Tag: ಹಳೇನೋಟ್

  • ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದ ಹಿನ್ನೆಲೆಯಲ್ಲಿ ಪರಾರಿಯಾಗಿರೋ ನಾಗರಾಜ್ ಅಲಿಯಾಸ್ ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್ ಆಗಿದೆ.

    ಕೊಲೆ ಯತ್ನ, ದರೋಡೆ ಪ್ರಕರಣದಲ್ಲಿ ಮಾರ್ಚ್‍ನಲ್ಲೇ ರೌಡಿಶೀಟರ್ ಪಟ್ಟಿಗೆ ನಾಗನ ಹೆಸರನ್ನು ಮತ್ತೆ ಸೇರಿಸಲಾಗಿದೆ. ಡಿಸೆಂಬರ್‍ನಲ್ಲಿ ನಾಗನ ವಿರುದ್ಧ ಕಿಡ್ನ್ಯಾಪ್, ರಾಬರಿ ಪ್ರಕರಣ ದಾಖಲಾಗಿತ್ತು. ಪೆಟ್ರೋಲ್ ಬಂಕ್ ಆರಂಭಕ್ಕೆ ಜಾಗ ಕೊಡಿಸುವುದಾಗಿ ವೃದ್ಧರೊಬ್ಬರ ಅಪಹರಣ ಮಾಡಿ 6.5 ಲಕ್ಷ ರಾಬರಿ ಮಾಡಿದ್ದ. ಡಿಸೆಂಬರ್‍ನಲ್ಲೇ ದಾಬಸ್‍ಪೇಟೆಯಲ್ಲಿ ಮತ್ತೊಂದು ಕಿಡ್ನ್ಯಾಪ್ ಪ್ರಕರಣ ಕೂಡ ದಾಖಲಾಗಿತ್ತು. ಫೆಬ್ರವರಿ ಅಂತ್ಯದಲ್ಲಿ ನಾಗನ ಇಬ್ಬರು ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನೂ ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು. ಕೊಲೆ ಯತ್ನ, ರಾಬರಿ, ಕಿಡ್ನ್ಯಾಪ್ ಸೇರಿದಂತೆ ಮಕ್ಕಳ ಮೇಲೆ 7 ಪ್ರಕರಣ ದಾಖಲಾಗಿತ್ತು. ನಾಗನ ಪತ್ನಿ ಲಕ್ಷ್ಮಿ ವಿರುದ್ಧವೂ 4 ಪ್ರಕರಣ ದಾಖಲಾಗಿದೆ.

    ನಾಗನ ಮನೆಯಲ್ಲಿ ಪತ್ತೆಯಾದ 14.80 ಕೋಟಿ ಹಳೆ ನೋಟುಗಳನ್ನ ಆರ್‍ಬಿಐ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನ ಇಡಿಗೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ನಾಪತ್ತೆಯಾಗಿರುವ ನಾಗನಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ತಮಿಳುನಾಡಿನ ಜೋಲಾರ್ ಪೇಟೆ ಬಳಿ ಇರುವ ಕಾಟ್‍ಪಾಡಿಯಲ್ಲಿ ಕರ್ನಾಟಕ ಪೊಲೀಸರ ತಂಡ ಬೀಡು ಬಿಟ್ಟಿದೆ. ಶುಕ್ರವಾರದಂದು ಎಸ್ಕೇಪ್ ಆಗಿರುವ ನಾಗ ದಾಬಸ್‍ಪೇಟೆಯ ರೆಸಾರ್ಟ್‍ವೊಂದಕ್ಕೆ ತೆರಳಿ ಅಲ್ಲಿ ಹಣ ವಸೂಲಿ ಮಾಡಿ ಅಲ್ಲಿಂದ ಧರ್ಮಪುರಿಗೆ ಹೋಗಿ ಸಂಬಂಧಿಕರ ಮನೆಯಲ್ಲಿರುವ ಶಂಕೆ ಇದೆ. ನಾಗನ ಹುಡುಕಾಟಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನ ರಚಿಸಲಾಗಿದೆ. ಹೆಣ್ಣೂರು, ಶ್ರೀರಾಮಪುರ ಹಾಗೂ ಸಿಸಿಬಿ ಸೇರಿದಂತೆ ನಾಲ್ಕು ತಂಡಗಳಿಂದ ನಾಗನಿಗಾಗಿ ಶೋಧ ನಡೆಯುತ್ತಿದೆ. ನಾಗ ಮೊಬೈಲ್ ಬಳಕೆ ಮಾಡದ್ದರಿಂದ ಪೊಲೀಸರ ಶೋಧಕ್ಕೆ ತೊಂದರೆಯಾಗಿದೆ. ತಾಂತ್ರಿಕವಾಗಿ ಯಾವುದೇ ವಸ್ತುಗಳನ್ನ ನಾಗ ಬಳಕೆ ಮಾಡಿಲ್ಲ.

    https://www.youtube.com/watch?v=ehMXPLXNDUc