Tag: ಹವಾನಿಯಂತ್ರಕ

  • ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ.

    ನಗರದ ಗಾಂಧಿವೃತ್ತದ ಬಳಿಯಿರುವ ಅಮಿತ್ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಬಟ್ಟೆ ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

    ಅಮಿತ್ ಶಾ ಎಂಬುವವರಿಗೆ ಸೇರಿದ ಈ ಅಂಗಡಿಯ ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿದ್ದು ಬಟ್ಟೆ, ಪೀಠೋಪಕರಣ ಸಂಪೂರ್ಣ ಕರಕಲಾಗಿವೆ. ಬೇಸಿಗೆ ಹಿನ್ನೆಲೆ ರಾತ್ರಿ ವೇಳೆ ಹಾಕಿದ್ದ ಎಸಿಯನ್ನ ಹಾಗೇ ಬಿಡಲಾಗಿತ್ತು. ಇದರಿಂದಲೇ ಶಾಟ್ ಸರ್ಕ್ಯೂಟ್‍ ಆಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಬೆಂಗಳೂರು: ಎಸಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನೆಲಮಂಗಲ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಗಢ ಸಂಭವಿಸಿದೆ.

    ಬೆಳಗ್ಗೆ ಎಂದಿನಂತೆ ಬ್ಯಾಂಕ್‍ಗೆ ಬಂದ ಸಿಬ್ಬಂದಿ ಎಸಿ ಆನ್ ಮಾಡಿದ್ದಾರೆ. ಆನ್ ಆಗುತ್ತಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಶಬ್ಧ ಬಂದಿದೆ. ತಕ್ಷಣ ಬ್ಯಾಂಕಿನಲ್ಲಿದ್ದ ಸಿಬ್ಬಂದಿ ಹೊರಗೆ ಬಂದು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

    ಆಗ್ನಿಶಾಮಕದ ಸಿಬ್ಬಂದಿ ಬರುವಷ್ಟರಲ್ಲಿ ಬ್ಯಾಂಕಿನಲ್ಲಿದ್ದ ಪೀಠೊಪಕರಣಗಳು, ಕಂಪ್ಯೂಟರ್‍ಗಳು ಹಾಗೂ ಹಲವಾರು ದಾಖಲೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬ್ಯಾಂಕಿಗೆ ಆವರಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬರ ಕೈಗೆ ಗಾಯವಾಗಿದೆ.

    ಬ್ಯಾಂಕಿನಲ್ಲಿದ್ದ ಅನೇಕ ದಾಖಲೆಗಳು ಸುಟ್ಟಿ ಹೋಗಿದ್ದು, ಸ್ಟ್ರಾಂಗ್ ರೂಂನಲ್ಲಿರುವ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಅದನ್ನು ಬ್ಯಾಂಕಿನ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

    ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಾಗಿದೆ.