Tag: ಹಳೇ ಮೈಸೂರು

  • ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

    ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

    ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದಲ್ಲಿ ಕಾಂಗ್ರೆಸ್- ಜೆಡಿಎಸ್‍ಗೆ (Congresss- JDS) ನೇರ ಠಕ್ಕರ್ ಕೊಟ್ಟು ಮತ ಬೇಟೆಯಾಡಿರುವ ಮೋದಿ (PM Narendra Modi) ಕಾಂಗ್ರೆಸ್-ಜೆಡಿಎಸ್ ಅಸ್ಥಿರದ ಪ್ರತೀಕ ಅಂತ ವಾಗ್ದಾಳಿ ನಡೆಸಿದ್ದಾರೆ.

    ಚುನಾವಣೆ ಸಮಯದಲ್ಲಿ ಎರಡೂ ಪಕ್ಷಗಳು ಡಬ್ಲ್ಯೂ ಡಬ್ಲ್ಯೂಎಫ್‌ ರೀತಿ ಕಾದಾಡಿ ನಂತರ ಇಬ್ಬರು ಒಂದಾಗುತ್ತಾರೆ. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಕನಸು ಕಾಣುತ್ತಿದೆ. ಜೆಡಿಎಸ್‌ ಕಾಂಗ್ರೆಸ್‌ನ ಬಿ ಟೀಂ ಎಂದು ಹೇಳುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯೇ ಪರ್ಯಾಯ ಪಕ್ಷ ಎಂದು ದಾಳ ಉರುಳಿಸಿದ್ದಾರೆ.

    ನಮೋ ಸಂದೇಶ ಏನು?
    ಕರಾವಳಿ, ಬೆಂಗಳೂರು ನಗರ, ಮಧ್ಯ ಕರ್ನಾಟಕ ಸೇರಿದಂತೆ ಹಲವು ಕಡೆ ಬಿಜೆಪಿ ಭದ್ರವಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆದಿಲ್ಲ. ಈ ಕಾರಣಕ್ಕೆ ಇಲ್ಲಿ ಬಿಜೆಪಿ ಸಂಘಟನೆಯಾಗಲು ಜೆಡಿಎಸ್ ಜೊತೆ ಯಾವುದೇ ಒಳ ಒಪ್ಪಂದ, ಅಡ್ಜೆಸ್ಟ್‌ಮೆಂಟ್‌ ಪಾಲಿಟಿಕ್ಸ್ ಇಲ್ಲ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.  ಇದನ್ನೂ ಓದಿ: ಡಿಕೆಶಿ ಸಿಎಂ; ರಾಹುಲ್‌ ಅಭಯ : ಕಾಂಗ್ರೆಸ್‌ ಇನ್‌ಸೈಡ್‌ ಸುದ್ದಿ ರಿವೀಲ್‌ ಮಾಡಿದ ಅಮಿತ್‌ ಶಾ

    ಕಾಂಗ್ರೆಸ್-ಜೆಡಿಎಸ್ ನಮಗೆ ಸಮಾನ ವಿರೋಧಿಗಳು. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಹುದ್ದೆಯ ಕನಸು ಕಾಣುತ್ತಿದೆ. ಜೆಡಿಎಸ್, ಕಾಂಗ್ರೆಸ್‍ನಂತೆ ಕುಟುಂಬ ರಾಜಕೀಯಕ್ಕೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಸಂದೇಶ ಕಳುಹಿಸುವ ಯತ್ನ ಮಾಡಿದ್ದಾರೆ.

    ಇತ್ತೀಚೆಗೆ ಪಕ್ಷ ಸೇರಿದವರ ಮೂಲಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ದಳಪತಿಗಳ ಹಿಡಿತದಿಂದ ಒಕ್ಕಲಿಗ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸುಮಲತಾ, ವರ್ತೂರು ಪ್ರಕಾಶ್, ಮುದ್ದಹನುಮೇಗೌಡ, ಎಲ್.ಆರ್ ಶಿವರಾಮೇಗೌಡ, ಅಶೋಕ್ ಜಯರಾಮ್ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೊಸ ಆಶಯದೊಂದಿಗೆ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 25+ ಸ್ಥಾನಕ್ಕಾಗಿ ಬಿಜೆಪಿ ಶತಾಯಗತಾಯ ಹೋರಾಟ ಮಾಡುತ್ತಿದೆ.

