Tag: ಹಳೆ ಮೈಸೂರು

  • KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

    KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಹಳೆಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂ (KRS Dam) ಭರ್ತಿಗೆ ಕೇವಲ 11 ಅಡಿಗಳಷ್ಟೇ ಬಾಕಿಯಿದೆ.

    ಕಳೆದ ಮೂರು ದಿನಗಳಿಂದಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಸದ್ಯ ಕೆಆರ್‌ಎಸ್ ಡ್ಯಾಂಗೆ 29,368 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಪರಿಣಾಮ 24 ಗಂಟೆಗಳಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 4 ಟಿಎಂಸಿ ನೀರು ಶೇಖರಣೆಯಾಗಿದೆ.ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

    124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂ 113.25 ಅಡಿಯಷ್ಟು ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿಗಳಷ್ಟೇ ಬಾಕಿ ಇದೆ. ಇನ್ನೂ 49.452 ಟಿಎಂಸಿಯ ಗರಿಷ್ಠ ಸಾಮಾರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 35.118 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

    ಇನ್ನೂ 14 ಟಿಎಂಸಿ ನೀರು ಬಂದರೆ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತದೆ. ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.ಇದನ್ನೂ ಓದಿ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ – ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

     

  • ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ

    ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ

    ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ (KRS Dam) ನಿರಂತರವಾಗಿ ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water) ಹರಿಸುತ್ತಿರುವುನ್ನು ಖಂಡಿಸಿ ಇಂದು ರೈತ ಸಂಘ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ತಡೆದು ಪ್ರತಿಭಟನೆ ನಡೆಸಲು ಮುಂದಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ (Rain) ಕಾರಣ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯ ಭರ್ತಿಯಾಗಿಲ್ಲ. ಈ ನಡುವೆ ತಮಿಳುನಾಡಿಗೆ ಕೆಆರ್‌ಎಸ್‍ನಿಂದ ನೀರು ಬಿಡಲಾಗುತ್ತಿದೆ. ಇದನ್ನು ಖಂಡಿಸಿ ಸೋಮವಾರ ರಾಜ್ಯ ಬಿಜೆಪಿ ನಾಯಕರು ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಇಂದು ರೈತ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಲು ಮುಂದಾಗಿವೆ.  ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ 33ರ ಬ್ರಿಟಿಷ್‌ ನರ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

    ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆ ಮಂಡ್ಯದ ಇಂಡುವಾಳು ಸಮೀಪದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಎತ್ತಿನಗಾಡಿ, ಜಾನುವಾರು, ಟ್ರಾಕ್ಟರ್ ತಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದೆ. ಅನ್ನದಾತರ ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, 500ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ

    ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ

    ಮೈಸೂರು: ಹಳೆ ಮೈಸೂರು (Old Mysuru) ಭಾಗಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway) ನಮಗೆ ದೊಡ್ಡ ಶಕ್ತಿಯಾಗಿದೆ. ಅದಕ್ಕಾಗಿ ಮಂಡ್ಯದಲ್ಲೇ (Mandya) ಅದರ ಉದ್ಘಾಟನೆ ನೆರವೇರಿಸಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ಹಳೆ ಮೈಸೂರು ಭಾಗಕ್ಕೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ದೊಡ್ಡ ಶಕ್ತಿಯಾಗಿದೆ. ಅದಕ್ಕಾಗಿಯೇ ಪ್ರತಿ ಪಕ್ಷಗಳಿಂದ ಅಷ್ಟೊಂದು ಅಪಸ್ವರ ಕೇಳಿಬರುತ್ತಿದೆ. ಇದರೊಂದಿಗೆ ನರೇಂದ್ರ ಮೋದಿ (Narendra Modi) ಅವರ ಜಲಜೀವನ್ ಮಿಷನ್, ಕಿಸಾನ್ ಸಮ್ಮಾನ್ ಯೋಜನೆಗಳು ನಮ್ಮ ಪಕ್ಷಕ್ಕೆ ಬಲ ತುಂಬಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

    ಮಂಡ್ಯದಲ್ಲಿ ಈ ಬಾರಿ ಬಿಜೆಪಿ ಧ್ವಜ (BJP Flag) ಹಾರಬೇಕು ಅನ್ನೋ ಕಾರಣಕ್ಕೆ ಎಕ್ಸ್‌ಪ್ರೆಸ್‌ವೇ ಅಲ್ಲಿಯೇ ಉದ್ಘಾಟಿಸಿದ್ದೇವೆ. ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಹಳೆ ಮೈಸೂರು ಭಾಗದಲ್ಲಿ 15 ಸ್ಥಾನಗಳನ್ನು ಗೆಲ್ಲುವ ಗುರಿಯಿದೆ. ಕನಿಷ್ಠ 10 ಸ್ಥಾನಗಳನ್ನು ಈ ಭಾಗದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: Mood Of Karnataka – ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಹಿನ್ನಡೆಯಾದರೂ ಬಿಜೆಪಿಯೇ ದೊಡ್ಡ ಪಕ್ಷ

    ಇದೇ ವೇಳೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ನಾಯಕರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿ.ಎಸ್ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತೆ. ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ನಾನು ಪಕ್ಷದ ಕಾರ್ಯಕರ್ತನಾಗಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ದುಡಿಯುತ್ತೇನೆ ಎಂದು ನುಡಿದಿದ್ದಾರೆ.

  • Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?

    Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?

    ಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಈ ಬಾರಿಯೂ ಕಮಾಲ್‌ ಮಾಡುವ ಸಾಧ್ಯತೆಯಿದೆ. ಬಿಜೆಪಿ ಸಾಕಷ್ಟು ಪ್ರಯೋಗ ಮಾಡಿದರೂ ಕಳೆದ ಬಾರಿಯಷ್ಟೇ ಈ ಬಾರಿಯೂ ಸ್ಥಾನ ಪಡೆಯಬಹುದು ಎಂದು ಪಬ್ಲಿಕ್‌ ಟಿವಿ ಸಮೀಕ್ಷೆ ತಿಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್‌ 2 ಸ್ಥಾನ ಹೆಚ್ಚುವರಿ ಗಳಿಸಿದರೆ ಜೆಡಿಎಸ್‌ 1 ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

    ಹಳೆ ಮೈಸೂರು ಒಟ್ಟು 57
    ಆವರಣದ ಒಳಗಡೆ ನೀಡಿರುವುದು 2018ರ ಸ್ಥಾನಗಳು
    ಚಾಮರಾಜನಗರ ಒಟ್ಟು ಕ್ಷೇತ್ರಗಳು 04
    ಬಿಜೆಪಿ – 1(1)
    ಕಾಂಗ್ರೆಸ್‌ – 3(2)
    ಜೆಡಿಎಸ್‌ – 0(0)
    ಇತರೆ – 0(1)   ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್‌ ಸರ್ವೆ ಚಾಪ್ಟರ್‌ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?

    ಕೊಡಗು ಒಟ್ಟು ಕ್ಷೇತ್ರಗಳು 02
    ಬಿಜೆಪಿ – 2(2)
    ಕಾಂಗ್ರೆಸ್‌ – 0(0)
    ಜೆಡಿಎಸ್‌ – 0(0)

    ಮೈಸೂರು ಒಟ್ಟು ಕ್ಷೇತ್ರಗಳು 11
    ಬಿಜೆಪಿ – 2(3)
    ಕಾಂಗ್ರೆಸ್‌ – 4(3)
    ಜೆಡಿಎಸ್‌ – 5(5)

    ಮಂಡ್ಯ ಒಟ್ಟು ಕ್ಷೇತ್ರಗಳು 07
    ಬಿಜೆಪಿ – 0(0)
    ಕಾಂಗ್ರೆಸ್‌ – 2(0)
    ಜೆಡಿಎಸ್‌ – 5(7)

    ರಾಮನಗರ ಒಟ್ಟು ಕ್ಷೇತ್ರಗಳು 04
    ಬಿಜೆಪಿ – 0(0)
    ಕಾಂಗ್ರೆಸ್‌ -1(1)
    ಜೆಡಿಎಸ್‌- 3(3)

    ಹಾಸನ ಒಟ್ಟು ಕ್ಷೇತ್ರಗಳು 7
    ಬಿಜೆಪಿ -1(1)
    ಕಾಂಗ್ರೆಸ್‌ – 1(0)
    ಜೆಡಿಎಸ್‌ – 5(6)

    ತುಮಕೂರು ಒಟ್ಟು ಕ್ಷೇತ್ರಗಳು 11
    ಬಿಜೆಪಿ – 4(4)
    ಕಾಂಗ್ರೆಸ್‌ -3(3)
    ಜೆಡಿಎಸ್‌ – 4(4)

    ಚಿಕ್ಕಬಳ್ಳಾಪುರ ಒಟ್ಟು ಕ್ಷೇತ್ರಗಳು 5
    ಬಿಜೆಪಿ – 1(0)
    ಕಾಂಗ್ರೆಸ್‌ -2(4)
    ಜೆಡಿಎಸ್‌ -1(1)
    ಇತರೆ -1(0)

    ಕೋಲಾರ ಒಟ್ಟು ಕ್ಷೇತ್ರಗಳು 6
    ಬಿಜೆಪಿ -0(0)
    ಕಾಂಗ್ರೆಸ್‌ -3(4)
    ಜೆಡಿಎಸ್‌- 3(1)
    ಇತರೆ -0(1)

    ಹಳೆ ಮೈಸೂರು ಒಟ್ಟು 57 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು?
    ಬಿಜೆಪಿ – 11(11)
    ಕಾಂಗ್ರೆಸ್‌ – 19(17)
    ಜೆಡಿಎಸ್‌ – 26(27)
    ಇತರೆ – 1(2)

  • ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಮೂಲಕ ರಾಮ ಮಂದಿರ (Ram Temple) ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ರಾಜ್ಯ ಬಿಜೆಪಿ ಮುಂದಾಗಿದೆ.

