Tag: ಹಸಿರು ಬಟಾಣಿ ಪಾಯಸ

  • ಹಬ್ಬದ ಮನೆಯಲ್ಲಿರಲಿ ರುಚಿಯಾದ ಹಸಿರು ಬಟಾಣಿ ಪಾಯಸ

    ಹಬ್ಬದ ಮನೆಯಲ್ಲಿರಲಿ ರುಚಿಯಾದ ಹಸಿರು ಬಟಾಣಿ ಪಾಯಸ

    ಬ್ಬ ಅಂದ್ರೆ ಮನೆಯಲ್ಲಿ ಸಿಹಿ ಇರಲೇ ಬೇಕು. ಸಾಮಾನ್ಯವಾಗಿ ಒಬ್ಬಟ್ಟು, ಕಡಬು, ಕೇಸರಿಬಾತ್ ಮಾಡುತ್ತಾರೆ. ಆದ್ರೆ ಮಕ್ಕಳು ಮಾತ್ರ ಹಬ್ಬದ ದಿನ ಹೊಸ ಸಿಹಿ ಅಡುಗೆ ಬೇಕೆಂದು ಹಠ ಮಾಡುತ್ತಾರೆ. ಇತ್ತ ನೈವೇದ್ಯಕ್ಕೂ ಸಿಹಿ ಮಾಡಿ, ಮಕ್ಕಳಿಗೂ ಬೇರೆ ಅಡುಗೆ ಮಾಡೋದು ಅಂದ್ರೆ ಬಲು ಕಷ್ಟ. ಹಾಗಾಗಿ ಸರಳವಾಗಿ ಕೆಲವೇ ನಿಮಿಷಗಳಲ್ಲಿ ಹಸಿರು ಬಟಾಣಿ ಪಾಯಸ ಮಾಡಿ ಸವಿಯಿರಿ.

    ಬೇಕಾಗುವ ಸಾಮಾಗ್ರಿಗಳು
    * ಹಸಿ ಬಟಾಣಿ – 1 ಕಪ್
    * ತುಪ್ಪ – 4 ಸ್ಪೂನ್
    * ಡ್ರೈಫ್ರೂಟ್ಸ್ – ಕಾಲು ಕಪ್ (ಗೋಡಂಬಿ, ಬಾದಾಮಿ, ದ್ರಾಕ್ಷಿ)
    * ಗಸಗಸೆ – 1 ಸ್ಪೂನ್
    * ಬೆಲ್ಲ – ಅರ್ಧ ಕಪ್
    * ತೆಂಗಿನ ತುರಿ – ಅರ್ಧ ಕಪ್
    * ಹಾಲು – 1 ಕಪ್
    * ಏಲಕ್ಕಿ – 2

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪ ಹಾಕಿ ಬಟಾಣಿಯನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಬೇಕಾದಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
    * ಈಗ ಬಟಾಣಿಯನ್ನು ತಣ್ಣಗಾಗಲು ಬಿಡಿ.
    * ಈ ವೇಳೆ ಗಸಗಸೆ, ತುಪ್ಪದಲ್ಲಿ ಡ್ರೈಫ್ರೂಟ್ಸ್ ಅನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ.
    * ಬಳಿಕ ಬೇಯಿಸಿದ ಬಟಾಣಿಯನ್ನು ಸ್ವಲ್ಪ ಭಾಗ ಮಿಕ್ಸಿ ಜಾರ್‍ಗೆ ಹಾಕಿಕೊಳ್ಳಿ.
    * ಅದೇ ಜಾರ್‍ಗೆ ಹುರಿದ ಗಸಗಸೆ, ತೆಂಗಿನತುರಿ, ಏಲಕ್ಕಿ, 2 ಬಾದಾಮಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
    * ಈಗ ಉಳಿದ ಬಟಾಣಿಗೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಕುದಿ ಬಂದ ಮೇಲೆ ಪೇಸ್ಟ್ ಮಾಡಿದ ಮಿಶ್ರಣವನ್ನು ಸೇರಿಸಿಕೊಳ್ಳಿ.
    * ಈಗ ಕುದಿಯುತ್ತಿರುವಾಗ ಕಾಯಿಸಿದ ಹಾಲು, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ತುಪ್ಪವನ್ನು ಸೇರಿಸಿ ಕೆಳಗಿಳಿಸಿದ್ರೆ ಸವಿಯಲು ಹಸಿರು ಬಟಾಣಿ ಪಾಯಸ ರೆಡಿ.
    (ತುಂಬಾ ನೀರಿನಂತೆ ಮಾಡಿಕೊಳ್ಳಬೇಡಿ)