    ಎಷ್ಟು ಸ್ಥಾನಗಳಿವೆ?
    ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಹಳೇ ಮೈಸೂರು ಭಾಗ ಎಂದು ಕರೆಯಲಾಗುತ್ತದೆ. ಒಟ್ಟುಇಲ್ಲಿ 57 ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್‌ 19, ಜೆಡಿಎಸ್‌ 27, ಇತರರು 2 ಸ್ಥಾನವನ್ನು ಗೆದ್ದಿದ್ದರು.

  • ಹಳೇ ಮೈಸೂರು ಮೇಲೆ ಕಣ್ಣು – ಏ.30ಕ್ಕೆ ಕುಮಾರಸ್ವಾಮಿ ಅಡ್ಡದಲ್ಲಿ ಮೋದಿ ಸಮಾವೇಶ

    ಹಳೇ ಮೈಸೂರು ಮೇಲೆ ಕಣ್ಣು – ಏ.30ಕ್ಕೆ ಕುಮಾರಸ್ವಾಮಿ ಅಡ್ಡದಲ್ಲಿ ಮೋದಿ ಸಮಾವೇಶ

    ರಾಮನಗರ: ಹಳೇ ಮೈಸೂರು (Old Mysuru) ಭಾಗದಲ್ಲಿ ಬಿಜೆಪಿ (BJP) ಹೆಚ್ಚು ಸ್ಥಾನ ಗೆಲ್ಲಲು ಪ್ಲ್ಯಾನ್‌ ಮಾಡಿದ್ದು ಏ.30ರಂದು ಚನ್ನಪಟ್ಟಣಕ್ಕೆ(Channapatna) ಪ್ರಧಾನಿ ಮೋದಿ (PM Narendra Modi) ಆಗಮಿಸಲಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ 30 ಎಕರೆಯಲ್ಲಿ ಜಾಗದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು ಸುಮಾರು 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

    ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ಸಮಾವೇಶ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರು ಸಹೋದರಿಯರಿಗೂ ಸಮಾನ ಅಂಕ

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್‌, ಕೋಲಾರದಲ್ಲಿ (Kolara) ಸಮಾವೇಶ ಮುಗಿಸಿ ಮಧ್ಯಾಹ್ನ 2 ಗಂಟೆಗೆ ಚನ್ನಪಟ್ಟಣಕ್ಕೆ ಮೋದಿ ಆಗಮಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಸಮಾವೇಶಕ್ಕೆ ಅವಕಾಶ ಕೊಟ್ಟಿದ್ದು ಖುಷಿ ತಂದಿದೆ. ರಾಮನಗರ ರಾಜಕೀಯ ಇತಿಹಾಸದಲ್ಲಿ ಇದೊಂದು ಅದ್ಬುತ ಕಾರ್ಯಕ್ರಮ ಆಗಲಿದೆ ಎಂದು ತಿಳಿಸಿದರು.

    ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಕನಕಪುರದಲ್ಲಿ ಡಿಕೆ ಶಿವಕುಮಾರ್‌ ವಿರುದ್ಧ ಆರ್‌.ಅಶೋಕ್‌ ಮತ್ತು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ನಿಲ್ಲಿಸಿದೆ.