    ಹಳೆ ಮೈಸೂರು ಭಾಗದಲ್ಲಿ ಭರ್ಜರಿ ಮತ ಫಸಲು ತೆಗೆಯಲು ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಘೋಷಣೆಯನ್ನು ಬಜೆಟ್ (Budget) ಮೂಲಕ ಮಾಡಿದೆ. ಇದನ್ನು ಇಷ್ಟಕ್ಕೆ ಸೀಮಿತಗೊಳಿಸದೇ, ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ಗುದ್ದಲಿ ಪೂಜೆಗೆ ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: 42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ

    ಮಾರ್ಚ್ ಮೊದಲ ವಾರದಲ್ಲಿ ಹಿಂದೂತ್ವ ಫೈರ್ ಬ್ರ್ಯಾಂಡ್‌, ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಯಿಸಿ ಅವರ ಮೂಲಕವೇ ರಾಮಮಂದಿರಕ್ಕೆ ಅಡಿಗಲ್ಲು ಹಾಕಿಸಲು ಕೇಸರಿ ಪಡೆ ಪ್ಲಾನ್ ಮಾಡಿದ್ದು ಈ ಬೆಳವಣಿಗೆ ವಿಪಕ್ಷಗಳನ್ನು ಚಿಂತೆಗೀಡು ಮಾಡಿದಂತೆ ಕಾಣುತ್ತಿದೆ. ಇದನ್ನೂ ಓದಿ: 42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ.

    ರಾಮ ಮಂದಿರ ವಿಚಾರ ಮುಂದಿನ ದಿನಗಳಲ್ಲಿ ರಾಮನಗರ ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಳವಣಿಗೆಗೆ ಪೂರಕವಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾರ್ಚ್ ಮೊದಲ ವಾರ ಮೋದಿ ಫೈನಲ್ ಮೆಗಾ ಶೋ?

    ಮಾರ್ಚ್ ಮೊದಲ ವಾರ ಮೋದಿ ಫೈನಲ್ ಮೆಗಾ ಶೋ?

    – ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಕಾಪ್ಟರ್ ಬಂದಿಳಿಯುತ್ತಾ?

    ಬೆಂಗಳೂರು: ಓಲ್ಡ್ ಮೈಸೂರು (Old Mysuru) ಲಾಸ್ಟ್ ಗೇಮ್, ಫಸ್ಟ್ ಚಾನ್ಸ್ ಎಂಬ ತಂತ್ರ ಬಿಜೆಪಿಯದ್ದು (BJP). ಹಳೇ ಮೈಸೂರು ಭಾಗದಲ್ಲಿ ಮತ ಗಟ್ಟಿ ಮಾಡಿಕೊಳ್ಳಲು ನಾನಾ ಕಸರತ್ತು ನಡೆದಿದೆ. ಅದಕ್ಕೆ ಬಿಜೆಪಿ ಹೈಕಮಾಂಡ್ ಮೋದಿ (Narendra Modi) ಮೆಗಾ ಶೋ ನಡೆಸಲು ಪ್ಲ್ಯಾನ್ ಮಾಡುತ್ತಿದೆ.

    ಬಿಜೆಪಿ ಡಬಲ್ ಎಂಜಿನ್ ಸರ್ಕಾರವು ಬೆಂಗಳೂರು (Bengaluru) – ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡುತ್ತಿದೆ. ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾಪ್ಟರ್‌ನಲ್ಲಿ ಬಂದಿಳಿಯುವ ಬಗ್ಗೆ ಬ್ಲೂಪ್ರಿಂಟ್ ರೆಡಿ ಆಗಿದೆ. ಅಷ್ಟೇ ಅಲ್ಲ ಎಕ್ಸ್‌ಪ್ರೆಸ್ ವೇನಲ್ಲಿ ಎಲೆಕ್ಟ್ರಿಕ್ ಕಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ಮೂಲಕ ವಿಭಿನ್ನವಾಗಿ ಕಾರಿಡಾರ್ ಉದ್ಘಾಟನೆಗೆ ಪ್ಲ್ಯಾನ್ ಮಾಡಿದ್ದಾರೆ.

    ಎಕ್ಸ್‌ಪ್ರೆಸ್ ವೇ ಮಧ್ಯಭಾಗದಲ್ಲಿ ಹೆಲಿಕಾಪ್ಟರ್‌ನಲ್ಲಿ ಮೋದಿ ಬಂದಿಳಿಯಲು ಜಾಗವನ್ನು ಫೈನಲ್ ಮಾಡುತ್ತಿದ್ದಾರೆ. ರಾಮನಗರದ ಸಮೀಪ ಮೋದಿ ಹೆಲಿಕಾಪ್ಟರ್ ಇಳಿದ್ರೆ, ಅಲ್ಲಿಂದ ಎಲೆಕ್ಟ್ರಿಕ್ ವೆಹಿಕಲ್ ಮೂಲಕ ಒಂದು ಗಂಟೆಗಳ ಕಾಲ‌ ಪ್ರಯಾಣ ಮಾಡುವ ಬಗ್ಗೆ ಸಿದ್ಧತೆ ನಡೆದಿದೆ.

