Tag: ಹವಮಾನ

  • ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (JamaKhandi) ತಾಲೂಕಿನ ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ನೆಲಕ್ಕುರುಳಿದೆ.

    ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೇಶವ್ ಜಾಧವ್, ಅನೀಲ್ ಬಬಲೇಶ್ವರ, ಉಮೇಶ್ ಜಾಧವ್, ಶಿವಾಜಿ ಜಾಧವ್ ಎಂಬುವವರ ಒಣದ್ರಾಕ್ಷಿ ಘಟಕಗಳಿಗೆ ಗಾಳಿ ಸಹಿತ ಮಳೆಯಿಂದ ಹಾನಿ ಆಗಿದೆ. ಹಾಗೆಯೇ ತೊದಲಬಾಗಿ ಗ್ರಾಮದ ಅಣ್ಣಪ್ಪ ಶಿರಹಟ್ಟಿ ಎನ್ನುವವರ ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಗಾಳಿ ಹೊಡೆತಕ್ಕೆ ಸಿಕ್ಕು ನೆಲಕ್ಕಪ್ಪಳಿಸಿದೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

    ಜಿಲ್ಲೆಯಲ್ಲಿ ಒಂದು ಕಡೆಗೆ ಬೇಸಿಗೆ ಬಿರುಬಿಸಿಲು ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಮತ್ತೊಂದೆಡೆ ತಾಪಮಾನ ಹೆಚ್ಚಾಗಿ ಅಕಾಲಿಕ ಮಳೆ ಆಗುತ್ತಿದ್ದು, ಇದೀಗ ಮಳೆಯ ಜೊತೆ ಗಾಳಿ ಬೀಸುವುದು ಬೆಳೆಗಳಿಗೆ ಕಂಟಕವಾಗುತ್ತಿದೆ. ಗಾಳಿ ಹಾಗೂ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

  • ವಿದ್ಯಾಕಾಶಿ ಧಾರವಾಡಕ್ಕೆ ವರುಣನ ಸ್ಪರ್ಶ – ಮೊದಲ ಮಳೆಗೆ ಕಾಮಣ್ಣನ ಕಣ್ಣೀರು ಎಂದ ಜನ

    ವಿದ್ಯಾಕಾಶಿ ಧಾರವಾಡಕ್ಕೆ ವರುಣನ ಸ್ಪರ್ಶ – ಮೊದಲ ಮಳೆಗೆ ಕಾಮಣ್ಣನ ಕಣ್ಣೀರು ಎಂದ ಜನ

    ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ (Dharwad) ವರ್ಷದ ಮೊದಲ ಮಳೆ ಸುರಿದಿದೆ. ಆ ಮೂಲಕ ಬಿಸಿಲಿನಿಂದ ಕಂಗೆಟ್ಟಿದ ಜನತೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ.

    ಧಾರವಾಡದಲ್ಲಿ ಮಂಗಳವಾರ ತಡರಾತ್ರಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಹೋಳಿ ಹುಣ್ಣಿಮೆ ನಂತರ ಮಳೆರಾಯನ ಆಗಮನವಾಗುವುದು ಸಹಜ. ಅದೇ ರೀತಿ ಮಂಗಳವಾರ ತಡರಾತ್ರಿ ಧಾರವಾಡಕ್ಕೆ ಮಳೆರಾಯನ ಆಗಮನವಾಗಿದೆ. ಇದನ್ನೂ ಓದಿ: ದಿನದ ಖರ್ಚಿಗೆ 5,000 ರೂ.ಗೆ ಡಿಮ್ಯಾಂಡ್‌ – ಪತ್ನಿಯಿಂದ ನಿತ್ಯ ಕಿರುಕುಳ, ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ

    ಜನರು ಈ ಮಳೆಯನ್ನು ಕಾಮಣ್ಣ ಕಣ್ಣೀರು ಎಂದು ನಂಬುತ್ತಾರೆ. ಕಾಮಣ್ಣನ ದಹನದ 5 ದಿನಗಳಲ್ಲಿ ಮಳೆ ಬಂದರೆ ಅದು ಕಾಮಣ್ಣನ ಕಣ್ಣೀರು ಎಂದು ಇಲ್ಲಿನ ಜನರು ಭಾವಿಸುತ್ತಾರೆ. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

  • ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    ಬೆಂಗಳೂರು : ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಚಳಿಯಿದೆ. ಜನವರಿ ಕೊನೆಯವರೆಗೂ ಕೊರೆಯುವ ಚಳಿಯ (Winter) ಎಫೆಕ್ಟ್ ತಟ್ಟಿಲಿದೆ ಎಂದು ಹವಾಮಾನ‌ (Weather) ಇಲಾಖೆ ಮುನ್ಸೂಚನೆ ನೀಡಿದೆ.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಈಗಾಗಲೇ ರಾಜ್ಯದ ಜನ ಚಳಿಗೆ ಥಂಡಾ ಹೊಡೆದಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಅಥವಾ 10 ದಿನಗಳ ಕಾಲ ದಟ್ಟ ಮಂಜು ಇರಲಿದೆ. ಇದರ ನಡುವೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200 ಮೀ.ವರೆಗೆ ಶುಕ್ರವಾರ ವಿಪರೀತ ಮಂಜು ಇರಲಿದೆ. ಅದರಲ್ಲೂ ಯಲಹಂಕ, ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ ಹೆಚ್ಚಿತ್ತು. ಹೀಗಾಗಿ ಗುರುವಾರ‌ ಮಂಜು ಕವಿದ ವಾತಾವರಣದ ಮುನ್ನೆಚ್ಚರಿಕೆ ಕೊಡಲಾಗಿದೆ.

    ಮಂಜಿನಲ್ಲಿ ಪ್ರಮುಖವಾಗಿ 3 ವಿಧಗಳಿವೆ. ಹಗುರ ಮಂಜು ಅಂದರೆ 800-500 ಮೀ.ವರೆಗೆ ಇರುತ್ತದೆ. 500-200 ಮೀ. ಇದ್ದರೇ ಅದನ್ನು ಮಧ್ಯಮ ಮಂಜು ಎನ್ನುತ್ತೇವೆ. 200 ಮೀ. ಕೆಳಗೆ ಹೋದರೆ ದಟ್ಟ ಮಂಜು ಎನ್ನುತ್ತೇವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗುರ ಮತ್ತು ಮಾಧ್ಯಮ ಮಂಜನ್ನು ಕಾಣುತ್ತೇವೆ. ಆದರೆ ಈ ಬಾರಿ 200 ಮೀ. ಎಂದರೆ ದಟ್ಟ ಮಂಜಿನ ಮುನ್ಸೂಚನೆಯನ್ನು ಹವಾಮಾನ ತಜ್ಞ ಪ್ರಸಾದ್ ನೀಡಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    ಈ ದಟ್ಟ ಮಂಜಿನ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಮಂಜು ಹಾಗೂ ಚಳಿಯಿಂದಾಗಿ ಕೆಲವೊಬ್ಬರಿಗೆ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೇಸ್ ಬರಬಹುದು, ಚರ್ಮ ತುರಿಕೆಯಾ ಸಾಧ್ಯತೆ ಇದೆ. ವಯಸ್ಸಾದವರಿಗೆ, ಮಕ್ಕಳಿಗೆ ನಡುಕ ಉಂಟಾಗಬಹುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 10 ಅಡಿ ದೂರದ ವ್ಯಕ್ತಿಯೂ ಕಾಣದಷ್ಟು ಮಂಜು ಆವರಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ನವದೆಹಲಿ: ಜನವರಿ 16 – 18ರ ನಡುವೆ ದೆಹಲಿಯ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬರಲಿದ್ದು, ಬಯಲು ಪ್ರದೇಶದಲ್ಲಿ -4° ತಲುಪಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಲೈವ್ ವೆದರ್ ಆಫ್ ಇಂಡಿಯಾ ಹೆಸರಿನ ಆನ್‌ಲೈನ್ ಹವಾಮಾನ (Weather) ವೇದಿಕೆಯ ಸಂಸ್ಥಾಪಕ ನವದೀಪ್ ದಹಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು ನನ್ನ ವೃತ್ತಿಜೀವನದಲ್ಲಿ ತಾಪಮಾನವು ಈ ಮಟ್ಟಕ್ಕೆ ಇಳಿಯುವುದನ್ನು ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಉತ್ತರ ಭಾರತದಲ್ಲಿ (North India) ಚಳಿಗಾಳಿಯು ಜನವರಿ 14-19ರ ಅವಧಿಯಲ್ಲಿ ಕಂಡು ಬರಲಿದ್ದು, 16-18ರ ನಡುವೆ ಗರಿಷ್ಠವಾಗಿ ಕಾಣಿಸುತ್ತದೆ. ಬಯಲು ಪ್ರದೇಶಗಳಲ್ಲಿ -4 °c ನಿಂದ +2 °c ತಾಪಮಾನ ದಾಖಲಾಗಲಿದೆ ಎಂದು ನವದೀಪ್ ದಹಿಯಾ ಹೇಳಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ

    ದೀರ್ಘಾವಧಿಯಲ್ಲಿ ಏಕ ಸಂಖ್ಯೆಯ ತಾಪಮಾನ ದೆಹಲಿಯಲ್ಲಿ ಇರಲಿದ್ದು, 2023ರ ಜನವರಿ 21ನೇ ಶತಮಾನದ ಅತ್ಯಂತ ಚಳಿಯ ದಿನಗಳಿರಬಹುದು ಎಂದು ಎಚ್ಚರಿಸಿದ್ದಾರೆ. ಉತ್ತರ ಮತ್ತು ವಾಯುವ್ಯ ಭಾರತದ ಭಾಗಗಳು ಈಗಾಗಲೇ ತೀವ್ರ ಚಳಿ ಮತ್ತು ದಟ್ಟವಾದ ಮಂಜಿನಿಂದ ಮುಚ್ಚಿಹೋಗಿವೆ. ಈ ವಾರದ ಆರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಹವಾಮಾನ ಕೇಂದ್ರದಲ್ಲಿ ಕನಿಷ್ಠ 1.9 ಡಿಗ್ರಿ ತಾಪಮಾನ ದಾಖಲಾಗಿದೆ.

    ಅದೇ ರೀತಿ ದಕ್ಷಿಣ ಭಾರತದಾದ್ಯಂತ ಶೀತದ ಪರಿಸ್ಥಿತಿಗಳು ವರದಿಯಾಗಲಿವೆ. ಹವಾಮಾನ ಅಧಿಕಾರಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರದಲ್ಲಿ ಈ ಶೀತ ಮತ್ತು ಮಂಜಿನ ಪರಿಸ್ಥಿತಿಗಳು ರೈಲು ಮತ್ತು ವಾಯು ಸಂಚಾರಕ್ಕೆ ಅಡ್ಡಿಪಡಿಸಿವೆ, ಪ್ರತಿದಿನ ಡಜನ್‌ಗಟ್ಟಲೆ ರೈಲುಗಳು ವಿಳಂಬವಾಗುತ್ತವೆ, ವಿಮಾನಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ನವದೆಹಲಿ: ಬುಧವಾರ ಮತ್ತೆ ಉತ್ತರ ಭಾರತದಲ್ಲಿ ಮಂಜಿನ (Fog) ದಟ್ಟನೆ ಹಾಗೂ ತೀವ್ರ ಚಳಿ ಹೆಚ್ಚಾಗಿದ್ದು, ಈ ವೇಳೆ ದೆಹಲಿಯ (New Delhi) ಸುಮಾರು 100 ವಿಮಾನಗಳ ವೇಳೆಯನ್ನು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

    ಈ ಬಗ್ಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿ, 3 ದಿನಗಳಿಂದ ಉಂಟಾಗುತ್ತಿರುವ ಹವಮಾನ (Weather) ವೈಪರೀತ್ಯದಿಂದಾಗಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು (Flight) ವಿಳಂಬವಾಗಿ ಬಂದಿದೆ. ಕೆಲವು ವಿಮಾನಗಳ ಮಾರ್ಗವನ್ನು ಬದಲಾಗಿದೆ ಎಂದು ತಿಳಿಸಿದರು.

    ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರಿಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಕಳಪೆ ಗೋಚರತೆಯಿಂದಾಗಿ ಬುಧವಾರ ಮತ್ತೊಮ್ಮೆ ವಿಮಾನ ಸಂಚಾರವನ್ನು ಅಡ್ಡಿಪಡಿಸಿತು.

    ದಟ್ಟವಾದ ಮಂಜು ಗೋಚರತೆಯಿಂದಾಗಿ ಮಂಗಳವಾರ ಸುಮಾರು 6 ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ

    ಈ ಹಿನ್ನೆಲೆಯಲ್ಲಿ ವಿಸ್ತಾರಾ, ಸ್ಪೈಸ್‌ಜೆಟ್ ಮತ್ತು ಇಂಡಿಗೋ ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿತ್ತು. ದೆಹಲಿಯಲ್ಲಿ ಮುಂಜಾನೆಯ ಮಂಜಿನಿಂದಾಗಿ ಭಾರೀ ತೊಂದರೆಗಿದೆ. ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆ

    ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆಯಾಗಲಿದೆ. ಈ ಮಳೆ(Rain) ಎದುರಿಸಲು ಜನ ಸಿದ್ಧರಾಗಬೇಕಿದೆ ಎಂದು ಹವಾಮಾನ (Weather) ತಜ್ಞ ಪ್ರಸಾದ್ ಎಚ್ಚರಿಕೆ ನೀಡಿದರು.