    ಏಪ್ರಿಲ್‌ ಕೊನೆಯ ವಾರದಿಂದ ಮೇ 7ರವರೆಗಿನ ಅವಧಿಯಲ್ಲಿ ಸುಮಾರು ಏಳು ದಿನಗಳ ಕಾಲ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗುವ ಸಾಧ್ಯತೆಯಿದೆ. ಸುಮಾರು 20ಕ್ಕೂ ಹೆಚ್ಚು ಸಮಾವೇಶವನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಕೆಲ ಹಿರಿಯ ನಾಯಕರು ಕಾಂಗ್ರೆಸ್‌ ಸೇರ್ಪಡೆ, ಕೆಲವು ಕಡೆ ಟಿಕೆಟ್‌ ನಿರಾಕರಿಸಿದ್ದರಿಂದ ಕೆಲ ಕ್ಷೇತ್ರಗಳನ್ನು ಭಾರೀ ಸವಾಲು ಎದುರಿಸುತ್ತಿರುವ ಕಾರಣ ಬಿಜೆಪಿ ಈ ಬಾರಿ ಮೋದಿ ಕಾರ್ಯಕ್ರಮ ಹೆಚ್ಚು ಆಯೋಜಿಸಲು ಚಿಂತನೆ ನಡೆಸಿದೆ.

     

    ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿರುವುದರಿಂದ ಪ್ರತಿ 12-14 ಕ್ಷೇತ್ರಗಳಿಗೆ ಒಂದರಂತೆ ಬೃಹತ್ ಸಮಾವೇಶ (Modi Rally) ನಡೆಸಲು ಸಿದ್ಧತೆ ನಡೆದಿದೆ. ರಾಜ್ಯವನ್ನು 6 ಭಾಗವನ್ನಾಗಿ ವಿಂಗಡಿಸಿರುವ ಬಿಜೆಪಿ ಪ್ರದೇಶವಾರು, ಕಾಂಗ್ರೆಸ್ (Congress), ಜೆಡಿಎಸ್ (JDS) ಭದ್ರಕೋಟೆಯಲ್ಲಿ ಹೆಚ್ಚು ಸಮಾವೇಶ ಆಯೋಜಿಸಲಿದೆ. ಪ್ರತಿ ಭಾಗದಲ್ಲಿ ಕನಿಷ್ಠ 3 ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ.

  • ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಚಿಕ್ಕಬಳ್ಳಾಪುರ: ಬಿಜೆಪಿ (BJP) ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Paksha) ಸ್ಥಾಪನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಬಾಗೇಪಲ್ಲಿಯಲ್ಲಿ (Bagepalli) ಭಾನುವಾರ ಭರ್ಜರಿ ರೋಡ್ ಶೋ (Road Show) ನಡೆಸಿದ್ದಾರೆ.

    ಬಾಗೇಪಲ್ಲಿಯ ಸುಂಕಲಮ್ಮ ದೇವಾಲಯದ ಬಳಿ ಪಕ್ಷದ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿಯವರು ಜನಾರ್ದನ ರೆಡ್ಡಿಯವರನ್ನು ಸ್ವಾಗತಿಸಿಕೊಂಡರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರೆಡ್ಡಿಯವರ ಬೆಂಬಲಿಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನೂರಾರು ಮಂದಿಯಿಂದ ಬೈಕ್ ರ್ಯಾಲಿ ನಡೆಯಿತು. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ

    ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಜನಾರ್ದನ ರೆಡ್ಡಿ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ನಗರದ ಹೊರವಲಯದ ಕೆಎಸ್‍ಆರ್‌ಟಿಸಿ (KSRTC) ಬಸ್ ಡಿಪೋ ರಸ್ತೆಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು.

    ಹಳೇ ಮೈಸೂರು (Old Mysuru) ಬಯಲುಸೀಮೆ ಭಾಗದಲ್ಲೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

  • ಹಳೇ ಮೈಸೂರು ಭಾಗದಲ್ಲೇ ವಿಜಯೇಂದ್ರ ಆ್ಯಕ್ಟಿವ್; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ

    ಹಳೇ ಮೈಸೂರು ಭಾಗದಲ್ಲೇ ವಿಜಯೇಂದ್ರ ಆ್ಯಕ್ಟಿವ್; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ

    ಬೆಂಗಳೂರು: ಬಿಜೆಪಿ (BJP) ಹಳೇ ಮೈಸೂರು (Old Mysuru) ಭಾಗಕ್ಕೆ ಒತ್ತು ಕೊಡುತ್ತಿದೆ. 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ (B.Y.Vijayendra) ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ. ತುಮಕೂರು ಮಹಾನಗರದಲ್ಲಿ ಯುವ ಸಮಾವೇಶ ನಡೆಸಿದರೆ, ಗುಬ್ಬಿಯಲ್ಲಿ ಮಹಿಳಾ ಸಮಾವೇಶ ನಡೆಸುತ್ತೇವೆ. ತುರುವೇಕೆರೆಯಲ್ಲಿ ರೈತ ಸಮಾವೇಶವಾದರೆ, ಅಲ್ಲಿಗೆ ಜಿಲ್ಲೆಯ ಎಲ್ಲ ಕಾರ್ಯಕರ್ತರು ಬರಲಿದ್ದಾರೆ. ಮೋರ್ಚಾಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ-ರಾಜ್ಯಗಳ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ನೇಮಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ಅಶ್ವಥ್ ನಾರಾಯಣ್

    ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಸಂಚಾಲಕ, ಸಹ ಸಂಚಾಲಕರ ನೇಮಕವಾಗಿದ್ದು, ಇವತ್ತು ಸಭೆ ನಡೆಯುತ್ತಿದೆ. ಇದೇ 16ರಂದು ಎಲ್ಲ ಮೋರ್ಚಾಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ರಾಜ್ಯದ ಚುನಾವಣೆ ಪ್ರಕ್ರಿಯೆ ಬಳಿಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಐತಿಹಾಸಿಕ ಗೆಲುವು ಬಿಜೆಪಿಯದ್ದಾಗಲು ನಮ್ಮೆಲ್ಲ ಮೋರ್ಚಾಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಮೋರ್ಚಾ ಸಮಾವೇಶಗಳು ಬಿಜೆಪಿ ಗೆಲುವಿಗೆ ಪೂರಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವಿಧಾನಸಭೆ ಉಪಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಲಭಿಸಿತ್ತು. ಹಳೆ ಮೈಸೂರು ಭಾಗಕ್ಕೆ ಪಕ್ಷ ಒತ್ತು ಕೊಡುತ್ತಿದೆ. ಫೆ.20ರಂದು ಯುವ ಮೋರ್ಚಾದ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ. ಕೇಂದ್ರದ ನಾಯಕರು ಬರುವ ನಿರೀಕ್ಷೆ ಇದೆ. ಕೇಂದ್ರ ನಾಯಕ ಅಮಿತ್ ಶಾ (Amit Shah) ಅವರು ಈಗಾಗಲೇ ಮಂಡ್ಯ ಭಾಗಕ್ಕೆ ಬಂದು ಹೋಗಿದ್ದಾರೆ. ಇದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮೋದಿ-ಅದಾನಿಯ ಪ್ರೀತಿ ಷಹಜಹಾನ್ – ಮಮ್ತಾಝ್‌ನಂತೆ, ಇದನ್ನ ಜನಕ್ಕೆ ತಿಳಿಸಬೇಕು – ನಲಪಾಡ್

    50 ಲಕ್ಷ ಮತದಾರರ ಸದಸ್ಯತ್ವ ನೋಂದಣಿ
    ಸಮಾವೇಶಗಳ ಮೂಲಕ 2 ಕೋಟಿ ಮತದಾರರನ್ನು ತಲುಪುವುದು, 50 ಲಕ್ಷ ಹೊಸ ಮತದಾರರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿ ಇದೆ. ಪಕ್ಷದಲ್ಲಿರುವ 7 ಮೋರ್ಚಾಗಳಾದ ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ, ಒಬಿಸಿ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾಗಳನ್ನು ಸಕ್ರಿಯಗೊಳಿಸುವ ಗುರಿಯನ್ನು ಸಮಾವೇಶಗಳು ಹೊಂದಿವೆ. ಈ ಸಂದರ್ಭದಲ್ಲಿ ಪ್ರಧಾನಿಯವರ ಅಮೃತ್ ಕಾಲ್ ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ದೇಶ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಯುವಜನತೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