    ಅಂದಹಾಗೆ ಚುನಾವಣಾ ಸನಿಹದಲ್ಲಿ ಹಳೇ ಮೈಸೂರು ಭಾಗವನ್ನ ಗಮನದಲ್ಲಿಟ್ಟುಕೊಂಡು 4 ಜಿಲ್ಲೆಗಳ ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣಿಟ್ಟಿದೆ. ಎಕ್ಸ್‌ಪ್ರೆಸ್ ವೇನಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ನಲ್ಲಿ ಪ್ರಯಾಣಿಸಿ ಮೋದಿ ಮೈಸೂರಿನಲ್ಲೇ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ಬ್ಲೂ ಪ್ರಿಂಟ್ ತಯಾರಾಗಿದೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಮೋದಿಯಿಂದಲೇ ಚುನಾವಣೆ ಕಹಳೆ ಊದಿಸಲು ಮೆಗಾ ಪ್ಲ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭ – ಸರ್ಕಾರದ ಸಾಧನೆ ಬಣ್ಣಿಸಿದ ರಾಜ್ಯಪಾಲ ಗೆಹ್ಲೋಟ್

    ರಾಜ್ಯ ಸರ್ಕಾರವನ್ನೊಳಗೊಂಡಂತೆ ಪಕ್ಷ ಮತ್ತು ಸರ್ಕಾರಿ ಕಾರ್ಯಕ್ರಮಗಳು ಆಗುವಂತೆ ಸಿದ್ಧತೆ ನಡೆಸಿದ್ದು, ಮತಬೇಟೆಯ ಅಸಲಿ ಗೇಮ್ ಆರಂಭವಾಗ್ತಿದೆ. ಈ ನಡುವೆ ಬಿಜೆಪಿಯ ಪ್ಲ್ಯಾನ್‌ಗೆ ಪ್ರಧಾನಿ ಕಚೇರಿಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಫೆಬ್ರವರಿ ಕಡೇ ವಾರದಲ್ಲಿ ಪ್ರಧಾನಿ ಕಚೇರಿಯಿಂದ ಒಪ್ಪಿಗೆ ಸಿಗುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿಂದ ಭರ್ಜರಿ ಸಿದ್ಧತೆ ನಡೆದಿದ್ದು, ಓಲ್ಡ್ ಮೈಸೂರು ಭಾಗದಲ್ಲಿ ಮೋದಿಯಿಂದಲೇ ಚುನಾವಣೆ ಕಹಳೆ ಊದಿಸುವ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ – ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ – ಹಲವು ಪ್ರಭಾವಿಗಳು ಬಿಜೆಪಿ ಸೇರ್ಪಡೆ

    ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ – ಹಲವು ಪ್ರಭಾವಿಗಳು ಬಿಜೆಪಿ ಸೇರ್ಪಡೆ

    ಬೆಂಗಳೂರು: ಮೈಸೂರು ಕರ್ನಾಟಕ ಭಾಗದಲ್ಲಿ ಬಿಜೆಪಿಯ (BJP) ಆಪರೇಷನ್ ಕಮಲ ಕಾರ್ಯಾಚರಣೆಗೆ ಮತ್ತಷ್ಟು ಬಲ ಬಂದಿದೆ. ಆಪರೇಷನ್ ಕಮಲದ ಭಾಗವಾಗಿ ಸೋಮವಾರ ಹಾಸನ, ಮೈಸೂರು ಹಾಗೂ ರಾಮನಗರ ಭಾಗದ ಹಲವರು ಬಿಜೆಪಿ ಸೇರಿದ್ದಾರೆ.

    ಬೆಂಗಳೂರಿನ (Bengaluru) ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಚಿವ ಗೋಪಾಲಯ್ಯ ಸಮ್ಮುಖದಲ್ಲಿ ಹಲವರು ಸೋಮವಾರ ಪಕ್ಷ ಸೇರ್ಪಡೆಯಾಗಿದ್ದಾರೆ.

