Tag: ಹಳೇ ದ್ವೇಷ

  • ಕಲಬುರಗಿ | ಹಳೇ ದ್ವೇಷಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

    ಕಲಬುರಗಿ | ಹಳೇ ದ್ವೇಷಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

    ಕಲಬುರಗಿ: ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ, ಕಲಬುರಗಿ (Kalaburagi) ಹೊರವಲಯದ ಫಿರೋಜಾಬಾದ ಬಳಿ ನಡೆದಿದೆ.

    ಮೃತ ವ್ಯಕ್ತಿ ಕಲಬುರಗಿಯ ಕಿಂಗ್ ಪ್ಯಾಲೇಸ್ ಹಾಲ್ ಹತ್ತಿರದ ನಿವಾಸಿ ನಿಜಾಮುದ್ದೀನ್ ಬಾವರ್ಚಿ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

  • ಹಳೇ ದ್ವೇಷ – ರೇಷನ್ ತರಲು ಹೋದವನ ಮಚ್ಚಿನಿಂದ ಕೊಚ್ಚಿ ಕೊಲೆ

    ಹಳೇ ದ್ವೇಷ – ರೇಷನ್ ತರಲು ಹೋದವನ ಮಚ್ಚಿನಿಂದ ಕೊಚ್ಚಿ ಕೊಲೆ

    ತುಮಕೂರು: ಪಡಿತರ ತರಲು ಸೊಸೈಟಿಗೆ ಹೋಗಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಾವಗಡ ತಾಲೂಕಿನ ವಡ್ರೇವು ಗ್ರಾಮದಲ್ಲಿ ನಡೆದಿದೆ.

    ಹಳೆ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಡ್ರೇವು ಗ್ರಾಮದ ಗಂಗಾಧರ್ (40) ಕೊಲೆಯಾದ ವ್ಯಕ್ತಿ. ಈತ ಬೆಳಗ್ಗೆ ಗ್ರಾಮದ ಸೊಸೈಟಿಗೆ ತೆರಳಿ ಪಡಿತರ ತರುವಂತಹ ಸಂದರ್ಭದಲ್ಲಿ ಪಾತಕಿಗಳು ಮಚ್ಚಿನಿಂದ ತಲೆ ಕಾಲು ಕೈಗೆ ಹೊಡೆದಿದ್ದಾರೆ. ಈ ಪರಿಣಾಮ ಸ್ಥಳದಲ್ಲೇ ಗಂಗಾಧರ್ ಸಾವನ್ನಪ್ಪಿದ್ದಾರೆ.

    ಕೊಲೆ ಮಾಡಿದ ದುಷ್ಕರ್ಮಿಗಳು ನಂತರ ಆತನ ಮೃತದೇಹವನ್ನು ಗಂಗಾಧರ್ ಮನೆಯ ಎದುರು ತಂದು ಎಸೆದು ಹೋಗಿದ್ದಾರೆ. ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಜಮೀನಿಗಾಗಿ ಕಿತ್ತಾಟ – ತೋಟದ ಮನೆಗೆ ಬೆಂಕಿ

    ಜಮೀನಿಗಾಗಿ ಕಿತ್ತಾಟ – ತೋಟದ ಮನೆಗೆ ಬೆಂಕಿ

    ರಾಮನಗರ: ಜಮೀನಿನ ವ್ಯಾಜ್ಯದ ವಿಚಾರವಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ತೋಟದ ಮನೆಗೆ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.

    ಕನ್ನಮಂಗಲ ಗ್ರಾಮದ ಕಮಲಮ್ಮ ಅವರಿಗೆ ಸೇರಿದ ಮನೆಯನ್ನ ತಡ ರಾತ್ರಿ 6 ರಿಂದ 7 ಜನ ದುಷ್ಕರ್ಮಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ಬೆಂಕಿ ಹಚ್ಚಿ ಮನೆ ಮುಂದೆ ಹಾಕಿದ್ದ ಹಂಚಿನ ಚಾವಣಿಯನ್ನು ಕೂಡ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

    ಇದು ಮೇಲ್ನೋಟಕ್ಕೆ ದಾಯಾದಿಗಳ ಕಲಹ ಎಂದು ತಿಳಿದು ಬಂದಿದೆ. ಕಮಲಮ್ಮನ ಮಗ ಮಹೇಶ್ ಹಾಗೂ ಅವರ ಸೋದರ ಸಂಬಂಧಿ ಶಿವರಾಜ್ ಎಂಬುವವರ ನಡುವೆ ತಡರಾತ್ರಿ ಗಲಾಟೆ ನಡೆದಿತ್ತು. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಸೋದರ ಸಂಬಂಧಿ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಎರಡು ಕುಟುಂಬದವರು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

    ಆದರೆ ತಡರಾತ್ರಿ ಹೊಸದಾಗಿ ಕಟ್ಟಿಸಿದ್ದ ತೋಟದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಲಾಟೆಯ ಸೇಡಿಗಾಗಿ ಶಿವರಾಜ್ ಕಡೆಯವರು ಮಹೇಶನ ಮನೆಯನ್ನ ಧ್ವಂಸ ಮಾಡಿದ್ದಾರೆ ಎಂದು ತಾಯಿ ಕಮಲಮ್ಮ ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚನ್ನಪಟ್ಟಣ ಎಎಸ್ಪಿ ರಾಮರಾಜನ್ ಹಾಗೂ ಚನ್ನಪಟ್ಟಣ ವೃತ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಶಿವರಾಜ್ ಕಣ್ಮರೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.