    ಕೇಂದ್ರ ಹಾಗೂ ರಾಜ್ಯದ ಸರ್ಕಾರಗಳ ಸಾಧನೆಗಳನ್ನು ಜನತೆಯ ಮುಂದಿಡುವ ಮೂಲಕ ಅವರಿಗೆ ಅಭಿವೃದ್ಧಿಯ ವಿಚಾರವಾಗಿ ಪಕ್ಷ ಹೊಂದಿರುವ ದೂರದೃಷ್ಟಿತ್ವವನ್ನು ಮನದಟ್ಟು ಮಾಡುವುದು ನಮ್ಮ ಉದ್ದೇಶ ಎಂದರು. ಸಮಾವೇಶಗಳ ರಾಜ್ಯ ಸಹ ಸಂಚಾಲಕ ಜಗದೀಶ್ ಹಿರೇಮನಿ ಹಾಗೂ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಚ್‌ಡಿಕೆ ವಿರುದ್ಧ ಗುರು ಶಿಷ್ಯರ ಹಳೇ ಆಟ – ಸಿದ್ದು, ಜಮೀರ್ ಗೇಮ್ ಏನು?

    ಹೆಚ್‌ಡಿಕೆ ವಿರುದ್ಧ ಗುರು ಶಿಷ್ಯರ ಹಳೇ ಆಟ – ಸಿದ್ದು, ಜಮೀರ್ ಗೇಮ್ ಏನು?

    ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದ ಯಾತ್ರೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿಯೇ (HD Kumaraswamy) ಟಾರ್ಗೆಟ್ ಎನ್ನಲಾಗಿದೆ. ಉತ್ತರ ಕರ್ನಾಟಕದಲ್ಲಿ ಒಂದು ಲೆಕ್ಕ ಮಂಡ್ಯ, ಮೈಸೂರಲ್ಲಿ ಇನ್ನೊಂದು ಲೆಕ್ಕ ಎಂಬ ತಂತ್ರಗಾರಿಕೆ. ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಹೆಚ್‌ಡಿಕೆ. ಹಳೇ ಆಟದಲ್ಲಿ ಸಿದ್ದರಾಮಯ್ಯ ಸ್ವಲ್ಪ ಚೇಂಜ್ ಆಗ್ಬಿಟ್ರಾ ಎಂಬ ಚರ್ಚೆ ಜೋರಾಗಿದೆ. ಹೆಚ್‌ಡಿಕೆ ವಿರುದ್ಧ, ಗೌಡರ ಕುಟುಂಬದ ವಿರುದ್ಧ ಮೌನಾಸ್ತ್ರ ಪ್ರಯೋಗಿಸಿದ್ದ ಸಿದ್ದು ಬದಲಾದ್ರಾ ಎಂಬ ಪ್ರಶ್ನೆಗಳು ಎದ್ದಿವೆ.

    ಅಂದಹಾಗೆ ಮುಸ್ಲಿಂ ಮತ ವಿಭಜನೆ ತಡೆಯಲು ಗುರು ಶಿಷ್ಯರಿಂದ ಮೌನಾಸ್ತ್ರ ಕೆಳಗಿಟ್ಟು ಯುದ್ಧ ಶುರು ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ. ಈಗಾಗಲೇ ಹೈದರಾಬಾದ್ ಕರ್ನಾಟಕದಲ್ಲಿ ನಿಂತು ಹೆಚ್‌ಡಿಕೆಗೆ ಗುದ್ದು ಕೊಟ್ಟಿದ್ದ ಸಿದ್ದು, ಜಮೀರ್ (Zameer Ahmed Khan) ಹಳೇ ಮೈಸೂರು ಭಾಗದ ಬಸ್ ಯಾತ್ರೆ ವೇಳೆ ಹೆಚ್‌ಡಿಕೆಯನ್ನೇ ಟಾರ್ಗೆಟ್ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರಂತೆ. ಗೌಡರ ವಿರುದ್ಧ ಮಾತನಾಡದೇ ಹೆಚ್‌ಡಿಕೆಯನ್ನೇ ಗುರಿಯಾಗಿಸಿ ರಾಜಕೀಯ ದಾಳ ಉರುಳಿಸಲು ಪ್ಲ್ಯಾನ್ ನಡೆದಿದೆ. ಇದನ್ನೂ ಓದಿ: ಹೆಚ್‌ಡಿಕೆಗೆ ಚಕ್ರವ್ಯೂಹ, ಪುತ್ರ ನಿಖಿಲ್‌ಗೆ ಪದ್ಮವ್ಯೂಹ – ಏನಿದು ಬಿಜೆಪಿ ಗೇಮ್?