    ಕಾಂಗ್ರೆಸ್ ಯುವ ಮುಖಂಡ ಕವೀಶ್‌ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿವಿ ರಾಜಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಪುಣ್ಯವತಿ ನಾಗರಾಜ್ ಅವರು ಬಿಜೆಪಿ ಸೇರಿದರು. ಬಿಜೆಪಿ ಸೇರ್ಪಡೆಗೊಂಡವರಿಗೆ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

    ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರು ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ ಎನ್ನಲಾಗಿದೆ. ಹುಣಸೂರು ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಸಕಲೇಶಪುರದ ನಿವೃತ್ತ ಎಂಜಿನಿಯರ್ ವೆಂಕಟೇಶ್, ಅರಕಲಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ದಿವಾಕರ್ ಗೌಡ, ಹಾಸನದ ಕಾಂಗ್ರೆಸ್ ಮುಖಂಡ ಸಿವಿ ರಾಜಪ್ಪ, ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್ ಮುಖಂಡ ಗಿರೀಶ್ ನಾಶಿ ಹಾಗೂ ರಾಮನಗರದ ಡಾ. ಪುಣ್ಯವತಿ ನಾಗರಾಜ್ ಬಿಜೆಪಿ ಸೇರ್ಪಡೆಯಾದ ಪ್ರಮುಖರು. ಗಿರೀಶ್ ನಾಶಿಯವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿಯಾಗಿದ್ದರು.

    ಬಿಜೆಪಿ ಸೇರಿದ ಬಳಿಕ ಮಾತಾಡಿದ ಕವೀಶ್ ಗೌಡ ವಾಸು, ನಾನು ಮೈಸೂರಿನ ಮಾಜಿ ಶಾಸಕ ವಾಸು ಅವರ ಪುತ್ರ. ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟೀ ಸದಸ್ಯ. ನನ್ನ ತಂದೆಯವರ ಕ್ಷೇತ್ರದಲ್ಲಿ ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ವಾಸು ಅವರು ಕಳೆದ 35 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಕಳೆದ ಸಲ ನಮ್ಮ ತಂದೆ ಸೋತಿದ್ದರು. ನಾನು ಬಿಜೆಪಿ, ತಂದೆ ಕಾಂಗ್ರೆಸ್ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಆದರೆ ನಾನು ಸೈದ್ಧಾಂತಿಕವಾಗಿ ಬಿಜೆಪಿ ಮೆಚ್ಚಿ, ಮೋದಿಯವರ ಕೆಲಸಗಳನ್ನು ಒಪ್ಪಿ ಬಿಜೆಪಿ ಸೇರಿದ್ದೇನೆ. ಪಕ್ಷವು ನನಗೆ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಪಕ್ಷದ ಚಟುವಟಿಕೆಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಭಾಗವಹಿಸುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ: ಕಟೀಲ್

    ಬಳಿಕ ಮಾತಾಡಿದ ಸಚಿವ ಗೋಪಾಲಯ್ಯ, ಮೈಸೂರು, ಹಾಸನ, ಬೆಂಗಳೂರಿನ ಅನೇಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಎಲ್ಲರಿಗೂ ಇಲ್ಲಿ ಉತ್ತಮ ಭವಿಷ್ಯ ಇದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆ. ನಾನು ಸ್ವಇಚ್ಛೆಯಿಂದ ಬಿಜೆಪಿಗೆ ಬಂದೆ. ಪಕ್ಷ ನಮಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ. 2013 ರಲ್ಲಿ ಬಿಜೆಪಿ ಇಬ್ಭಾಗ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾವೆಲ್ಲಾ ಬಿಜೆಪಿಯಲ್ಲಿ ಒಂದಾಗಿದ್ದೇವೆ, 150+ ಸ್ಥಾನ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ನಮ್ಮ ಪಕ್ಷ ಸೇರುತ್ತಾರೆ ಎಂದು ಗೋಪಾಲಯ್ಯ ತಿಳಿಸಿದರು.

    ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತಾಡಿ, ಇದೀಗ ಹಳೆ ಮೈಸೂರು (Old Mysuru) ಭಾಗದ ಇತರ ಪಕ್ಷಗಳ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ. ಪರಿವಾರ ವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ. ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುವ ನರೇಂದ್ರ ಮೋದಿಯವರ ಚಿಂತನೆಗೆ ಅನುಗುಣವಾಗಿ ಕ್ಷೇತ್ರ, ಮತಗಟ್ಟೆಗಳಲ್ಲಿ ನೀವು ಕೆಲಸ ಮಾಡುತ್ತೀರೆಂದು ಆಶಿಸುವುದಾಗಿ ಹೇಳಿದರು.

