ನು ತಿನ್ನುವ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿಕೊಳ್ಳಲು ಅಲ್ಲಿನ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿಯೇ ಹಸುಗಳು ಉಳಿದಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರಸಭೆ ಆಯುಕ್ತ ರಮೇಶ್ ನಾಯಕ್ ಅವರು, ಕಸಾಯಿಖಾನೆಯಲ್ಲಿ 70 ಹಸುಗಳು ಇರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಅಲ್ಲಿನ ಕೆಲಸಗಾರರಿಂದ ಮಾಹಿತಿ ಪಡೆದು ಹಾಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಪಶು ಸಂಗೋಪನಾ ಇಲಾಖೆಯ ಜೊತೆಗೆ ಸೇರಿ ಬಿಡಾಡಿ ದನಗಳನ್ನು ರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ಹೇಳಿದರು.

    ನಗರಸಭೆ ಗೋವು ರಕ್ಷಣೆಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ನಗರ ಕಸಾಯಿಖಾನೆಯನ್ನು ನಿರ್ದಿಷ್ಟ ವ್ಯಕ್ತಿಗೆ ಗುತ್ತಿಗೆ ನೀಡಿಲ್ಲ. ಇದರಿಂದಾಗಿ ಅಲ್ಲಿ ಅಕ್ರಮ ನಡೆಯುತ್ತಿದೆ. ಈ ಕುರಿತು ಅನೇಕ ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ಹಸುಗಳನ್ನು ರಕ್ಷಿಸಿದ್ದಾರೆ. ಆದರೂ ಕಟುಕರು ತಮ್ಮ ಅಕ್ರಮವಾಗಿ ದನಗಳನ್ನು ಕತ್ತರಿಸವುದನ್ನು ನಿಲ್ಲಿಸಿಲ್ಲ ಎಂದು ಸ್ಥಳೀಯರಾದ ಸಂದೀಪ್ ಅವರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿನಲ್ಲಿ ಶುರುವಾಗಿದೆ ಗೋ ಮಾಫಿಯಾ..!- ಸದ್ದಿಲ್ಲದೆ ನಡೀತಿದೆ ಗೋಮಾಂಸ ದಂಧೆ

    ಮೈಸೂರಿನಲ್ಲಿ ಶುರುವಾಗಿದೆ ಗೋ ಮಾಫಿಯಾ..!- ಸದ್ದಿಲ್ಲದೆ ನಡೀತಿದೆ ಗೋಮಾಂಸ ದಂಧೆ

    ಮೈಸೂರು: ಗೋ ಮಾಂಸಕ್ಕಾಗಿ ಹಸುಗಳ ಕಳ್ಳತನ ಶುರುವಾಗಿದ್ದು, ಹಸುಗಳನ್ನು ಕದ್ದು ನಂತರ ಅವುಗಳ ಚರ್ಮ ಸುಲಿದು ಮಾಂಸ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ದಡದಹಳ್ಳಿಯಲ್ಲಿ ಬುಧವಾರದಂದು ನಡೆದಿದೆ.

    ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜನರನ್ನು ಗೋಮಾಫಿಯಾ ಬೆಚ್ಚಿಬೀಳಿಸಿದೆ. ಒಂದೇ ದಿನದಲ್ಲಿ ದಡದಹಳ್ಳಿಯಲ್ಲಿ ಖದೀಮರು ಐದು ಹಸುಗಳನ್ನು ಕದ್ದು, ಅವುಗಳ ಮಾಂಸ ತೆಗೆದುಕೊಂಡು ಹೋಗಿದ್ದಾರೆ. ರೈತ ಮಹಿಳೆ ಚಿಕ್ಕಸಣ್ಣಮ್ಮ ಅವರಿಗೆ ಸೇರಿದ ಎರಡು ಹಸು, ರೈತ ಶಿವರಾಮು ಅವರ ಒಂದು ಹಸು, ರೈತ ನಾಗರಾಜು ಅವರು ಎರಡು ಹಸು ಕಳ್ಳತನವಾಗಿವೆ. ಹಸುಗಳನ್ನು ಕದ್ದು ಅದೇ ಊರಿನ ಹೊರವಲಯದಲ್ಲಿ ಅವುಗಳ ಚರ್ಮ ಸುಲಿದು ಮಾಂಸವನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.

    ಈ ಘಟನೆಯಿಂದ ದಡದಹಳ್ಳಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಎರಡು ದಿನಗಳ ಹಿಂದೆ ಮಾಂಸಕ್ಕಾಗಿ ಎತ್ತುಗಳ ಕಳ್ಳತನ ನಡೆದಿತ್ತು. 80 ಸಾವಿರ ಬೆಲೆ ಬಾಳುವ ಜೋಡಿ ಎತ್ತುಗಳನ್ನು ಕದ್ದು ಊರ ಹೊರಗೆ ಅವುಗಳನ್ನು ಕೊಂದು ಚರ್ಮ ಸುಲಿದು ಮಾಂಸವನ್ನು ತೆಗೆದುಕೊಂಡು ಹೋಗಿದ್ದರು. ಈಗ ಮತ್ತೆ ಇಂತಹ ಭಯಾನಕ ಘಟನೆ ಜರುಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಈ ಘಟನೆ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv