Tag: ಹಳೆಯ ಹಾಡು

  • ‘ಯಾರು ಏನು ಮಾಡುವರೂ..’ – ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಹಾಡಿನ ನಮನ

    ‘ಯಾರು ಏನು ಮಾಡುವರೂ..’ – ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಹಾಡಿನ ನಮನ

    ಬೆಂಗಳೂರು: ತಂದೆ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆಂದು ಅವರ ಅಭಿನಯದ ಹಳೆಯ ಹಾಡುಗಳನ್ನು ಹಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಪೆಷಲ್ ಆಗಿ ಅಪ್ಪಾಜಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

    ಇಂದು ವರನಟ ಡಾ. ರಾಜ್‍ಕುಮಾರ್ ಅವರ 91ನೇ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಲಾಕ್‍ಡೌನ್ ನಡುವೆಯಲ್ಲೂ ವಿಶೇಷವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಪುನೀತ್ ಅವರು ರಾಜ್ ಕುಮಾರ್ ಅವರ ಹಳೇ ಹಾಡುಗಳನ್ನು ಹಾಡಿದ್ದಾರೆ. ಬೆಳಗ್ಗೆ ಶಿವಣ್ಣ ಅವರು ಅಣ್ಣಾವ್ರ ಪುಣ್ಯಭೂಮಿಗೆ ಬಂದು ಪೂಜೆ ಸಲ್ಲಿಸಿ ಬಂದಿದ್ದರು.

    https://www.instagram.com/p/B_Ws4mIpz_J/

    ಲಾಕ್‍ಡೌನ್ ನಡುವೆ ಮನೆಯಲ್ಲೇ ಕುಳಿತು ಈ ಸಾಂಗ್ ಹಾಡಿರುವ ಅಪ್ಪು, ಇದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ. ರಾಜ್‍ಕುಮಾರ್ ಅವರು ಅಭಿನಯದ ಕ್ರಾಂತಿವೀರ ಸಿನಿಮಾದ ಯಾರೂ ಏನೂ ಮಾಡುವರೂ, ನನಗೇನು ಕೇಡು ಮಾಡುವರು ಎಂಬ ಹಾಡು ಮತ್ತು ರಾಜ ನನ್ನ ರಾಜ ಸಿನಿಮಾದ ನಿನದೇ ನೆನಪು ಎಂಬ ಹಾಡಗಳನ್ನು ಅಪ್ಪು ತಮ್ಮ ಕಂಠಸಿರಿಯಲ್ಲಿ ಹಾಡಿದ್ದಾರೆ.

    ಈ ಹಾಡಿನ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಪುನೀತ್, ಎಲ್ಲರಿಗೂ ನಮಸ್ಕಾರ, ಅಪ್ಪಾಜಿಯವರಿಗೆ ಜನ್ಮ ದಿನಾಚರಣೆಯ ಶುಭಾಶಯಳು. ಅಪ್ಪಾಜಿ ಅವರ ಅಚ್ಚುಮೆಚ್ಚಿನ ನೆನಪುಗಳನ್ನು ನೆನಪಿಟ್ಟುಕೊಳ್ಳಲು. ನಾವು ‘ಕ್ರಾಂತಿವೀರ’ ಮತ್ತು ‘ರಾಜ ನನ್ನ ರಾಜಾ’ ಚಿತ್ರದ ಹಳೆಯ ಅಪ್ಪಾಜಿ ಹಾಡುಗಳ ಪುನರಾವರ್ತನೆಯನ್ನು ಮಾಡಿದ್ದೇವೆ. ನೀವೆಲ್ಲರೂ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಇಲ್ಲಿ ಕೆಲಸ ಮಾಡಿದ ಎಲ್ಲ ಕಲಾವಿದರು ತಮ್ಮ ಮನೆಯಿಂದ ಕೆಲಸ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಯಾವುದೇ ರೀತಿಯ ಅದ್ಧೂರಿಯಿಂದ ಆಚರಣೆ ಮಾಡಿಲ್ಲ. ಆದ್ದರಿಂದ ಕುಟುಂಬಸ್ಥರು ಸರಳವಾಗಿ ಪೂಜೆ ಮಾಡಿ ಕಾರ್ಯ ಮಾಡಿದ್ದಾರೆ. ನಟ ಶಿವರಾಜ್ ಕುಮಾರ್ ಈ ಬಗ್ಗೆ ಟ್ವೀಟ್ “ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ. ಅಪ್ಪಾಜಿಯ ಹುಟ್ಟುಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ” ಎಂದು ಬರೆದುಕೊಂಡಿದ್ದಾರೆ.

    ಕನ್ನಡ ಕಣ್ಮಣಿ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಚಂದನವದ ಎಲ್ಲ ನಟಿ-ನಟಿಯರ ವಿಶ್ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ದರ್ಶನ್ ಅವರು, ವರನಟ ಡಾ|| ರಾಜ್‍ಕುಮಾರ್ ರವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಿಮ್ಮ ದಾಸ ದರ್ಶನ್ ಎಂದು ಬರೆದು ರಾಬರ್ಟ್ ಚಿತ್ರದ ಟೈಟಲ್‍ನೊಂದಿಗೆ ರಾಜ್‍ಕುಮಾರ್ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.