    ಈಗಾಗಲೇ ಮುಸ್ಲಿಂ ಮತಗಳು (Muslims Votes) ವಿಭಜನೆ ಪ್ರಯತ್ನಿಸಿ ಹೆಚ್‌ಡಿಕೆ ಆರ್‌ಎಸ್‌ಎಸ್, ಬಿಜೆಪಿ ಮೇಲೆ ಮುಗಿಬೀಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಬಾರದೆಂದು ಸಿದ್ದರಾಮಯ್ಯ ಖಡಕ್ ಸಂದೇಶ. ಜಮೀರ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ವೇಳೆ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಅಹಿಂದ ಮತಗಳ ಮೇಲೆ ಕಣ್ಣು, ಹೆಚ್‌ಡಿಕೆ ಹಳೇ ಮೈಸೂರು ಟಾರ್ಗೆಟ್ ಸಕ್ಸಸ್ ಆಗುತ್ತಾ ಎಂಬ ಕುತೂಹಲವಿದೆ. ಹಾಗಾದ್ರೆ ಗುರು ಶಿಷ್ಯರ ಅಸ್ತ್ರವನ್ನ ಹೆಚ್‌ಡಿಕೆ ಒಬ್ಬರೇ ಎದುರಿಸ್ತಾರಾ? ಓಲ್ಡ್ ಮೈಸೂರಲ್ಲಿ ಓಲ್ಡ್ ಫೈಟ್ ಶುರುನಾ ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಳೇ ಮೈಸೂರು ಭಾಗದ ಮೇಲೆ ಕಣ್ಣು- ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್‌ ಶಾ ಸಮಾವೇಶ

    ಹಳೇ ಮೈಸೂರು ಭಾಗದ ಮೇಲೆ ಕಣ್ಣು- ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್‌ ಶಾ ಸಮಾವೇಶ

    ಮಂಡ್ಯ: ಹಳೇ ಮೈಸೂರು ಭಾಗದಲ್ಲಿ (Old Mysuru Region) ಕಮಲ ಅರಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ(BJP) ಡಿ.30ಕ್ಕೆ ಮಂಡ್ಯದಲ್ಲಿ ಸಮಾವೇಶ ಆಯೋಜಿಸಿದೆ.

    ಹಳೆ ಮೈಸೂರು ಭಾಗದಲ್ಲಿ ಪ್ರಮುಖ ರಾಜಕೀಯ ಜಿದ್ದಜಿದ್ದಿನ ಜಿಲ್ಲೆಯಾದ ಮಂಡ್ಯ ಜಿಲ್ಲೆಯಲ್ಲಿ 5 ರಿಂದ 6 ಕ್ಷೇತ್ರಗಳನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು ಈ ಸಮಾವೇಶಕ್ಕೆ ಗೃಹ ಸಚಿವ ಅಮಿತ್‌ ಶಾ(Amit shah) ಆಗಮಿಸಲಿದ್ದಾರೆ.

