Tag: ಹಳೇ ಹುಬ್ಬಳ್ಳಿ ಗಲಭೆ

  • ಜಾತ್ರೆಯಲ್ಲಿ ತಡೆ ಹಾಕಿದ್ರು, ಜನರ ಹೊಟ್ಟೆ ಉರಿದಿದ್ದಕ್ಕೆ ಹೀಗೆಲ್ಲಾ ಆಗಿದೆ: ಡಿಕೆಶಿ

    ಜಾತ್ರೆಯಲ್ಲಿ ತಡೆ ಹಾಕಿದ್ರು, ಜನರ ಹೊಟ್ಟೆ ಉರಿದಿದ್ದಕ್ಕೆ ಹೀಗೆಲ್ಲಾ ಆಗಿದೆ: ಡಿಕೆಶಿ

    ಬೆಂಗಳೂರು: ಬಿಜೆಪಿಯವರು ವ್ಯಾಪಾರ, ಜಾತ್ರೆಯಲ್ಲಿ ತಡೆ ಹಾಕಿದ್ದರು. ಸೌಹಾರ್ದತೆಗೆ ಧಕ್ಕೆ ಮಾಡಿದರು. ಆಗ ಜನರ ಹೊಟ್ಟೆ ಉರಿದಿದ್ದಕ್ಕೆ ಹೀಗೆಲ್ಲಾ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

    ಹುಬ್ಬಳ್ಳಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನೀತಿಯೇ ಇದಕ್ಕೆ ಕಾರಣ. ನಾನು ಹುಬ್ಬಳ್ಳಿಗೆ ಹೋಗುತ್ತೇನೆ. ಯಾರೂ ಕಾನೂನು ಕೈಗೆ ತೆಗೆಕೊಳ್ಳಬಾರದು ಎಂದು ಮನವಿ ಮಾಡಿದರು.

    ನಾನು ಈ ಗಲಾಟೆಯನ್ನು ಖಂಡಿಸುತ್ತೇನೆ. ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಯಾರೇ ಒಬ್ಬ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕಲ್ಲು ಹೊಡೆಯೋಕೆ ಇವರು ಯಾರು ಎಂದು ಪ್ರಚೋದನಾಕಾರರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್

    ಕರ್ನಾಟಕದ ಇಮೇಜ್ ನಮಗೆ ಮುಖ್ಯ. ಬಿಜೆಪಿ ಸರ್ಕಾರ ಸರಿಯಾಗಿ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಹೀಗೆಲ್ಲಾ ಆಗುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ಯಾರೇ ಇದ್ದರೂ ಅವರನ್ನು ಒಳಗೆ ಹಾಕಲಿ. ಇದರ ಹಿಂದೆ ಯಾರೇ ದೊಡ್ಡವರು ಇದ್ದರು ಕ್ರಮ ಕೈಗೊಳ್ಳಲಿ ಎಂದರು.

    ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಕೆಲಸ ಆಗುತ್ತಿದೆ. ಸಿಎಂ ನೈತಿಕ ಪೊಲೀಸ್ ಗಿರಿಗೆ ಕುಮ್ಮಕ್ಕು ಕೊಟ್ಟರು. ಚರ್ಚ್‍ನಲ್ಲಿ ಆಂಜನೇಯ ಪಠಣೆ ಮಾಡಿದರು ಅದರ ಮೇಲೂ ಕೇಸ್ ಹಾಕಿಲ್ಲ. ಜಾತ್ರೆಯಲ್ಲಿ ವ್ಯಾಪಾರಕ್ಕೆ ಅಡ್ಡಿ ಹಾಕಿದರು. ಅವರ ಮೇಲೆ ಯಾಕೆ ಕೇಸ್ ಹಾಕಲಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

    ಕಾಂಗ್ರೆಸ್ ನಾಯಕರ ಮೇಲೆ ಎಫ್‍ಐಆರ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಸಿಎಂ ಮನೆಗೆ ಹೋಗಬೇಕು ಅಂತಾ ಹೋದಾಗ ನಮ್ಮನ್ನು ಬಂಧಿಸಿ ಬಿಡುಗಡೆ ಮಾಡಿದರು. ಈಗ ಎಫ್‍ಐಆರ್ ಹಾಕಿದ್ದಾರೆ. ಈಶ್ವರಪ್ಪ ಜೊತೆ ಜನರು ಮೆರವಣಿಗೆ ಬಂದಿದ್ದರು. ಪ್ರತಿಭಟನೆ ಮಾಡಿದರು. ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಈಶ್ವರಪ್ಪ ಮೇಲೆ ಶಿವಮೊಗ್ಗದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವಾದರೂ ಬಂಧನವಾಗಿಲ್ಲ ಯಾಕೆ. ನಮ್ಮ ಮೇಲೆ ಮಾತ್ರ ಈ ಸರ್ಕಾರ ಕೇಸ್ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.