    ಕಾರ್ಯಕ್ರಮದಲ್ಲಿ ರಾಜ್ಯದ ಅಬಕಾರಿ ಸಚಿವ ಕೆ ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮೈಸೂರು ಜಿಲ್ಲೆ ಅಧ್ಯಕ್ಷ ಶ್ರೀವತ್ಸ, ಹಾಸನ ಜಿಲ್ಲೆ ಅಧ್ಯಕ್ಷ ಹೆಚ್‌ಕೆ ಸುರೇಶ್, ಮೈಸೂರು ಮಹಾಪೌರ ಶಿವಕುಮಾರ್, ಮಾಜಿ ಶಾಸಕ ಹೆಚ್ ವಿಶ್ವನಾಥ್ ಅವರು ಭಾಗವಹಿಸಿದ್ದರು. ಇದನ್ನೂ ಓದಿ: ಟಿಕೆಟ್ ಕೊಡಲು ‘ತ್ರೀ’ ಸೂತ್ರಕ್ಕೆ ಬಿಜೆಪಿ ಮೊರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬೇಕೆಂದು ಬಿಜೆಪಿ (BJP) ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಕಬ್ಜ ಮಾಡುವ ಉದ್ದೇಶದಿಂದ ಸ್ವತಃ ಬಿಜೆಪಿಯ ಮಾಸ್ಟರ್ ಮೈಂಡ್ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಖಾಡಕ್ಕೆ ಧುಮುಕಿದ್ದಾರೆ. ನಾಳೆ ಮಂಡ್ಯದಲ್ಲಿ (Mandya) ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಈ ಸಂಬಂಧ ಭರ್ಜರಿ ತಯಾರಿ ಮಾಡಿಕೊಂಡಿದೆ.

    ಸದ್ಯ ಬಿಜೆಪಿ ಕರ್ನಾಟದಲ್ಲಿ (Karnataka) ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಗೆದ್ದು ಸಂಪೂರ್ಣ ಬಹುಮತಗಳ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಬೇಕೆಂದರೆ ಹಳೆ ಮೈಸೂರು ಭಾಗದಲ್ಲಿ‌ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಹೀಗಾಗಿ ಬಿಜೆಪಿ ಹಳೆ ಮೈಸೂರು ಭಾಗದ ಮೇಲೆ ಹೆಚ್ಚು ಗಮನವರಿಸುತ್ತಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೆ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕೆಂದರೆ ಬಿಜೆಪಿ ಹಲವು ಮಾಸ್ಟರ್ ಪ್ಲ್ಯಾನ್ ಮಾಡುವುದು ಅನಿವಾರ್ಯ ಆಗಿದೆ. ಇದೀಗ ಆ ಮಾಸ್ಟರ್ ಪ್ಲಾನ್ ಮಾಡಲು ಬಿಜೆಪಿಯ ಚಾಣಕ್ಯ ಎಂದು ಬಿರುದು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಖಾಡಕ್ಕೆ ಧುಮಿಕಿದ್ದಾರೆ. ನಾಳೆ ಮಂಡ್ಯದಲ್ಲಿ ಅಮಿತ್ ಶಾ ಅವರನ್ನು ಕರೆಸಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

    ನಾಳೆ ಮಂಡ್ಯ ನಗರಕ್ಕೆ ಕೇಂದ್ರ ಗೃಹ ಸಚಿವ ಆಗಮಿಸಲಿದ್ದು, ಬೆಳಗ್ಗೆ 11 ಗಂಟೆಗೆ ಮದ್ದೂರಿನ ಭೈರಾಪಟ್ಟಣದ ಹೆಲಿಪ್ಯಾಡ್‌ಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಬಳಿಕ 11.15ಕ್ಕೆ ಗೆಜ್ಜಲಗೆರೆಯಲ್ಲಿರುವ ಮನ್‌ಮುನ್‌ನ ಮೆಗಾ ಡೈರಿಯನ್ನು ಉದ್ಘಾಟಿಸಿ ಬಳಿಕ ಅಲ್ಲೇ ಊಟ ಮಾಡಲಿದ್ದಾರೆ. ಇದಾದ ಬಳಿಕ ಮತ್ತೆ ಭೈರಾಪಟ್ಟಣದ ಹೆಲಿಪ್ಯಾಡ್‌ನಿಂದ ಮಂಡ್ಯ ನಗರದ ಪಿಇಎಸ್ ಕಾಲೇಜಿನ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ‌ ಆಗಮಿಸಿ 1.30ಕ್ಕೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಪುಟದ ಹಲವು ಸಚಿವರು ಭಾಗಿಯಾಗಲಿದ್ದಾರೆ.

    ನಾಳೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿಯ ಸಂಕಲ್ಪ ಯಾತ್ರೆಗೆ ಬೃಹತ್ ವೇದಿಯನ್ನು ಸಿದ್ಧಪಡಿಸಲಾಗಿದೆ. ಈ ಬೃಹತ್ ಸಮಾವೇಶದಲ್ಲಿ 1 ಲಕ್ಷ ಮಂದಿಯನ್ನು ಸೇರಿಸುವ ಗುರಿಯನ್ನು ಬಿಜೆಪಿ ಮುಖಂಡರು ಹೊಂದಿದ್ದು, ಈ ಸಂಬಂಧ ಮಂಡ್ಯ ವಿವಿ ಆವರಣದಲ್ಲಿ ಜರ್ಮನ್ ಟೆಂಟ್‌ನಿಂದ ಸುಸರ್ಜಿತ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸಮಾವೇಶಕ್ಕೆ ಬರುವ ಎಲ್ಲಾ ಜನರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವ ಹಿನ್ನೆಲೆ ಇಡೀ ಮಂಡ್ಯ‌ ನಗರ ಕೇಸರಿ ಮಯವಾಗಿ ಕಂಗೊಳಿಸುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬಿಜೆಪಿ ಬಾವುಟ, ಅಮಿತ್ ಶಾ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಹಾಕಿ‌ ಶೃಂಗಾರ ಮಾಡಲಾಗಿದೆ. ಇನ್ನೂ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರ ಅಮಿತ್ ಶಾ ಅವರ ಸ್ವಾಗತ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಅಮಿತ್ ಶಾಗೆ Z+ ಸೆಕ್ಯೂರಿಟಿ ಇರುವ ಕಾರಣ ಎಸ್‌ಪಿಜಿ ಹಾಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿಕೊಂಡಿದೆ.

