Tag: ಹವಾಲ್ದಾರ್

  • ಕುಡಚಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು

    ಕುಡಚಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು

    ಚಿಕ್ಕೋಡಿ: ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಕುಡಚಿ ಪೊಲೀಸ್ ಠಾಣೆಯಲ್ಲಿ (Kuduchi Police Station) ನಡೆದಿದೆ.

    ಯಲ್ಲಪ್ಪ ಭೋಜ(46) ಮೃತ ಹವಾಲ್ದಾರ್. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಯಲ್ಲಪ್ಪ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಹಾರಾಷ್ಟ್ರದ ಸಾಂಗಲಿಯ ಭಾರತಿ ಆಸ್ಪತ್ರೆಗೆ ಕರೆದೊಯ್ದಲಾಗಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ನಿವಾಸಿಯಾದ ಹವಾಲ್ದಾರ್ ಯಲ್ಲಪ್ಪ ಅವರು ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಚೆಕ್‌ಪೋಸ್ಟ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್‌ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ

    ಯಲ್ಲಪ್ಪ ಅವರು ಕಳೆದ 9 ತಿಂಗಳಿನಿಂದ ಕುಡಚಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಹೆತ್ತವರನ್ನು, ಪಿಡಿಓ ಆಗಿರುವ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

  • 70 ವರ್ಷದ ಮಾವ, ನಿವೃತ್ತ ಸೈನಿಕನ ‘ಸ್ವಾಭಿಮಾನ’ದ ಕಥೆ ಹಂಚಿಕೊಂಡ ಬಿಲಿಯನೇರ್ ನಿತಿನ್ ಕಾಮತ್

    70 ವರ್ಷದ ಮಾವ, ನಿವೃತ್ತ ಸೈನಿಕನ ‘ಸ್ವಾಭಿಮಾನ’ದ ಕಥೆ ಹಂಚಿಕೊಂಡ ಬಿಲಿಯನೇರ್ ನಿತಿನ್ ಕಾಮತ್

    ಬೆಂಗಳೂರು: ಝಿರೋಧ (Zerodha) ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ (CEO) ಆಗಿರುವ ನಿತಿನ್ ಕಾಮತ್ (Nithin Kamath) ತಮ್ಮ ಮಾವ ಶಿವಾಜಿ ಪಾಟೀಲ್ ಅವರೊಂದಿಗಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ (Twitter) ಹಂಚಿಕೊಂಡು ಅವರ ಸ್ಫೂರ್ತಿದಾಯಕ ಜೀವನ ಶೈಲಿಯ ಬಗ್ಗೆ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

    ಮಾವನಿಗೆ 70 ವರ್ಷ ವಯಸ್ಸಾಗಿದ್ದು, ಭಾರತೀಯ ಸೇನೇಯಲ್ಲಿ (Indian Army) ಹವಾಲ್ದಾರ್ (Hawaldar) ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಹುಟ್ಟೂರಾದ ಬೆಳಗಾವಿಯಲ್ಲಿ (Bealagavi) ಸ್ವಂತ ಕಿರಾಣಿ ಅಂಗಡಿಯನ್ನು ಪ್ರಾರಂಭಿಸುವ ಸಲುವಾಗಿ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದರು. ಅವರು ಭಾರತೀಯ ಸೇನೆಯಲ್ಲಿದ್ದಾಗ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹಿಮಪಾತದಿಂದಾಗಿ ತಮ್ಮ ಬೆರಳುಗಳನ್ನು ಕಳೆದುಕೊಂಡ ನಂತರ ಹವಾಲ್ದಾರ್ ಹುದ್ದೆಯಿಂದೆ ಸ್ವಯಂ ನಿವೃತ್ತಿ ಪಡೆದರು ಎಂದು ಪಾಟೀಲ್ ಅವರ ಕಿರಾಣಿ ಅಂಗಡಿಯಲ್ಲಿ ಒಟ್ಟಿಗೆ ತೆಗೆದ ಚಿತ್ರದ ಜೊತೆ ಕಾಮತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ನಿಷೇಧ

    ಮಾವನ ಜೀವನಶೈಲಿಯ ಬಗ್ಗೆ ಮಾತನಾಡುತ್ತಾ, ಅವರಿಗೆ 70 ವರ್ಷ ಆಗಿದ್ದು ದಶಕಗಳ ಹಳೇಯ ವಿಶೇಷ ಚೇತನರ ಸ್ಕೂಟರ್‌ನಲ್ಲಿ ಮಾರ್ಕೆಟ್‌ಗೆ ಹೋಗಿ ತಮ್ಮ ಅಂಗಡಿಗೆ ಬೇಕಾದ ದಿನಸಿಗಳನ್ನು ತರುತ್ತಾರೆ. ಇವರ ಸಹಾಯಕ್ಕಿರುವ ಒಂದೇ ಒಂದು ಕೈಯೆಂದರೆ ಅದು ನಮ್ಮ ಅತ್ತೆ. ಅವರು ಅಂಗಡಿ ಮತ್ತು ಮನೆಯನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಇದನ್ನೂ ಓದಿ: ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್‌

    ಜೀವನದಲ್ಲಿ ಹೇಗೆ ತೃಪ್ತರಾಗಿರಬೇಕು ಎಂಬುದಕ್ಕೆ ಮಾವ ಪರಿಪೂರ್ಣ ಉದಾಹರಣೆಯಾಗಿದ್ದಾರೆ. ಇದರಿಂದ ನಿಜವಾದ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ನಾನು ಕಷ್ಟದಲ್ಲಿದ್ದ ಸಂದರ್ಭದಲ್ಲಿ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಅನುಮತಿ ಕೇಳಿದಾಗ ಅವರು ನನಗೆ ಸರ್ಕಾರಿ ಉದ್ಯೋಗವನ್ನು ಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ – ಇನ್ನೇನಿದ್ದರೂ ಮನೆಮನೆ ಪ್ರಚಾರ

    ಅಲ್ಲದೇ ನಾನು ಕೊನೆಯವರೆಗೂ ಆರೋಗ್ಯವನ್ನು ಹೆಚ್ಚಿಸುವುದರ ಬಗ್ಗೆ ಅಥವಾ ಉತ್ತಮ ಜೀವನವನ್ನು ಹೇಗೆ ನಡೆಸುವುದು ಎಂಬುದರ ಬಗ್ಗೆ ನಾವು ಮಾತನಾಡುತ್ತೇವೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯವಾಗಿ ಇರುವುದನ್ನು ಎಂದಿಗೂ ನಿಲ್ಲಿಸಬಾರದು ಹಾಗೂ ತೃಪ್ತಿಯನ್ನು ಹೊಂದುವುದು ಇದಕ್ಕೆ ಉತ್ತರವಾಗಿದೆ. ಹಣದಿಂದ ಇದನ್ನು ಖರೀದಿಸಲು ಸಾಧ್ಯವಿಲ್ಲ. ನನ್ನ ಮಾವ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ತಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವ ಬಿಲಿಯನೇರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್