    ಡಿ.30ರಂದು ಮನ್‌ಮುಲ್‌ನ ಮೆಗಾ ಡೈರಿ(MANMUL Mega-Dairy) ಉದ್ಘಾಟನೆಯನ್ನು ಅಮಿತ್‌ ಶಾ ಮಾಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬರುತ್ತಿರುವ ಅಮಿತ್‌ ಶಾ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಕನಿಷ್ಟ ಐದು ಕ್ಷೇತ್ರದಲ್ಲಿ‌ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೈಕಮಾಂಡ್‌ನಿಂದ ರಾಜ್ಯದ ನಾಯಕರಿಗೆ ಸೂಚನೆ ಬಂದಿದೆ. ಈ ಕಾರಣದಿಂದ ರಾಜ್ಯದ ನಾಯಕರು ಮಂಡ್ಯ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

    ಮಂಡ್ಯದ ಬಾಲಕರ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ‌. ಈ ಸಮಾವೇಶದ ನಂತರ ಮಂಡ್ಯದಲ್ಲೇ ಅಮಿತ್‌ ಶಾ ಸಭೆ ನಡೆಸಿ ಚುನಾವಣೆ ತಂತ್ರವನ್ನು ಪ್ರಸ್ತಾಪ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲ್ಯಾನ್‌

    ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲ್ಯಾನ್‌

    ಬೆಂಗಳೂರು: ಹಳೇ ಮೈಸೂರು(Old Mysuru) ಭಾಗದ ಮೇಲೆ ಕಾಂಗ್ರೆಸ್ ಬಿಜೆಪಿ ಕಣ್ಣು ಹಾಕಿದ ಹಿನ್ನೆಲೆಯಲ್ಲಿ ತನ್ನ ಭದ್ರಕೋಟೆಯಲ್ಲಿ ಹಿಡಿತ ಸಡಿಲಿಕೆ ಆಗದಂತೆ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಪ್ಲ್ಯಾನ್‌ ಮಾಡಿದ್ದಾರೆ.

    ವಿಧಾನಸಭಾ ಚುನಾವಣೆ(Election) ತಿಂಗಳು ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಕೋಟೆಯನ್ನು ಛಿದ್ರ ಮಾಡಲು ರಣತಂತ್ರ ಮಾಡುತ್ತಿದೆ. ಈ ತಂತ್ರಕ್ಕೆ ಪ್ರತಿ ತಂತ್ರ ಹೂಡಲು ಕುಮಾರಸ್ವಾಮಿ ಅವರೇ ನೇರವಾಗಿ ಅಖಾಡಕ್ಕೆ ಧುಮುಕಿದ್ದಾರೆ.

    ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕುಮಾರಸ್ವಾಮಿ ಇಳಿದಿದ್ದು, ಪಕ್ಷ ತೊರೆದ ಎರಡನೇ ಹಂತದ ನಾಯಕರನ್ನು ಕರೆತರಲು ದಳಪತಿ‌ ಮುಂದಾಗಿದ್ದಾರೆ. ರೆಬೆಲ್ ಶಾಸಕರ ಕ್ಷೇತ್ರ, ಉಪ ಚುನಾವಣೆಯಲ್ಲಿ ಸೋಲುಂಡ ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.  ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    ಶಿರಾ, ಕೆ.ಆರ್.ಪೇಟೆ, ಗುಬ್ಬಿ, ಚಾಮುಂಡೇಶ್ವರಿ, ಕೋಲಾರ ಕ್ಷೇತ್ರಗಳ ಮುಖಂಡರ ಜೊತೆ ನಿರಂತರ ಸಂಪರ್ಕ‌ ಇಟ್ಟುಕೊಂಡಿದ್ದು, ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದಿರುವ ಕಲ್ಕೆರೆ ರವಿಕುಮಾರ್, ಎಸ್.ಆರ್.ಗೌಡ‌ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಕಲ್ಕೆರೆ ರವಿ, ಎಸ್.ಆರ್.ಗೌಡ ಶಿರಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದು ಅವರನ್ನು ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಮೂಲಕ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂಬ ಸಂದೇಶವನ್ನು ಎಚ್‌ಡಿಕೆ ರವಾನಿಸಿದ್ದಾರೆ.

    ive Tv
    [brid partner=56869869 player=32851 video=960834 autoplay=true]

  • ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ದೂರ ಇಟ್ಟು ಓಲ್ಡ್ ಮೈಸೂರು ಆಪರೇಷನ್ ಕಮಲ ನಡೆಯುತ್ತಿದೆ. ಡಿಸಿಎಂ ಆಗಿ ಅಶ್ವತ್ಥನಾರಾಯಣ ಪ್ರಯೋಗ ಮಾಡಿ ಹೈಕಮಾಂಡ್ ಫೇಲ್ಯೂರ್ ಆಗಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿದೆ.

    ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಸಂಘಟನೆ ಮಾಡಲು ಅಶ್ವತ್ಥನಾರಾಯಣ ವಿಫಲ ಎಂಬ ವರದಿ ರವಾನೆಯಾಗಿದ್ದು, ಹೈಕಮಾಂಡ್ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಹಾಗಾಗಿಯೇ ಅಶ್ವತ್ಥನಾರಾಯಣ ಬಿಟ್ಟು ಹಳೇ ಮೈಸೂರು ಭಾಗದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಕಾರ್ಯತಂತ್ರ ನಡೆಯುತ್ತಿದೆ ಅಂತಾ ಮೂಲಗಳು ತಿಳಿಸಿವೆ.

    BASAVARAJ BOMMAI

     

    ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೂ ಅಶ್ವತ್ಥನಾರಾಯಣ ದೂರ ಇಟ್ಟಿದ್ದರು. ಬಹಿರಂಗವಾಗಿ ಅಬ್ಬರಿಸುವುದನ್ನು ಬಿಟ್ಟರೆ ಸಂಘಟನೆಗೆ ಶಕ್ತಿ ತರಲು ಸಾಧ್ಯ ಆಗಿಲ್ಲ ಎಂಬ ಅಸಮಾಧಾನ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ. ಹೈಕಮಾಂಡ್ ಅಸಮಾಧಾನದ ಬೆನ್ನಲ್ಲೇ ಮೈಸೂರು ಭಾಗಗಳ ಪ್ರವಾಸಕ್ಕೆ ಅಶ್ವತ್ಥನಾರಾಯಣ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಇದ್ದಕ್ಕಿದ್ದಂತೆ ಸ್ಟಾರ್ ಆಗಿ ಡಿಸಿಎಂ ಪಟ್ಟ ಪಡೆದಿದ್ದ ಅಶ್ವತ್ಥನಾರಾಯಣ ಹೈಕಮಾಂಡ್ ಕಣ್ಣಲ್ಲಿ ಫೇಲ್ಯೂರ್ ಆಗಿದ್ದಾರಾ ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಕಿತ್ತಾಟ ಶುರು ಆಗಿದೆಯಾ? ಅಶ್ವತ್ಥನಾರಾಯಣ ಒಂಟಿಯಾದಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ. ಅಶೋಕ್, ಸುಧಾಕರ್, ಯೋಗೇಶ್ವರ್ ಒಂದು ಗುಂಪು ಸೇರಿದ್ದು, ಹಳೇ ಮೈಸೂರು ಭಾಗದ ಸಂಘಟನೆಯಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು ನಡೆಯುತ್ತಿದ್ದು, ಅಶ್ವತ್ಥನಾರಾಯಣ ಹೊರಗಿಟ್ಟು ಆಪರೇಷನ್ ಚಟುವಟಿಕೆಗಳು ಜೋರಾಗಿದೆ ಮತ್ತು ತ್ರಿಮೂರ್ತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    ಹಾಗಾದರೆ ಅಶ್ವತ್ಥನಾರಾಯಣ್ ಓವರ್ ಸ್ಮಾರ್ಟ್ ಬಿಜೆಪಿಯ ಇತರೆ ಒಕ್ಕಲಿಗ ನಾಯಕರನ್ನು ಕೆರಳಿಸುತ್ತಾರಾ? ಚೊಚ್ಚಲ ಬಾರಿಗೆ ಕ್ಯಾಬಿನೆಟ್ ಸೇರ್ಪಡೆ ಬೆನ್ನಲ್ಲೇ ಡಿಸಿಎಂ ಪಟ್ಟ ಗಿಟ್ಟಿಸಿದ ಅಶ್ವತ್ಥನಾರಾಯಣ ಈಗ ಒಂಟಿಯಾಗಿ ಏನು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.