Tag: ಹವಾಲಾ ಹಣ

  • ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ – ಗೋವಿಂದ ಬಾಬು ವಿರುದ್ಧವೇ ಇಡಿಗೆ ದೂರು

    ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ – ಗೋವಿಂದ ಬಾಬು ವಿರುದ್ಧವೇ ಇಡಿಗೆ ದೂರು

    ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ (BJP MLA Ticket Scam) ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ (Govind Babu Poojari) ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ED) ದೂರು ದಾಖಲಾಗಿದೆ.

    5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ (Nataraj Sharma) ದೂರು ನೀಡಿದ್ದಾರೆ.  ಇದನ್ನೂ ಓದಿ: ರಾಜ್ಯಕ್ಕೆ 3ನೇ ವಂದೇ ಭಾರತ್ ರೈಲು – ಇಂದು ಪ್ರಾಯೋಗಿಕ ಸಂಚಾರ

    ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ನಟರಾಜ ಶರ್ಮಾ, ಗೋವಿಂದ ಪೂಜಾರಿ ಅವರು ನೀಡಿರುವ ದೂರಿನಲ್ಲಿ ನಗದು ರೂಪದಲ್ಲಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಟಿಕೆಟ್‌ಗೆ 5 ಕೋಟಿ ರೂ. ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ. ಮುಂಬೈನಲ್ಲಿ (Mumbai) ವ್ಯವಹಾರ ಮಾಡಿಕೊಂಡಿದ್ದ ಅವರಿಗೆ 5 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ನೀಡಬಾರದು ಎನ್ನುವುದು ಅವರಿಗೆ ತಿಳಿದಿರಬೇಕಿತ್ತು. ಇದು ಹವಾಲಾ ಹಣ ಎಂಬ ದೃಷ್ಟಿಯಿಂದ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಈ ವಂಚನೆ ಪ್ರಕರಣದಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಸಾಲವಾಗಿಯೇ ಹಣ ಪಡೆದಿದ್ದರೂ ಸಾಲ ಪಡೆದ ಉದ್ದೇಶವೇ ಬೇರೆಯಾಗಿದೆ. ನಗದು ರೂಪದಲ್ಲಿ ಇಷ್ಟೊಂದು ವ್ಯವಹಾರ ನಡೆಸಿದ್ದು ಹೇಗೆ? ಇಡಿ ಈ ವಿಚಾರವಾಗಿ ತನಿಖೆ ಮಾಡಬೇಕೆಂದು ಕೋರಿ ದೂರು ನೀಡಿದ್ದೇನೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕುಸುಗಲ್ ರಸ್ತೆಯ ಆಕ್ಸ್‍ಫರ್ಡ್ ಕಾಲೇಜ್ ಬಳಿ ದಾಳಿ ಮಾಡಿದ ಪೊಲೀಸರು, ನಗದು ಸಮೇತ ಕಾರು ವಶಡಿಸಿಕೊಂಡಿದ್ದಾರೆ.

    ವಿಜಯಪುರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ವಿಜಯಪುರದ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟ್ಯಾಂಡ್ ಹತ್ತಿರದ ನಿವಾಸಿಗೆ ಸೇರಿದ ಕಾರು ಇದಾಗಿದ್ದು, ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34)ಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್

    ಚಾಲಕನಿಂದ 82,75,100 ರೂಪಾಯಿ ನಗದು ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಮಹಾನಗರ ಪಾಲಿಕೆ ಚುನಾವಣೆಗಾಗಿ ಸಾಗಿಸುತ್ತಿದ್ದ ಹಣವೋ ಅಥವಾ ಹವಾಲಾ ಹಣವೋ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ.

  • ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟಿನ ಘಾಟು ದಿನೇದಿನೇ ಹೆಚ್ಚಾಗ್ತಾ ಇದೆ. ಸಿಸಿಬಿ ವಿಚಾರಣೆ ವೇಳೆ ನಟಿಯರಾದ ಸಂಜನಾ ಮತ್ತು ನಟಿ ರಾಗಿಣಿ ದೊಡ್ಡದೊಡ್ಡವರ ಹೆಸರು, ರಾಜಕಾರಣಿಗಳ ಮಕ್ಕಳ ಹೆಸರು, ವಿವಿಐಪಿಗಳ ಹೆಸರುಗಳನ್ನ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಚಂದನವನದ ಮೂರು ಸ್ಟಾರ್ ನಟರು ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಒಂದ್ಕಡೆ ವಿಚಾರಣೆ ಎದುರಿಸುತ್ತಿದ್ದಾರೆ. ಇªಬ್ಬರ ಹೇಳಿಕೆಯಿಂದ ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಸ್ಟಾರ್‍ಗಳಿಗೆ ಆತಂಕ ಹೆಚ್ಚಾಗಿದೆ. ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಬಜೆಟ್ ಹೀರೋಗಳಿಗೆ ಡ್ರಗ್ಸ್ ಜಾಲ ಉರುಳಾಗುವ ಸಾಧ್ಯತೆ ಇದೆ. ರಾಗಿಣಿ, ಗಲ್ರಾಣಿ ಅರೆಸ್ಟ್ ಆಗಿರೋ ಬೆನ್ನಲ್ಲೇ ಈಗ ಡ್ರಗ್ಸ್ ಜಾಲದ ಚೆಂಡು ಈ ಮೂವರು ಸ್ಟಾರ್ ಹೀರೋಗಳ ಅಂಗಳದಲ್ಲಿದೆ ಅಂತ ತಿಳಿದು ಬಂದಿದೆ.

    ಯಾರು ಮೂವರು ನಟರು?: ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಮೂವರು ನಟರು ಪದೇ ಪದೇ ಶ್ರೀಲಂಕಾದ ಕ್ಯಾಸಿನೋಗೆ ಭೇಟಿ ನೀಡಿದ್ದಾರೆ. ಈ ನಟರ ಓಡಾಟದ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಇದರ ನಡುವೆ, ಹಣಕಾಸು ಅವ್ಯವಹಾರ, ಹವಾಲ ದಂಧೆ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ಕಾರಣದಿಂದಾಗಿ, ಎನ್‍ಸಿಬಿ, ಸಿಸಿಬಿ ಜೊತೆಗೆ ಈಗ ಜಾರಿ ನಿರ್ದೇಶನಾಲಯವೂ ಎಂಟ್ರಿಯಾಗಲು ಸಿದ್ಧತೆ ನಡೆಸಿದೆ. ಸ್ಯಾಂಡಲ್‍ವುಡ್ ನಲ್ಲಿ ಹವಾಲಾ ಹಣ ಸದ್ದು ಮಾಡುತ್ತಿದೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಗಿಣಿ, ಸಂಜಾನಾಗೆ ಶಾಕ್- ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಎಂಟ್ರಿ

  • ಸ್ವಚ್ಛ್ ಧನ್: ವಿಶೇಷ ಸಾಫ್ಟ್ ವೇರ್ ಬಳಸಿ ಐಟಿ ಶೋಧ- 18 ಲಕ್ಷ ಖಾತೆದಾರರಿಗೆ ನೋಟಿಸ್

    ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.

    ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.

    ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.