Tag: ಹವಾಲಾ ದಂಧೆ

  • ಹವಾಲಾ ದಂಧೆ – ಕಾರಿನಲ್ಲಿ 2 ಕೋಟಿ ರೂ. ಪತ್ತೆ, 8 ಮಂದಿ ಅರೆಸ್ಟ್

    ಹವಾಲಾ ದಂಧೆ – ಕಾರಿನಲ್ಲಿ 2 ಕೋಟಿ ರೂ. ಪತ್ತೆ, 8 ಮಂದಿ ಅರೆಸ್ಟ್

    ಲಕ್ನೋ: ನೋಯ್ಡಾದಲ್ಲಿ (Noida) ಕಾರೊಂದರಲ್ಲಿ 2 ಕೋಟಿಗೂ ಹೆಚ್ಚು ಹಣವನ್ನು ಸಾಗಿಸುತ್ತಿದ್ದ ಹಿನ್ನೆಲೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಹಣವನ್ನು ವಶಪಡೆಸಿಕೊಂಡಿದ್ದಾರೆ.

    ನಗದು ಹವಾಲಾ ದಂಧೆಯದ್ದಾಗಿರಬಹುದು (Hawala Business) ಎಂದು ಶಂಕಿಸಲಾಗಿದ್ದು, ವಶಕ್ಕೆ ಪಡೆದ ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಅಹಮದಾಬಾದ್‍ನ ಜಯಂತಿ ಭಾಯ್, ದೆಹಲಿಯ ಸಂದೀಪ್ ಶರ್ಮಾ, ದೆಹಲಿಯ ವಿನಯ್ ಕುಮಾರ್, ವಾಯುವ್ಯ ಬಂಗಾಳದ ಅಭಿಜೀತ್ ಹಜ್ರಾ, ನೋಯ್ಡಾ ಸೆಕ್ಟರ್ -56 ರ ರೋಹಿತ್ ಜೈನ್, ದೆಹಲಿಯ ವಿಪುಲ್, ಮುಂಬೈನ ಮಿನೇಶ್ ಶಾ ಮತ್ತು ಇಂದೋರ್‌ನ ಅನುಜ್ ಎಂದು ಗುರುತಿಸಲಾಗಿದೆ.

    ಪೊಲೀಸರು ಹಣ ವಶಪಡಿಸಿಕೊಳ್ಳುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹವಾಲಾ ದಂಧೆಗೆ 2 ಕೋಟಿ ರೂ. ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದ್ದು, ಇದೀಗ ಬಂಧಿತರೆಲ್ಲರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ- ಸುಪ್ರೀಂನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಹಿನ್ನಡೆ

    ಹವಾಲಾ ದಂಧೆ ನಡೆಸುತ್ತಿರುವ ಕೆಲವರು ಸೆಕ್ಟರ್-55ರಲ್ಲಿ ಡೀಲ್ ಮಾಡಲು ಬರುತ್ತಿದ್ದಾರೆ. ಇವರ ಬಳಿ ಸಾಕಷ್ಟು ಹಣವಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರ ತಂಡ ಕಾರನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್‌

    Live Tv
    [brid partner=56869869 player=32851 video=960834 autoplay=true]

  • ಹವಾಲಾ ದಂಧೆ – 1.27 ಕೋಟಿ ವಶಕ್ಕೆ, ಮೂವರು ಅರೆಸ್ಟ್

    ಹವಾಲಾ ದಂಧೆ – 1.27 ಕೋಟಿ ವಶಕ್ಕೆ, ಮೂವರು ಅರೆಸ್ಟ್

    ಹೈದರಾಬಾದ್: ಹವಾಲಾ ದಂಧೆಯನ್ನು (Hawala Racket) ಭೇದಿಸಿದ ಹೈದರಾಬಾದ್ (Hyderabad) ಪೊಲೀಸರು, 1.27 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

    ನಾರಾಯಣಗುಡ ಪೊಲೀಸ್ ಠಾಣಾ (Narayanguda police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮನ್ನೆ ಶ್ರೀನಿವಾಸ್ (53), ವಿಶ್ವನಾಥ್ ಚೆಟ್ಟಿ (45) ಮತ್ತು ಕೆ. ಫಣಿಕುಮಾರ್ ರಾಜು (42) ಎಂದು ಗುರುತಿಸಲಾಗಿದ್ದು, ಮೂವರೂ ಹೈದರಾಬಾದ್‍ನವರಾಗಿದ್ದಾರೆ.

    ಹವಾಲಾ ದಂಧೆ ಬಗ್ಗೆ ಗೌಪ್ಯ ಮಾಹಿತಿ ದೊರೆತ ಕಮಿಷನರ್ ಕಾರ್ಯಪಡೆ, ಕೇಂದ್ರ ವಲಯ ತಂಡದ ಸಬ್ ಇನ್ಸ್‍ಪೆಕ್ಟರ್ ಸಾಯಿ ಕಿರಣ್ ಮತ್ತು ಅವರ ತಂಡವು ಹಿಮಾಯತ್ ನಗರದ ಲಿಬರ್ಟಿ ಎಕ್ಸ್ ರಸ್ತೆಯ ರೇಮಂಡ್ ಶೋರೂಂ ಎದುರು ಬಿಳಿ ಬಣ್ಣದ ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಹಾಕಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆರೋಪಿ ಕೆ. ಫಣಿಕುಮಾರ್ ರಾಜು ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ವೇಳೆ ವಾಹನವನ್ನು ಪರಿಶೀಲನೆ ನಡೆಸಿದ ವೇಳೆ ಲೆಕ್ಕಕ್ಕೆ ಸಿಗದ 1.27 ಕೋಟಿ ರೂ. ಪತ್ತೆಯಾಗಿದೆ. ಇದನ್ನೂ ಓದಿ: ಡಯಟ್ ಕಾರಣದಿಂದಾಗಿ ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ನಿಧನ?

    POLICE JEEP

    ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ, ಬಂಧಿತ ಆರೋಪಿ ಮನ್ನೆ ಶ್ರೀನಿವಾಸ್ ಬಳಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡಿದ್ದು, ಕೆ. ಫಣಿಕುಮಾರ್ ಅವರಿಂದ 70 ಲಕ್ಷ ರೂ. ಹಾಗೂ ಉಳಿದ 57 ಲಕ್ಷ ರೂ.ಗಳನ್ನು ಸಿ. ವಿಶ್ವನಾಥ್ ಚೆಟ್ಟಿ ಎಂಬ ಮತ್ತೊಬ್ಬ ವ್ಯಕ್ತಿಯಿಂದ ವಸೂಲಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

    ಈ ಆಧಾರಗಳ ಮೇಲೆ ಅಧಿಕಾರಿಗಳು ಮನ್ನೆ ಶ್ರೀನಿವಾಸ್ ಮತ್ತು ವಿಶ್ವನಾಥ್ ಚೆಟ್ಟಿಯನ್ನು ಸಹ ಬಂಧಿಸಿದ್ದು, ಈ ಇಬ್ಬರು ಹಣದ ಲೆಕ್ಕವನ್ನು ನೀಡವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಮತ್ತು ನಗದನ್ನು ಮುಂದಿನ ಕ್ರಮಕ್ಕಾಗಿ ನಾರಾಯಣಗುಡ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]