Tag: ಹಳೇ ಹುಬ್ಬಳ್ಳಿ ಗಲಾಟೆ

  • ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಕಾರ್ಪೊರೇಟ್‌ರ ಇರಲಿ, ಅವರ ತಾತ ಮುತ್ತಾತ ಇರಲಿ, ಅವರನ್ನು ಎತ್ತಾಕಿಕೊಂಡು ಬಂದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘಟನೆ ಬಗ್ಗೆ ಗುಡುಗಿದ್ದಾರೆ.

    ಹುಬ್ಬಳ್ಳಿ ದಿಡ್ಡಿ ಹನುಮಂತ ದೇವಸ್ಥಾನ ಭೇಟಿ ಬಳಿಕ ಮಾತನಾಡಿದ ಅವರು, ಕೋಮುವಾದಿ ಮತಾಂಧರು ನಿನ್ನೆ ಗ್ರಾಫಿಕ್ ಆ್ಯನಿಮೇಶನ್ ನೆಪ ಇಟ್ಟುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ದೇವಸ್ಥಾನ, ನಾಗರಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ನಾವು ಎಲ್ಲ ವಿವರ ಪಡೆದಿದ್ದೇವೆ ಎಂದಿದ್ದಾರೆ.

    ಯಾರೇ ಇದ್ದರು ಅವರನ್ನು ಒಳಗಡೆ ಹಾಕಬೇಕು, ಪೊಲೀಸರಿಗೆ ಗಾಯವಾದರೂ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಹೊರಗಿನಿಂದ ಬಂದವರು ಯಾರು, ಕರೆ ಕೊಟ್ಟವರು ಯಾರು, ವಾಟ್ಸಪ್ ಮೆಸೇಜ್ ಮಾಡಿದವರು ಯಾರು ಎಂಬೆಲ್ಲ ವಿಚಾರವಾಗಿ ತನಿಖೆ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

    ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿ ಕೊಟ್ಟು ಪೊಲೀಸ್ ಠಾಣೆ ಬಲಪಡಿಸುವ ಕೆಲಸ ಮಾಡುತ್ತೇವೆ. ಪಿಎಫ್‍ಐ, ಎಸ್‍ಡಿಪಿಐ ಸಂಘಟನೆ ನಿಷೇಧಕ್ಕೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.

  • ಪ್ರಚೋದನಕಾರಿ ಕೃತ್ಯ ಎಸಗಿದವರ ವಿರುದ್ಧ ಕ್ರಮ: ಬೊಮ್ಮಾಯಿ

    ಪ್ರಚೋದನಕಾರಿ ಕೃತ್ಯ ಎಸಗಿದವರ ವಿರುದ್ಧ ಕ್ರಮ: ಬೊಮ್ಮಾಯಿ

    ವಿಜಯನಗರ: ಹುಬ್ಬಳ್ಳಿಯಲ್ಲಿ ನಿನ್ನೆ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಕೆಲ ಪ್ರಚೋದನಾಕಾರಿ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಚೋದನಾಕಾರಿ ಕೃತ್ಯಗಳನ್ನು ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ರೀತಿಯ ಸಂಘಟನೆಗಳನ್ನು ಬಿಡುವುದಿಲ್ಲ. ಇದನ್ನು ಕರ್ನಾಟಕ ರಾಜ್ಯ ಸಹಿಸೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಇದಕ್ಕೆ ಮತ್ತೆ ಬೇರೆ ರೀತಿಯ ರಾಜಕೀಯ ಬಣ್ಣ ಬಳಿಯೋದು ಬೇಡ. ಯಾರೇ ಘಟನೆಯಲ್ಲಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಹಳೇ ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮತ್ತೆ ಈ ತರಹದ ಘಟನೆ ಸಂಭವಿಸಬಾರದು. ಕಾನೂನು ಸುವ್ಯವಸ್ಥೆ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