    ಒಂದು ಕಡೆ ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವುದು ಬಿಜೆಪಿ ವಲಯದಲ್ಲಿ ಸಂತಸ ಮನೆ ಮಾಡಿದರೆ, ಇನ್ನೊಂದೆಡೆ ಅಮಿತ್ ಶಾಗೆ ರೈತರ ಪ್ರತಿಭಟನೆ ಬಿಸಿ ಮುಟ್ಟುವ ಸಾಧ್ಯತೆ ಇದೆ. 53 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಹೋರಾತ್ರಿ ಧರಣಿ‌ ಮಾಡುತ್ತಿದ್ದಾರೆ.‌ ಅಮಿತ್ ಶಾ ಮಂಡ್ಯಗೆ ಬರುತ್ತಿರುವ ಕಾರಣ ನಿನ್ನೆ ಏಕಾಏಕಿ ಪೊಲೀಸರು ಅಹೋರಾತ್ರಿ ಧರಣಿಯ ಟೆಂಟ್‌ ಅನ್ನು ಧ್ವಂಸ ಮಾಡಿದ ಕಾರಣ ರೈತರು ಪೊಲೀಸರ ವಿರುದ್ಧ ಆಕ್ರೋಶ ಪಡಿಸಿದ ಕಾರಣ ಮತ್ತೆ ಟೆಂಟ್‌ನ್ನು ಪೊಲೀಸರು‌ ನಿರ್ಮಾಣ ಮಾಡಿದರು. ಇದೀಗ ರೈತರು ನಮ್ಮ ಬೇಡಿಕೆಗಳನ್ನು ಅಮಿತ್ ಶಾ ಮುಂದೆ ಇಡಬೇಕು, ನಮಗೆ ಅಮಿತ್ ಶಾ ಭೇಟಿಗೆ ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಅಮಿತ್ ಶಾ ಗೋ ಬ್ಯಾಕ್ ಚಳುವಳಿ ಮಾಡುವುದಾಗಿ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!

    ಒಟ್ಟಾರೆ ಮುಂದಿನ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಇಟ್ಟುಕೊಂಡು ಮಂಡ್ಯಗೆ ಅಮಿತ್ ಶಾ ಬರುತ್ತಿರುವುದು ಬಿಜೆಪಿಗೆ ಶಕ್ತಿ ತುಂಬಿದ್ರೆ, ಇನ್ನೊಂದೆಡೆ ಪೊಲೀಸರು ಮಾಡಿರುವ ಯಡವಟ್ಟಿನಿಂದ ಅನ್ನದಾತರು ಅಮಿತ್ ಶಾಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಕಾಯುತ್ತಿದ್ದಾರೆ. ಆದ್ರೆ ಅಮಿತ್ ಶಾ ರೈತರ ಭೇಟಿಗೆ ಅವಕಾಶ ನೀಡಿ ತಮ್ಮ ರಾಜಕೀಯ ಚಾಣಾಕ್ಷತನದಿಂದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ‌ ಕಮಾಲ್‌ಗೆ ಕಾರಣರಾಗುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ರಾಜ್ಯಕ್ಕೆ ಚುನಾವಣಾ ಚಾಣಕ್ಯ – ಬಿಜೆಪಿಯಲ್ಲಿ ಮಂದಹಾಸ

    Live Tv
    [brid partner=56869869 player=32851 video=960834 autoplay=true]

  • ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಬುಲ್ಡೋಜ್ ಮಾಡಲು ಬಿಜೆಪಿಯಿಂದ ಯೋಗಿ ಅಸ್ತ್ರ!

    ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಬುಲ್ಡೋಜ್ ಮಾಡಲು ಬಿಜೆಪಿಯಿಂದ ಯೋಗಿ ಅಸ್ತ್ರ!

    ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಬುಲ್ಡೋಜ್ ಮಾಡಲು ಬಿಜೆಪಿಯಿಂದ ಯೋಗಿ ಅಸ್ತ್ರ ಸಿದ್ಧವಾಗ್ತಿದೆ. ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರಕ್ಕೆ ಬಿಜೆಪಿ ಕೈ ಹಾಕಿದೆ. ಒಂದಲ್ಲ, ಎರಡಲ್ಲ ಹಳೇ ಮೈಸೂರು ಭಾಗದ 7 ಜಿಲ್ಲೆಗಳಲ್ಲಿ ಯೋಗಿ ಸಂಚಾರಕ್ಕೆ ರೂಟ್ ಮ್ಯಾಪ್ ರೆಡಿಯಾಗುತ್ತಿದೆ.

