Tag: ಹಸೀನ್

  • ವಿಶ್ವಕಪ್‍ನಲ್ಲಿ ಮಿಂಚುತ್ತಿರುವ ಶಮಿಗೆ `ಲಫಂಗ’ ಎಂದ ಪತ್ನಿ ಹಸೀನ್

    ವಿಶ್ವಕಪ್‍ನಲ್ಲಿ ಮಿಂಚುತ್ತಿರುವ ಶಮಿಗೆ `ಲಫಂಗ’ ಎಂದ ಪತ್ನಿ ಹಸೀನ್

    ನವದೆಹಲಿ: ಒಂದು ಕಡೆ ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಬೌಲಿಂಗ್‍ನಲ್ಲಿ ಮಿಂಚ್ಚುತ್ತಿದ್ದರೆ, ಇನ್ನೊಂದು ಕಡೆ ಭಾರತದಲ್ಲಿ ವೈಯುಕ್ತಿಕ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದಾರೆ. ಸ್ವತಃ ಅವರ ಪತ್ನಿಯೇ ಸಾಮಾಜಿಕ ಜಾಲತಾಣಗಳಲ್ಲಿ ಶಮಿಯ ಚಾರಿತ್ರ್ಯಹರಣ ಮಾಡಿದ್ದಾರೆ.

    ಈ ಹಿಂದೆ ಅಫ್ಘಾನ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಪತಿಯನ್ನು ಪರೋಕ್ಷವಾಗಿ ಪತ್ನಿ ಹೊಗಳಿದ್ದರು. ಆದರೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬೆನ್ನಲ್ಲೇ ಶಮಿಯ ಚಾರಿತ್ರ್ಯಹರಣಕ್ಕೆ ಹಸೀನ್ ಮುಂದಾಗಿದ್ದಾರೆ. ಅತ್ಯುತ್ತಮ ಫಾರ್ಮ್‍ನಲ್ಲಿರುವ ಶಮಿಯ ವೈಯುಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಪತ್ನಿ ಹಸೀನ್ ಜಹಾನ್ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮೊಹಮ್ಮದ್ ಶಮಿ ಖಾಸಗಿ ವಿಚಾರದ ಬಗ್ಗೆ ಹಸೀನ್ ಜಹಾನ್ ಪೋಸ್ಟ್ ಮಾಡಿ ಸದ್ಯ ಭಾರಿ ಸುದಿಯಲ್ಲಿದ್ದಾರೆ. ಸದು ವಿಶ್ವಕಪ್‍ನಲ್ಲಿ ಭಾರತಕ್ಕೆ ಹೀರೋ ಆಗಿರುವ ಶಮಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಹಸೀನ್ ಕೈ ಹಾಕಿದ್ದಾರೆ.

    ಹೌದು. ಶಮಿ ಅವರ ಟಿಕ್ ಟಾಕ್‍ನಲ್ಲಿ ಫಾಲೋ ಮಾಡುವ ಹುಡುಗಿಯರ ಲೀಸ್ಟ್ ನ ಸ್ಕ್ರೀನ್ ಶಾಟ್ ತೆಗೆದು ಅದನ್ನು ಹಸೀನ್ ಬಹಿರಂಗ ಪಡಿಸಿದ್ದಾರೆ. `ಲಫಂಗ ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದೇನೆ. ಆತ 97 ಮಂದಿಯನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ 90 ಹುಡುಗಿಯರು. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು’ ಎಂದು ಪೋಸ್ಟ್ ಮಾಡಿ ಮರ್ಯಾದೆ ತೆಗೆದಿದ್ದಾರೆ.

    https://www.facebook.com/Anamarziya54/posts/1660172864114721

    ಭಾರತದ ವೇಗಿ ವಿರುದ್ಧ ಮಾಡಲಾದ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

    ಕಳೆದ ವರ್ಷದ ಐಪಿಎಲ್ ಸೀಸನ್ ವೇಳೆ ಶಮಿ ಇತರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಹಸೀನ್ ದೂರು ದಾಖಲಿಸಿದ್ದರು. ಇದರಿಂದ ಶಮಿ ಮತ್ತು ಹಸೀನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟುಕೊಂಡು, ಇವರ ಸಂಬಂಧ ಕೋರ್ಟ್ ಮೆಟ್ಟಿಲೇರುವಂತಾಯಿತು. ಈ ಬಳಿಕ ಈ ಜೋಡಿ ದೂರಾಗಿದ್ದರು.

    ಆದರೆ ವಿಶ್ವಕಪ್‍ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದ ಶಮಿಯನ್ನು ಪರೋಕ್ಷವಾಗಿ ಶಮಿ ಹೆಸರನ್ನು ಸೂಚಿಸದೇ, ದೇಶದ ಪರ ಯಾರು ಉತ್ತಮವಾಗಿ ಆಡಿದರೂ ಖುಷಿಯ ವಿಚಾರ ಎಂದು ಹೊಗಳಿದ್ದರು. ಇದನ್ನು ಕಂಡು ಇಬ್ಬರ ನಡುವಿನ ಮನಸ್ತಾಪ ಮುಗಿದು ಎಲ್ಲವೂ ಸರಿಯಾಗಿರಬಹುದು ಎಂದು ಭಾವಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಹಸೀನ್ ಟೀಂ ಇಂಡಿಯಾ ಆಟಗಾರನ ಮೇಲೆ ಹಸೀನ್ ಸಿಡಿದೆದ್ದಿದ್ದಾರೆ.

    ಐಸಿಸಿ ವಿಶ್ವಕಪ್ 2019 ನಲ್ಲಿ ಟೀಂ ಇಂಡಿಯಾದ ಭರ್ಜರಿ ಗೆಲುಗಳಿಂದ ತನ್ನ ಜರ್ನಿ ಮುಂದುವರಿಸಿದೆ. ಭಾರತ ಆಡಿರುವ ಐದು ಪಂದ್ಯಗಳಲ್ಲಿ ಮೂರಲ್ಲಿ ಬ್ಯಾಟ್ಸ್ ಮನ್‍ಗಳು ಮಿಂಚಿದ್ದರೆ, ಎರಡು ಪಂದ್ಯದಲ್ಲಿ ಬೌಲರುಗಳಯ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ಮೂಲಕ ಅಬ್ಬರಿಸಿದ್ದ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್ ವಿರುದ್ಧವೂ 4 ವಿಕೆಟ್ ಪಡೆದು ಮಿಂಚಿದ್ದರು.