    ಕಳೆದೊಂದು ವಾರದಿಂದ ಮಳೆಗೆ ತತ್ತರಿಸಿರುವ ಬೆಂಗಳೂರಲ್ಲಿ(Bengaluru) ಇನ್ನೂ 3 ತಿಂಗಳ ಕಾಲ ಮುಂದುವರಿಯಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ನವೆಂಬರ್‌ವರೆಗೂ ಮಳೆಯಾಗಲಿದೆ. ಒಟ್ಟಾರೆಯಾಗಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆ. 1 ರಿಂದ ಇದುವರೆಗೂ 211 ಎಂ.ಎಂ ಮಳೆಯಾಗಿದೆ.

    ಕರಾವಳಿಗೆ ಮುಂದಿನ 5 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗಾ, ಯಾದಗಿರಿ ಭಾಗದಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿಗೆ ಇಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇದನ್ನೂ ಓದಿ: ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ – WHO

    ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರಿಗೆ ಭಾರೀ ಮಳೆ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೂರು ದಿನದ ಬಳಿಕ ಮಳೆ ಪ್ರಮಾಣದಲ್ಲಿ ಕೊಂಚ ಇಳಿಕೆ ಸಾಧ್ಯತೆಯಿದೆ. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 34 ಗಂಟೆಗಳ ಬಳಿಕ ಪತ್ತೆ

    ಬೆಂಗ್ಳೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 34 ಗಂಟೆಗಳ ಬಳಿಕ ಪತ್ತೆ

    ಬೆಂಗಳೂರು: ಕೆ.ಆರ್.ಪುರಂನಲ್ಲಿ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 34 ಗಂಟೆಗಳ ಬಳಿಕ ಪತ್ತೆಯಾಗಿದೆ.

    ಶಿವಮೊಗ್ಗ ಮೂಲದ ಟೆಕ್ಕಿ ಮಿಥುನ್ ಶುಕ್ರವಾರ ರಾತ್ರಿ ಕೆ.ಆರ್.ಪುರಂನಲ್ಲಿ ಸುರಿದ ರಣಮಳೆಗೆ ಬೈಕನ್ನು ಉಳಿಸಲು ಹೋಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಈ ಪ್ರಕರಣದ ಸಂಬಂಧ ನಿನ್ನೆ ಘಟನಾ ಸ್ಥಳದಿಂದ ಕೆ.ಆರ್.ಪುರದ ಸೀಗೆಹಳ್ಳಿ ಕೆರೆವರೆಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದರು. ಸುಮಾರು 2 ಕಿ.ಮೀವರೆಗೂ ರಾಜಕಾಲುವೆಯಲ್ಲಿ ಶೋಧಕಾರ್ಯ ನಡೆಸಿದ್ದರೂ, ಯುವಕನ ದೇಹ ಪತ್ತೆ ಆಗಿರಲಿಲ್ಲ.

    ಇಂದು ಸಹ ಯುವಕನ ಪತ್ತೆ ಕಾರ್ಯ ಆರಂಭಿಸಿದ್ದು, ಮನೆಯಿಂದ ಕೇವಲ 500 ಮೀ. ಅಂತರದಲ್ಲೇ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಮೃತದೇಹ ಪತ್ತೆ ಆಗಿದೆ. ಮಿಥುನ್ ಮೃತದೇಹವನ್ನು ಹೊರ ತೆಗೆಯುತ್ತಿದ್ದ, ಹಾಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬೆಂಗ್ಳೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ – ಇಡೀ ದಿನ ಹುಡುಕಾಡಿದರೂ ಸಿಗದ ಶವ

    Live Tv

  • ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ನಾಗ್ಪುರ: 2015ರಲ್ಲಿ ಸಂಭವಿಸಿದಂತೆ ಈ ವರ್ಷ ಕೂಡ ದೇಶದಲ್ಲಿ ಮಾರಣಾಂತಿಕ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಇಂಟರ್  ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಹೇಳಿದೆ.

    ಐಪಿಸಿಸಿ ವರದಿ ಜಾಗತಿಕ ಮಟ್ಟದ ಅತಿ ದೊಡ್ಡ ಅವಲೋಕನ ವರದಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕೈಗಾರಿಕಾ ಕ್ರಾಂತಿ ಅವಧಿಯ ಹಿಂದಿನ ಮಟ್ಟ (ಪ್ರಿ ಇಂಡಸ್ಟ್ರಿಯಲ್ ಲೆವಲ್) ಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾದರೆ ಭಾರತಕ್ಕೆ ಭಾರೀ ಅಪಾಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಕೋಲ್ಕತಾ ಮತ್ತು ಕರಾಚಿಗೆ ಉಷ್ಣ ಅಲೆಗಳ ಅಪಾಯ ಹೆಚ್ಚಿದೆ. 2015ರಲ್ಲಿ ಸಂಭವಿಸಿದ ಮಾರಣಾಂತಿಕ ಬಿಸಿಗಾಳಿಯಂತೆ ಇಲ್ಲೂ ಮರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶೇಷವಾಗಿ ತನ್ನ ವರದಿಯಲ್ಲಿ ಐಪಿಸಿ ಹೇಳಿದೆ.

    ಸೋಮವಾರ ಈ ವರದಿ ಬಿಡುಗಡೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‍ನಲ್ಲಿ ನಡೆಯಲಿರುವ ಕಟೋವೈಸ್ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಈ ಜಾಗತಿಕ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

    2015ರಲ್ಲಿ ದೇಶವನ್ನು ಬಾಧಿಸಿದ್ದ ಬಿಸಿಗಾಳಿ ಕನಿಷ್ಠ 2,500 ಜನರನ್ನು ಬಲಿ ತೆಗೆದುಕೊಡಿತ್ತು. ಒಂದು ವೇಳೆ ಇದೇ ರೀತಿಯಲ್ಲಿ ಉಷ್ಣಾಂಶ ಹೆಚ್ಚಾದರೆ 2030- 2052ರೊಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ತಲುಪುವ ಅಪಾಯವಿದೆ ಎಂದು ಹೇಳಿದೆ. 1.5 ಡಿಗ್ರಿ ಹೆಚ್ಚಾದರೆ ಮೆಕ್ಕೆಜೋಳ, ಭತ್ತ, ಗೋಧಿ ಇನ್ನಿತರ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತದೆ.

    ಸಾವಿರಾರು ವಿಜ್ಞಾನಿಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಿದ್ದು ಈ ತಂಡದಲ್ಲಿ ಕೆಲಸ ಮಾಡಿದ್ದ ಜೊಯಾಶ್ರೀ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಜಾಗತಿಕ ತಾಪಮಾನದ ಬಿಸಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರಿಗೆ ತಟ್ಟಿದೆ. ಹವಾಮಾನ ಬದಲಾವಣೆ ಭಾರತಕ್ಕೆ ತಟ್ಟಿದ್ದು, ಕೇದರನಾಥ, ಶ್ರೀನಗರ, ಚೆನ್ನೈ, ಇತ್ತೀಚಿನ ಕೇರಳವೇ ಇದಕ್ಕೆ ಉದಾಹರಣೆ. ಈಗಾಗಲೇ ಹಲವು ಕಡೆ ಬರ ಬಂದಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಭಾರೀ ಅಪಾಯವಿದೆ ಎಂದು ಹೇಳಿದ್ದಾರೆ.

    ಕಳೆದ ಹಣಕಾಸು ವರ್ಷದಲ್ಲಿ ಉಷ್ಣ ವಿದ್ಯುತ್ ಘಟಕದಿಂದ ಭಾರತ ವಾರ್ಷಿಕವಾಗಿ 929 ದಶಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರ ಬಿಟ್ಟಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಪೈಕಿ 79% ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಿಂದಲೇ ಉತ್ಪಾದನೆಯಾಗುತ್ತದೆ.

    ಉಷ್ಣಾಂಶ ಹೆಚ್ಚಾದ್ರೆ ಏನಾಗುತ್ತೆ?
    ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದ್ರೆ ಭಾರತದಲ್ಲಿ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿದ್ರೆ, ಭಾರತದಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಜಾಸ್ತಿ ಆಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಹೆಚ್ಚಾದ್ರೆ ಬೇಸಿಗೆಯಲ್ಲಿ ಆರ್ಕ್ಟಿಕ್ ಮಹಾಸಾಗರದಲ್ಲಿ ಮಂಜುಗಡ್ಡೆ ಕರಗುತ್ತದೆ. ಅಷ್ಟೇ ಅಲ್ಲದೇ ಹವಳ ದ್ವೀಪಗಳೇ ಇರುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv