Tag: ಹಸಿರು

  • ಹಸಿರು ಬಣ್ಣಕ್ಕೆ ಬದಲಾದ ಬೆಳಗಾವಿಯ ಸುವರ್ಣ ಸೌಧ

    ಹಸಿರು ಬಣ್ಣಕ್ಕೆ ಬದಲಾದ ಬೆಳಗಾವಿಯ ಸುವರ್ಣ ಸೌಧ

    ಬೆಳಗಾವಿ: ಇಷ್ಟು ದಿನ ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಜಿಲ್ಲೆಯ ಸುವರ್ಣ ಸೌಧದ ಬಣ್ಣ ಬದಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುವರ್ಣ ಸೌಧ ಹಸಿರು ಸೌಧವಾಗಿ ಮಾರ್ಪಟ್ಟಿದೆ.

    ಇಡೀ ಕಟ್ಟಡ ಸಂಪೂರ್ಣವಾಗಿ ಹಸಿರು ಬಣಕ್ಕೆ ತಿರುಗಿದೆ. ಇಷ್ಟಾದರು ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವರ್ಷಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಸೌಧದ ನಿರ್ವಹಣೆ ನಡೆಯುತ್ತದೆ. ಆದರೆ ಶ್ವೇತ ಬಣ್ಣದ ಸೌಧದ ಹಸಿರು ಬಣ್ಣಕ್ಕೆ ತಿರುಗಿದರು ಯಾರೊಬ್ಬರೂ ಇತ್ತ ಸುಳಿದಿಲ್ಲ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.

    ಸುವರ್ಣ ಸೌಧದ ಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಕಟ್ಟಡ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಹೀಗಾಗಿದೆ. ಮಳೆ ನಿಂತ ಮೇಲೆ ಕ್ಲೀನ್ ಮಾಡಿಡುತ್ತೀವಿ ಅಂತಾರೆ ಎಂದು ಸುವರ್ಣ ಸೌಧ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜಿ. ಧರಣಿ ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಸುವರ್ಣ ಸೌಧ ಹಸಿರು ಬಣ್ಣಕ್ಕೆ ತಿರುಗಿದ್ದು, ಒಳಗೆ ಎಲ್ಲೆಲ್ಲಿ ಎನಾಗಿದಿಯೋ ಅದನ್ನು ಅಧಿಕಾರಿಗಳೇ ನೋಡಿ ಹೇಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಯಾಣಿಕರ ಜೊತೆ ರೈಲಿನಲ್ಲಿ ಪ್ರಯಾಣಿಸಿದ ಹಸಿರು ಹಾವು!

    ಪ್ರಯಾಣಿಕರ ಜೊತೆ ರೈಲಿನಲ್ಲಿ ಪ್ರಯಾಣಿಸಿದ ಹಸಿರು ಹಾವು!

    ಮುಂಬೈ: ಇಲ್ಲಿನ ಸ್ಥಳೀಯ ರೈಲೊಂದರ 2 ನೇ ಕಂಪಾರ್ಟ್ ಮೆಂಟ್‍ನಲ್ಲಿ ಕೈ ಹಿಡಿದುಕೊಳ್ಳುವ ಹಾಂಗಿಂಗ್ ಸ್ಟಾಂಡ್ ಗೆ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಪ್ರಯಾಣಿಕರ ಜೊತೆ ರೈಲಿನಲ್ಲಿ ಸಂಚರಿಸಿದೆ.

    ಸಾಮಾನ್ಯವಾಗಿ ರೈಲುಗಳಲ್ಲಿ ಪ್ರಯಾಣಿಕರು ಹಾಂಗಿಂಗ್ ಸ್ಟಾಂಡ್ ಅನ್ನು ಹಿಡಿದುಕೊಂಡು ನಿಂತಿರುತ್ತಾರೆ. ಇದೀಗ ಆ ಸ್ಟಾಂಡ್‍ನಲ್ಲಿ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಹಾವು ಬೆಳಗ್ಗೆ 8.33 ಥತ್ವಾಲಾ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂಬ ಸ್ಥಳೀಯ ರೈಲಿನಲ್ಲಿ ಇದ್ದು, ರೈಲು ಥಾಣೆಗೆ ತಲುಪುತ್ತಿದ್ದಂತೆ ಕಾಣಿಸಿಕೊಂಡಿದೆ.

    ಈ ಅವಘಡದಿಂದ ಜನರೆಲ್ಲರೂ ದಿಗಿಲುಗೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ಹಾವನ್ನು ಕಂಡು ಬೆದರಿ ಕಿರುಚಿದ್ದಾರೆ. ಬಳಿಕ ರೈಲ್ವೇ ಪೊಲೀಸರನ್ನು ಕಾಪಾಡುವಂತೆ ಒತ್ತಾಯಿಸಿದರು. ಹಾಗಾಗಿ ರೈಲು ಥಾಣೆಗೆ ಬರುತ್ತಿದ್ದಂತೆ ರೈಲ್ವೇ ಪೊಲೀಸರು 2 ನೇ ಕಂಪಾರ್ಟ್‍ಮೆಂಟ್ ನಲ್ಲಿದ್ದ ಜನರನ್ನು ಕಾಪಾಡಿದ್ದಾರೆ. ನಂತರ ಭದ್ರತೆ ಮೇರೆಗೆ ಆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

    ಮತ್ತೆ ಪ್ರಯಾಣ ಮುಂದುವರಿಸಬೇಕಾದ ಪ್ರಯಾಣಿಕರು ರೈಲನ್ನು ಹತ್ತಿ, ಮತ್ತೆ ಯಾವುದಾದರೂ ಸರಿಸೃಪಗಳು ಇರಬಹುದೆಂದು ಪರೀಕ್ಷಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸ್ಥಳೀಯ ರೈಲು ಸಮಯಕ್ಕೆ ಸರಿಯಾಗಿ ಸ್ಥಳವನ್ನು ಸೇರಲು ವಿಳಂಬವಾಗಿದೆ. ಸದ್ಯ ಈ ಹಸಿರು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೇಂದ್ರ ರೈಲ್ವೇ ಮುಖ್ಯ ಅಧಿಕಾರಿಯಾದ ಸುನೀಲ್ ಉದಾಸಿ, 1ನೇ ಹಾಗೂ 2 ಬಾರಿ ರೈಲು ಪ್ರಯಾಣಿಸಿದಾಗ ಈ ಅವಘಡ ಸಂಭವಿಸಿರಲಿಲ್ಲ. 3 ನೇ ಬಾರಿ ಸಂಭವಿಸಿದ್ದು, ಇದು ಯಾರಾದೋ ಕೈವಾಡವಿರಬಹುದು ಎಂಬ ಅನುಮಾನವಿದೆ. ಹಾವು ಹೇಗೆ ರೈಲನ್ನು ಪ್ರವೇಶಿಸಿತ್ತು ಎಂಬುದನ್ನು ವಿಡಿಯೋ ನೋಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಪ್ರವಾಸಿಗರ ಪಾಲಿನ ಸ್ವರ್ಗವಾದ ಚಾರ್ಮಾಡಿ ಘಾಟ್ – ವಿಡಿಯೋ ನೋಡಿ

    ಪ್ರವಾಸಿಗರ ಪಾಲಿನ ಸ್ವರ್ಗವಾದ ಚಾರ್ಮಾಡಿ ಘಾಟ್ – ವಿಡಿಯೋ ನೋಡಿ

    ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತು ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಹಾದಿಯುದ್ದಕ್ಕೂ ದಟ್ಟ ಮಂಜಿನ ಆಟ. ಹಸಿರ ವನರಾಶಿ ನಡುವಿಂದ ಸಾಗೋ ಬೆಳ್ಮುಗಿಲ ಸಾಲು. ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಸೊಬಗು ಆವರಿಸಿಕೊಂಡಿದೆ.

    ನಾಲ್ಕೈದು ದಿನದ ಹಿಂದೆ ಮಳೆಯಿಂದಾಗಿ ರಾಡಿಯಾಗಿದ್ದ ಚಾರ್ಮಾಡಿ ಇದೀಗ ತನ್ನ ಸೊಬಗಿನಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಆಗಾಗ್ಗೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟ್ ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

    ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಹಸಿರೊದ್ದು ಕಂಗೊಳಿಸುತ್ತಿದ್ದು, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯುವ ಝರಿಗಳು ಮನಕ್ಕೆ ಮುದ ನೀಡುತ್ತವೆ. ಮುಗಿಲು ಚುಂಬಿಸೋ ಹಸಿರು ಬೆಟ್ಟದ ಮೇಲೆಲ್ಲ ಹರಡಿರುವ ಹಿಮದ ರಾಶಿ. ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನ ಹೊರಸೂಸೋ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ ಮಲೆನಾಡಲ್ಲೊಂದು ಹೊಸ ಲೋಕವನ್ನೆ ಸೃಷ್ಠಿಸಿವೆ ಎಂದು ಪರಿಸರವಾದಿ ಗಿರಿಜಾಶಂಕರ್ ಹೇಳಿದ್ದಾರೆ.