    7 ಜಿಲ್ಲೆಗಳಲ್ಲೂ ಯೋಗಿ ಆದಿತ್ಯನಾಥ್ ಸಮಾವೇಶಕ್ಕೆ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಸೆಪ್ಟೆಂಬರ್‌ನಿಂದ ಪ್ರತಿ ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಯೋಗಿ ಅಬ್ಬರಕ್ಕೆ ಸೂಚಿಸಿದೆ ಎನ್ನಲಾಗಿದೆ. ಮೈಸೂರು, ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದ ತನಕ ತಿಂಗಳಿಗೆ ಎರಡು ಯೋಗಿ ಸಮಾವೇಶಗಳು ನಡೆಯಲಿವೆ.

    bjP

    ನಾಥ ಪರಂಪರೆಯನ್ನ ಮುಂದಿಟ್ಟು ಒಕ್ಕಲಿಗ ಮತ ಬೇಟೆಗೆ ಹೈಕಮಾಂಡ್ ನಕ್ಷೆ ರಚಿಸಿದ್ದು, ಖಡಕ್ ಹಿಂದೂತ್ವವನ್ನ ಜೋಡಿಸಿ ಯೋಗಿ ಆದಿತ್ಯನಾಥ್ ಅಖಾಡಕ್ಕೆ ಇಳಿಸುವ ಮಾಸ್ಟರ್ ಸ್ಟ್ರೋಕ್ ಮುಂದಿದೆ ಎಂಬುದು ದೆಹಲಿ ಮೂಲಗಳ ಮಾಹಿತಿ. ಇದನ್ನೂ ಓದಿ: ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಮೊದಲ ಹಂತದ ಸಮಾವೇಶ ನಡೆದರೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ 2ನೇ ಹಂತದ ಸಮಾವೇಶಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸೆಪ್ಟೆಂಬರ್‌ನಿಂದ ಯೋಗಿ ಸಂಚಾರ ಆರಂಭಿಸಿ ಡಿಸೆಂಬರ್‌ನಲ್ಲಿ ಅಂತ್ಯಗೊಳಿಸಲು ಬ್ಲೂಪ್ರಿಂಟ್ ಮಾಡಲಾಗಿದೆ. ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಯೋಗಿ ಸಮಾವೇಶ ನಡೆಸುವ ಸಂಬಂಧ ಹೈಕಮಾಂಡ್ ಚರ್ಚೆ ನಡೆಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

    ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

    ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ.

    ಹೌದು. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗದಲ್ಲಿ ಎಂಟು ಶಾಸಕರು ಇದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

    ಕಡೆ ಕ್ಷಣದವರೆಗೂ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಅನಂತಕುಮಾರ್ ನಿಧನ, ವೈಯಕ್ತಿಕವಾದ ಕೇಸ್ ಗಳು, ಎಚ್. ವಿಶ್ವನಾಥ್ ಎಫೆಕ್ಟ್, ಆರ್ ಎಸ್‍ಎಸ್ ನಲ್ಲಿ ರಾಮದಾಸ್ ಪರ ಗಟ್ಟಿಯಾಗಿ ಮಾತನಾಡುವವರು ಇಲ್ಲದ ಕಾರಣ ಮಂತ್ರಿ ಸ್ಥಾನ ತಪ್ಪಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಕೊಡಗಿನ ಅಪ್ಪಚ್ಚು ರಂಜನ್ ಅಥವಾ ಬೋಪಯ್ಯ ಇಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕೊನೆಗೆ ಬೋಪಯ್ಯ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ವಿಚಾರ ಬಿಜೆಪಿ ಮೂಲಗಳಿಂದ ಪ್ರಕಟವಾಗಿತ್ತು. ಆದರೆ ಈಗ ಇಬ್ಬರಿಗೂ ಮಂತ್ರಿ ಸ್ಥಾನ ಕೈ ತಪ್ಪಿದೆ.

    ಕುಮಾರಸ್ವಾಮಿ ಸರ್ಕಾರದಲ್ಲಿ ರೇವಣ್ಣ, ಜಿಟಿ ದೇವೇಗೌಡ, ಸಿಎಸ್ ಪುಟ್ಟರಾಜು, ಎನ್ ಮಹೇಶ್, ಸಾ.ರಾ. ಮಹೇಶ್, ಪುಟ್ಟರಂಗ ಶೆಟ್ಟಿ, ಡಿಸಿ ತಮ್ಮಣ್ಣ ಮಂತ್ರಿ ಸ್ಥಾನ ಪಡೆದಿದ್ದರು.